Amruthadhaare : ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಶಕುಂತಲಾ ಹೊಸ ನಾಟಕ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತಾಯಿಗೆ ಪ್ರಪಂಚದ ಪ್ರಜ್ಞೆ ಇಲ್ಲದ ಕಾರಣ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾನೆ. ತನ್ನ ತಾಯಿಗಾಗಿ ಅಮೇರಿಕಾದಿಂದ ವೈದ್ಯರನ್ನು ಕರೆಸುತ್ತಿದ್ದಾನೆ. ಇನ್ನು ಮನೆಗೆ ಸೊಸೆ ಬಂದಿರುವುದಕ್ಕೆ ಖುಷಿಯಾಗಿರುವ ಗೌತಮ್ ಮಗುವಿನ ಜೊತೆಗೆ ನಿತ್ಯ ಆಟವಾಡುತ್ತಿರುತ್ತಾನೆ. ಮಗುವಿನೊಂದಿಗೆ ಆಡುವ ಗೌತಮ್ ನನ್ನು ಕಂಡು ಭೂಮಿಕಾ ಹ್ಯಾಪಿ ಆಗಿದ್ದಾಳೆ. ಸೊಸೆಯನ್ನು ರೆಡಿ ಮಾಡಿ ಗೌತಮ್ ತಾನೇ ಶಾಲೆಗೆ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಸೊಸೆಯನ್ನು ಕರೆದುಕೊಂಡು ಬಂದಿದ್ದಕ್ಕೆ ಅವಳ ಜೊತೆಗೆ ಓದುತ್ತಿರುವ ಹುಡುಗರು ನೋಡಿ ಶಾಕ್ ಆಗಿದ್ದಾರೆ.

ಶಕುಂತಲಾಳನ್ನು ನೋಡಿ ಹೆದರಿದ ಭಾಗ್ಯ

ಶಕುಂತಲಾ ಮತ್ತು ಲಕ್ಷ್ಮೀಕಾಂತ ಮನೆಯ ಹಾಲ್ ನಲ್ಲಿ ಕುಳಿತು ಹರಟೆ ಹೊಡೆಯುತ್ತಿರುತ್ತಾರೆ. ರೂಮ್ ನಿಂದ ಅಕಸ್ಮಾತ್ ಆಗಿ ಹೊರಗೆ ಬಂದ ಭಾಗ್ಯ ಶಕುಂತಲಾಳನ್ನು ನೋಡುತ್ತಾಳೆ. ತಕ್ಷಣವೇ ಹೆದರಿಕೊಳ್ಳುವ ಭಾಗ್ಯ ಕೂಗಲು ಶುರು ಮಾಡುತ್ತಾಳೆ. ಕೂಡಲೇ ಭೂಮಿಕಾ ಬಂದು ಭಾಗ್ಯಳನ್ನು ಸಮಾಧಾನ ಮಾಡಲು ಯತ್ನಿಸುತ್ತಾಳೆ. ಆಗ ಭಾಗ್ಯ ಶಕೂಂತಲಾಳ ಕಡೆಗೆ ಕೈ ತೋರಿಸುತ್ತಾಳೆ. ಭೂಮಿಕಾ ತಿರುಗಿ ನೋಡುವ ಮುನ್ನ ಶಕುಂತಲಾ ಅಲ್ಲಿಂದ ಮರೆಯಾಗುತ್ತಾಳೆ. ಏನೋ ನೋಡಿ ಹೆದರಿರಬೇಕು ಎಂದು ಭೂಮಿಕಾ ಸಮಾಧಾನ ಮಾಡುತ್ತಾಳೆ. ನಂತರ ಶಕುಂತಲಾ ಭೂಮಿಕಾ ಬಳಿ ಬಂದು ಭಾಗ್ಯಳಿಗೆ ಏನಾಯ್ತು ಎಂದು ಪ್ರಶ್ನೆ ಮಾಡುತ್ತಾಳೆ. ಭೂಮಿಕಾ ತನಗೂ ಗೊತ್ತಿಲ್ಲ ಎಂದು ಹೇಳಿ ಸುಮ್ಮನಾಗುತ್ತಾಳೆ.

