Amruthadhaare: ಅಂತೂ ಇಂತೂ ಫಿಕ್ಸ್ ಆಯ್ತು ಎರಡೂ ಜೋಡಿಯ ಮದುವೆ

By ಪ್ರಿಯಾ ದೊರೆ

ಕೊನೆಗೂ ಭೂಮಿಕಾ ಹಾಗೂ ಗೌತಮ್ ದಿವಾನ್ ಮದುವೆಯಾಗುವ ಕಾಲ ಕೂಡಿ ಬಂದಿದೆ. ಮಹಿಮಾ ಹಾಗೂ ಜೀವನ್ ದೆಸೆಯಿಂದ ಗೌತಮ್ ಮತ್ತು ಭೂಮಿಕಾ ಒಂದಾಗುತ್ತಿದ್ದಾರೆ. ಮಹಿಮಾ ಗರ್ಭಿಣಿ ಆಗಿರುವುದರಿಂದ ನಿಂತು ಹೋಗಿದ್ದ ಮದುವೆ ಮಾತುಕತೆ ಮುಂದುವರೆಯುವಂತೆ ಆಗಿದೆ. ಶಕುಂತಲಾ ಪ್ಲ್ಯಾನ್ ಮಾಡಿ ಈ ಮದುವೆಯನ್ನು ಫಿಕ್ಸ್ ಮಾಡಿದ್ದಾಳೆ.

ಮನೆಯವರ ಖುಷಿಗೋಸ್ಕರ ಭೂಮಿಕಾ ಈ ಮದುವೆಗೆ ಸಿದ್ಧವಾಗಿದ್ದರೆ, ಇತ್ತ ಗೌತಮ್ ದಿವಾನ್ ಕಥೆಯೂ ಇದೆ ಆಗಿದೆ. ತಮ್ಮ ತಮ್ಮ ಕುಟುಂಬಕ್ಕಾಗಿ ಮಿಡಿಯುವ ಎರಡು ಮನಗಳು ಈಗ ಒಂದಾಗುತ್ತಿವೆ. 35 ವರ್ಷವಾದರೂ ಮಗಳ ಮದುವೆ ಆಗಲಿಲ್ಲ ಎಂದು ಸದಾ ಯೋಚಿಸುತ್ತಿದ್ದ ಮಂದಾಕಿನಿಗೆ ಈಗ ಮಗಳ ಮದುವೆ ಫಿಕ್ಸ್ ಆಗಿರುವುದು ಖುಷಿ ತಂದಿದೆ. ಮಗಳು ಖುಷಿಯಿಂದ ಇರಲಿ. ನೆಮ್ಮದಿಯಾಗಿ ನಿದ್ದೆ ಮಾಡಲಿ ಎಂದು ಅಲಾರಂ ಅನ್ನು ಆಫ್ ಮಾಡಿರುತ್ತಾಳೆ.

Amruthadhaare Serial 14th July episode written update

ಭೂಮಿಕಾ ತಡವಾಗಿ ಎದ್ದು ಗಾಬರಿಯಾಗುತ್ತಾಳೆ. ಲೇಟ್ ಆಯ್ತು, ಕಾಫಿ ಮಾಡಿಲ್ಲ ಎಂದು ಒದ್ದಾಡುತ್ತಾಳೆ. ಆದರೆ, ಮಂದಾಕಿನಿ, ಭೂಮಿಕಾಳನ್ನು ಕೂರಿಸಿ ತಾನೇ ಖುಷಿಯಿಂದ ಕಾಫಿ ಮಾಡಿಕೊಂಡು ಬರುತ್ತಾಳೆ. ಭೂಮಿಕಾಳಿಗೂ ಖುಷಿಯಾಗುತ್ತದೆ. ಮಂದಾಕಿನಿ ಹಾಗೂ ಅಪೇಕ್ಷಾ ಇಬ್ಬರೂ ಫೇಸ್ ಪ್ಯಾಕ್, ಫೇಶಿಯಲ್ ಮಾಡಿಕೊಂಡು ಬೀಗರ ಮನೆಗೆ ಹೋಗಲು ತಯಾರಾಗುತ್ತಾರೆ. ಇನ್ನು ಮಂದಾಕಿನಿಯೂ ಶಾಸ್ತ್ರಿಗಳನ್ನು ಮದುವೆಯ ದಿನಾಂಕವನ್ನು ಫಿಕ್ಸ್ ಮಾಡಲು ಕರೆಸುತ್ತಾಳೆ.

ಲಂಚ ನೀಡಿ ಮುಹೂರ್ತ ಫಿಕ್ಸ್

ಇತ್ತ ಶಕುಂತಲಾ ಹಾಗೂ ಅವರ ಮಗ ಜಯದೇವ ಬೇರೊಬ್ಬರು ಪುರೋಹಿತರನ್ನು ಕರೆಸುತ್ತಾರೆ. ಅವರಿಗೆ ಹಣದ ಆಸೆ ತೋರಿಸಿ ಆದಷ್ಟು ಬೇಗ ಮುಹೂರ್ತವನ್ನು ಫಿಕ್ಸ್ ಮಾಡುವಂತೆ ಹೇಳುತ್ತಾರೆ. ಪುರೋಹಿತರು ಹಾಗೆಲ್ಲಾ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಾಗ ಶಕುಂತಲಾ, ಗೌತಮ್ ಇಷ್ಟು ವರ್ಷ ಆದ ಮೇಲೆ ಮದುವೆಗೆ ಒಪ್ಪಿದ್ದಾನೆ. ಅವನ ಮನಸ್ಸು ಬದಲಾಗುವ ಮುನ್ನ ಈ ಮದುವೆ ನಡೆಯಬೇಕು ಎಂದು ಹೇಳಿ, 50,000 ರೂಪಾಯಿ ಕೊಡುವುದಾಗಿ ಹೇಳಿ ಮುಹೂರ್ತ ಫಿಕ್ಸ್ ಮಾಡಿಸುತ್ತಾರೆ.

