Amruthadhaare; ಜೈದೇವ್ ಆಟ ತಿಳಿದ ಅಣ್ಣ : ದಿಯಾಳಿಗೆ ಗೇಟ್ ಪಾಸ್ ಕೊಟ್ಟ ಗೌತಮ್

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ನನ್ನು ಮನೆಯಲ್ಲಿ ಗೌತಮ್ ಕಟ್ಟಿ ಹಾಕಿದರೂ ಕೂಡ ಬಾಲ ಬಿಚ್ಚಿದ್ದಾನೆ. ಮಲ್ಲಿಯನ್ನು ಪೂಸಿ ಮಾಡುತ್ತಾ ಮತ್ತೆ ದಿಯಾಳನ್ನು ಭೇಟಿ ಮಾಡಿದ್ದಾನೆ. ಮಲ್ಲಿಗೆ ಡಿವೋರ್ಸ್ ಕೊಟ್ಟು, ದಿಯಾ ಜೊತೆಗೆ ಲೈಫ್ ಶೇರ್ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಆದರೆ, ಜೈದೇವ್ ಬಾಳಲ್ಲಿ ದಿಯಾಳಂತಹ ಸಾಕಷ್ಟು ಹುಡುಗಿಯರು ಬಂದು ಹೋಗಿದ್ದಾರೆ.ದಿಯಾಳಿಗೆ ಸುಳ್ಳು ಭರವಸೆ ಕೊಡುತ್ತಿರುವ ಜೈದೇವ್, ಮಲ್ಲಿಗೆ ಡಿವೋರ್ಸ್ ಕೊಡಬೇಕು ಎಂದು ನಿರ್ಧರಿಸಿರುವುದಂತೂ ನಿಜ. ಆದರೆ, ಮನೆಯವರಿಂದ ಪಾರಾಗಲು ಸಾಧ್ಯವಾಗುತ್ತಿಲ್ಲ.

ಹೊರಗೆ ಹೋಗಲು ಪಾರ್ಥ ಪ್ಲಾನ್

ಇನ್ನು ಪಾರ್ಥ ಮತ್ತು ಅಪೇಕ್ಷಾ ನಡುವಿನ ಜಗಳ ಶಮನವಾಗಲಿ ಎಂದು ಭೂಮಿಕಾ ಹಾಗೂ ಗೌತಮ್ ಸಾಕಷ್ಟು ಪ್ರಯತ್ನವನ್ನು ಪಟ್ಟಿದ್ದಾರೆ. ಆದರೆ, ಪಾರ್ಥ ನಡವಳಿಕೆಯಿಂದ ಅವರಿಬ್ಬರ ನಡುವಿನ ಸಾಮರಸ್ಯ ಹಾಳಾಗುತ್ತಿದೆ. ಅಪೇಕ್ಷಾ ಜೊತೆಗೆ ಪಾರ್ಥ ಸಮಯ ಕಳೆಯಲಿ ಎಂದು ಆಫೀಸಿನಿಂದ ಬೇಗ ಕಳಿಸಿದರೆ, ಪಾರ್ಥ ಅತ್ತಿಗೆ ಜೊತೆಗೆ ಅಣ್ಣನ ಬಗ್ಗೆಯೂ ಆನಂದ್ ಬಗ್ಗೆಯೂ ಮಾತನಾಡುತ್ತಾ ಸಮಯ ಹಾಳು ಮಾಡಿದ್ದಾನೆ. ಅಲ್ಲದೇ, ಹೊರಗಡೆ ಹೋಗುವ ಪ್ಲಾನ್ ಇದ್ದು, ಭೂಮಿಕಾಳನ್ನು ಕೂಡ ಬನ್ನಿ ಎಂದು ಬಲವಂತ ಮಾಡಿದ್ದಾನೆ. ಇದೆಲ್ಲವೂ ಅಪೇಕ್ಷಾಳಿಗೆ ಬೇಸರವನ್ನು ತಂದಿದೆ. ಅಪೇಕ್ಷಾ ಮತ್ತು ಪಾರ್ಥ ತಮ್ಮಿಂದ ತಾವೇ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

