Amruthadhaare; ಮಹಿಮಾಳಿಗೆ ಜೀವನ್ ಮೇಲೆ ಕೋಪ, ಗೌತಮ್‌ಗೆ ಚಿಕನ್ ಶಿಕ್ಷೆ ಕೊಟ್ಟ ಭೂಮಿಕಾ..!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಇಬ್ಬರೂ ಈ ಬಾರಿ ಅಪರ್ಣಾ ಹಾಗೂ ಆನಂದ್ ಕೊಡಿಸಿದ ಪಾರ್ಟಿಯಲ್ಲಿ ಸಕತ್ ಎಂಜಾಯ್ ಮಾಡಿದ್ದಾರೆ. ರಾತ್ರಿ ಇಡೀ ಆನಂದ್ ಮನೆಯಲ್ಲೇ ಕಳೆದಿದ್ದು, ಟೆರೆಸ್ ಮೇಲೆ ಹೋಗಿದ್ದಾರೆ. ಚಂದ್ರನನ್ನು ನೋಡುತ್ತಾ ನೆಲದ ಮೇಲೆ ಮಲಗಿಕೊಂಡು ನಕ್ಷತ್ರದ ಬಗ್ಗೆ ಮಾತನಾಡಿದ್ದಾರೆ. ಇಬ್ಬರೂ ಕೂಡ ಒಟ್ಟಿಗೆ ಇರುವಾಗ ಸುಖಾ ಸುಮ್ಮನೆ ಕಾಲಹರಣ ಮಾಡುವ ಬದಲು ಒಳ್ಳೆಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಪಾಸಿಟಿವ್ ಆಗಿ ಇರುತ್ತಾರೆ.
ಅಜ್ಜಿಯ ಮಾತುಗಳಿಗೆ ಗೌತಮ್ ಬೇಸರ
ಇನ್ನು ಅಜ್ಜಿ ಮನೆಯವರೆಲ್ಲರನ್ನೂ ಕರೆಸುತ್ತಾರೆ. ನಿಮ್ಮೆಲ್ಲರ ಜೊತೆಗೆ ಮಾತನಾಡಬೇಕು ಎಂದು ಕರೆಸಿದ್ದಕ್ಕೆ, ಎಲ್ಲರೂ ಕುತೂಹಲಗೊಂಡಿರುತ್ತಾರೆ. ಅಜ್ಜಿ ತನಗೆ ವಯಸ್ಸಾಗುತ್ತಿದ್ದು, ಈ ಮನೆಯನ್ನು ಮುಂದು ನಡೆಸಲು ಕಷ್ಟವಾಗಿತ್ತಿದೆ. ತನ್ನ ನಂತರ ಈ ಮನೆಯ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಕೊಡಬೇಕಾಗಿದೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಶಕುಂತಲಾಳಿಗೆ ಫುಲ್ ಖುಷಿಯಾಗುತ್ತದೆ. ತನಗೆ ಎಲ್ಲಾ ಜವಾಬ್ದಾರಿಯನ್ನು ಕೊಡುತ್ತಾರೆ. ಇನ್ಮುಂದೆ ಈ ಮನೆ ತನ್ನ ಆಡಳಿತದಲ್ಲಿ ನಡೆಯುತ್ತೆ ಎಂದು ಖುಷಿ ಪಡುತ್ತಾಳೆ. ಆದರೆ, ಗೌತಮ್ ಗೆ ಅಜ್ಜಿಯ ಮಾತುಗಳನ್ನು ಕೇಳಿ ಭಾವುಕನಾಗುತ್ತಾನೆ. ಅಜ್ಜಿಯೂ ಕೂಡ ಮೊಮ್ಮಗನ ಕಣ್ಣೀರಿಗೆ ಸೋಲುತ್ತಾರೆ. ಇಬ್ಬರ ಬಾಂಧವ್ಯವನ್ನು ಕಂಡು ಭೂಮಿಕಾ ಕೂಡ ಕಣ್ಣೀರು ಹಾಕುತ್ತಾಳೆ.

