Amruthadhaare ; ಅಂತೂ ಇಂತೂ ನಡೆದೇ ಹೋಯ್ತು ಅಪೇಕ್ಷಾ-ಪಾರ್ಥನ ಮದುವೆ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಮದುವೆಗೆ ನೂರೆಂಟು ಅಡೆ-ತಡೆಗಳು ಮೂಡಿ ಬಂದಿವೆ. ಇದರಿಂದ ಎರಡೂ ಮನೆಯ ವಾತಾವರಣ ಸಂಪೂರ್ಣವಾಗಿ ಹಾಳಾಗಿದೆ. ಜೀವನ್ ಮತ್ತು ಮಹಿಮಾ ಅಪೇಕ್ಷಾ ಹಾಗೂ ಪಾರ್ಥನ ಕಾಳಜಿ ಮೇಲೆ ಸದಾಶಿವನ ಬಳಿ ಮಾತನಾಡಿದ್ದಾರೆ. ಇಬ್ಬರ ಮದುವೆಗೂ ಒಪ್ಪಿಕೊಳ್ಳಿ ಎಂದು ಕೇಳಿದ್ದಾರೆ. ಆದರೆ, ಸದಾಶಿವ ಮಾತ್ರ ತನ್ನ ನಿರ್ಧಾರವನ್ನು ಬದಲಾಯಿಸಿಲ್ಲ. ಎಲ್ಲರಿಗೂ ಬೈದಿದ್ದು, ಅಪೇಕ್ಷಾ ಮತ್ತು ಪಾರ್ಥನ ಮದುವೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಹೇಳಿದ್ದಾನೆ.

ಮದುವೆಗೆ ವ್ಯವಸ್ಥೆ ಮಾಡಿದ ಶಕುಂತಲಾ

ಪಾರ್ಥ ಮತ್ತು ಅಪೇಕ್ಷಾ ಮದುವೆ ರಿಜಿಸ್ಟರ್ ಆಫೀಸ್‌ನಲ್ಲಿ ನಡೆಯದ ಕಾರಣ ಪಾರ್ಥ ಶಕುಂತಲಾ ಬಳಿ ಮಾತನಾಡಿದ್ದಾನೆ. ಶಕುಂತಲಾ ಇಬ್ಬರಿಗೂ ದೇವಸ್ಥಾನದಲ್ಲಿ ಮದುವೆಯಾಗಿ ಅಲ್ಲಿ ನಾನು ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದೇನೆ ಎಂದು ಹೇಳುತ್ತಾಳೆ. ಪಾರ್ಥ ಮತ್ತು ಅಪೇಕ್ಷಾ ಮದುವೆಯಾಗಲು ದೇವಸ್ಥಾನಕ್ಕೆ ಹೊರಟಿದ್ದಾನೆ. ಇತ್ತ ಭೂಮಿಕಾ ಮದುವೆ ಹೇಗೋ ನಿಂತು ಹೋಗಿದೆ ಎಂದು ಸಮಾಧಾನ ಪಟ್ಟುಕೊಂಡಿದ್ದಾಳೆ. ಮಲ್ಲಿ ಜೊತೆಗೆ ಮಾತನಾಡಿ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾಳೆ. ಇನ್ನು ಗೌತಮ್ ಮನಸ್ಸು ಹಗುರಾಗಲಿ ಎಂದು ರುಚಿ ರುಚಿಯಾದ ಅಡುಗೆ ಮಾಡಲು ತಯಾರಿ ನಡೆಸುತ್ತಿದ್ದಾಳೆ.

Amruthadhaare Serial 14 August episode written update

ಅಪೇಕ್ಷಾಳನ್ನು ಮುಗಿಸಲು ಜೈದೇವ್ ಪ್ಲಾನ್

ಜೈದೇವ್ ಮದುವೆ ಯಾವುದೇ ಕಾರಣ ನಡೆಯಬಾರದು ಎಂದು ತೀರ್ಮಾನಿಸಿದ್ದಾನೆ. ಹೀಗಾಗಿ ರೌಡಿಗಳಿಗೆ ಹಣ ಕೊಟ್ಟಿದ್ದು, ಅಪೇಕ್ಷಾಳನ್ನು ಕೊಲ್ಲುವಂತೆ ಹೇಳಿದ್ದಾನೆ. ರೌಡಿಗಳು ಪಾರ್ಥ ಮತ್ತು ಅಪೇಕ್ಷಚಾಳನ್ನು ಅಟ್ಯಾಕ್ ಮಾಡಿದ್ದಾರೆ. ಪಾರ್ಥ ಶಕುಂತಲಾಗೆ ಫೋನ್ ಮಾಡಿ ತಮಗಾಗುತ್ತಿರುವ ತೊಂದರೆಯನ್ನು ಹೇಳುತ್ತಾನೆ. ಈ ಮಾತನ್ನು ಕೇಳಿದ ಶಕುಂತಲಾಳಿಗೆ ಗಾಬರಿಯಾಗಿದೆ. ಶಕುಂತಲಾ ಗೌತಮ್ ಬಳಿ ವಿಚಾರ ಹೇಳಿ ಸಹಾಯ ಕೇಳುತ್ತಾಳೆ. ಗೌತಮ್ ಕೂಡಲೇ ಪಾರ್ಥ ಇರುವ ಸ್ಥಳಕ್ಕೆ ಹೋಗಿದ್ದಾನೆ. ಆನಂದ್ ಗೂ ಅಲ್ಲಿಗೆ ಬರುವಂತೆ ಹೇಳಿದ್ದಾನೆ.ಿದೇ ಸಮಯಕ್ಕೆ ಸರಿಯಾಗಿ ಪಾರ್ಥನನ್ನು ಕೊಲ್ಲಲು ಜೈದೇವ್ ಮುಖ ಮುಚ್ಚಿಕೊಂಡು ಬಂದಿದ್ದಾನೆ.


