Amruthadhaare ; ಕೊನೆಗೂ ಲಭಿಸಿತು ತಾಯ್ತನದ ಭಾಗ್ಯ : ಗರ್ಭಿಣಿಯಾಗಿದ್ದಾಳೆ ಭೂಮಿಕಾ!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ದಡ್ಡಿಯಂತೆ ತೆಗದುಕೊಂಡಿರುವ ನಿರ್ಧಾರವನ್ನು ದಿಕ್ಕರಿಸಲು ಅವಳ ತವರು ಮನೆಯವರು ಬಂದಿದ್ದಾರೆ. ಆದರೆ, ಅಜ್ಜಿ ಬೇಕಮತಲೆ ಸದಾಶಿವ, ಮಂದಾಕಿನಿಗೆ ಬುದ್ಧಿ ಹೇಳಿದ್ದಾರೆ. ಮೊದಲು ನಮಗೆ ವಿಚಾರ ಗೊತ್ತಾದಾಗಲೂ ನಿಮ್ಮಂತೆಯೇ ದಿಕ್ಕು ಕಾಣದಂತೆ ಆಗಿತ್ತು. ಆದರೆ, ಭೂಮಿಕಾ ಗೌತಮ್ ಒಮ್ಮತದಿಂದ ಈ ನಿರ್ಧಾರಕ್ಕೆ ಬಂದರು. ವಂಶೋದ್ಧಾರಕ ಬೇಕು ಎಂದರೆ ಈ ಎರಡನೇ ಮದುವೆ ಅನಿವಾರ್ಯ. ಇಂತಹ ಘಟನೆ ಇದೇ ಮೊದಲಲ್ಲ ಎಂದು ಸಮಾಧಾನದ ಮಾತುಗಳನ್ನು ಆಡುತ್ತಾರೆ.

ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದ ಗೌತಮ್

ಅಜ್ಜಿಯ ಮಾತಿಗೆ ಏನೂ ಹೇಳಲಾಗದೇ ಸುಮ್ಮನಾಗುತ್ತಾರೆ. ಹಾರ ಬದಲಾಯಿಸಿ ಮಾಂಗಲ್ಯ ಕಟ್ಟುವ ಸಮಯಕ್ಕೆ ಗೌತಮ್ ಭೂಮಿಕಾ ಬಳಿ ಬರುತ್ತಾನೆ. ಎಲ್ಲಿ ಯಾವ ಪ್ರಶ್ನೆ ಮಾಡುತ್ತಾರೋ ಎಂಬ ಭಯದಲ್ಲಿ ಭೂಮಿಕಾ ತಲೆ ಬಾಗಿ ಕಣ್ನೂ ಮುಚ್ಚಿಕೊಳ್ಳುತ್ತಾಳೆ. ಗೌತಮ್ ಭೂಮಿಕಾಳಿಗೆ ಮರು ಮಾಂಗಲ್ಯ ಧಾರಣೆ ಮಾಡುತ್ತಾನೆ. ಇದನ್ನು ನೋಡಿ ಎಲ್ಲರಿಗೂ ಶಾಕ್ ಆಗುತ್ತದೆ. ಶಕುಂತಲಾ ಗೌತಮ್ ನನ್ನು ಪ್ರಶ್ನೆ ಮಾಡುತ್ತಾಳೆ. ಆಗ ಗೌತಮ್ ಮಕ್ಕಳಾಗಿಲ್ಲ ಅನ್ನೋ ಒಂದೇ ಕಾರಣಕ್ಕೆ ಗಂಡನಿಗೆ ಇನ್ನೊಂದು ಮದುವೆ ಮಾಡಿಸುವುದು ಸರಿಯಲ್ಲ. ಅದೇ ಗಂಡಿಗೆ ಮಕ್ಕಳಾಗೋದಿಲ್ಲ ಎಂದಾದರೆ ಆಗ ಹೆಂಡತಿಗೆ ಮತ್ತಂದು ಮದುವೆಯನ್ನು ಯಾಕೆ ಮಾಡಿಸುವುದಿಲ್ಲ. ನನಗೆ ಭೂಮಿಕಾಳೇ ಎಲ್ಲಾ. ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ಒಂದು ಮಗುವನ್ನು ದತ್ತು ತೆಗೆದುಕೊಂಡರೆ ಸರಿ ಹೋಗುತ್ತದೆ ಎಂದು ಹೇಳುತ್ತಾನೆ.