ಗೌತಮ್ ಗೆ ಚಿಕನ್ ತಿನ್ನುವ ಶಿಕ್ಷೆ
ಬಳಿಕ ಭೂಮಿಕಾ ಗೌತಮ್ ಗೆ ಬೆಳಗೆದ್ದ ಕೂಡಲೇ ಕಾಲು ಸೂಪ್ ಕೊಡುತ್ತಾಳೆ. ತಿಳಡಿಗೆ ಇಡ್ಲಿ ಜೊತೆಗೆ ಚಿಕನ್ ಗ್ರೇವಿ, ಚಿಕನ್ ಕಬಾಬ್, ಚಿಕನ್ ಫ್ರೈ ಮಾಡಿರುತ್ತಾಳೆ. ಗೌತಮ್ ಗೆ ನಾನ್ ವೆಜ್ ನೋಡಿ ಖುಷಿಯಾಗುತ್ತದೆ. ಇಷ್ಟಪಟ್ಟು ತಿನ್ನುತ್ತಾನೆ. ಇದನ್ನು ಚೇಫ್ ಮಾಡಿರುವುದು ಎಂದು ತಿಳಿದು ಹೊಗಳುತ್ತಾನೆ. ಭೂಮಿಕಾಳಿಗೆ ಮತ್ತೆ ಕೋಪ ಬರುತ್ತದೆ. ತಾನು ಮಾಡಿದ ಅಡುಗೆಯ ರುಚಿ ಗೊತ್ತಾಗುವುದಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಊಟವನ್ನು ಮನೆಯಿಂದಲೇ ಕಳಿಸುವುದಾಗಿ ಹೇಳುತ್ತಾಳೆ.
ಸತ್ಯ ತಿಳಿದು ಕಂಗಾಲಾದ ಗೌತಮ್
ಮಧ್ಯಾಹ್ನ ಊಟವನ್ನು ಕೂಡ ಚಿಕ್ನ್ ಬಿರಿಯಾನಿ, ಚಿಕನ್ ಫ್ರೈ ಸೇರಿದಂತೆ ಎಲ್ಲಾ ಚಿಕನ್ ನಿಂದಲೇ ತಯಾರಿಸಿ ಕಳುಹಿಸಿರುತ್ತಾಳೆ. ಇದನ್ನು ನೋಡಿದ ಗೌತಮ್ ಗೆ ಬೇಸರವಾಗುತ್ತದೆ. ಈ ಬಗ್ಗೆ ಗೌತಮ್ ಆನಂದ್ ಬಳಿ ಹಂಚಿಕೊಳ್ಳುತ್ತಾನೆ. ಬೆಳಗ್ಗೆಯೂ ಚಿಕನ್, ಈಗಲೂ ಚಿಕನ್ ಎಂದು ಹೇಳಿದಾಗ ಆನಂದ್ ನಿನ್ನೆ ಭೂಮಿಕಾ ಅತ್ತಿಗೆ ಮಾಡಿದ ಅಡುಗೆಯನ್ನು ಅಪರ್ಣಾ ಮಾಡಿದ್ದು ಎಂದು ಹೊಗಳಿದೆ. ಹಾಗಾಗಿ ಅತ್ತಿಗೆಗೆ ಕೋಪ ಬಂದು ಹೀಗೆ ಮಾಡಿದ್ದಾರೆ. ಮೊದಲು ಹೋಗಿ ಕ್ಷಮೆ ಕೇಳು ಇಲ್ಲದೇ ಹೋದರೆ, ಈ ಶಿಕ್ಷೆಯನ್ನು ಇನ್ನೂ ಹೆಚ್ಚಾಗಿ ಅನುಭವಿಸಬೇಕಾಗುತ್ತದೆ ಎಂದು ಹೇಳುತ್ತಾನೆ. ಆನಂದ್ ಮಾತನ್ನು ಕೇಳಿದ ಗೌತಮ್ ಗೆ ಆತಂಕವಾಗುತ್ತದೆ.

ಮಹಿಮಾ ಹುಟ್ಟುಹಬ್ಬವನ್ನು ಮರೆತ ಜೀವನ್
ಮಹಿಮಾ ಹುಟ್ಟುಹಬ್ಬದ ಹಿನ್ನೆಲೆ ಸ್ನೇಹಿತರು, ಕುಟುಂಬದವರು ಎಲ್ಲರೂ ಫೋನ್ ಮಾಡಿ ವಿಶ್ ಮಾಡುತ್ತಿರುತ್ತಾರೆ. ಆದರೆ, ಜೀವನ್ ಹೆಂಡತಿಯ ಬರ್ತಡೇ ಅನ್ನೇ ಮರೆತಿರುತ್ತಾನೆ. ಹೀಗಾಗಿ ಮಹಿಮಾ ಜೀವನ್ ಮೇಲೆ ಕೋಪ ಮಾಡಿಕೊಂಡಿರುತ್ತಾಳೆ. ಜೀವನ್ ಎಷ್ಟೇ ಕ್ಷಮೆ ಕೇಳಿದರೂ ಮಹಿಮಾ ಕ್ಷಮಿಸುವುದಿಲ್ಲ. ಈ ಬಗ್ಗೆ ಜೀವನ್ ಆತಂಕ ಪಡುತ್ತಾನೆ. ಮಂದಾಕಿನಿ ಬಳಿ ನಡೆದ ಘಟನೆಯನ್ನೆಲ್ಲಾ ಹೇಳಿ, ಏನು ಮಾಡಬೇಕೋ ತಿಳಿಯುತ್ತಿಲ್ಲ. ಮಹಿಮಾಳಿಗೆ ತನ್ನ ಮೇಲೆ ಕೋಪ ಬಂದಿದೆ ಎಂದು ಹೇಳುತ್ತಾನೆ. ಮಂದಾಕಿನಿ ಜೀವನ್ ಗೆ ಸಮಾಧಾನ ಮಾಡುತ್ತಾಳೆ.


Click it and Unblock the Notifications











