Amruthadhaare: ಫಸ್ಟ್ ನೈಟ್‌ಗೆ ಹೆದರಿ ಆಫೀಸಿಗೆ ಹೋದ ಗೌತಮ್-ಭೂಮಿಕಾ ಜೋಡಿ
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಕಾರಿನಲ್ಲಿ ಅಳುತ್ತಲೇ ಹೋಗುತ್ತಿರುತ್ತಾಳೆ. ಗೌತಮ್ ತನ್ನ ಸಹೋದರಿ ಮಹಿಮಾ ಮದುವೆ ಮುಗಿದ ಖುಷಿಯನ್ನು ಹೇಳುತ್ತಿರುತ್ತಾನೆ. ಆಗ ಭೂಮಿಕಾ ಅಳುತ್ತಿರುವುದನ್ನು ನೋಡಿ ಫುಲ್ ಶಾಕ್ ಆಗುತ್ತಾನೆ. ಅಳು ನಿಲ್ಲಿಸಿ ಇಲ್ಲದೇ ಹೋದರೆ ತಾನೂ ಕೂಡ ಅಳುವುದಾಗಿ ಹೇಳುತ್ತಾನೆ. ಆಗ ಭೂಮಿಕಾ ಕೂಡ ಸಮಾಧಾನ ಮಾಡಿಕೊಳ್ಳುತ್ತಾಳೆ.
ಇತ್ತ ಆನಂದ್ ಹಾಗೂ ಅಪರ್ಣಾ ನವ ವಧುವರರದ ಭೂಮಿಕಾ - ಗೌತಮ್ ಫಸ್ಟ್ ನೈಟ್‌ಗಾಗಿ ಹೋಟೆಲ್ ರೂಮ್ ಅನ್ನು ಡೆಕೊರೇಟ್ ಮಾಡುತ್ತಿರುತ್ತಾರೆ. ಗೆಳೆಯ ಗೌತಮ್ ಗೆ ಆನಂದ್ ಫೋನ್ ಮಾಡುತ್ತಾನೆ.

ಆಫೀಸಿನಲ್ಲಿ ಭೂಮಿಕಾ-ಗೌತಮ್!
ಆಕಸ್ಮಾತ್ ಆಗಿ ಫೋನ್ ಸ್ಪೀಕರ್ ಆನ್ ಆಗಿದ್ದಲ್ಲದೇ ಕೆಳಗೆ ಬಿದ್ದು ಬಿಡುತ್ತದೆ. ಈ ವಿಚಾರ ಆನಂದ್‌ಗೆ ಗೊತ್ತಿರುವುದಿಲ್ಲ. ಗೌತಮ್ ಬಳಿ ಫಸ್ಟ್ ನೈಟ್ ಗೆ ಅರೆಂಜ್ ಮಾಡಿ ಕಾಯುತ್ತಿದ್ದೇವೆ. ಬೇಗ ಬಾ. ಎಲ್ಲಿದ್ದೀಯಾ ಹೇಳು ಎಂದು ಕಾಮಿಡಿ ಮಾಡುತ್ತಾ ಕೇಳುತ್ತಾನೆ. ಇದರಿಂದ ಗೌತಮ್ ಟೆಂಷನ್ ಆಗಿ ಫೋನ್ ತೆಗೆದುಕೊಂಡು ಕಾರಿನಿಂದ ಹೊರಗೆ ಹೋಗುತ್ತಾನೆ. ಆನಂದಗೆ ಸ್ಪೀಕರ್ ಆನ್ ಆಗಿದ್ದ ವಿಚಾರವನ್ನು ಹೇಳುತ್ತಾನೆ. ಇತ್ತ ಭೂಮಿಕಾಳಿಗೂ ಮದುವೆವರೆಗೂ ಯೋಚಿಸಿದ್ದೆ. ಈಗ ಏನು ಮಾಡುವುದು ಎಂದು ಗಾಬರಿಯಾಗುತ್ತಾಳೆ. ಗೌತಮ್ ಕೂಡ ಫಸ್ಟ್ ನೈಟಿಗೆ ಹೆದರಿ, ಆಫೀಸಿಗೆ ಹೋಗೋಣವಾ..? ನನಗೆ ಸ್ವಲ್ಪ ಕೆಲಸ ಇದೆ ಎಂದು ಕೇಳುತ್ತಾನೆ. ಆಗ ಭೂಮಿಕಾ ಕೂಡ ಕೊಂಚ ನಿರಾಳಗೊಂಡು ಹೋಗೋಣ ಎಂದು ಇಬ್ಬರೂ ಆಫೀಸಿಗೆ ಹೋಗುತ್ತಾರೆ.
ಭೂಮಿಕಾ ಮನೆಯವರಿಗೆ ದುಃಖ
ಇನ್ನು ಭೂಮಿಕಾ ಮನೆಯವರು ಮದುವೆ ಮುಗಿಸಿಕೊಂಡು ಮನೆಗೆ ಬರುತ್ತಾರೆ. ಭೂಮಿಕಾ ಇಲ್ಲದ್ದನ್ನು ನೆನೆದು ದುಃಖಿತರಾಗುತ್ತಾರೆ. ಸದಾಶಿವ ಹಾಗೂ ಮಂದಾಕಿನಿ ಕಣ್ಣೀರು ಹಾಕುತ್ತಾ ಕುಳಿತರೆ, ಅಪೇಕ್ಷಾ ಅವರ ಅಕ್ಕ ಭೂಮಿಕಾ ರೂಮಿಗೆ ಹೋಗುತ್ತಾಳೆ. ಪ್ರತಿಯೊಂದು ಘಟನೆಯನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುತ್ತಾಳೆ. ಭೂಮಿಕಾಳನ್ನು ಮನೆಯವರು ಬಹಳ ಮಿಸ್ ಮಾಡಿಕೊಳ್ಳುತ್ತಾರೆ. ಇತ್ತ ಶಕುಂತಲಾ, ಲಕ್ಷ್ಮೀಕಾಮತ ಹಾಗೂ ಜಯದೇವ ಪಾರ್ಟಿ ಮಾಡುತ್ತಿರುತ್ತಾರೆ. ಈ ಮನೆಯಲ್ಲಿ ದೊಡ್ಡ ತಲೆನೋವಾಗಿದ್ದ ಮಹಿಮಾ ಮದುವೆ ಆದ ಖುಷಿ ಒಂದು ಕಡೆಯಾದರೆ, ಭೂಮಿಕಾ ಈ ಮನೆ ಆಳಾಗಿ ಬಂದಳು ಎಂಬ ಸಮಾಧಾನ ಮತ್ತೊಂದು ಕಡೆಯಾಗಿದೆ. ಹೀಗಾಗಿ ಇವರು ಪಾರ್ಟಿ ಮಾಡುತ್ತಿರುತ್ತಾರೆ.

