Amruthadhaare: ತವರು ಮನೆಯಲ್ಲಿ ಭೂಮಿಕಾ-ಗೌತಮ್ ರೊಮ್ಯಾನ್ಸ್
ಅಮೃತಧಾರೆ ಧಾರಾವಾಹಿಯಲ್ಲಿ ಕಷ್ಟವೋ ಸುಖವೋ ಗೌತಮ್ ಅತ್ತೆಯ ಮನೆಗೆ ಬಂದಿದ್ದಾನೆ. ಅಳಿಯ ಮನೆಗೆ ಬಂದಿರುವುದಕ್ಕೆ ಮಂದಾಕಿನಿಗೆ ಫುಲ್ ಖುಷಿಯಾಗಿದೆ.
ಗೌತಮ್‌ಗೆ ಬೆಡ್ ಮೇಲೆ ಮಲಗಲಾಗದೇ, ರಾತ್ರಿ ಎಲ್ಲಾ ಒದ್ದಾಡಿದ್ದಾನೆ. ಕೊನೆಗೆ ತಲೆ ಉಪಯೋಗಿಸಿದ ಗೌತಮ್,ಭೂಮಿಕಾಳ ಲಕ್ಚರ್ ಕೇಳಿ ಗಾಢ ನಿದ್ದೆಗೆ ಜಾರಿದ್ದಾನೆ.

ಇನ್ನು ಗೌತಮ್ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಬೆಳೆಗೆದ್ದು, ಹೊರಟು ಬಂದು ಬಿಡುತ್ತಾನೆ ಎಂದು ಹೆದರಿದ ಆನಂದ್ ಫೈಲ್ ನೆಪವಿಟ್ಟುಕೊಂಡು ಸೀದಾ ಅತ್ತಿಗೆ ಮನೆಗೆ ಬಂದಿದ್ದಾನೆ.
ಹಬ್ಬ ಮಾಡಲು ಮನಸಿಲ್ಲ
ಇತ್ತ ಶಕುಂತಲಾಳಿಗೆ ಮಗನ ಪರಿಸ್ಥಿತಿ ಹೀಗಾಯ್ತಲ್ಲ. ಗೌತಮ್ ಎದುರು ಸಿಕ್ಕಿ ಬಿದ್ದನಲ್ಲ ಎಂದು ಬೇಸರ ಮಾಡಿಕೊಂಡಿದ್ದು, ಹಬ್ಬ ಮಾಡಲು ಮನಸ್ಸಿಲ್ಲದೇ ಸುಮ್ಮನಿದ್ದಾಳೆ. ಆದರೆ ಅಶ್ವಿನಿ ಮನೆಗೆ ಬರುತ್ತಿರುವ ಕಾರಣ ಹಬ್ಬವನ್ನು ಮಾಡಲೇಬೇಕಾಗಿ ಬಂದಿದೆ. ಆದರೆ ಇದಕ್ಕೆ ಜೈದೇವ್ ಕೂಡ ವಿರೋಧೀಸುತ್ತಿದ್ದಾನೆ. ನನಗೆ ಅವಮಾನ ಆಗಿದ್ದು, ಯೋಚನೆಯಲ್ಲಿರುವಾಗ ಹಬ್ಬ ಮಾಡಬೇಕಾ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಲಕ್ಷ್ಮೀಕಾಂತ ಪರಿಸ್ಥಿತಿಯನ್ನು ವಿವರಿಸಿ, ಈ ಹಬ್ಬ ನಡೆಯಲೇಬೇಕು ಎಂದು ಹೇಳುತ್ತಾನೆ.

