Amruthadhaare ; ಜೈದೇವ್ ಜೊತೆ ಮಾತನಾಡಿದ ರಾಜೇಂದ್ರ ಭೂಪತಿ, ಗೌತಮ್ ತಮ್ಮನ ಬಣ್ಣ ಕಳಚಿ ಬೀಳುತ್ತಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಗ ಜೈದೇವ್ ಗೆ ಒಳ್ಳೆಯದಾಗಲಿ ಎಂದು ವಿಲ್ ಕಳೆದು ಹೋಗಿದೆ ಎಂದು ಶಕುಂತಲಾ ಹೊಸ ನಾಟಕ ಮಾಡಿದ್ದಾಳೆ. ವಿಲ್ ಸಿಗದೇ ಗೌತಮ್ ಕಂಗಾಲಾಗಿದ್ದಾನೆ. ಆಫೀಸಿನಲ್ಲಿ ಈಗ ಎಲ್ಲರಿಗೂ ಹೇಗೆ ಮುಖ ತೋರಿಸಲಿ. ವಿಲ್ ಇಲ್ಲದೇ ಅವರನ್ನೆಲ್ಲಾ ಹೇಗೆ ನಂಬಿಸಲಿ ಎಂದು ಚಿಂತೆಗೊಳಗಾಗಿದ್ದಾನೆ. ಆನಂದ್, ಭೂಮಿಕಾ ಕೂಡ ವಿಲ್ ಮಿಸ್ ಆಗಿರುವುದಕ್ಕೆ ಆತಂಕಗೊಂಡಿದ್ದಾರೆ. ಹಾಗಿದ್ದರೂ, ಗೌತಮ್ ಗೆ ಧೈರ್ಯ ತುಂಬಿದ ಭೂಮಿಕಾ, ನಿಮ್ಮ ಕೈಯಲ್ಲಿ ಎಲ್ಲವನ್ನು ಸರಿ ಮಾಡುವ ಶಕ್ತಿ ಇದೆ ಎಂದು ಧೈರ್ಯ ಹೇಳಿದ್ದಾಳೆ.

ಖುಷಿಯಲ್ಲಿ ತೇಲಾಡಿದ ಜೈದೇವ್

ಇತ್ತ ರಾಜೇಂದ್ರ ಭೂಪತಿ ಕೈಗೆ ಜೈದೇವ್ ವಿಲ್ ಕೊಡಲು ನಿರಾಕರಿಸಿದ್ದಾನೆ. ನಾನು ನಿಮಗೆ ವಿಲ್ ಕೊಟ್ಟರೆ, ನಾಳೆ ದಿನ ಈ ವಿಚಾರ ಮನೆಯಲ್ಲಿ ಗೊತ್ತಾದರೆ ಸಿಕ್ಕಿ ಬೀಳುವುದು ನಾನೇ. ಹಾಗಾಗಿ ಫೈಲ್ ನನ್ನ ಬಳಿಯೇ ಇರಲಿ. ಫೈಲ್ ಇಲ್ಲದೇ ಈಗಾಗಲೇ ಗೌತಮ್ ಕಂಗಾಲಾಗಿದ್ದಾನೆ ಎಂದು ಹೇಳಿದ್ದಾನೆ. ಜೈದೇವ್ ಆಟವನ್ನು ನೋಡಿದ ರಾಜೇಂದ್ರ ಭೂಪತಿ ದಂಗಾಗಿದ್ದು, ಬೇರೆ ಏನೂ ಮಾಡಲಾಗದೇ ಸುಮ್ಮನಾಗಿದ್ದಾನೆ. ದಿವಾನ್ ಕಂಪನಿಯ ಚೇರ್ ಮ್ಯಾನ್ ಆಗುವ ಖುಷಿಯಲ್ಲಿ ದಿಯಾಳನ್ನು ಜೈದೇವ್ ಭೇಟಿ ಮಾಡಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ನೀನು ನನ್ನರಸಿ ಆಗುವೆ. ರಾಜಾ-ರಾಣಿಯಂತೆ ನಾವು ಆಳ್ವಿಕೆ ಮಾಡುತ್ತಾ ಖುಷಿಯಾಗಿರೋಣ ಎಂದಿದ್ದಾನೆ.

Amruthadhaare Serial 15 February episode written update

ಗೌತಮ್ ಆಫೀಸಿಗೆ ಬಂದ ರಾಜೇಂದ್ರ ಭೂಪತಿ

ಬೋರ್ಡ್ ಮೆಂಬರ್ಸ್ ಮೀಟಿಂಗ್ ಗೆ ಬಂದ ರಾಜೇಂದ್ರ ಭೂಪತಿ, ಗೌತಮ್ ಗೆ ಶಾಕ್ ಕೊಟ್ಟಿದ್ದಾನೆ.
ತನ್ನ ಮನೆಯಲ್ಲಿರುವ ವಿಲ್ ಕಾಣೆಯಾಗುವುದಕ್ಕೂ ರಾಜೇಂದ್ರ ಭೂಪತಿಯೇ ಕಾರಣ ಎಂಬ ಸತ್ಯ ಗೌತಮ್ ಗೆ ಗೊತ್ತಿದೆ.