Amruthadhaare Serial 14th July episode written update

ಆಸ್ತಿ ಮೇಲೆ ಕಣ್ಣು

ಇನ್ನು ಜಯದೇವನಿಗೆ ಗೌತಮ್ ದಿವಾನ್ ಆಸ್ತಿ ಮೇಲೆ ಕಣ್ಣು. ಶಕುಂತಲಾ ಗೌತಮ್ ದಿವಾನ್‌ಗೆ ಮಲತಾಯಿ. ಶಕುಂತಲಾಳಿಗೆ ನಾಲ್ಕು ಜನ ಮಕ್ಕಳು. ಆದರೆ, ಗೌತಮ್ ತಂದೆಯ ಆಸ್ತಿ ಜಯದೇವನಿಗೆ ಧಕ್ಕಿಲ್ಲ. ಎರಡನೇ ಹೆಂಡತಿ ಮಗನಾಗಿರುವುದರಿಂದ ಸದ್ಯ ಎಲ್ಲಾ ಆಸ್ತಿಯೂ ಗೌತಮ್ ಹೆಸರಿನಲ್ಲಿದೆ. ಶಕುಂತಲಾ ಹಾಗೂ ಜಯದೇವ ಇಬ್ಬರೂ ಗೌತಮ್ ಜೊತೆ ಇದ್ದುಕೊಂಡೆ ಎಲ್ಲವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿಯೇ ಪ್ಲ್ಯಾನ್ ಮಾಡಿ ಭೂಮಿಕಾಳನ್ನು ಗೌತಮ್‌ಗೆ ಕೊಟ್ಟು ಮದುವೆ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆಯೇ ಜಯದೇವ ಹಾಗೂ ಅವರ ಮಾವ ಮಾತನಾಡಿಕೊಳ್ಳುತ್ತಾರೆ.

ಮದುವೆ ನಿರ್ಧಾರ ಮಾಡಿದ ಮಕ್ಕಳು

ಇನ್ನು ಭೂಮಿಕಾ ಮನೆಯವರು ಕೂಡ ಶಕುಂತಲಾ ಮನೆಗೆ ಬರುತ್ತಾರೆ. ಅಲ್ಲಿ ಮಹಿಮಾ-ಜೀವನ್ ಹಾಗೂ ಗೌತಮ್-ಭೂಮಿಕಾ ಮದುವೆಗೆ ಮುಹೂರ್ತ ನೋಡುತ್ತಾರೆ. ಶಕುಂತಲಾ ಹಣ ಕೊಟ್ಟು ದುಡ್ಡು ಕೊಟ್ಟಿದ್ದ ಪುರೋಹಿತರು ಆಗಸ್ಟ್ 6 ರಂದು ಮದುವೆಯ ದಿನಾಂಕವನ್ನು ನಿಗದಿ ಮಾಡುತ್ತಾರೆ. ಆದರೆ ಮಂದಾಕಿನಿ ಕರೆ ತಂದಿದ್ದ ಪುರೋಹಿತರು ಆಗಸ್ಟ್ 8ರಂದು ಫಿಕ್ಸ್ ಮಾಡುತ್ತಾರೆ.

6ನೇ ತಾರೀಖು ಮದುವೆ!

ಇದು ಎಲ್ಲರಲ್ಲೂ ಗೊಂದಲವನ್ನು ಸೃಷ್ಟಿಸುತ್ತದೆ. ಆಗ ಗೌತಮ್ ಇದ್ಯಾವುದೂ ಬೇಡ ಭಾನುವಾರ ಮದುವೆ ಇರಲಿ ಎನ್ನುತ್ತಾನೆ. ಅದು ಸಾಧ್ಯವಿಲ್ಲ ಎಂದಾಗ ಮಕ್ಕಳ ಕೈಗೆ ಎರಡೂ ಲಗ್ನಪತ್ರಿಕೆಯನ್ನು ಕೊಟ್ಟು ಒಂದನ್ನು ಆಯ್ಕೆ ಮಾಡಲು ಹೇಳುತ್ತಾನೆ. ಆಗ ಮಗು ಆಗಸ್ಟ್ 6ನೇ ತಾರೀಕು ಇಬ್ಬರ ಮದುವೆಯೂ ಫಿಕ್ಸ್ ಆಗುತ್ತದೆ.

More from Filmibeat

English summary
Amruthadhaare Serial 14th July episode written update. here is details about Mahima-jeevan's and Bhoomika-Gautham's marriage date fixed for august 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X