ಮನೆಗೆ ಬಂದ ಮಗಳು
ಮನೆಗೆ ಮೊದಲ ಮಗಳು ಅಶ್ವಿನಿ ಹಾಗೂ ಬೀಗರು ಬರುತ್ತಾರೆ. ಅವರು ಬಂದ ಮೇಲೆ ಹಿಂದೆಯೇ ಮಹಿಮಾ ಮತ್ತು ಜೀವನ್ ಕೂಡ ಬರುತ್ತಾರೆ. ಶಕುಂತಲಾಳಿಗೆ ಮಹಿಮಾ ಬಂದಿದ್ದು ಕೋಪ ಬರುವಂತೆ ಮಾಡುತ್ತದೆ. ಮಹಿಮಾಳನ್ನು ಯಾಕೆ ಬಂದೆ ಎಂದು ಬೈದು ಕೇಳುತ್ತಾಳೆ. ಆದರೆ ಮಹಿಮಾ ಮಾತ್ರ ಶಕುಂತಲಾಳಿಗೆ ಕೇರ್ ಮಾಡುವುದೇ ಇಲ್ಲ.
ಹಲ್ಲು ಕಚ್ಚಿಕೊಂಡು ಸುಮ್ಮನಾದ ಮಹಿಮಾ
ಅಶ್ವಿನಿ ಬೇಕಂತಲೇ ಹೆಜ್ಜೆ ಹೆಜ್ಜೆಗೂ ಮಹಿಮಾಳನ್ನು ಹೀಯಾಳಿಸುತ್ತಿರುತ್ತಾಳೆ. ಆಟವಾಡುವಾಗ ಜೀವನ್ ಅನ್ನು ನಾವೆಲ್ಲಾ ನೂರು, ಇನ್ನೂರು ಬೆಟ್ ಕಟ್ಟುವುದಿಲ್ಲ. ನಮ್ಮದೆಲ್ಲಾ ಏನಿದ್ದರೂ ಸಾವಿರಗಳಲ್ಲೇ ಎನ್ನುತ್ತಾಳೆ. ಮಾರನೇ ದಿನ ಅಶ್ವಿನಿ ಅವರ ಅತ್ತೆ ಮನೆ ಕೆಲಸದವರಿಗೆ ಕಂತೆ ಕಂತೆ ಹಣ ನೀಡುತ್ತಾಳೆ. ಇದು ಮಹಿಮಾಳಿಗೆ ಮುಜುಗರ ಉಂಟು ಮಾಡುತ್ತದೆ. ಹಣ, ಸ್ಟೇಟಸ್ ಎಲ್ಲದರಲ್ಲೂ ತಾನು ಮಹಿಮಾಳಿಗಿಂತಲೂ ಗ್ರೇಟ್ ಎಂದು ತೋರಿಸಿಕೊಳ್ಳುತ್ತಿರುತ್ತಾಳೆ. ಇದು ಮಹಿಮಾಗೆ ಸಂಕಟ ಉಂಟು ಮಾಡಿದರೂ ನನಗೆ ಸಮಯ ಬರುತ್ತೆ ಎಂದು ಸುಮ್ಮನಾಗುತ್ತಾಳೆ.
ಅಳಿಯನಿಗೆ ಸೇವೆ
ಇತ್ತ ಮಂದಾಕಿನಿ ಅಳಿಯನಿಗೆ ಎಣ್ಣೆ ಹಚ್ಚಿಸಿ ಸ್ನಾನ ಮಾಡಿಸಲು ಎಲ್ಲಾ ತಯಾರಿಯನ್ನು ಮಾಡಿರುತ್ತಾಳೆ. ಭೂಮಿಕಾಳಿಗೆ ಎಣ್ಣೆ ಕೊಟ್ಟು ಅಳಿಯಂದಿರ ಮೈಗೆಲ್ಲಾ ಹಚ್ಚು ಎಂದು ಹೇಳುತ್ತಾಳೆ. ಭೂಮಿಕಾಳಿಗೆ ಹಾಗೂ ಗೌತಮ್‌ಗೆ ಇಬ್ಬರಿಗೂ ನಾಚಿಕೆಯಾಗುತ್ತಿರುತ್ತದೆ. ಆದರೆ ಆನಂದ್ ಬೇಕಂತಲೇ ತಮಾಷೆ ಮಾಡುತ್ತಿರುತ್ತಾನೆ. ಬಳಿಕ ಸೋಪು ಬಳಸದೇ, ಸೀಗೆಕಾಯಿ ಬಳಸಿ ಸ್ನಾನ ಮಾಡಬೇಕು ಎಂದಾಗ ಗೌತಮ್‌ಗೆ ಬೇಸರವಾಗುತ್ತದೆ. ವಿಧಿ ಇಲ್ಲದೇ, ಗೌತಮ್ ಸಿಗೇಕಾಯಿಯಲ್ಲಿ ಸ್ನಾನ ಮಾಡುತ್ತಾನೆ.
ಹಬ್ಬದಲ್ಲಿ ಜೋಡಿಗಳ ರೊಮ್ಯಾನ್ಸ್
ಗೌತಮ್, ಭೂಮಿಕಾ ಬಳಿ ಕಜ್ಜಾಯ ಮಾಡಿಕೊಡಿ ಎಂದು ಕೇಳಿರುತ್ತಾನೆ. ಅಡುಗೆ ಮನೆಯಲ್ಲಿ ಭೂಮಿಕಾ ಪೂರಿ ಮಾಡುವಾಗ ಗೌತಮ್ ನಾನೂ ಕೂಡ ಸಹಾಯ ಮಾಡಲಾ ಎಂದು ಬರುತ್ತಾನೆ. ಮನೆಗೆ ಪಾರ್ಥ ಕೂಡ ಬಂದಿರುತ್ತಾನೆ. ಈ ವೇಳೆ ಭೂಮಿಕಾ ಜಾರಿ ಬೀಳುವಾಗ ಗೌತಮ್ ಕೆನ್ನೆಗೆ ಮುತ್ತು ನೀಡುತ್ತಾಳೆ. ಇದು ಗೌತಮ್ ಹಾಗೂ ಭೂಮಿಕಾ ಇಬ್ಬರಿಗೂ ಮುಜುಗರವಾಗುತ್ತದೆ. ದೀಪಾವಳಿ ಹಬ್ಬದಲ್ಲಿ ಈಗ ಗೌತಮ್ ಮತ್ತು ಭೂಮಿಕಾಳ ರೊಮ್ಯಾನ್ಸ್ ಶುರುವಾಗಿದೆ.


Click it and Unblock the Notifications











