Amruthadhaare ಗೌತಮ್-ಭೂಮಿಕಾ ಬಾಳಲ್ಲಿ ಬಯಸಿದ ಬಾಗಿಲು ತೆರೆದಾಯ್ತು : ಇಬ್ಬರಲ್ಲೂ ಭವಿಷ್ಯದ ಬಗ್ಗೆ ಕಾಳಜಿ ಹೆಚ್ಚಾಯ್ತು

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ನನ್ನ ಹೆಂಡತಿಯೇ ನನಗೆ ಮುಖ್ಯ ಎಂದು ಹೇಳಿ ಎಲ್ಲರಿಗೂ ತೋರಿಸಿ ಕೊಟ್ಟಿದ್ದಾನೆ. ಭೂಮಿಕಾ ಮತ್ತು ಗೌತಮ್ ಎರಡೂ ಕುಟುಂಬದವರೂ ಖುಷಿ ಪಟ್ಟಿದ್ದಾರೆ. ಮಧುರ ಕೂಡ ಈ ಸಂದರ್ಭವನ್ನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದು, ನಿಷ್ಕಲ್ಮಶ ಪ್ರೀತಿ ಇರುವ ಭೂಮಿಕಾ ಮತ್ತು ಗೌತಮ್ ನನ್ನು ಒಂದು ಮಾಡಿದ್ದಾಳೆ. ಗೌತಮ್ ಭಾವನೆಗಳಿಗೆ ಬೆಲೆ ಕೊಟ್ಟು ಮದುವೆಯ ನಾಟಕ್ಕೆ ಕೈ ಜೋಡಿಸಿದ್ದಾಳೆ. ಅಂತೂ ಇಂತೂ ಭೂಮಿಕಾ-ಗೌತಮ್ ಬೇರೆಯಾಗುವುದು ಮಹಾ ಸುಳ್ಳು ಎಂಬುದಂತೂ ಪಕ್ಕಾ ಆಗಿದೆ.

ಖುಷಿ ಕೊಟ್ಟ ಶಾಕಿಂಗ್ ಸುದ್ದಿ

ಇದೇ ಸಂದರ್ಭದಲ್ಲಿ ಭೂಮಿಕಾ ಖುಷಿಯ ಸುದ್ದಿಯನ್ನೂ ಕೊಟ್ಟಿದ್ದಾಳೆ. ಭೂಮಿಕಾ ಗರ್ಭಿಣಿ ಎನ್ನುವುದು ಕನ್ಫರ್ಮ್ ಆಗಿದ್ದು. ಮನೆಯವರಿಗೆಲ್ಲಾ ಶಾಕ್ ಆಗಿದೆ. ಭೂಮಿಕಾ ಗರ್ಭಿಣಿ ಆಗುವುದೇ ಇಲ್ಲ ಎಂದುಕೊಂಡವರಿಗೆ ಶಾಕ್ ಜೊತೆಗೆ ಖುಷಿಯೂ ಆಗಿದೆ. ಆದರೆ, ಭೂಮಿಕಾಳನ್ನು ಮನೆಯಿಂದ ಹೊರ ಹಾಕಲು ಪ್ಲಾನ್ ಮಾಡಿಕೊಂಡಿದ್ದವರಿಗೆ ಮಾತ್ರವೇ ಈ ಶಾಕ್ ಕಹಿ ಸುದ್ದಿಯಾಗಿದೆ. ಅಜ್ಜಿ ಮೊಮ್ಮಗನ ಬರುವಿಕೆಯನ್ನು ಸಂಭ್ರಮಿಸಿದ್ದಾರೆ. ಇದೆಲ್ಲವೂ ಭಾಗ್ಯ ಅತ್ತೆಯ ವರ ಎಂದು ಭೂಮಿಕಾ ಭಾವಿಸಿದ್ದಾಳೆ. ಅತ್ತೆ ಕೊಟ್ಟ ಹಣ್ಣೀನ ಪ್ರಸಾದವೇ ನನ್ನ ಬದುಕಲ್ಲಿ ವರವಾಗಿ ಬಂದಿದೆ. ಈ ಮಗು ನನ್ನ ಬದುಕನ್ನೇ ಬದಲಿಸಿದೆ ಎಂದು ಸಂತಸಪಟ್ಟಿದ್ದಾಳೆ. ಗೌತಮ್ ಗೆ ಮಾತೇ ಹೊರಡದಂತೆ ಆಗಿದೆ.

