Amruthadhaare: ಕೊನೆಗೂ ಸಾಹಸ ಮಾಡಿ ಮೊದಲ ರಾತ್ರಿ ಕಳೆದ ಗೌತಮ್-ಭೂಮಿಕಾ ಜೋಡಿ!
ಅಮೃತಧಾರೆ ಧಾರಾವಾಹಿಯಲ್ಲಿ ಮಾನ್ಯ ಗೌತಮ್ ಅನ್ನು ಭೇಟಿ ಮಾಡಿ ಸತ್ಯ ಹೇಳ್ ಬೇಕು ಎಂದು ಎಷ್ಟೇ ಪ್ರಯತ್ನಿಸದರೂ ಸಾಧ್ಯವಾಗುತ್ತಿಲ್ಲ. ಮಾನ್ಯಾಳನ್ನು ಲಕ್ಕಿ, ಲಕ್ಷ್ಮೀಕಾಂತ ಮತ್ತು ಶಕುಂತಲಾ ಜೊತೆಗೆ ಸೇರಿ ಕೂಡಿ ಹಾಕಿದ್ದಾನೆ. ಮಾನ್ಯ ಪದೇ ಪದೇ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇರುತ್ತಾಳೆ.
ಆದರೆ, ಇದುವರೆಗೂ ಮಾನ್ಯ ಯಾವುದೇ ವಿಚಾರವನ್ನು ಗೌತಮ್ ಬಳಿ ಹೇಳಲು ಒದ್ದಾಡುತ್ತಿದ್ದಾಳೆ. ಯಾವಾಗ ಗೌತಮ್ ಅನ್ನು ಭೇಟಿಯಾಗುತ್ತಾಳೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ.

