Amruthadhaare ; ಯುಗಾದಿ ಹಬ್ಬದ ದಿನ ಅತ್ತೆ ಶಕುಂತಲಾಳಿಗೆ ವಾರ್ನಿಂಗ್ ಕೊಟ್ಟ ಸೊಸೆ ಭೂಮಿಕಾ
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಮಾಡಿರುವ ಪ್ಲಾನ್ ವಿರುದ್ಧವಾಗಿ ಏನಾದರೂ ಮಾಡಬೇಕು ಎಂದು ಗುರುಗಳನ್ನು ಭೂಮಿಕಾ ಮನೆಗೆ ಕರೆಸುವ ವ್ಯವಸ್ಥೆ ಮಾಡಿದ್ದಾಳೆ. ಶಕುಂತಲಾಳಿಗೆ ಸುಳ್ಳು ಹೇಳಿದ ಭೂಮಿಕಾ, ನಿಮ್ಮ ಗುರುಗಳೇ ಕಳಿಸಿರುವುದು ಎಂದು ಹೇಳಿರುತ್ತಾಳೆ. ಆದರೆ ಗುರುಗಳು ಭೂಮಿಕಾ ತಂದೆ ಸದಾಶಿವನ ಕಡೆಯವರು. ಯುಗಾದಿ ಹಬ್ಬದ ದಿನ ಗುರುಗಳು ಪೂಜೆ ಮಾಡಿ ಮನೆಯವರ ಎದುರಿಗೆ ಪಂಚಾಂಗ ಶ್ರವಣ ಮಾಡುತ್ತಾರೆ. ಬಳಿಕ ಭೂಮಿಕಾ ತನ್ನ ಹಾಗೂ ಗೌತಮ್ ಜಾತಕವನ್ನು ನೋಡಿ ಹೇಳುವಂತೆ ಕೇಳುತ್ತಾಳೆ.
ಜೈದೇವನಿಗೆ ನಿಲ್ಲುತ್ತಿಲ್ಲ ಮಲ್ಲಿ ಕಾಟ
ಇತ್ತ ಜೈದೇವನಿಗೆ ಸಂಕಷ್ಟ ಎದುರಾಗಿದೆ. ಭೂಮಿಕಾ ಹಾಗೂ ಮಲ್ಲಿ ಎದುರು ಒಳ್ಳೆಯವನಂತೆ ನಟಿಸಲು ಜೈದೇವ ಮುಂದಾಗಿದ್ದಾನೆ. ಮಲ್ಲಿಯನ್ನು ನಂಬಿಸಿ ಕೊನೆಗೆ ಅವಳನ್ನು ಕೊಲ್ಲಬೇಕು ಎಂಬುದು ಜೈದೇವನ ಪ್ಲಾನ್. ಈಗ ಜೈದೇವ ಯುಗಾದಿ ಹಬ್ಬದ ಪ್ರಯುಕ್ತ ಮಲ್ಲಿ ಹಾಗೂ ಅವರ ತಾತನ ಜೊತೆಗೆ ಹಳ್ಳಿಗೆ ಹೋಗಿದ್ದಾನೆ. ಅಲ್ಲಿ ಎಣ್ಣೆ ಸ್ನಾನ ಮಾಡಿ, ಕೆಳಗೆ ಕುಳಿತು ಊಟ ಮಾಡಿ, ಕಾಲು ದಾರಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬಂದು ಈಗ ರಾತ್ರಿ ನೆಲದ ಮೇಲೆ ಮಲಗಿದ್ದಾನೆ. ಇದೆಲ್ಲವೂ ಜೈದೇವನಿಗೆ ಕಷ್ಟವಾಗುತ್ತಿದ್ದು, ಅನುಭವಿಸದೇ ಬೇರೆ ದಾರಿಯೇ ಇಲ್ಲ ಎಂಬಂತೆ ಆಗಿದೆ. ಇನ್ನು ಸೊಳ್ಳೆಗಳ ಕಾಟಕ್ಕೆ ನಿದ್ದೆಯೂ ಬಾರದೇ ಒದ್ದಾಡುತ್ತಿದ್ದಾನೆ.