amruthadhaare-serial-14-march-episode-written-update

ತಲೆ ತಲೆ ಚಚ್ಚಿಕೊಂಡ ಶಕುಂತಲಾ

ಶಕುಂತಲಾ ತನ್ನ ಎಲ್ಲಾ ಪ್ಲಾನ್ ಗಳು ಉಲ್ಟಾ ಆಯ್ತು. ಇನ್ನು ಮಗು ಬೇರೆ ಆದರೆ ಮುಳುಗೇ ಹೋಗುತ್ತೇನೆ ಎಂದು ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾಳೆ. ಇದೆಲ್ಲಾ ಹೀಗಾದರೆ ತನ್ನ ಕಥೆ ಮುಗೀತು ಎಂದು ತಲೆ ಕೆಡಿಸಿಕೊಂಡಿದ್ದರೆ, ಜೈದೇವ್ ಅಮ್ಮನನ್ನೇ ದೂರುತ್ತಿದ್ದಾನೆ. ಶಕುಂತಲಾ ಲಕ್ಷ್ಮೀಕಾಂತ ಮತ್ತು ಜೈದೇವ್ ಮೇಲೆ ಕೂಗಾಡಿದ್ದು, ನೀವಾದರೂ ಏನಾದರೂ ಮಾಡಬೇಕಿತ್ತು. ಯಾವಾಗಲೂ ನಾನೇ ಪ್ಲಾನ್ ಮಾಡಬೇಕು. ನಾನು ಎಷ್ಟು ಅಂತ ಪ್ರಯತ್ನಪಡಲಿ. ಈಗ ನಡೆದಿದ್ದನ್ನು ಬಿಟ್ಟು ಮುಂದೆ ಏನು ಮಾಡಬೇಕು ಎಂಬುದನ್ನು ನೋಡಬೇಕಿದೆ ಎಂದು ಇಬ್ಬರ ಮೇಲೆ ಶಕುಂತಲಾ ಹೌಹಾರುತ್ತಾಳೆ.