Amruthadhaare Serial 14 September episode written update

ದಿಯಾಳನ್ನು ದೆಹಲಿಗೆ ಕಳಿಸಲು ನಿರ್ಧಾರ

ಜೈದೇವ್ ಮಲ್ಲಿಗಾಗಿ ಗಿಫ್ಟ್ ತರಲು ಹೊರಗಡೆ ಹೋದ ಸುದ್ದಿಯನ್ನು ಗೌತಮ್ ಗೆ ಭೂಮಿಕಾ ತಿಳಿಸಿದ್ದಾಳೆ. ಈ ವಿಚಾರ ಗೌತಮ್ ಮನದಲ್ಲಿ ಅನುಮಾನ ಮೂಡಿಸಿದ್ದು, ಜೈದೇವ್ ಮತ್ತು ದಿಯಾಳ ಲೊಕೇಷನ್ ಚೆಕ್ ಮಾಡಿದ್ದಾನೆ. ಇಬ್ಬರೂ ಭೇಟಿಯಾಗಿರುವುದು ಕನ್ಫರ್ಮ್ ಆದ ಕಾರಣ ಗೌತಮ್ ದಿಯಾ ತಂದೆಯನ್ನು ಆಫೀಸಿಗೆ ಕರೆಸಿದ್ದಾನೆ. ದಿಯಾ ತಂದೆ ಬಳಿ ಕನ್ಸಟ್ರಕ್ಷನ್ ಪ್ರಾಜೆಕ್ಟ್ ಒಂದಿದ್ದು, ನೀವು ತಕ್ಷಣವೇ ದೆಹಲಿಗೆ ಹೊರಡಬೇಕು ಎಂದು ಆಫರ್ ಕೊಟ್ಟಿದ್ದಾನೆ. ಆಫರ್ ಅನ್ನು ಒಪ್ಪಿರುವ ದಿಯಾ ತಂದೆ ಮಗಳ ಬಗ್ಗೆ ಆಲೋಚಿಸಿದ್ದಾರೆ. ಮಗಳನ್ನು ಕೂಡ ದೆಹಲಿಗೆ ಕರೆದುಕೊಂಡು ಹೋಗಿ. ನಾನು ನಿಮಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದಿದ್ದಾನೆ.


ತಮ್ಮನಿಗೆ ಬುದ್ಧಿ ಹೇಳಲು ಬಂದ ಗೌತಮ್

ದೆಹಲಿಗೆ ಹೋಗುವ ಬಗ್ಗೆ ತಿಳಿದ ದಿಯಾ ಬೇಸರ ಮಾಡಿಕೊಂಡಿದ್ದು, ಜೈದೇವ್ ಗೆ ವಿಷಯ ತಿಳಿಸಿದ್ದಾಳೆ. ನಿಮ್ಮ ಅಣ್ ನನನ್ನ ಮತ್ತು ನಿಮ್ಮನ್ನು ದೂರ ಮಾಡಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ನೊಂದುಕೊಂಡಿದ್ದಾಳೆ. ಜೈದೇವ್ ಈಗ ಅಣ್ಣನ ಮೇಲೆ ಕೋಪ ಮಾಡಿಕೊಂಡಿದ್ದು, ಇದೇ ಸಮಯಕ್ಕೆ ಸರಿಯಾಗಿ ಗೌತಮ್ ಜೈದೇವ್ ಬಳಿ ಬಂದು ಬೈದಿದ್ದಾನೆ. ಹೆಂಡತಿ ಜೊತೆಗೆ ಇರು ಎಂದರೆ, ಕೆಟ್ಟ ಕೆಲಸವನ್ನೇ ಮಾಡುತ್ತಿದ್ದೀಯಾ. ಇದು ನಿನಗೆ ನಿಜವಾವಾಗಿಯೂ ಸರಿಯಲ್ಲ ಎಂದು ಹೇಳಿದ್ದಾನೆ.

amruthadhaare-serial-14-september-episode-written-update

ಮಲ್ಲಿಗೆ ಸೀಮಂತ ಮಾಡುವ ಸಮಯ

ಇನ್ನು ಮಲ್ಲಿಗೆ ಈಗ ಏಳು ತಿಂಗಳು. ಮಲ್ಲಿಯ ತಾತ ಫೋನ್ ಮಾಡಿ ಅವಳ ಸೀಮಂತದ ಬಗ್ಗೆ ಮಾತನಾಡಿದ್ದಾರೆ. ಇದೇ ವಿಚಾರವನ್ನು ಮಲ್ಲಿ ಭೂಮಿಕಾ ಬಳಿ ಹಂಚಿಕೊಂಡಿದ್ದು, ಗೌತಮ್ ಮಲ್ಲಿ ಈ ಮನೆ ಸೊಸೆಯಷ್ಟೇ ಅಲ್ಲ. ಅವಳು ಈ ಮನೆಯ ಮಗಳೂ ಹೌದು. ಸೀಮಂತವನ್ನು ಅದ್ಧೂರಿಯಾಗಿ ಮಾಡೋಣ ಎಂದು ಹೇಳಿದ್ದಾನೆ. ಈ ಸುದ್ದಿ ಕೇಳಿದ ಶಕುಂತಲಾ, ಯಾವುದೇ ಕಾರಣಕ್ಕೂ ಮಲ್ಲಿಯ ಸೀಮಂತ ನಡೆಯಬಾರದು ಎಂದು ಲೆಕ್ಕಾಚಾರ ಹಾಕುತ್ತಿದ್ದಾಳೆ. ಈಗ ಭೂಮಿಕಾ ಶಕುಂತಲಾ ಲೆಕ್ಕಾಚಾರಕ್ಕೆ ಯಾವ ತಂತ್ರವನ್ನು ಬಳಸುತ್ತಾಳೋ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X