Amruthadhaare ;ಚಿಕ್ಕಮಗಳೂರಿಗೆ ಹೊರಟ ಭೂಮಿಕಾ-ಗೌತಮ್ : ಶುರುವಾಗುತ್ತಾ ಶಕುಂತಲಾ ಆಟ..!
ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮನೆಗೆ ಗಾಬರಿಯಾಗಿ ಬರುತ್ತಾಳೆ. ಅಪೇಕ್ಷಾ ಇರುವ ರೀತಿಯನ್ನು ಕಂಡು ಮಂದಾಕಿನಿಗೆ ಆತಂಕವಾಗುತ್ತದೆ.ಯಾಕೆ ಹೀಗಿದ್ದೀಯಾ ಏನಾಯ್ತು ಎಂದು ಪ್ರಶ್ನೆ ಮಾಡುತ್ತಾರೆ. ಆದರೆ, ಅಪೇಕ್ಷಾಳಿಗೆ ಪಾರ್ಥನ ಜೊತೆಗೆ ಇದ್ದದ್ದು, ರೌಡಿಗಳು ಅಟ್ಯಾಕ್ ಮಾಡಿದ ವಿಚಾರ ಹೇಳಲು ಇಷ್ಟವಿಲ್ಲದೇ, ಹಾಗೆಯೇ ಮ್ಯಾನೇಜ್ ಮಾಡುತ್ತಾಳೆ.ಜೀವನ್ ಮ್ಯಾಟ್ರಿಮೊನಿ ಆಫೀಸ್ ತೆರೆಯಲು ಎಲ್ಲಾ ತಯಾರಿ ಮಾಡಿಕೊಳ್ಳಲು ಭೂಮಿಕಾ ಹಾಗೂ ಗೌತಮ್ ಕೂಡ ಸಹಯಾ ಮಾಡುತ್ತಾರೆ.
ಆಫೀಸ್ ಪ್ರಾರಂಭಿಸಿದ ಜೀವನ್
ಇನ್ನು ಜೈದೇವ ಫೋನ್ ಮಾಡಿ ಮಹಿಮಾ ಜೊತೆಗೆ ಮಾತನಾಡುತ್ತಾನೆ. ನನ್ನನ್ನು ಆಫೀಸ್ ಪೂಜೆಗೆ ಕರೆದೇ ಇಲ್ಲ. ಆದರೂ ಪರವಾಗಿಲ್ಲ. ನಾನು ಬಂದೇ ಬರುತ್ತೀನಿ ಎಂದು ಹೇಳುತ್ತಾನೆ. ಆದರೆ, ಮಹಿಮಾ ನೀನು ಬರಬೇಡ. ನಿನ್ನ ಮತ್ತು ಅಪೇಕ್ಷಾ ಮದುವೆ ನಿಂತು ಹೋಗಿರುವುದಕ್ಕೆ ಎಲ್ಲರಿಗೂ ಮುಜುಗರವಾಗುತ್ತದೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಜೈದೇವ ಕೋಪ ಮಾಡಿಕೊಳ್ಳುತ್ತಾನೆ. ಇನ್ನು ಜೀವನ್ ಗೆ ಎಲ್ಲರೂ ವಿಷ್ ಮಾಡುತ್ತಾರೆ. ಮಹಿಮಾ ಗೌತಮ್ ಮತ್ತು ಭೂಮಿಕಾ ಬಳಿ ಥ್ಯಾಂಕ್ಸ್ ಕೇಳಿ, ಜೀವನ್ ಫುಡ್ ಡೆಲಿವರಿ ಮಾಡುತ್ತಿದ್ದ ವಿಚಾರ ನನಗೆ ಗೊತ್ತಿತ್ತು. ಆದರೆ, ನಾನು ಏನನ್ನೂ ಮಾಡುವ ಪರೀಸ್ಥಿತಿಯಲ್ಲಿ ಇರಲಿಲ್ಲ. ನೀವಿಬ್ಬರೂ ಅವನಿಗೆ ಸಹಾಯ ಮಾಡಿದ್ದರಿಂದ ಇವತ್ತು ಈ ಹೊಸ ಕೆಲಸವನ್ನು ಆರಂಭಿಸಿದ್ದಾನೆ ಎಂದು ಹೇಳುತ್ತಾಳೆ.

