Amruthadhaare ; ವಾಪಸ್ ಮನೆಗೆ ಬಂದ ಭೂಮಿಕಾ ; ಮಗನ ಮೇಲೆ ಅಮ್ಮನಿಗೆ ಅನುಮಾನ
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಹುಡುಗಿ ಜೊತೆ ಸುತ್ತಾಡುತ್ತಿದ್ದಾನೆ. ಮಲ್ಲಿ ಬಳಿ ನಂಬಿಕೆ ಗಳಿಸಿಕೊಂಡಿದ್ದು, ತನ್ನ ಬಾಲವನ್ನು ಮತ್ತೆ ಬಿಚ್ಚಿದ್ದಾನೆ.ಸಹೋದರಿ ಅಶ್ವಿನಿ ಸ್ನೇಹಿತೆ ಜೊತೆಗೆ ಜೈದೇವ್ ತಿರುಗಾಡುತ್ತಿದ್ದಾನೆ. ಪಾರ್ಟಿ, ಹೋಟೆಲ್ ಎಂದು ಸುತ್ತಾಡುತ್ತಿದ್ದಾನೆ. ಆದರೆ, ಈಗ ಅವಳಿಹಗೆ ಕಾರು ಕೊಡಿಸುವುದಾಗಿ ಹೇಳಿದ್ದಾನೆ. ಕಾರು ಕೊಡಿಸಲು ಜೈದೇವ್ ಹಣಕ್ಕೆ ಏನು ಮಾಡುವುದು ಎಂದು ಒದ್ದಾಡಿದ್ದು, ಮಲ್ಲಿ ಬಳಿ ತಿಜೋರಿ ಕೀ ಇದ್ದು, ಚಿಕ್ ಕೊಟ್ಟಿದ್ದಾಳೆ. ಇದರಿಂದ ಜೈದೇವ್ ಬೇಸರ ಮಾಡಿಕೊಂಡಿದ್ದಾನೆ. ಮಲ್ಲಿ ಬಳಿ ಹಣಕ್ಕೆ ಕೈ ಚಾಚಬೇಕಾಯ್ತು ಎಂದು ನೊಂದುಕೊಂಡಿದ್ದಾನೆ.
ವಾಪಸ್ ಮನೆಗೆ ಬಂದ ಭೂಮಿಕಾ
ಇನ್ನು ಭೂಮಿಕಾಳನ್ನು ಬಿಟ್ಟಿರಲಾರದ ಗೌತಮ್ ಇಡೀ ದಿನ ಒದ್ದಾಡಿದ್ದಾನೆ. ಆನಂದ್ ಬಳಿ ತನ್ನ ಸಂಕಟವನ್ನು ಹೇಳಿಕೊಂಡಿದ್ದು, ಏನು ಮಾಡುವುದು ಎಂದಾಗ ಆನಂದ್ ಸೀದಾ ಭೂಮಿಕಾ ಅವರ ಮನೆಯವರ ಬಳಿ ಕೇಳಿಕೊಂಡು ಮನೆಗೆ ಕರೆದುಕೊಂಡು ಬಾ ಎಂದು ಐಡಿಯಾ ಕೊಟ್ಟಿದ್ದಾನೆ. ಗೌತಮ್ ಗೆಳೆಯನ ಮಾತನ್ನು ನಂಬಿ ಸದಾಶಿವ ಮಾವನ್ನನು ಭೇಟಿ ಮಾಡಿದ್ದಾನೆ. ಭೂಮಿಕಾಳನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ದಯಮಾಡಿ ಮನೆಗೆ ಕಳಿಸಿಕೊಡಿ ಎಂದು ಕೇಳಿದ್ದಾರೆ. ಸದಾಶಿವ ಮತ್ತು ಮಂದಾಕಿನಿ ಗೌತಮ್ ವಿರಹವನ್ನು ಕಂಡು ವಾಪಸ್ ಕಳಿಸಿಕೊಟ್ಟಿದ್ದಾರೆ. ಭುಮಿಕಾ ಆಶ್ಚರ್ಯ ಪಟ್ಟಿದ್ದು, ಗೌತಮ್ ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಭೂಮಿಕಾ ಕೂಡ ಇಬ್ಬರೂ ಮಿಸ್ ಮಾಡಿಕೊಂಡಿದ್ದು, ಇನ್ಯಾವತ್ತೂ ಹೀಗೆ ದೂರ ಇರುವುದು ಬೇಡ ಎಂದು ಮಾತನಾಡಿಕೊಂಡಿದ್ದಾರೆ.

