Amruthadhaare ; ಪಾರ್ಥನ ಸ್ಥಿತಿ ಕಂಡು ಮರುಗಿದ ಶಕುಂತಲಾ ಜೈದೇವನ ಗ್ರಹಚಾರ ಬಿಡಿಸಿದ್ದಾಳೆ. .!
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವನಿಗೆ ತಾನು ಇಷ್ಟಪಟ್ಟ ಅಪೇಕ್ಷಾಳನ್ನು ಬೇರೆ ಯಾರೂ ಮುಟ್ಟಬಾರದು ಎಂದು ಸ್ವಂತ ತಮ್ಮನ ಮೇಲೆಯೇ ದ್ವೇಷ ಸಾಧಿಸಿದ್ದಾನೆ. ಬೇಕಂತಲೇ ಪುಡಿ ರೌಡಿಗಳನ್ನು ಛೂ ಬಿಟ್ಟಿರುವ ಜೈದೇವ ಪಾರ್ಥನಿಗೆ ತಕ್ಕ ಪಾಠ ಕಳಿಸಿದ್ದಾನೆ. ಪಾರ್ಥ ಮತ್ತು ಅಪೇಕ್ಷಾ ಒಟ್ಟಿಗೆ ಇರುವಾಗ ಬೇಕಂತಲೇ ಹೋಗಿ ರೌಡಿಗಳು ಗಲಾಟೆ ಶುರು ಮಾಡುತ್ತಾರೆ. ಅಪೇಕ್ಷಾಳನ್ನು ಛೇಡಿಸಿದಾಗ ಪಾರ್ಥನಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಅಲ್ಲಿದ್ದವನೊಬ್ಬನ ಕೆನ್ನೆಗೆ ಹೊಡೆದು ಬಿಡುತ್ತಾನೆ. ಅವರು ಚಾಕು ತೋರಿಸಿ ಬೆದರಿಕೆ ಹಾಕುತ್ತಾರೆ.
ಪಾರ್ಥನಿಗೆ ಹೊಡೆದ ರೌಡಿಗಳು
ಅಲ್ಲಿಂದ ಪಾರ್ಥ ಮತ್ತು ಅಪೇಕ್ಷಾ ತಪ್ಪಿಸಿಕೊಂಡು ಓಡಿ ಹೋಗಲು ಮುಂದಾಗುತ್ತಾರೆ. ಆದರೆ, ರೌಡಿಗಳಿಂದ ತಪ್ಪಿಸಿಕೊಳ್ಲಲಾಗದ ಕಾರಣ, ಪಾರ್ಥ ಪುಡಿ ರೌಡಿಗಳ ಜೊತೆಗೆ ಫೈಟ್ ಮಾಡುತ್ತಾನೆ. ಗಲಾಟೆಯಲ್ಲಿ ಪಾರ್ಥನಿಗೆ ದೊಡ್ಡ ದೊಡ್ಡ ಗಾಯಗಳು ಆಗುತ್ತವೆ. ರೌಡಿಗಳು ಬಾಸುಂಡೆ ಬರುವಂತೆ ಹೊಡೆದುಕೊಳಿಸುತ್ತಾರೆ. ಇದರಿಮದ ಅಪೇಕ್ಷಾ ಗಾಬರಿಯಾಗುತ್ತಾಳೆ. ಇನ್ನು ಪಾರ್ಥ ಮನೆಗೆ ಕಳ್ಳಂತೆ ಬಂದು ಮನೆಯೊಳಗೆ ಸೇರಿಕೊಳ್ಳುತ್ತಾನೆ. ಪಾರ್ಥ ಬಂದ ರೀತಿಯನ್ನು ಗಮನಿಸಿದ ಅಶ್ವಿನಿ ಮತ್ತು ಶಕುಂತಲಾ ರೂಮಿಗೆ ಬಂದು ವಿಚಾರಿಸುತ್ತಾರೆ. ಆಗ ಪಾರ್ಥನಿಗೆ ಗಾಯಗಳಾಗಿರುವುದನ್ನು ನೋಡಿ ಬ್ಯಾಂಡೇಜ್ ಹಾಕುತ್ತಾರೆ. ಮೊದಲು ಬೈಕ್ ಆಕ್ಸಿಡೆಂಟ್ ಎಂದು ಸುಲ್ಳು ಹೇಳುತ್ತಾನೆ. ಶಕುಂತಲಾ ಬಾಯಿ ಬಿಡಿಸಿ ಕೇಳಿದಾಗ ಯಾರೋ ರೌಡಿಗಳು ಗಲಾಟೆ ಮಾಡಿದರು. ನಾನು ಮತ್ತು ನನ್ನ ಫ್ರೆಂಡ್ ಇದ್ವಿ ಎಂದು ಪಾರ್ಥ ಹೇಳುತ್ತಾನೆ.