ಭೂಮಿಕಾ ಹೆಸರಿಗೆ ಚಿಕ್ಕಮಗಳೂರು ಜಮೀನು
ಭೂಮಿಕಾ ಮತ್ತು ಗೌತಮ್ ಚಿಕ್ಕಮಗಳೂರಿಗೆ ಹನಿಮೂನ್ ಗೆಂದು ಹೋಗುತ್ತಿರುವ ವಿಚಾರ ತಿಳಿದು ಮಂದಾಕಿನಿ ಖುಷಿ ಪಡುತ್ತಾಳೆ. ಪ್ರೀತಿ ವಿಚಾರವನ್ನು ಇನ್ನೂ ಹೇಳಿಲ್ಲ ಎಂಬ ಸತ್ಯ ಕೇಳಿ ಬೈಐಉತ್ತಾಳೆ. ಮುಂದೆ ಸಿಗುವ ಅವಕಾಶವನ್ನು ಮಿಸ್ ಮಾಡಿಕೊಳ್ಳದೇ ಪ್ರಪೋಸ್ ಮಾಡಿಬಿಡು ಎಂದು ಹೇಳಿಕೊಡುತ್ತಾಳೆ. ಗೌತಮ್ ಭೂಮಿಕಾ ಹೆಸರಿಗೆ ಚಿಕ್ಕಮಗಳೂರಿನ ಎಸ್ಟೇಟ್ ಅನ್ನು ಬರೆಯಬೇಕು ಎಂದು ತೀರ್ಮಾನಿಸಿದ್ದಾನೆ. ಈ ವಿಚಾರದ ಬಗ್ಗೆ ಅಜ್ಜಿ ಜೊತೆಗೆ ಮಾತನಾಡುತ್ತಾನೆ. ಅಜ್ಜಿಗೆ ಖುಷಿಯಾಗುತ್ತದೆ. ಒಳ್ಳೆಯ ಕೆಲಸ ಮಾಡುತ್ತಿದ್ದೀಯಾ ಮಾಡು. ಆದರೆ, ನನಗೊಂದು ಮರಿ ಮೊಮ್ಮಗು ಅನ್ನು ತಂದು ಕೊಡು ಎಂದು ಕೇಳುತ್ತಾರೆ.
ಚಿಕ್ಕಮಗಳೂರಿಗೆ ಹೊರಟ ಗೌತಮ್-ಭೂಮಿಕಾ
ಭೂಮಿಕಾ ಚಿಕ್ಕಮಗಳೂರಿಗೆ ಹೊರಡುವ ಮುನ್ನ ಮಲ್ಲಿಯನ್ನು ಭೇಟಿ ಮಾಡಿ ಹುಷಾರಾಗಿರುವಂತೆ ಎಚ್ಚರಿಸುತ್ತಾಳೆ. ಫೋನ್ ಜೊತೆಗೆ ಇಟ್ಟುಕೊಂಡಿರಬೇಕು. ಏನೇ ಸಮಸ್ಯೆ ಬಂದರೂ ಕೂಡ ಫೋನ್ ಮಾಡಬೇಕು ಎಂದು ಹೇಳುತ್ತಾಳೆ. ಮಲ್ಲಿ ಜೈದೇವ ತನ್ನ ಮೇಲೆ ಪ್ರೀತಿ ಇಟ್ಟಿರುವುದರಿಂದ ಸಮಸ್ಯೆ ಏನೂ ಇಲ್ಲ ಎಂದು ಹೇಳುತ್ತಾಳೆ. ಭೂಮಿಕಾ ಮತ್ತು ಗೌತಮ್ ಖುಷಿ ಖುಷಿಯಾಗಿ ಚಿಕ್ಕಮಗಳೂರಿಗೆ ಹೊರಡುತ್ತಾರೆ.

ಅಸಲಿ ಬಣ್ಣ ತೋರಿಸಿದ ಜೈದೇವ
ಲಕ್ಷ್ಮೀಕಾಂತ ಶಕುಂತಲಾಳಿಗೆ ಗೌತಮ್ ಚಿಕ್ಕಮಗಳೂರಿನ ಎಸ್ಟೇಟ್ ಅನ್ನು ಭೂಮಿಕಾ ಹೆಸರಿಗೆ ಬರೆಯಬೇಕು ಎಂದುಕೊಂಡಿದ್ದಾನೆ. ಈ ವಿಚಾರದ ಬಗ್ಗೆ ಅಜ್ಜಿ ಬಳಿ ಮಾತನಾಡುತ್ತಿದ್ದ ಎಂದಾಗ ಶಕುಂತಲಾಳಿಗೆ ಬೇಸರವಾಗುತ್ತದೆ. ಕೋಪ ಮಾಡಿಕೊಂಡು ಮೊದಲು ಮಲ್ಲಿಗೆ ಒಂದು ಗತಿ ಕಾಣಿಸಬೇಕು ಎನ್ನುತ್ತಾಳೆ. ಆಗ ಅಲ್ಲಿಗೆ ಬರುವ ಜೈದೇವ ನಾನು ಇಷ್ಟು ದಿನ ನಾಟಕ ಮಾಡುತ್ತಿದ್ದೆ. ಮಲ್ಲಿ ಕಥೆಯನ್ನು ಮುಗಿಸಲು ನಾನೂ ಕೂಡ ನಿಮ್ಮ ಜೊತೆಗೆ ಕೈ ಜೋಡಿಸುತ್ತೇನೆ ಎಂದು ತನ್ನ ಅಸಲಿ ಬಣ್ಣವನ್ನು ಬಯಲು ಮಾಡುತ್ತಾನೆ. ಈಗ ಭೂಮಿಕಾ ಹಾಗೂ ಗೌತಮ್ ಚಿಕ್ಕಮಗಳೂರಿನಲ್ಲಿ ಲವ್ ಸ್ಟೋರಿ ಶುರು ಮಾಡುತ್ತಾರಾ..? ಅವರಿಬ್ಬರೂ ಬರುವ ಮುನ್ನವೇ ಮಲ್ಲಿ ಕಥೆ ಅಂತ್ಯವಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











