Amruthadhaare: ಕೊನೆಗೂ ಜೀವನ್ ಮನೆಗೆ ಬಂದ ಗೌತಮ್ ಕುಟುಂಬ
'ಅಮೃತಧಾರೆ' ಧಾರಾವಾಹಿಯಲ್ಲಿ ಜೀವನ್ ಹಾಗೂ ಮಹಿಮಾ ಮದುವೆ ಸಂಬಂಧ ಭೂಮಿಕಾ ಮತ್ತು ಗೌತಮ್ ತಮ್ಮ ಜಗಳವನ್ನು ಪಕ್ಕಕ್ಕಿಟ್ಟು, ಸಮಾಧಾನವಾಗಿ ಮಾತನಾಡಲು ಭೇಟಿ ಮಾಡಿದ್ದಾರೆ. ಭೂಮಿಕಾ ಹೋಟೆಲ್‌ಗೆ ಬಂದು ಕೆಲ ನಿಮಿಷಗಳು ಕೂಡ ಆಗಿಲ್ಲ. ಅಷ್ಟರಲ್ಲಾಗಲೇ ಮಂದಾಕಿನಿ, ಭೂಮಿಕಾಳಿಗೆ ಪದೇ ಪದೇ ಫೋನ್ ಮಾಡಿ ಇರಿಟೇಟ್ ಮಾಡುತ್ತಿರುತ್ತಾಳೆ. ಭೂಮಿಕಾ ಎಷ್ಟೇ ತಾಳ್ಮೆಯಿಂದ ಇದ್ದರೂ ಪ್ರಯೋಜನವಿಲ್ಲ.
ಭೂಮಿಕಾ ಕೊನೆಗೆ ಬೇರೆ ದಾರಿ ಇಲ್ಲದೇ ಫೋನ್ ಅನ್ನು ರಿಸೀವ್ ಮಾಡುತ್ತಾಳೆ. ಮಂದಾಕಿನಿ ಹೇಗಾದರೂ ಮಾಡಿ ಗೌತಮ್‌ನನ್ನು ಮೊದಲು ನಮ್ಮ ಮನೆಗೆ ಬರುವಂತೆ ಮಾಡು ಎನ್ನುತ್ತಾಳೆ. ಇದನ್ನು ಗೌತಮ್ ಕೂಡ ಕೇಳಿಸಿಕೊಳ್ಳುತ್ತಾನೆ. ಅಲ್ಲದೇ, ಅಷ್ಟೊಂದು ಹಣ ಇರುವವರ ಜೊತೆಗೆ ಸಂಬಂಧ ಬೆಳೆಸುತ್ತಿರುವುದು ನಮ್ಮ ಪುಣ್ಯ. ಹೀಗಾಗಿ ಸಮಾಧಾನವಾಗಿ ಮಾತನಾಡು. ಮನೆಗೆ ಬಂದ ಮೇಲೆ ಮಿಕ್ಕಿದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಇದೆಲ್ಲವೂ ಗೌತಮ್ ಗೆ ಕೇಳಿಸುತ್ತದೆ. ಮಿಡಲ್ ಕ್ಲಾಸ್ ಜನರ ಆಲೋಚನೆಯೇ ಇಷ್ಟು ಎಂಬಂತೆ ರಿಯಾಕ್ಟ್ ಮಾಡುತ್ತಾನೆ.

ಬಳಿಕ ಭೂಮಿಕಾ ಮತ್ತು ಗೌತಮ್ ಒಬ್ಬರಿಗೊಬ್ಬರು ಆದ ಪ್ರತಿಯೊಂದು ತಪ್ಪಿಗೂ ಕ್ಷಮೆ ಕೇಳುತ್ತಿರುತ್ತಾರೆ. ಅಷ್ಟರಲ್ಲಿ ಮಳೆ ಶುರುವಾಗುತ್ತದೆ. ಇದರಿಂದ ಗೌತಮ್ ಬಹಳ ಬೇಸರ ಮಾಡಿಕೊಳ್ಳುತ್ತಾನೆ. ಆದರೆ, ಭೂಮಿಕಾ ಮಳೆಯನ್ನು ನೋಡಿ ಬಹಳ ಖುಷಿಪಡುತ್ತಾಳೆ. ಗೌತಮ್‌ನನ್ನು ಯಾಕೆ ಮಳೆ ನೋಡಿ ಬೇಸರ ಮಾಡಿಕೊಂಡಿದ್ದು ಎಂದು ಕೇಳುತ್ತಾಳೆ. ಗೌತಮ್, ಮಳೆ ಬಂದರೆ, ಬಹಳ ಸಮಸ್ಯೆಗಳು ಆಗುತ್ತವೆ ಅದಕ್ಕೆ ನನಗೆ ಇಷ್ಟವಿಲ್ಲ ಎಂದು ಹೇಳುತ್ತಾನೆ. ಆಗ ಮಳೆಯಿಂದ ಎಷ್ಟೆಲ್ಲಾ ಉಪಯೋಗ ಇದೆ ಎಂದು ಭೂಮಿಕಾ ಲೆಕ್ಚರ್ ಕೊಡಲು ಶುರು ಮಾಡುತ್ತಾಳೆ.
ಮಹಿಮಾ ಮನೆಯಲ್ಲಿ ಸಂತಸ
ಇಬ್ಬರು ಇದೆಲ್ಲಾ ಮಾತು ಬೇಡ ಮನೆಯವರೆಲ್ಲಾ ಸೇರಿ ಮಾತನಾಡುವುದು ಯಾವಾಗ ಎಂದು ನಿರ್ಧರಿಸುತ್ತಾರೆ. ಭೂಮಿಕಾ ನಮ್ಮ ಮನೆಯಲ್ಲೇ ಇರಲಿ ಎಂದು ಹೇಳುತ್ತಾಳೆ. ಇದಕ್ಕೆ ಗೌತಮ್ ಒಪ್ಪಿಕೊಳ್ಳುತ್ತಾನೆ. ಮನೆಗೆ ಬರುವ ಗೌತಮ್, ಶಕುಂತಲಾ ಬಳಿ ಮದುವೆ ಬಗ್ಗೆ ಮಾತನಾಡುತ್ತಾನೆ. ಭೂಮಿಕಾ ಅವರ ಮನೆಗೆ ಹೋಗಿ ಮದುವೆಯ ಮಾತುಕತೆಯನ್ನು ಮಾಡಬೇಕು ಎಂದು ಹೇಳುತ್ತಾನೆ. ಹೋಟೆಲ್‌ನಲ್ಲಿ ಭೇಟಿ ಮಾಡಬಹುದಿತ್ತಲ್ವಾ ಎಂದು ಕೇಳುತ್ತಾಳೆ. ಇಲ್ಲ ಅವರ ಮನೆಗೆ ಹೋಗಬೇಕು ಎಂದು ಹೇಳಿದರು. ಅದಕ್ಕೆ ಒಪ್ಪಿಕೊಂಡೆ ಎನ್ನುತ್ತಾನೆ.

