Amruthadhaare: ಮದುವೆ ಬೇಡ ಎಂದ ಜೀವನ್: ತಮ್ಮನ ನಿರ್ಧಾರ ಅಕ್ಕನಿಗೆ ಮುಳ್ಳಾಯ್ತು
'ಅಮೃತಧಾರೆ' ಧಾರಾವಾಹಿಯಲ್ಲಿ ಜೀವನ್ ಮನೆಗೆ ಮಹಿಮಾ ಮನೆಯವರು ಬಂದಿದ್ದಾರೆ. ಜೀವನ್ ಫ್ಯಾಮಿಲಿ ಮಿಡಲ್ ಕ್ಲಾಸ್ ಜನ. ಚಿಕ್ಕ ಅಪಾರ್ಟ್‌ಮೆಂಟ್‌ನಲ್ಲಿರುವುದನ್ನು ನೋಡಿದ ಗೌತಮ್ ಮನೆಯವರು ಅಸಹ್ಯ ಪಡುತ್ತಾರೆ. ಲಿಫ್ಟ್‌ನಲ್ಲಿ ಗೌತಮ್‌ಗೆ ಜಾಗವಿಲ್ದೇ ಕಾರಣ, ಭೂಮಿಕಾ ಜೊತೆಗೆ ಕಾಯುತ್ತಿರುತ್ತಾರೆ. ಈ ವೇಳೆಗೆ ಅಜ್ಜಿ ಬರುತ್ತಾರೆ. ಭೂಮಿಕಾಳನ್ನು ಮದುವೆಯಾಗಲು ಗೌತಮ್ ಬಂದಿರುವುದು ಎಂಬುದನ್ನು ತಿಳಿದು ಅದೇ ಅರ್ಥದಲ್ಲಿ ಮಾತನಾಡುತ್ತಾರೆ.
ಲಿಫ್ಟ್‌ನಲ್ಲಿ ಹೋಗುವಾಗ ಅಜ್ಜಿ ಇಬ್ಬರ ಜೋಡಿ ಸೂಪರ್ ಆಗಿದೆ. ಮದುವೆಯಾಗಿ ಸುಖವಾಗಿರಿ ಎಂದು ಹಾರೈಸುತ್ತಾರೆ. ಇದರಿಂದ ಗೌತಮ್ ಮತ್ತು ಭೂಮಿಕಾಳಿಗೆ ಮುಜುಗರ ಆಗುತ್ತದೆ. ಮನೆಯಲ್ಲಿ ಎಲ್ಲರೂ ಕುಳಿತಿರುತ್ತಾರೆ. ಮಂದಾಕಿನಿ ಅಂಗಡಿಯಿಂದ ತಂದ ತಿಂಡಿಗಳನ್ನು ನೋಡಿ ಮನೆಯಲ್ಲೇ ಮಾಡಿದ್ದಾ ಎಂದು ಕೇಳಿದ್ದಕ್ಕೆ, ಮಂದಾಕಿನಿ ಕೆಲವು ಮನೆಯಲ್ಲಿ ಮಾಡಿದ್ದು ಎಂದು ಹೇಳುತ್ತಾರೆ.

ಭೂಮಿಕಾ ತನ್ನ ಕೈಯಾರೆ ಕಜ್ಜಾಯ ಮಾಡಿರುತ್ತಾಳೆ. ಅದನ್ನು ಶಕುಂತಲಾ ಬೇಡ ಎನ್ನುತ್ತಾಳೆ. ಬೇಡ ಎನ್ನಲಾಗದೇ ಗೌತಮ್ ಟೇಸ್ಟ್ ಮಾಡುತ್ತಾನೆ. ಚೆನ್ನಾಗಿದೆ ಎಂದು ಹೇಳುತ್ತಾನೆ. ಮಂದಾಕಿನಿ ನಮ್ಮ ಮನೆಯಲ್ಲಿ ಆಲಿವ್ ಆಯಿಲ್ ಬಳಸಿ ಅಡುಗೆ ಮಾಡುವುದು ಎಂದು ಜಂಭಕೊಚ್ಚಿಕೊಳ್ಳುತ್ತಾಳೆ. ಅಲ್ಲದೇ, ತಾನು ಮಿಸ್ ಮೈಸೂರು ಹಾಗೂ ತನ್ನ ಮಗಳು ಅಪೇಕ್ಷಾ ಈಗ ಮಿಸ್ ಬೆಂಗಳೂರು ಸ್ಪರ್ಧೆಗೆ ಆಯ್ಕೆ ಆಗಿದ್ದಾಳೆ ಎಂದು ಹೇಳಿಕೊಳ್ಳುತ್ತಾಳೆ.
ಭೂಮಿಕಾಳನ್ನು ಹೊಗಳಿದ ಶಕುಂತಲಾ
ಶಕುಂತಲಾ, ಜೀವನ್‌ಗೆ ಅಕ್ಕ ಇದ್ದಾರೆ ಎಂದು ಕೇಳಿದೆ ಅಂತ ಕೇಳುತ್ತಾಳೆ. ಆಗ ಸದಾಶಿವ, ಭೂಮಿಕಾಳನ್ನು ಪರಿಚಯ ಮಾಡಿಕೊಡುತ್ತಾನೆ. ಸದಾಶಿವ ಹೆಮ್ಮೆಯಿಂದ ತನ್ನ ಮಗಳ ಬಗ್ಗೆ ಹೇಳಿದಾಗ ಶಕುಂತಲಾ ಕೂಡ ಖುಷಿ ಪಡುತ್ತಾಳೆ. ಗೌತಮ್‌ಗೂ ಭೂಮಿಕಾಳ ಬಗ್ಗೆ ಹೆಮ್ಮೆ ಎನಿಸುತ್ತದೆ. ಆದರೆ, ಮಂದಾಕಿನಿಗೆ ಇದು ಇಷ್ಟವಾಗುವುದಿಲ್ಲ. ಆದರೂ, ವಿಧಿ ಇಲ್ಲದೇ ಏನನ್ನೂ ತೋರಿಸಿಕೊಳ್ಳುವುದಿಲ್ಲ. ಭೂಮಿಕಾ ಮುಜುಗರಗೊಳ್ಳುತ್ತಾಳೆ.

