Amruthadhaare ; ಮಹಿಮಾಳಿಗೆ ಬುದ್ಧಿ ಹೇಳಿದ ಮಂದಾಕಿನಿ : ಜೈದೇವನ ಬಲೆಗೆ ಬಿದ್ದ ಹೊಸ ಚಿಟ್ಟೆ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಹುಟ್ಟುಹಬ್ಬವನ್ನೇ ಜೀವನ್ ಮರೆತಿದ್ದಾನೆ. ಇದರಿಂದ ಮಹಿಮಾಳಿಗೆ ಜೀವನ್ ಮೇಲೆ ಬಹಳ ಕೋಪ ಬಂದಿದೆ. ಜೀವನ್ ತನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಎಷ್ಟೇ ಪ್ರಯತ್ನಿಸಿದರೂ ಮಹಿಮಾ ಮಾತು ಕೇಳುತ್ತಿಲ್ಲ. ನನಗಿಂತಲೂ ಮುಖ್ಯವಾಗಿದ್ದು ಕೆಲಸಾನಾ ಎಂದು ಪ್ರಶ್ನಿಸಿದ್ದಾಳೆ. ಮಂದಾಕಿನಿ ಬಳಿ ಜೀವನ್ ತನ್ನ ಸಮಸ್ಯೆಯನ್ನು ಹಂಚಿಕೊಂಡಿದ್ದಾನೆ. ಮಂದಾಕಿನಿಯೂ ವಿಚಾರ ಕೇಳಿ ಬೇಸರ ಮಾಡಿಕೊಂಡಿದ್ದಾಳೆ. ತಾನು ಮಹಿಮಾಳಿಗೆ ಸಮಾಧಾನ ಮಾಡುವುದಾಗಿ ಜೀವನ್ ಗೆ ಧೈರ್ಯ ತುಂಬಿದ್ದಾಳೆ.

ಮಹಿಮಾಳ ಕೋಪ ಕಮ್ಮಿಯಾಗುತ್ತಿಲ್ಲ

ಮಹಿಮಾ ಬಳಿ ಮಂದಾಕಿನಿ ಹೋಗಿ ಸಮಾಧಾನ ಮಾಡಿದ್ದಾಳೆ. ಜೀವನ್ ಮಾಡಿದ್ದು ನಿಜಕ್ಕೂ ತಪ್ಪು. ವರ್ಷಕ್ಕೆ ಒಂದು ಸಲ ಬರುವ ಹುಟ್ಟುಹಬ್ಬವನ್ನು ಮರೆಯಬಾರದಿತ್ತು. ಇದೊಂದು ಸಲ ಅವನನ್ನು ಕ್ಷಮಿಸಿಬಿಡು. ಇಲ್ಲದಿದ್ದರೆ, ನಿಮ್ಮಬ್ಬರ ಬೇಸರದಿಂದ ಮನೆಯ ವಾತಾವರಣವೂ ಹಾಳಾಗುತ್ತದೆ ಎಂದು ಹೇಳುತ್ತಾಳೆ. ಆದರೆ ಮಹಿಮಾ ಮಂದಾಕಿನಿಯ ಮಾತನ್ನು ಕೇಳಲು ತಯಾರಿರುವುದಿಲ್ಲ. ದುಡಿಯುವುದೆಲ್ಲಾ ಮನೆಗೋಸ್ಕರನೇ ಎಂದಾದರೆ, ಮನೆಯವರೊಂದಿಗೆ ಖುಷಿಯಿಂದ ಇರೋದಿಲ್ಲ ಎಂದರೆ ಏನು ಪ್ರಯೋಜನ ಎಂದೆಲ್ಲಾ ವಾದ ಮಾಡುತ್ತಾಳೆ. ಮಂದಾಕಿನಿಗೆ ಮಹಿಮಾ ಮಾತು ಕೇಳಿ ಭೇಸರವಾಗುತ್ತದೆ. ಹಾಗಾಗಿ ಭೂಮಿಕಾಳಿಗೆ ಫೋನ್ ಮಾಡಿ ಮನೆಗೆ ಬಂದು ಮಹಿಮಾ ಬಳಿ ಮಾತನಾಡಲು ಕೇಳುತ್ತಾಳೆ. ಭೂಮಿಕಾ ಇದಕ್ಕೆ ಒಪ್ಪುತ್ತಾಳೆ.