ಗುರುಗಳ ಮಾತು ಕೇಳಿ ಖುಷಿಪಟ್ಟ ಗೌತಮ್
ಗುರುಗಳು ಗೌತಮ್ ಹಾಗೂ ಭೂಮಿಕಾರದ್ದು ಬಹಳ ಒಳ್ಳೆಯ ಜಾತಕ. ಇಬ್ಬರಲ್ಲೂ ಯಾವುದೇ ದೋಷಗಳಿಲ್ಲ. ಸಣ್ಣ ಪುಟ್ಟ ಕಿರಿಕಿರಿಗಳು ಬಿಟ್ಟರೆ, ತೊಂದರೆ ಏನೂ ಇಲ್ಲ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದಾಗ ಗೌತಮ್ ಗೆ ನಂಬಿಕೆಯೇ ಬರುವುದಿಲ್ಲ. ಹೀಗಾಗಿ ಗೌತಮ್ ಪದೇ ಪದೇ ವಿಚಾರಿಸುತ್ತಾನೆ. ಶಕುಂತಲಾ ಕೂಡ ಗೌತಮ್ ಜೀವನದಲ್ಲಿ ಹಿಂದೆ ನಡೆದ ಬಗ್ಗೆ ಕೇಳುತ್ತಾಳೆ. ಆಗ ಅವರು ಎಲ್ಲಾ ಸತ್ಯವನ್ನು ಹೇಳಿದಾಗ ಶಕುಂತಲಾ ನಂಬಲೇಬೇಕಾಗುತ್ತದೆ. ಗುರುಗಳು ಹೇಳಿದ ಮಾತುಗಳನ್ನು ಕೇಳಿದ ಗೌತಮ್ ಮನಸ್ಸು ನಿರಾಳವಾಗುತ್ತದೆ. ತನ್ನ ಮನದಲ್ಲಿದ್ದ ಭಾರವೆಲ್ಲಾ ಇಳಿದಂತಾಗಿ ಭೂಮಿಕಾಳನ್ನು ರೂಮಿನಲ್ಲಿ ತಬ್ಬಿಕೊಂಡು ಧನ್ಯವಾದ ಹೇಳುತ್ತಾನೆ.
ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ ಜೀವ
ಯುಗಾದಿ ಹಬ್ಬದಲ್ಲಿ ಜೀವನ್ ಬಾಳಲ್ಲಿ ಬಿರುಗಾಳಿ ಎದ್ದಂತಾಗಿದೆ. ಕೆಲಸ ಕಳೆದುಕೊಂಡಿರುವ ಜೀವನ್ ಗೆ ಈಗ ಹೊಸ ಕೆಲಸ ಸಿಗುವುದು ಕೂಡ ಕಷ್ಟವಾಗಿದೆ. ಹಬ್ಬದ ದಿನವೂ ಖುಷಿಯಾಗಿ ಇರಲಾರದೇ, ಕೆಲಸವಿದೆ ಎಂದು ಸುಳ್ಳು ಹೇಳಿ ಮನೆಯಿಂದ ಹೊರಗೆ ಹೊರಟಿದ್ದಾನೆ. ಸ್ನೇಹಿತರನ್ನು ಸಂಪರ್ಕಿಸಿ ತನಗೊಂದು ಕೆಲಸ ಕೊಡಿಸುವುದಾಗಿ ಕೇಳಿದ್ದಾನೆ. ಆದರೆ, ಮುಂದೇನಾಗುತ್ತದೋ ಗೊತ್ತಿಲ್ಲ.

ಅತ್ತೆ ಬಳಿ ಕ್ಷಮೆ ಕೇಳಿದ ಭೂಮಿಕಾ
ಶಕುಂತಲಾಳಿಗೆ ಭೂಮಿಕಾ ಮಾಡಿದ ಕೆಲಸದಿಂದ ಸಂಕಟ ಹೆಚ್ಚಾಗಿದೆ. ಆದರೆ, ಏನು ಮಾಡುವುದು ಎಂಬುದು ಗೊತ್ತಾಗದೇ ಇರುವಾಗಲೇ ಭೂಮಿಕಾ ಬಂದು ಕ್ಷಮೆ ಕೇಳಿದ್ದಾಳೆ. ನನ್ನ ಮತ್ತು ಗೌತಮ್ ನನ್ನು ದೂರ ಇಡಬೇಕು ಅಂತ ಯಾಕೆ ಯೋಚಿಸುತ್ತಿದ್ದೀರೋ ಗೊತ್ತಿಲ್ಲ. ಆದರೆ, ಮಲ್ಲಿ ಮದುವೆ ವಿಚಾರದಲ್ಲಿ ನಾನು ನ್ಯಾಯದ ಪರ ಇದ್ದೇನೆ. ಅದರಿಂದ ನಿಮಗೆ ಬೇಸರವಾಗಿದ್ದರೆ, ಕ್ಷಮಿಸಿ. ಆದರೆ, ನನ್ನ ಮತ್ತು ಗೌತಮ್ ನನ್ನು ದೂರ ಮಾತ್ರ ಮಾಡಬೇಡಿ. ಅಷ್ಟು ಒಳ್ಳೆಯ ವ್ಯಕ್ತಿಯಿಂದ ದೂರ ಇರೋದಕ್ಕೆ ನನಗೆ ಇಷ್ಟವಿಲ್ಲ ಎಂದು ಹೇಳುತ್ತಾಳೆ. ಅಲ್ಲದೇ, ಅನ್ಯಾಯ ಮಾಡಿದರೆ ಸುಮ್ಮನಂತೂ ಬಿಡೋದಿಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ ಎಂದು ಭೂಮಿಕಾ ಖಡಕ್ ಆಗಿ ಅತ್ತೆ ಶಕುಂತಲಾಗೆ ಹಬ್ಬದ ದಿನ ವಾರ್ನಿಂಗ್ ಕೊಟ್ಟಿದ್ದಾಳೆ.


Click it and Unblock the Notifications











