Amruthadhaare ; ಮನೆಯವರನ್ನು ನಂಬಿಸಲು ಯತ್ನಿಸಿದ ಜೈದೇವ್ : ಮತ್ತೆ ಮೋಸ ಹೋಗುತ್ತಿದ್ದಾಳಾ ಮಲ್ಲಿ..?
ಅಮೃತಧಾರೆ ಧಾರಾವಾಹಿಯಲ್ಲಿ ಹೇಗೋ ಸರ್ಕಸ್ ಮಾಡಿ ಜೈದೇವ್ ಮನೆಗೆ ಬಂದು ಸೇರಿಕೊಂಡಿದ್ದಾಗಿದೆ. ಆದರೆ, ಜೈದೇವ್ ಮನೆಗೆ ಬಂದಿರುವುದು ಯಾರಿಗೂ ಇಷ್ಟವಿಲ್ಲ. ಜೈದೇವ್ ನನ್ನು ಶಕುಂತಲಾ ಕೂಡ ನಂಬಲು ತಯಾರಿಲ್ಲ. ಅವನನ್ನು ಹೀಗೆ ಬಿಟ್ಟರೆ ಇನ್ನಷ್ಟು ತಪ್ಪು ಕೆಲಸಗಳನ್ನು ಮಾಡುತ್ತಿರುತ್ತಾರೆ ಎಂಬುದೇ ಶಕುಂತಲಾ ಆಲೋಚನೆ.ಅಷ್ಟೇ ಅಲ್ಲದೇ, ಗೌತಮ್ ಭೂಮಿಕಾ ಕೂಡ ಜೈದೇವ್ ಮಾತುಗಳನ್ನು ನಂಬಲು ತಯಾರಿಲ್ಲ. ಬದಲಿಗೆ ಮಲ್ಲಿ ಮುಖ ನೋಡಿಕೊಂಡು ಶಕುಂತಲಾಳಿಗೆ ಬೇಸರವಾಗಬಾರದು ಎಂದು ಮನೆಗೆ ವಾಪಸ್ ಕರೆ ತಂದಿದ್ದಾರೆ.
ಮಲ್ಲಿ ಬಳಿ ಜೈದೇವ್ ಹೊಸ ನಾಟಕ
ಜೈದೇವ್ ಮನೆಗೆ ಬರುತ್ತಿದ್ದಂತೆಯೇ ಮತ್ತೆ ನಾಟಕ ಮಾಡುತ್ತಾನೆ. ಅಮ್ಮನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಬಳಿಕ ರೂಮಿನಲ್ಲಿ ಮಲ್ಲಿ ಬಳಿ ಕ್ಷಮೆಯಾಚಿಸಿ, ನಾನು ಇನ್ಯಾವತ್ತೂ ಇಂತಹ ತಪ್ಪನ್ನು ಮಾಡುವುದಿಲ್ಲ. ನನಗೆ ಈಗ ನನ್ನ ತಪ್ಪುಗಳು ಅರ್ಥವಾಗಿವೆ ಎಂದು ಹೇಳುತ್ತಾನೆ. ಪದೇ ಪದೇ ತಾನು ಪಾಪಿ ಪಾಪಿ ಎಂದು ಬುಸುಗುಟ್ಟಿದ್ದು, ಮಲ್ಲಿ ಮನಸ್ಸನ್ನು ಕರಗುವಂತೆ ಮಾಡಿದೆ. ಎಷ್ಟೇ ಆದರೂ ತನ್ನ ಗಂಡ ಎಂಬ ಕಾರಣಕ್ಕೆ ಮಲ್ಲಿ ಜೈದೇವ್ ಮಾತುಗಳನ್ನು ನಂಬಿದ್ದಾಳೆ. ನಿಮ್ಮ ಜೊತೆಗೆ ನಾನಿರುತ್ತೇನೆ ಎಂದು ಭರವಸೆಯನ್ನೂ ಕೊಟ್ಟಿದ್ದಾಳೆ. ಆದರೆ, ಇದು ಜೈದೇವ್ ನ ಹೊಸ ನಾಟಕ. ಮಲ್ಲಿ ಎಂದರೆ ಉರಿದು ಬೀಳುವ ಜೈದೇವ್, ದಿಯಾ ಜೊತೆಗೆ ಮತ್ತೆ ಸೇರಬೇಕು ಎನ್ನುವುದೇ ಅವನ ಆಸೆ. ಆದರೆ, ಈ ಮನೆಯವರನ್ನೆಲ್ಲಾ ದೂರ ಮಾಡಿಕೊಳ್ಳುವುದು ತನಗೆ ಇಷ್ಟವಿಲ್ಲ. ಹಾಗಾಗಿ ನಾಟಕ ಮಾಡುತ್ತಿದ್ದಾನೆ.