ಮೂರು ಗಂಟೆಗಳ ಸಮಯ ಕೇಳಿದ ಆನಂದ್

ಗೌತಮ್ ಕಚೇರಿಗೆ ರಾಜೇಂದ್ರ ಭೂಪತಿ ಆಗಮಿಸಿದ್ದಾನೆ. ಗೌತಮ್ ದಿವಾನ್ ಕಂಪನಿಯ ಬೋರ್ಡ್ ಮೆಂಬರ್ಸ್ ಜೊತೆಗೆ ಮೀಟಿಂಗ್ ನಡೆಸುವ ಮಧ್ಯದಲ್ಲಿ ರಾಜೇಂದ್ರ ಎಂಟ್ರಿ ಕೊಟ್ಟಿದ್ದು ಗೌತಮ್ ಗೆ ಕೋಪ ತರಿಸಿದೆ. ಇಷ್ಟಕ್ಕೆಲ್ಲಾ ನೀನೇ ಕಾರಣ ಎಂಬುದು ನನಗೆ ಗೊತ್ತಿದೆ. ಅಲ್ಲದೇ ನಮ್ಮ ಮನೆಯಲ್ಲಿ ವಿಲ್ ಕಾಣೆಯಾಗಲು ಕೂಡ ನೀನೇ ಕಾರಣ ಎಂಬುದು ಗೊತ್ತಿದೆ ಎಂದು ಹೇಳುತ್ತಾನೆ. ಇನ್ನು ವಿಲ್ ಕಳೆದು ಹೋಗಿರುವುದಕ್ಕೆ ಗೌತಮ್ ಕಂಗಾಲಾಗಿದ್ದಾನೆ. ರಾಜೇಂದ್ರ ಇಷ್ಟು ಕಾಲ ವಿಲ್ ಇಲ್ಲದೇ ಸುಳ್ಳನ್ನು ಹೇಳಿಕೊಂಡು ನಾಟಕ ಮಾಡುತ್ತಿದ್ದೀರಾ ಎಂದು ವ್ಯಂಗ್ಯ ಮಾಡುತ್ತಾನೆ. ಆಗ ಆನಂದ್ ಮೂರು ಗಂಟೆಗಳ ಕಾಲ ಕಾಲಾವಕಾಶನ್ನು ಕೇಳುತ್ತಾನೆ.


ರಾಜೇಂದ್ರ ಜೊತೆಗೆ ಮಾತನಾಡಿದ ಜೈದೇವ್

ಆಫೀಸಿಗೆ ಜೈದೇವ್ ಬರುತ್ತಿದ್ದಂತೆಯೇ ರಾಜೇಂದ್ರ ಭೂಪತಿ ಜೊತೆಗೆ ಮಾತನಾಡುತ್ತಾನೆ. ಇದನ್ನು ಗೌತಮ್ ಮತ್ತು ಆನಂದ್ ಗಮನಿಸುತ್ತಾರೆ. ಬಳಿಕ ಜೈದೇವ್ ಗೆ ಗೌತಮ್ ಬೈಯುತ್ತಾನೆ. ಆಗ ಜೈದೇವ್, ನಾನು ಸ್ವಲ್ಪ ರಿಕ್ವೆಸ್ಟ್ ಮಾಡಿಕೊಳ್ಳುತಿದ್ದೆ ಎಂದು ಹೇಳಿ ಯಾಮಾರಿಸುತ್ತಾನೆ. ಗೌತಮ್ ಯಾವುದೇ ಕಾರಣಕ್ಕೂ ಮತ್ತೆ ಈ ಕೆಲಸ ಮಾಡಬೇಡ ಎನ್ನುತ್ತಾನೆ.

ಬೋರ್ಡ್ ಮೆಂಬರ್ಸ್ ಮನವೊಲಿಸಲು ಆನಂದ್ ಯತ್ನ

ಇತ್ತ ಭೂಮಿಕಾ, ಸುಧಾ ಮತ್ತು ಮಹಿಮಾ ಮನೆಯಲ್ಲಿ ಫೈಲ್ ಅನ್ನು ಹುಡುಕುತ್ತಾರೆ. ಆದರೆ ಎಲ್ಲೂ ಫೈಲ್ ಸಿಗುವುದಿಲ್ಲ. ಇನ್ನು ಆನಂದ್ ಬೇಕಂತಲೇ ಬೋರ್ಡ್ ಮೆಂಬರ್ಸ್ ಬಳಿ ಹೋಗಿ ಎಲ್ಲರ ವೀಕ್ನೆಸ್ ಬಗ್ಗೆ ಬ್ಲ್ಯಾಕ್ ಮೇಲ್ ಮಾಡಿ ಗೌತಮ್ ಗೆ ಓಟು ಹಾಕಿ ಎಂದು ಹೇಳುತ್ತಾನೆ. ಎಲ್ಲರೂ ಆನಂದ್ ಮಾತಿಗೆ ಒಪ್ಪಿಕೊಳ್ಳುತ್ತಾರೆ. ಆದರೆ ನಿಜವಾಗಿಯೂ ಯಾರಿಗೆ ಓಟ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X