amruthadhaare-serial-13-march-episode-written-update

ಮಧುರ ಜೊತೆ ಸೇರಿ ಪ್ಲಾನ್ ಮಾಡಿದ್ದ ಗೌತಮ್

ಇನ್ನು ಮಧುರ ಇದೆಲ್ಲಾ ನಾವೇ ಸೇರಿಕೊಂಡು ಪ್ಲಾನ್ ಮಾಡಿದ್ದು, ಈ ಮದುವೆ ಅನ್ನೋದು ಒಂದು ನಾಟಕ ಅಷ್ಟೇ. ನನ್ನ ಬಗ್ಗೆ ಯಾರೂ ಯೋಚಿಸಬೇಡಿ ಎಂದು ಹೇಳುತ್ತಾಳೆ. ಇನ್ನು ಅಜ್ಜಿ ಕೂಡ ವಂಶೋದ್ಧಾರಕ ಬೇಕು ಅನ್ನೋ ನೆಪದಲ್ಲಿ ಒಂದು ಹೆಣ್ಣಿನ ಬದುಕಿನಲ್ಲಿ ಆಟವಾಡುವುದು ಸರಿಯಲ್ಲ. ಗೌತಮ್ ಮತ್ತು ಭೂಮಿಕಾ ಸದಾ ಹೀಗೆ ಒಟ್ಟಿಗೆ ಇರಬೇಕು ಎನ್ನುತ್ತಾರೆ. ಒಟ್ನಲ್ಲಿ ಇವರೆಲ್ಲರೂ ಸೇರಿ ಮಾಡಿದ ನಾಟಕದಲ್ಲಿ ಶಕುಂತಲಾ ಬಲಿಪಶು ಆಗಿದ್ದಾಳೆ. ತನಗೇ ಅರಿಯದೆ ತಾನೇ ತೋಡಿದ ಹಳ್ಳಕ್ಕೆ ಧುಮುಕಿದಂತಾಗಿದೆ ಶಕುಂತಲಾ ಪರೀಸ್ಥಿತಿ.


ಶಕುಂತಲಾಳ ಆಸ್ತಿ ಆಸೆಗೆ ತಣ್ಣೀರು ಬಿತ್ತಾ..?

ಗೌತಮ್ ಈ ಮದುವೆಯನ್ನು ಆದರೆ, ಭೂಮಿಕಾ ಮನೆಯಿಂದ ಹೊರಗೆ ಹೋಗುತ್ತಾಳೆ. ಆಗ ಇಡೀ ಮನೆ ಮತ್ತೆ ತನ್ನ ಕಂಟ್ರೋಲ್ ಗೆ ಸಿಗುತ್ತದೆ. ತನಗೆ ಬೇಕಾದಂತೆ ನಡೆದುಕೊಳ್ಳಬಹುದು. ಮಧುರಾಳ ಜುಟ್ಟನ್ನು ಬಿಗಿ ಮಾಡಿಕೊಂಡರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಪ್ಲಾನ್ ಮೇಲೆ ಪ್ಲಾನ್ ಮಾಡಿಕೊಂಡಿರುತ್ತಾಳೆ. ದಿವಾನ್ ಕುಟುಂಬದ ಅಷ್ಟೂ ಆಸ್ತಿಯನ್ನು ತನ್ನ ಪಾಲಾಗಿಸಿಕೊಳ್ಳಬೇಕು ಎಂದುಕೊಂಡಿರುತ್ತಾಳೆ. ಆದರೆ, ಈಗ ತನ್ನ ಆಸ್ತಿ ಆಸೆಗೆ ತಣ್ಣೀರೆರಚುವಂತಾಗಿದೆ. ಗೌತಮ್ ಆಡಿದ ಆಟದಲ್ಲಿ ಶಕುಂತಲಾ ಬಲಿಯಾಗಿದ್ದಾಳೆ.


ಭೂಮಿಕಾ ಗರ್ಭಿಣಿ ಎಂಬುದೇ ಸತ್ಯ

ಇದೆಲ್ಲಾ ವಿಚಾರವನ್ನು ಚರ್ಚೆ ಮಾಡುವ ಸಂದರ್ಭದಲ್ಲೇ ಭೂಮಿಕಾಳಿಗೆ ತಲೆ ಸುತ್ತು ಬಂದಿದೆ. ವೈದ್ಯರನ್ನು ಕರೆಸಿ ಪರೀಕ್ಷೆ ಮಾಡಿಸಿದಾಗ ಭೂಮಿಕಾ ಗರ್ಭಿಣಿ ಎಂಬ ಸತ್ಯ ಗೊತ್ತಾಗಿದೆ. ಈ ಮಾತನ್ನು ಕೇಳಿ ಎಲ್ಲರಿಗೂ ಆಶ್ಚರ್ಯದ ಜೊತೆಗೆ ಖುಷಿಯಾಗಿದ್ದರೆ, ಶಕುಂತಲಾ ಮಾತ್ರವೇ ಗಾಬರಿಯಾಗಿದ್ದಾಳೆ. ಭೂಮಿಕಾ ಗರ್ಭಿಣಿ ಆಗಿದ್ದರೂ ಸುಳ್ಳು ಹೇಳಿದ್ದ ವೈದ್ಯರಿಗೆ ಈಗ ಗೌತಮ್ ಗ್ರಹಚಾರ ಬಿಡಿಸುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಅಲ್ಲದೇ, ಭಾಗ್ಯ ಕೊಟ್ಟ ಹಣ್ಣು ಭೂಮಿಕಾಳಿಗೆ ತಾಯ್ತನದ ಭಾಗ್ಯವನ್ನೇ ತಂದಿದೆ. ವಯಸ್ಸು ಮೀರಿ ಮದುವೆಯಾದರೂ ಭೂಮಿಕಾ ಮತ್ತು ಗೌತಮ್ ಪೋಷಕರಾಗಲು ಬಡ್ತಿ ಪಡೆಯುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X