ತಮ್ಮನ ಆಫೀಸನ್ನು ಅಲಂಕರಿಸಿದ ಭೂಮಿಕಾ
ಇತ್ತ ಜೀವನ್ ತನ್ನ ಹೊಸ ಮ್ಯಾಟ್ರಿಮೋನಿ ಕಂಪನಿಯನ್ನು ತೆರೆಯಲು ಮುಂದಾಗಿದ್ದಾನೆ. ಅದಕ್ಕಾಗಿ ಆಫೀಸನ್ನು ಕೂಡ ಲೀಸ್ ಗೆ ಪಡೆದುಕೊಂಡಿದ್ದು, ಕೆಲಸ ಪ್ರಾರಂಭಿಸಲು ಮುಂದಾಗಿದೆ. ಕಂಪನಿ ಓಪನಿಂಗ್ ಸೆರಮನಿಗೆ ಅಲಂಕಾರ ಮಾಡಲು ಗೌತಮ್ ಮುಂದಾದಾಗ, ಆಫೀಸ್ ಅನ್ನು ಕ್ಲೀನ್ ಮಾಡಿ, ನಾನೇ ಅಲಂಕಾರ ಮಾಡುತ್ತೇನೆ ಎಂದು ಕ್ಲೀನ್ ಮಾಡುತ್ತಾಳೆ. ಬಳಿಕ ಬಲೂನ್ ಗಳಿಂದ ಅಲಂಕಾರವನ್ನು ಮಾಡುತ್ತಾಳೆ. ಈ ವೇಳೆ ಕಾಲು ಸ್ಲಿಪ್ ಆಗಿ ಬೀಳುತ್ತಾಳೆ. ಆಗ ಗೌತಮ್ ಅವಳನ್ನು ಹಿಡಿದುಕೊಳ್ಳುತ್ತಾನೆ. ಈ ಸೀನ್ ಅನ್ನು ನೋಡಿದ ಆನಂದ್ ಬೇಕಂತಲೇ ತಮಾಷೆ ಮಾಡಿ, ಇಬ್ಬರನ್ನೂ ರೇಗಿಸಿ ಹೋಗುತ್ತಾನೆ.
ಹನಿಮೂನ್ ಗೆ ಹೋಗಲು ಖುಷಿ
ಶಕುಂತಲಾ ಬೇಕಂತಲೇ ಗೌತಮ್ ನನ್ನು ಮಾತ್ರ ಚಿಕ್ಕಮಗಳೂರಿಗೆ ಕಳಿಸಬೇಡಿ. ಅವರಿಬ್ಬರೂ ಹನಿಮೂನ್ ಗೂ ಹೋಗಿಲ್ಲ. ಇಬ್ಬರೂ ಚೆನ್ನಾಗಿರಬೇಕು. ನೀವು ಹೇಳಿದರೆ ಗೌತಮ್ ಕೇಳುತ್ತಾನೆ ಎಂದು ಅಜ್ಜಿ ಬಳಿ ಹೇಳುತ್ತಾಳೆ. ಈ ಮಾತನ್ನು ನಂಬಿದ ಅಜ್ಜಿ ಮನೆಗೆ ಗೌತಮ್ ಮತ್ತು ಭೂಮಿಕಾ ಬರುತ್ತಿದ್ದಂತೆ ಇಬ್ಬರನ್ನೂ ಕೂರಿಸಿಕೊಂಡು. ಇಬ್ಬರೂ ಒಟ್ಟಿಗೆ ಚಿಕ್ಕಮಗಳೂರಿಗೆ ಹೋಗಿ. ನೀವಿಬ್ಬರೂ ಹನಿಮೂನ್ ಗೂ ಕೂಡ ಹೋಗಿಲ್ಲ ಎಂದು ಬಲವಂತ ಮಾಡಿ ಒಪ್ಪಿಸುತ್ತಾರೆ. ಭೂಮಿಕಾ ಹಾಗೂ ಗೌತಮ್ ಗೂ ಒಟ್ಟಿಗೆ ಹೋಗಲು ಇಷ್ಟವಿದ್ದರೂ ನೆಪಕ್ಕೆ ಮಾತ್ರ ನಾಟಕ ಮಾಡುತ್ತಿರುತ್ತಾರೆ.

ಜೈದೇವನನ್ನು ತರಾಟೆಗೆ ತೆಗೆದುಕೊಂಡ ಶಕುಂತಲಾ
ಪಾರ್ಥ ಹೇಳಿದ ಮಾತುಗಳನ್ನು ಕೇಳಿದ ಶಕುಂತಲಾಳೀಗೆ ರೌಡಿಗಳನ್ನು ಕಳಿಸಿರುವುದು ಜೈದೇವನೇ ಎಂಬುದು ಗೊತ್ತಾಗುತ್ತದೆ. ಜೈದೇವನ ಬಳಿ ಬಂದು ಹೊಡೆಯುತ್ತಾಳೆ. ಸುಮ್ಮನೆ ಇರುವುದಕ್ಕೇ ಆಗುವುದಿಲ್ಲ. ಯಾವಾಗಲೂ ಸಮಸ್ಯೆ ಹೊತ್ತುಕೊಂಡು ಬರುತ್ತೀಯಾ. ನಿನ್ನಿಂದ ನಾನು ಸಂಕಟ ಅನುಭವಿಸಬೇಕು ಎಂದು ಗೋಳಾಡುತ್ತಾಳೆ. ಪಾರ್ಥನಿಗೆ ಹೊಡೆಸಿದ ವಿಷಯ ಹೇಳಿ ಬೈಯುತ್ತಾಳೆ. ಆದರೆ, ಜೈದೇವ ಸತ್ಯ ಒಪ್ಪಿಕೊಳ್ಳುವುದಕ್ಕೇ ರೆಡಿ ಇರುವುದಿಲ್ಲ. ಆದರೆ, ಶಕುಂತಲಾಳಿಗೆ ಮಗನ ಬುದ್ಧಿ ಗೊತ್ತಿರುವುದರಿಂದ ಬೇಸರ ಮಾಡಿಕೊಳ್ಳುತ್ತಾಳೆ.


Click it and Unblock the Notifications