ಫಸ್ಟ್ ನೈಟ್ ರೂಮಿನಲ್ಲಿ ನವ ಜೋಡಿಯ ಒದ್ದಾಟ
ಗೌತಮ್ ಮದುವೆ ಸೆಟ್ ಆಗುತ್ತಿದ್ದಂತೆಯೇ ಮಾನ್ಯ ಭೇಟಿ ಮಾಡಲು ಮೊದಲ ಪ್ರಯತ್ನ ಮಾಡಿದ್ದಳು. ನಂತರ ಸಾಧ್ಯವಾಗದಿದ್ದಾಗ ಭೂಮಿಕಾಳನ್ನೇ ಭೇಟಿ ಮಾಡುವ ಸಾಹಸವನ್ನೂ ಮಾಡಿದ್ದಳು. ಆದರೆ, ಇದುವರೆಗೂ ಒಂದು ಬಾರಿಯೂ ಇವರಿಬ್ಬರಲ್ಲಿ ಒಬ್ಬರನ್ನೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ಈಗ ಗೌತಮ್ ಮದುವೆಯೂ ನಡೆದು ಹೋಗಿದೆ. ಇಬ್ಬರ ಫಸ್ಟ್ ನೈಟ್ ಗೆಂದು ಹೋಟೆಲ್ ರೂಮ್ ನಲ್ಲಿ ಸಿದ್ಧತೆ ಮಾಡಲಾಗಿದೆ. ಆದರೆ, ಮದುವೆಯ ಬಗ್ಗೆ ಆಸಕ್ತಿ ಇಲ್ಲದೇ, ಕೊಂಚವೂ ಅರಿವಿಲ್ಲದೇ ಇದ್ದ ಗೌತಮ್ ಮತ್ತು ಭೂಮಿಕಾ ಮದುವೆ ನಡೆದಿರುವುದರಿಂದ ಇಬ್ಬರೂ ಕೂಡ ಮುಂದಿನ ಬದುಕಿನ ಬಗ್ಗೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ.
ಪೂರ್ತಿ ಕೇಕ್ ಒಬ್ಬನೇ ತಿಂದ ಗೌತಮ್!
ರೂಮಿನಲ್ಲಿದ್ದ ಒಂದು ಕೇಕ್ ಪೂರ್ತಿ ಗೌತಮ್ ಒಬ್ಬನೇ ತಿಂದಿದ್ದಾನೆ. ಇದನ್ನು ನೋಡಿದ ಭೂಮಿಕಾಳಿಗೂ ಶಾಕ್ ಆಗಿದೆ. ಇನ್ನು ಭೂಮಿಕಾ ಹಾಗೂ ಗೌತಮ್ ಇಬ್ಬರೂ ಕೆಲ ಕಾಲ ಮಾತನಾಡಿದ್ದೂ, ಇಬ್ಬರೂ ಒಬ್ಬರಿಗೊಬ್ಬರು ಯಾವು ವಿಚಾರದಲ್ಲೂ ಹೊಂದಿಕೊಳ್ಳುವುದಿಲ್ಲ. ಇಬ್ಬರ ಆಲೋಚನೆಗಳೂ ಬೇರೆ ಬೇರೆಯಾಗಿದ್ದು, ನಮ್ಮ ಮುಂದಿನ ಬದುಕು ಹೇಗೆ ನಡೆಯುತ್ತದೋ ಗೊತ್ತಿಲ್ಲ ಎಂದು ಗೌತಮ್ ಹೇಳುತ್ತಾನೆ. ಈ ಮಾತು ಭೂಮಿಕಾಳಿಗೆ ನಿಜ ಎನಿಸಿದರೂ ಕೊಂಚ ಬೇಸರವಾಗುತ್ತದೆ. ಇದೇ ಸಮಯಕ್ಕೆ ಜೀವ ಫೋನ್ ಮಾಡುತ್ತಾನೆ. ವೀಡಿಯೋ ಕಾಲ್ ಮಾಡಿ ಮಾತನಾಡುತ್ತಾನೆ. ಗೌತಮ್ ಬಳಿ ತನ್ನ ಅಕ್ಕನ ಗುಣಗಾನ ಮಾಡುತ್ತಾನೆ. ಆದರೆ, ಗೌತಮ್‌ಗೆ ಮಹಿಮಾ ಜೊತೆ ಮಾತನಾಡಲು ಸಾಧ್ಯವಾಗುವುದಿಲ್ಲ.
ಮಗಳನ್ನು ನೆನೆದು ಪದೇ ಪದೇ ಕಣ್ಣೀರು
ಇದರಿಂದ ಗೌತಮ್ ಬೇಸರ್ ಮಾಡಿಕೊಳ್ಳುತ್ತಾನೆ. ಅದನ್ನು ಅರ್ಥ ಮಾಡಿಕೊಂಡ ಭೂಮಿಕಾ ಬೆಳಗ್ಗೆ ಮಹಿಮಾ ಜೊತೆ ಮಾತನಾಡಿ ಎಂದು ಸಮಾಧಾನ ಮಾಡುತ್ತಾಳೆ. ಆಗ ಗೌತಮ್ ನಮ್ಮಿಬ್ಬರಲ್ಲಿ ಹೊಂದಿಕೆಯಾಗುವ ಗುಣ ಎಂದರೆ ಇದೊಂದೇ ನೋಡಿ ಎಂದು ಹೇಳುತ್ತಾನೆ. ಇತ್ತ ಭೂಮಿಕಾ ಮನೆಯಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿ ಹೋಗಿರುತ್ತಾಳೆ. ಮನೆಗೆ ಹಾಲು ಎಷ್ಟು ಹೊತ್ತಿಗೆ ಬರಬೇಕು.? ಯಾರು ಯಾವಾಗ ಮಾತ್ರೆ ತೆಗೆದುಕೊಳ್ಳಬೇಕು ಎಂಬ ವ್ಯವಸ್ಥೆಗಳನ್ನು ಮಾಡಿರುತ್ತಾಳೆ. ಇದೆಲ್ಲಾ ನೋಡಿದಷ್ಟೂ ಮನೆಯವರು ದುಃಖಗೊಳ್ಳುತ್ತಿದ್ದಾರೆ. ಇಡೀ ಮನೆಯನ್ನು ಭೂಮಿಕಾ ಒಬ್ಬಳೇ ನಿಭಾಯಿಸುತ್ತಿದ್ದಳು. ಈಗ ನಮ್ಮನ್ನೆಲ್ಲಾ ಬಿಟ್ಟು ಮದುವೆಯಾಗಿ ಹೋದಳು ಎಂದು ಮಂದಾಕಿನಿ ಅಳುತ್ತಿರುತ್ತಾಳೆ.

ಗೌತಮ್ ಗೊರಕೆಗೆ ಬೆದರಿದ ಭೂಮಿಕಾ
ರಾತ್ರಿ ಎಲ್ಲಾ ಎದ್ದಿದ್ದ ಗೌತಮ್ ಹಾಗೂ ಭೂಮಿಕಾ ಬೆಳಗಿನ ಜಾವ ಮಲಗುತ್ತಾರೆ. ಆದರೆ, ಗೌತಮ್ ಗೊರಕೆ ಶಬ್ಧಕ್ಕೆ ಭೂಮಿಕಾಳಿಗೆ ನಿದ್ದೆಯೇ ಬರುವುದಿಲ್ಲ. ಗೌತಮ್ ಗೊರಕೆ ನಿಲ್ಲಲಿ ಎಂದು ಏನೇನೋ ಮಾಡುತ್ತಾಳೆ. ಆದರೆ, ಗೌತಮ್ ಗಾಢ ನಿದ್ದೆಯಲ್ಲಿರುತ್ತಾನೆ. ಕೊನೆಗೆ ಭೂಮಿಕಾ ಕಿವಿಗೆ ಹತ್ತಿ ಇಟ್ಟುಕೊಂಡು ಮಲಗುತ್ತಾಳೆ. ಬೆಳಗಾದ ಮೇಲೆ ಗೌತಮ್ ಎದ್ದು ಭೂಮಿಕಾಳನ್ನು ಎದ್ದೇಳುವಂತೆ ಮಾಡುತ್ತಾನೆ.


Click it and Unblock the Notifications