ಜಯದೇವನಿಗೆ ತಂಗಿಯ ಮದುವೆ ಮಾತುಕತೆಗೆ ಬರುವಂತೆ ಹೇಳುತ್ತಾಳೆ. ಆದರೆ, ಜಯದೇವ ಇದಕ್ಕೆ ಒಪ್ಪುವುದಿಲ್ಲ. ಇನ್ನು ಮಹಿಮಾ ತನ್ನ ಮದುವೆ ನಡೆಯುತ್ತಿರುವುದಕ್ಕೆ ಖುಷಿ ಪಟ್ಟಿದ್ದು, ಅಣ್ಣನಿಗೆ ಥ್ಯಾಂಕ್ಸ್ ಎಂದು ಕೇಳುತ್ತಾಳೆ. ಗೌತಮ್ ಮನೆಯಲ್ಲಿ ಸಂತಸ ಮೂಡಿರುತ್ತದೆ.
ಜಂಭ ಕೊಚ್ಚಿಕೊಂಡ ಮಂದಾಕಿನಿ
ಇನ್ನು ಮಂದಾಕಿನಿಗೆ ಗೌತಮ್ ಮನೆ ಸಂಬಂಧ ಬೆಳೆಸುತ್ತಿರುವುದು ಖುಷಿ ಕೊಡುತ್ತದೆ. ಹೀಗಾಗಿ ಮನೆಯನ್ನೆಲ್ಲಾ ಸ್ವಚ್ಛ ಮಾಡಲು ಮುಂದಾಗಿದ್ದಾಳೆ. ಇನ್ನು ಹೊರಗಡೆಯಿಂದ ತಿಂಡಿ ಅನ್ನು ತರಲು ಲಿಸ್ಟ್ ಹಾಕುತ್ತಾಳೆ. ಎಲ್ಲರಿಗೂ ಫೋನ್ ಮಾಡಿ ತಾವು ಗೌತಮ್ ದಿವಾನ್ ಅವರ ಮನೆಯ ಸಂಬಂಧ ಬೆಳೆಸುತ್ತಿರುವ ವಿಚಾರದ ಬಗ್ಗೆ ಹೇಳಿಕೊಂಡು ಜಂಭ ಕೊಚ್ಚಿಕೊಳ್ಳುತ್ತಿರುತ್ತಾಳೆ.
ಭೂಮಿಕಾ ಮನೆಗೆ ಗೌತಮ್ ಫ್ಯಾಮಿಲಿ
ಇನ್ನು ಭೂಮಿಕಾಳಿಗೆ ಎಲ್ಲಾ ಕೆಲಸ ಒಪ್ಪಿಸಿರುವ ಮಂದಾಕಿನಿ, ಫೇಷಿಯಲ್ ಪ್ಯಾಕ್ ಅನ್ನು ಹಾಕಿಕೊಂಡು ಫೋನ್‌ನಲ್ಲಿ ಹರಟೆ ಹೊಡೆಯುತ್ತಿರುತ್ತಾಳೆ. ಜೀವನ್‌ಗೆ ಭೂಮಿಕಾ ನೀನು ಪ್ರೀತಿಸುವ ಹುಡುಗಿಗೆ ಯಾವುದೇ ನೋವನ್ನು ಕೊಡಬೇಡ ಎಂದು ಹೇಳುತ್ತಾಳೆ. ಇನ್ನು ಗೌತಮ್ ಮನೆಯವರು ಅಪಾರ್ಟ್‌ಮೆಂಟ್‌ಗೆ ಬರುತ್ತಾರೆ. ಇಷ್ಟು ಕೆಟ್ಟದಾಗಿದೆ ಎಂದು ಮಾತನಾಡುತ್ತಿರುತ್ತಾರೆ. ಅಷ್ಟರಲ್ಲಿ ಮಂದಾಕಿನಿ ಬಂದು ಆರತಿ ಮಾಡಿ ವೆಲ್ಕಂ ಮಾಡುತ್ತಾಳೆ.


Click it and Unblock the Notifications