ಫುಲ್ ಹ್ಯಾಪಿ ಆದ ಮಹಿಮಾ
ಮಹಿಮಾ ತನ್ನ ಸ್ಕಿನ್ ಹಾಳಾಗಿರುವುದಕ್ಕೆ ಸಂಕಷ್ಟದಲ್ಲಿರುತ್ತಾಳೆ. ಆದರೆ, ವೈದ್ಯರು ಕೊಟ್ಟ ಔಷಧಿ ಕೆಲಸ ಮಾಡಿರುತ್ತದೆ. ಇದರಿಂದ ಖುಷಿಯಾದ ಮಹಿಮಾ ಕುಣಿದು ಕುಪ್ಪಳಿಸುತ್ತಾಳೆ. ಮಹಿಮಾ ಹನಿಮೂನ್ ಗೆಂದು ವಿದೇಶಕ್ಕೆ ತೆರಳಿದ್ದಾರೆ. ಸ್ಕಿನ್ ಹಾಳಾಗಿದ್ದರಿಂದ ಬೇಸರಗೊಂಡಿದ್ದಳು ಆದರೆ, ಈಗ ಸರಿ ಹೋಗಿರುವುದಕ್ಕೆ ಫಸ್ಟ್ ನೈಟಿಗೆ ಸಿದ್ಧವಾಗಿದ್ದಾರೆ. ಆದರ, ಇತ್ತ ಭೂಮಿಕಾ-ಗೌತಮ್ ಅವರು ಫಸ್ಟ್ ನೈಟಿಗೆ ಹೆದರಿಕೊಂಡಿದ್ದಾರೆ.
ಫಸ್ಟ್ ನೈಟಿಗಾಗಿ ಪೀಡಿಸುತ್ತಿರುವ ಆನಂದ್
ಆಫೀಸಿನಲ್ಲಿ ಭೂಮಿಕಾ ಹಾಗೂ ಗೌತಮ್ ಇಬ್ಬರೂ ಕೂಡ ಕುಳಿತಿರುತ್ತಾರೆ. ಗೌತಮ್ ಕಾನ್ಫರೆನ್ಸ್ ಕಾಲಿನಲ್ಲಿ ಬ್ಯುಸಿಯಾಗಿದ್ದರೆ, ಭೂಮಿಕಾ ಕಾಫಿ ಮಾಡಿಕೊಂಡು ಕುಡಿದು, ಕೂತಲ್ಲೇ ತೂಕಡಿಸುತ್ತಿರುತ್ತಾಳೆ. ಆಗ ಆನಂದ್ ಮತ್ತೆ ಫೋನ್ ಮಾಡಿ, ಬೇಗ ಬಾ ಗೌತಮ್ ಎಂದು ಕರೆಯುತ್ತಾನೆ. ಆದರೆ, ಗೌತಮ್ ಬರೋದಿಲ್ಲ ಎಂದು ಫೋನ್ ಕಟ್ ಮಾಡಿದ್ದಕ್ಕೆ, ಆನಂದ್ ಪುನಃ ಫೋನ್ ಮಾಡಿ ಅಜ್ಜಿ ಹೋಟೆಲ್ ಗೆ ಬಂದು ಹಠ ಮಾಡುತ್ತಿದ್ದಾರೆ. ನಿನ್ನನ್ನು ನೋಡಬೇಕು ಎನ್ನುತ್ತಿದ್ದಾರೆ. ಈ ಕೂಡಲೇ ಹೊರಟು ಬಾ. ಇಲ್ಲದಿದ್ದರೆ ಅವರನ್ನು ಇಲ್ಲಿಗೆ ಕಳಿಸುತ್ತೇನೆ ಎಂದು ಹೇಳುತ್ತಾನೆ. ಆಗ ಗೌತಮ್ ಗಾಬರಿಯಾಗಿ ಅಲ್ಲಿಗೆ ಬರಲು ಒಪ್ಪುತ್ತಾನೆ.


Click it and Unblock the Notifications