ಮಗುವಿನ ಬಗ್ಗೆ ಕಾಳಜಿ ತೋರುತ್ತಿರುವ ಗೌತಮ್

ಭೂಮಿಕಾ ಮತ್ತು ಗೌತಮ್ ಬಾಳಿನಲ್ಲಿ ಕತ್ತಲು ಸರಿದು ಬೆಳಕು ಹರಿದು ಮನೆ ಮನಗಳನ್ನು ಬೆಳಗುವ ಸಂದರ್ಭ ಒದಗಿ ಬಂದಿದೆ. ಎಲ್ಲಿ ಇಬ್ಬರೂ ಬೇರೆ ಆಗುತೇವೋ..? ತಮಗೆ ತಂದೆ-ತಾಯಿ ಆಗುವ ಭಾಗ್ಯವೇ ಇಲ್ಲ ಎಂದು ಹಗಲು ರಾತ್ರಿ ಎನ್ನದೆ ಕೊರಗುತ್ತಿದ್ದ ಇಬ್ಬರಿ ಬಾಳಲ್ಲೂ ಈಗ ದೀಪಾವಳಿ ಹಬ್ಬ ಶುರುವಾಗಿದೆ. ಗೌತಮ್ ಭೂಮಿಕಾಳನ್ನು ತಮಾಷೆಗೆ ರೇಗಿಸುತ್ತಾನೆ. ನನ್ನ ಬಿಟ್ಟು ನಿಮಗೆ ಇರಲು ಸಾಧ್ಯಾನಾ..? ಮನಸ್ಸು ಮಾಡಿದ್ದರೆ ಮಧುರ ನಮ್ಮ ಮೇಲೆ ಕೇಸ್ ಹಾಕಬಹುದಿತ್ತು. ಪಾಪ ಆ ಹುಡುಗಿ ನನ್ನ ನಾಟಕಕ್ಕೆ ಸಹಾಯ ಮಾಡಿದಳು ಎಂದು ಭೂಮಿಕಾಳನ್ನು ಗೌತಮ್ ಆಟವಾಡಿಸುತ್ತಾನೆ. ಭೂಮಿಕಾ ಗೌತಮ್ ಬಳಿ ಕ್ಷಮೆ ಕೇಳಿ ಬಸ್ಕಿ ಹೊಡೆಯುತ್ತಾಳೆ. ಆಗ ಗೌತಮ್ ನಿಮ್ಮ ಹೊಟ್ಟೆಯಲ್ಲಿ ಮಗು ಇದೆ. ಹೀಗೆಲ್ಲಾ ಮಾಡಬೇಡಿ ಹುಷಾರು ಎಂದು ಹೇಳುತ್ತಾನೆ.

ಹೊಸ ಭವಿಷ್ಯದ ಕನಸಿನಲ್ಲಿ ಗೌತಮ್-ಭೂಮಿಕಾ

ಆಗ ಭೂಮಿಕಾ ಬೇಕಂತಲೇ ಅಂದರೆ ನನ್ನ ಮೇಲೆ ಪ್ರೀತಿ ಇಲ್ಲ. ನಿಮಗೆ ಮಗುವೇ ಮುಖ್ಯವಾಯ್ತಾ ಎಂದು ಛೇಡಿಸುತ್ತಾಳೆ. ಗೌತಮ್ ಭೂಮಿಕಾಳಿಗೆ ಸಮಾಧಾನ ಮಾಡುತ್ತಾನೆ. ಬಳಿಕ ಇಬ್ಬರು ತಮ್ಮ ಮಗುವಿನ ಭವಿಷ್ಯದ ಬಗ್ಗೆ ಚರ್ಚೆ ಮಾಡಲು ಶುರು ಮಾಡುತ್ತಾರೆ. ಭೂಮಿಕಾ ಮತ್ತು ಗೌತಮ್ ಇಬ್ಬರೂ ಈ ಮಗು ಗೌತಮ್ ಅವರ ತಂದೆಯೇ ಆಗಿರಲಿ ಎಂದು ಬಯಸಿದ್ದಾರೆ. ಇತ್ತ ಸದಾಶಿವ, ಮಂದಾಕಿನಿ, ಜೀವನ್, ಮಹಿಮಾ, ಸುಧಾ, ಪಾರ್ಥ, ಅಪರ್ಣಾ, ಆನಂದ್ ಎಲ್ಲರೂ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಭೂಮಿಕಾಳಿಗೆ ಮಕ್ಕಳೇ ಆಗುವುದಿಲ್ಲ ಎಂದು ಭಾವಿಸಿದ್ದ ಅಪೇಕ್ಷಾಳಿಗೆ ಮನದಲ್ಲೇ ಅವಮಾನವಾಗಿದೆ. ಇನ್ನು ರಾಜೇಂದ್ರ ಭೂಪತಿ ಒಳ್ಳೆಯದೇ ಆಯ್ತು ಗೌತಮ್ ಗೆ ಮಗು ಹುಟ್ಟಲಿ ಆಗ ತನ್ನ ಸೇಡನ್ನು ತೀರಿಸಿಕೊಳ್ಳಲು ಸುಲಭವಾಗುತ್ತೆ ಎಂದು ಖುಷಿಪಟ್ಟಿದ್ದಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X