ಮದುವೆ ಬೇಡ ಎಂದ ಜೀವನ್
ಗೌತಮ್ ತನ್ನ ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಡುವುದಾಗಿ ಹೇಳುತ್ತಾನೆ. ಚಿನ್ನ, ಬೆಳ್ಳಿ ಯಾವುದಕ್ಕೂ ಕೊರತೆ ಆಗುವುದಿಲ್ಲ. ಹಾಗೆ ಜೀವನ್‌ಗೆ ಎರಡು ಇಂಡಸ್ಟ್ರಿ ಅನ್ನು ಕಟ್ಟಿಕೊಡಲಿದ್ದು, ಅದರ ಎಲ್ಲಾ ಕೆಲಸವನ್ನೂ ಜೀವನ್ ನೋಡಿಕೊಳ್ಳಬಹುದು. ಆದರೆ, ಅದರ ಒಡೆತನ ಮಾತ್ರ ಮಹಿಮಾ ಹೆಸರಿನಲ್ಲಿರುತ್ತದೆ ಎಂದು ಗೌತಮ್ ಹೇಳುತ್ತಾನೆ. ಈ ಮಾತನ್ನು ಕೇಳಿದ ಜೀವನ್‌ಗೆ ಸ್ವಾಭಿಮಾನ ಎದುರಾಗುತ್ತದೆ. ಆದರೆ, ಮಂದಾಕಿನಿ ಫುಲ್ ಖುಷಿ ಪಡುತ್ತಾಳೆ. ಜೀವನ್ ನನಗೆ ಈ ಮದುವೆ ಬೇಡ ಎಂದು ಹೇಳುತ್ತಾನೆ.
ಕಾಣೆಯಾದ ಮಹಿಮಾ
ಈ ಮಾತನ್ನು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ. ಆದರೆ, ಜೀವನ್ ತಾನೇ ಬಿಸಿನೆಸ್ ಶುರು ಮಾಡಲಿದ್ದು, ಅದಕ್ಕೂ ಮಹಿಮಾ ಹೆಸರನ್ನಿಡುವುದಾಗಿ ಹೇಳುತ್ತಾನೆ. ತನ್ನ ಸ್ವಂತ ಕಾಲಿನ ಮೇಲೆ ನಿಂತು ಈ ಮನೆಗಾಗಿ ದುಡಿಯುತ್ತಿರುವ ತನ್ನ ಅಕ್ಕ ಭೂಮಿಕಾಳ ಮದುವೆಯನ್ನು ಮಾಡಿದ ಬಳಿಕ ತಾನು ಮಹಿಮಾ ಜೊತೆಗೆ ಜೀವನ ನಡೆಸುವುದಾಗಿ ಹೇಳುತ್ತಾನೆ. ಗೌತಮ್‌ಗೆ ಖುಷಿಯಾಗುತ್ತದೆ. ನಾನು ನಿನಗೆ ನನ್ನ ತಂಗಿಯನ್ನು ಕೊಡಲು ಹೆದರಿದ್ದೆ. ಆದರೆ, ಈಗ ಹೆಮ್ಮೆ ಆಗುತ್ತಿದೆ. ನಿನ್ನ ಅಕ್ಕನಿಗೆ ಗಂಡು ಹುಡುಕುವುದಕ್ಕೆ ನಾನೂ ಕೂಡ ಸಹಾಯ ಮಾಡುತ್ತೇನೆ ಎಂದು ತಬ್ಬಿಕೊಳ್ಳುತ್ತಾನೆ.
ಗೌತಮ್- ಜೀವನ್ ಮಾತು ಕೇಳಿ ಮಹಿಮಾ ಕೋಪ ಮಾಡಿಕೊಂಡು ಮನೆಯಿಂದ ಕಾಣೆಯಾಗಿದ್ದಾಳೆ. ಈಗ ಎಲ್ಲರೂ ಮಹಿಮಾಳನ್ನು ಹುಡುಕಲು ಮುಂದಾಗಿದ್ದಾರೆ. ಇನ್ನು ಜೀವನ್ ಆಡಿದ ಮಾತುಗಳಿಂದ ಮಂದಾಕಿನಿ ಮತ್ತೆ ಭೂಮಿಕಾಳಿಗೆ ಶಾಪ ಹಾಕಿ ನೋವು ಕೊಟ್ಟಿದ್ದಾಳೆ.


Click it and Unblock the Notifications