ತಮ್ಮ-ನಾದಿನಿಯನ್ನು ಉಳಿಸಲು ಬಂದ ಗೌತಮ್

ಗೌತಮ್ ರೌಡಿಗಳ ಜೊತೆಗೆ ಜಗಳ ಮಾಡಿದ್ದಾನೆ. ಫೈಟ್ ಮಾಡಿದ್ದಲ್ಲದೇ, ಜೈದೇವ್ ನನ್ನು ಹಿಡಿದು ಯಾರೆಂದು ನೋಡಲು ಯತ್ನಿಸಿದ್ದಾನೆ. ಆದರೆ, ಜೈದೇವ್ ಅಣ್ಣನನ್ನು ನೋಡುತ್ತಿದ್ದಂತೆ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಗೌತಮ್ ಮತ್ತು ಆನಂದ್ ರೌಡಿಗಳ ಜೊತೆಗೆ ಹೋರಾಡಿ ಪಾರ್ಥ ಮತ್ತು ಅಪೇಕ್ಷಾಳನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಿ ಅಪೇಕ್ಷಾ ಮತ್ತು ಪಾರ್ಥ ಬೇಕಂತಲೇ ಮದುವೆ ಆಗಿದ್ದಾರೆ. ಇದನ್ನು ನೋಡಿ ಗೌತಮ್ ಗಾಬರಿಯಾಗಿದ್ದಾನೆ. ಅಪೇಕ್ಷಾ ಮತ್ತು ಪಾರ್ಥ ಇಬ್ಬರೂ ಗೌತಮ್ ಬಳಿ ಕ್ಷಮೆ ಕೇಳಿದ್ದಾರೆ. ನಮಗೆ ಒಬ್ಬರಿಗೊಬ್ಬರು ಬಿಟ್ಟಿರೋದಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ಹೀಗೆ ಮಾಡಬೇಕಾಯ್ತು ಎಂದು ಹೇಳುತ್ತಾರೆ.

Amruthadhaare Serial 14 August episode written update

ವಿರೋಧದ ನಡುವೆಯೂ ನಡೀತು ಮದುವೆ

ಎಲ್ಲರ ವಿರೋಧದ ನಡುವೆಯೂ ಇಬ್ಬರ ಮದುವೆ ನಡೆದು ಹೋಗಿದ್ದು, ಗೌತಮ್ ಬೈಯುತ್ತಾನೆ. ಯಾಕೆ ಇಂತಹ ದುಡುಕಿ ನಿರ್ಧಾರ ತೆಗೆದುಕೊಂಡಿದ್ದು. ಸ್ವಲ್ಪ ತಾಳ್ಮೆಯಿಂದ ಇರಬೇಕಿತ್ತು ಎಂದು ಹೇಳುತ್ತಾನೆ. ತಲೆಕೆಡಿಸಿಕೊಂಡ ಗೌತಮ್ ಶಕುಂತಲಾಳಿಗೆ ಫೋನ್ ಮಾಡುತ್ತಾನೆ. ಮದುವೆ ನಡೆದ ಬಗ್ಗೆ ಹೇಳುತ್ತಾನೆ. ಶಕುಂತಲಾ ಇಬ್ಬರಿಗೂ ಏನೂ ಹೇಳಬೇಡ. ಅವರಿಬ್ಬರನ್ನು ಕಾಪಾಡುವ ಜವಾಬ್ದಾರಿ ನಿನ್ನದು. ಮಕ್ಕಳು ಏನೋ ತಪ್ಪು ಮಾಡುತ್ತಾರೆ. ಈಗ ಅವರು ಯಾರ ಮುಂದೆಯೂ ತಲೆ ತಗ್ಗಿಸದಂತೆ ನೋಡಿಕೊಳ್ಳಬೇಕು ಎಂದು ಶಕುಂತಲಾ ಕೇಳಿಕೊಂಡಿದ್ದಾಳೆ. ಗೌತಮ್ ಗೆ ದಿಕ್ಕೇ ತೋಚದಂತಾಗಿದೆ. ಗೌತಮ್ ಈಗ ಎರಡೂ ಮನೆಯನ್ನು ಹೇಗೆ ಸಂಬಾಳಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X