ಖುಷಿ ಸುದ್ದಿ ಕೊಟ್ಟ ಆನಂದ್
ಇನ್ನು ಜೈದೇವ್ ತಮ್ಮ ಕಂಪನಿಯ ಟೆಂಡರ್ ಗಳನ್ನು ಬೇರೆ ಕಂಪನಿಗಳಿಗೆ ಬಿಟ್ಟು ಕೊಡುತ್ತಿದ್ದ. ಸೀಕ್ರೆಟ್ ಗಳನ್ನು ಮಾರಿಕೊಂಡು ಹಣ ಮಾಡುತ್ತಿದ್ದ. ಮನೆಯಲ್ಲೇ ಕೋಟ್ಯಾಂತರ ರೂಪಾಯಿ ಹಣ ಕೊಳೆಯುತ್ತಿದ್ದರೂ ಕೂಡ ಜೈದೇವ್ ಗೆ ತನ್ನ ಹೆಸರಲ್ಲಿ ಆಸ್ತಿ ಇಲ್ಲ ಎಂಬ ಕೊರಗಿತ್ತು. ಹೀಗಾಗಿ ಕಂಪನಿಯ ಟೆಂಡರ್ ಸೀಕ್ರೇಟ್ ಗಳನ್ನು ಬೇರೆಯವರಿಗೆ ತಿಳಿಸಿ ಹಣ ಮಾಡುತ್ತಿದ್ದ. ಈ ಬಾರಿ ಟೆಂಡರ್ ಲೆಕ್ಕಾಚಾರವನ್ನು ಭೂಮಿಕಾ ಬದಲಾಯಿಸಿದ್ದಳು. ಹೀಗಾಗಿ ಈ ಟೆಂಡರ್ ಈಗ ಗೌತಮ್ ಕಂಪನಿಗೆ ಸಿಕ್ಕಿದೆ. ಈ ಬಗ್ಗೆ ಆನಂದ್ ಗೌತಮ್ ಗೆ ತಿಳಿಸುತ್ತಾನೆ. ಗೌತಮ್ ಕೂಡ ಖುಷಿ ಪಡುತ್ತಾನೆ.
ಟೆಂಡರ್ ತಮ್ಮದಾಗಿದ್ದಕ್ಕೆ ಸಂತಸ
ಇನ್ನು ಟೆಂಡರ್ ತಮ್ಮ ಪಾಲಾಗಲು ಭೂಮಿಕಾ ಕಾರಣ ಎಂಬ ಸತ್ಯವನ್ನು ಪಾರ್ಥ ಹೇಳುತ್ತಾನೆ. ಈ ಮಾತನ್ನು ಕೇಳಿದ ಗೌತಮ್ ಇನ್ನಷ್ಟು ಹೆಮ್ಮೆ ಪಡುತ್ತಾನೆ. ಇತ್ತ ಅಪೇಕ್ಷಾ ತನ್ನ ಗಂಡನಿಂದಲೇ ಈ ಕೆಲಸ ಸಾಧಿಸಲು ಸಾಧ್ಯವಾಯ್ತು ಎಂದು ನಂಬಿದ್ದಾಳೆ. ಹೀಗಾಗಿ ಮನೆಯವರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸುತ್ತಾಳೆ. ಇನ್ನು ಜೈದೇವ್ ತಾನು ಆಫಿಸಿಗೆ ಬರುವುದಾಗಿ ಗೌತಮ್ ನನ್ನು ಕೇಳುತ್ತಾನೆ. ಆದರೆ, ಗೌತಮ್ ಅದರ ಅವಶ್ಯಕತೆ ಇಲ್ಲ. ನೀನು ಮನೆಯಲ್ಲೇ ರೆಸ್ಟ್ ಮಾಡು ಎಂದು ಹೇಳುತ್ತಾನೆ.
ಮತ್ತೆ ಏನೋ ಪ್ಲಾನ್ ಮಾಡಿರುವ ಜೈದೇವ್
ಆದರೂ ಸುಮ್ಮನಾಗದ ಜೈದೇವ್ ಮಲ್ಲಿಯನ ಮನವೊಲಿಸಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಕೈಗೆ ಕರ್ಪೂರ ಹಚ್ಚಿಕೊಂಡು ಮಲ್ಲಿ ನಿನಗೆ ಮತ್ತೆ ನಾನು ಮೋಸ ಮಾಡುವುದಿಲ್ಲ. ನಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಿದ್ದೇನೆ ಎಂದು ಹೇಳುತ್ತಾನೆ. ಮಲ್ಲಿ ಜೈದೇವ್ ಆಟಗಳನಬ್ನು ಅರಿಯದೇ, ಅವನ ಮಾತನ್ನು ನಂಬುತ್ತಾಳೆ. ಮನೆಗೆ ಬಂದ ಬಳಿಕ ಲಕ್ಷ್ಮೀಕಾಂತ ಜೈದೇವ್ ಹೊಸ ಆಟದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾನೆ. ಯಾರನ್ನೂ ಬಿಡುವುದಿಲ್ಲ ನಾನು ಎಂದು ಜೈದೇವ್ ಹೇಳುತ್ತಾನೆ.


Click it and Unblock the Notifications