ಮಾವನ ಕಂಡೀಷನ್ ಗೆ ಪಾರ್ಥನ ತಯಾರಿ
ಇತ್ತ ಪಾರ್ಥ ಅಪೇಕ್ಷಾಳ ಮೇಲಿನ ಪ್ರಿತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಮಾವ ಹಾಕಿರುವ ಕಂಡೀಷನ್ ಗೆ ಒಪ್ಪಿದ್ದಾನೆ. ನಾಲ್ಕು ಮಕ್ಕಳನ್ನು 15 ದಿನಗಳಲ್ಲಿ ಸರಿ ಮಾಡುವುದಾಗಿಯೂ, ಅವರು ಪರೀಕ್ಷೆಯಲ್ಲಿ ಪಾಸ್ ಆಗುವಂತೆಯೂ ಹೇಳಿದ್ದಾನೆ. ಇದಕ್ಕಾಗಿ ತಯಾರಿ ನಡೆಸಿದ್ದಾನೆ. ತನ್ನ ಸಿರಿವಂತಿಕೆಯನ್ನು ಬಿಟ್ಟು, ಸಾಮಾನ್ಯ ಕುಟುಂಬದಿಂದ ಬಂದ ಹುಡುಗನಂತೆ ಕಾಣಲು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡಿದ್ದಾನೆ. ಏನು ಮಾಡಬೇಕು ಎಂಬುದು ಗೊತ್ತಿಲ್ಲದಿದ್ದರೂ ಪ್ರೀತಿಯನ್ನು ಗೆಲ್ಲಲು ಸಾಹಸ ಮಾಡಲು ಮುಂದಾಗಿದ್ದಾನೆ.
ಶಕುಂತಲಾಳಿಗೆ ಪಾರ್ಥನ ಮೇಲೆ ಅನುಮಾನ
ಶಕುಂತಲಾ ಬಳಿ ಹೋಗಿ ಸೋಲೋ ಟ್ರಿಪ್ ಹೋಗುವುದಾಗಿ ಪರ್ಮಿಷನ್ ತೆಗೆದುಕೊಂಡಿದ್ದಾನೆ. ಆದರೆ, ಗೌತಮ್ ಪಾರ್ಥನಿಗೆ ತಿರುಗಾಡುವುದು ಬೇಡ, ಆಫೀಸಿಗೆ ಬಂದು ಜವಾಬ್ದಾರಿ ನಿಭಾಯಿಸು ಎಂದು ಹೇಳಿದ್ದಾನೆ. ಆದರೆ, ಪಾರ್ಥ ಟಾಸ್ಕ್ ಕಂಪ್ಲೀಟ್ ಮಾಡಲೇಬೇಕು ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾನೆ. ಭೂಮಿಕಾ ಕೂಡ ಮೈದುನನಿಗೆ ಸಪೋರ್ಟ್ ಮಾಡಿದ್ದು, ಎರಡು ವಾರ ಟ್ರಿಪ್ ಹೋಗಿ ಬಂದ ಕೂಡಲೇ ಆಫೀಸ್ ಕೆಲಸಕ್ಕೆ ತೆರಳುವಂತೆ ಹೇಳಿದ್ದಾನೆ. ಆದರೆ, ಪಾರ್ಥನ ನಡವಳಿಕೆ ಶಕುಂತಲಾಳಿಗೆ ಅನುಮಾನವನ್ನು ತರಿಸಿದೆ. ಹೀಗಾಗಿ ಶಕುಂತಲಾ ಲಕ್ಷ್ಮೀಕಾಂತನನ್ನು ಫಾಳೊ ಮಾಡುವಂತೆ ಹೇಳಿ ಕಳಿಸಿದ್ದಾಳೆ.

ಮಕ್ಕಳ ಎದುರು ದಡ್ಡನಾದ ಪಾರ್ಥ
ಪಾರ್ಥ ದಾರಿ ಮಧ್ಯೆ ಬಟ್ಟೆಯನ್ನು ಬದಲಾಯಿಸಿಕೊಂಡು ಸದಾಶಿವ ಪಾಠ ಮಾಡುವ ಶಾಲೆಗೆ ಹೋಗುತ್ತಾನೆ. ಅಲ್ಲಿ ಸದಾಶಿವ ನಾಲ್ಕು ಮಕ್ಕಳನ್ನು ಪಾರ್ಥನಿಗೆ ಪರಿಚಯ ಮಾಡಿಸಿದ್ದಾನೆ. ಪರೀಕ್ಷೆಗೆ ತಯಾರಿ ನಡೆಸು, ಮಕ್ಕಳನ್ನು ದಾರಿ ತರುವುದು ನಿನ್ನ ಜವಾಬ್ದಾರಿ ಎಂದಿದ್ದಾನೆ. ಆದರೆ, ಆ ಮಕ್ಕಳು ಗುರುಗಳ ಪರಿಚಯವಾಗುತ್ತಿದ್ದಂತೆ ತರ್ಲೆ ಬುದ್ಧಿ ತೋರಿಸಿದ್ದು, ಪಾರ್ಥ ಕೂಡ ಮಕ್ಕಳ ಎದುರು ದಡ್ಡನಾಗಿದ್ದಾನೆ. ಪಾರ್ಥನನ್ನು ಫಾಲೋ ಮಾಡಿದ ಲಕ್ಷ್ಮೀಕಾಂತ ಸತ್ಯ ತಿಳಿಯುತ್ತಾನಾ..? ಶಕುಂತಲಾಳಿಗೆ ಈ ಸತ್ಯ ಗೊತ್ತಾದರೆ ಏನು ಮಾಡಬಹುದು ಎಂಬ ಕುತೂಹಲ ಮೂಡಿದೆ


Click it and Unblock the Notifications