Amruthadhaare Serial 14 January episode written update

ಶಾಲೆಯನ್ನು ದತ್ತು ಪಡೆದ ಗೌತಮ್

ಇತ್ತ ಗೌತಮ್ ಸರ್ಕಾರಿ ಶಾಲೆಯ ಮಕ್ಕಳ ಪರೀಸ್ಥಿತಿಯನ್ನು ಕಂಡು ಮರುಗುತ್ತಾನೆ. ತನ್ನ ಕಂಪನಿಯಿಂದ ಶಾಲೆಯನ್ನು ದತ್ತು ಪಡೆಯಲು ನಿರ್ಧರಿಸುತ್ತಾನೆ. ಈ ಬಗ್ಗೆ ಶಾಲೆಯ ಮುಖ್ಯಸ್ಥರ ಬಳಿ ಮಾತನಾಡುತ್ತಾನೆ. ಮುಖ್ಯಸ್ಥರಿಗೆ ಇದರಿಂದ ಖುಷಿಯಾಗುತ್ತದೆ. ಇನ್ನು ಸೊಸೆಯನ್ನು ಕರೆದುಕೊಂಡು ಹೋಗಲು ಬರುವಾಗ ಗೌತಮ್ ಉಳಿದ ಮಕ್ಕಳಿಗಾಗಿ ಪುಸ್ತಕ, ಪೆನ್ಸಿಲ್, ಚಾಕ್ ಲೇಟ್ ಗಳನ್ನು ಖರೀದಿಸಿ ತಂದಿರುತ್ತಾನೆ. ಎಲ್ಲವನ್ನೂ ಮಕ್ಕಳಿಗೆ ಕೊಟ್ಟು ಖುಷಿ ಪಡುತ್ತಾನೆ.


ಜೈದೇವ್ ಮೇಲೆ ಮಲ್ಲಿಗೆ ಅನುಮಾನ

ಜೈದೇವ್ ಮತ್ತೆ ಮೊದಲಿನಂತೆಯೇ ದಿಯಾ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾನೆ. ಆದರೆ, ಪದೇ ಪದೇ ಮಲ್ಲಿ ಫೋನ್ ಮಾಡಿ ಮನೆಗೆ ಬನ್ನಿ ಎಂದು ಕರೆಯುತ್ತಿರುತ್ತಾಳೆ. ಇದರಿಂದ ದಿಯಾ ಡಿಸ್ಟರ್ಬ್ ಆಗಿದ್ದಾಳೆ. ಜೈದೇವ್ ಬಳಿ ದಿಯಾ ಜಗಳ ಮಾಡುತ್ತಿದ್ದಾಳೆ. ನಾನು ಸ್ಟೆಪ್ನಿ ಆಗಿ ಇರಲು ಇಷ್ಟವಿಲ್ಲ. ಆದಷ್ಟು ಬೇಗ ಮಲ್ಲಿಗೆ ಡಿವೋರ್ಸ್ ಕೊಡಿ, ಇಲ್ಲದೇ ಹೋದರೆ ನನ್ನನ್ನು ಮರೆತು ಬಿಡಿ ಎಂದು ಜಗಳ ಮಾಡಿದ್ದಾಳೆ. ಜೈದೇವ್ ಗೆ ಈಗ ಮತ್ತೆ ಮಲ್ಲಿ ತಲೆನೋವಾಗಿದ್ದಾಳೆ. ಇತ್ತ ಪಾರ್ಥ ಮಲ್ಲಿ ಬಳೀ ಜೈದೇವ್ ಎಲ್ಲಿ ಎಂದು ಕೇಳಿದ್ದು, ಅವನು ಆಫೀಸಿಗೂ ಹೋಗಿಲ್ಲ ಇವತ್ತು ಯಾವ ಮೀಟಿಂಗೂ ಇಲ್ಲ ಎಂದಿದ್ದಾನೆ. ಈ ಮಾತನ್ನು ಕೇಳಿದ ಮಲ್ಲಿಗೆ ಮತ್ತೆ ಜೈದೇವ್ ಮೇಲೆ ಅನುಮಾನ ಮೂಡಿದೆ.


ಮಗನ ಎದುರು ನಾಟಕ ಮಾಡಿದ ಶಕುಂತಲಾ

ಭಾಗ್ಯ ತನ್ನನ್ನು ನೋಡಿ ಪದೇ ಪದೇ ಹೆದರುತ್ತಿರುವ ಕಾರಣ ಇದರಿಂದ ತನಗೆ ಸಮಸ್ಯೆ ಆಗಬಹುದು ಎಂದು ಗಾಬರಿಯಾಗಿದ್ದಾಳೆ. ಅದಕ್ಕಾಗಿ ಹೊಸ ಐಡಿಯಾ ಮಾಡಿದ್ದು, ಅಳುವಂತೆ ನಟಿಸಿ ಗೌತಮ್ ನನ್ನು ರೂಮಿಗೆ ಕರೆದು ಭಾಗ್ಯ ಯಾಕೋ ತನ್ನನ್ನು ನೋಡಿ ಹೆದರುತ್ತಿದ್ದಾಳೆ ಎಂದು ಕಣ್ಣೀರು ಹಾಕುತ್ತಾ ಗೋಳಾಡಿದ್ದಾಳೆ. ಗೌತಮ್ ಶಕುಂತಲಾಳ ಸಮಾಧಾನ ಮಾಡಿದ್ದು, ಭಾಗ್ಯ ಹೆದರುವುದಕ್ಕೆ ಕಾರಣವೇ ಇಲ್ಲ ಎಂಬಂತೆ ಹೇಳಿದ್ದಾನೆ. ಒಟ್ನಲ್ಲಿ ಶಕುಂತಲಾ ಬಚಾವ್ ಆಗಲು ಯತ್ನಿಸಿದ್ದು, ಇದರ ಪರಿಣಾಮ ಮುಂದಿನ ದಿನಗಳಲ್ಲಿ ತಿಳಿದು ಬರಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X