amruthadhaare-serial-16-june-episode-written-update


ಮತ್ತೊಂದು ಹುಡುಗಿ ಮೇಲೆ ಜೈದೇವನ ಕಣ್ಣು

ಅಶ್ವಿನಿ ಮನೆಗೆ ತನ್ನ ಗೆಳತಿಯೊಬ್ಬಳನ್ನು ಕರೆದುಕೊಂಡು ಬಂದಿದ್ದಾಳೆ. ಆಕೆ ಅಕಸ್ಮಾತ್ ಆಗಿ ಜೈದೇವನ ರೂಮಿಗೆ ಹೋಗಿದ್ದು, ಇಬ್ಬರೂ ನೋಡಿ ಮುಜುಗರ ಪಟ್ಟುಕೊಂಡಿದ್ದಾರೆ. ಜೈದೇವನಿಗೆ ಹೊಸ ಹುಡುಗಿಯನ್ನು ನೋಡಿ ಫುಲ್ ಕ್ರಶ್ ಆಗಿದೆ. ಆಕೆಯ ಬಳಿ ಬಂದು ಇಲ್ಲ ಸಲ್ಲದ ಮಾತುಗಳನ್ನಾಡಿದ್ದಾನೆ. ತನಗೆ ಮದುವೆಯಾಗಿರುವ ವಿಚಾರವನ್ನು ಮುಚ್ಚಿಡಲು ಯತ್ನಿಸಿದ್ದಾನೆ. ಆದರೆ, ಆಕೆಗೆ ಜೈದೇವನ ಕಂಪ್ಲೀಟ್ ಮಾಹಿತಿ ತಿಳಿದಿದ್ದು, ಮದುವೆಯ ನಂತರದ ಸಂಬಂಧ ನನಗೆ ಓಕೆ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ. ಇದು ಜೈದೇವನನ್ನು ಮತ್ತು ಟೆಂಪ್ಟ್ ಮಾಡಿದೆ. ಆಕೆಯ ನಂಬರ್ ಅನ್ನು ಬಿಸಿನೆಸ್ ಹೆಸರಲ್ಲಿ ಅಶ್ವಿನಿ ಬಳಿ ಕೇಳಿ ಪಡೆದಿದ್ದಾನೆ.


ಮಲ್ಲಿಗೆ ಮೋಸ ಮಾಡುತ್ತಿರುವ ಜೈದೇವ

ಮಲ್ಲಿಗೆ ಗೊತ್ತಾಗದಂತೆ ಆಕೆಗೆ ಮೆಸೇಜ್ ಮಾಡಿದ್ದಾನೆ. ಆಕೆ ಬೇಕಂತಲೇ ಸ್ವಲ್ಪ ಹೊತ್ತು ಕಾಯಿಸಿ ಮತ್ತೆ ಮೆಸೇಜ್ ಮಾಡಿದ್ದಾಳೆ. ಇಬ್ಬರು ಬಹಳ ಹೊತ್ತು ಚಾಟ್ ಮಾಡಿದ್ದು, ಕೊನೆಗೆ ಫೊನ್ ನಲ್ಲಿ ಮಾತನಾಡಲೆಂದು ಜೈದೇವ ಮನೆಯಿಂದ ಹೊರಗೆ ಬಂದಿದ್ದಾನೆ. ಮಲ್ಲಿ ಹಿಂದೆಯೇ ಬಂದು ಅನುಮಾನವನ್ನು ವ್ಯಕ್ತಪಡಿಸಿದ್ದಾಳೆ. ಆದರೆ, ಜೈದೇವ ನಾಟಕ ಮಾಡಿ ಯಾಮಾರಿಸಿದ್ದಾನೆ. ಭೂಮಿಕಾಳಿಗೆ ಜೈದೇವನ ಮೇಲೆ ನಂಬಿಕೆ ಇಲ್ಲದ ಕಾರಣ ಮಲ್ಲಿ ಬಳಿ ಪ್ರಶ್ನೆ ಮಾಡಿದ್ದಾಳೆ. ಮಲ್ಲಿ ಜೈದೇವ ತನ್ನನ್ನು ತುಂಬಾ ಪ್ರೀತಿಯಿಮದ ನೋಡಿಕೊಳ್ಳುತ್ತಿದ್ದಾನೆ ಎಂದು ಹೇಳುತ್ತಾಳೆ.

amruthadhaare-serial-16-june-episode-written-update

ಕಂಪನಿಯಲ್ಲಿ ಹೊಸ ಸಮಸ್ಯೆ ಉದ್ಭವ

ಇತ್ತ ಗೌತಮ್ ಆಫೀಸಿನಲ್ಲಿ ಕಾಂಟ್ರ್ಯಾಕ್ಟ್ ಒಂದು ತಪ್ಪಿ ಹೋಗಿದೆ. ಪ್ರತೀ ವರ್ಷ ತಮ್ಮ ಜೊತೆಗೆ ಕೆಲಸ ಮಾಡುತ್ತಿದ್ದ ಕಂಪನಿಯೊಂದು ಈ ಬಾರಿ ಬೇರೆಯವರೊಂದಿಗೆ ಟೈ ಅಪ್ ಮಾಡಿಕೊಂಡಿದೆ. ಈ ವಿಚಾರಕ್ಕೆ ಗೌತಮ್ ಬೇಸರ ಮಾಡಿಕೊಂಡಿದ್ದು, ಆಫಿಸಿನಲ್ಲಿರುವವರಿಂದಲೇ ಮೋಸವಾಗಿದೆ ಎಂದು ಭಾವಿಸಿದ್ದಾನೆ. ಈ ಕೆಲಸವನ್ನು ಜೈದೇವ ಮಾಡಿದ್ದು, ಈ ಸತ್ಯ ಯಾರಿಗೂ ತಿಳಿದಿಲ್ಲ. ಈಗ ಗೌತಮ್ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾನೆ. ಜೈದೇವ ಮಾಡಿದ ತಪ್ಪು ಗೊತ್ತಾದರೆ, ಗೌತಮ್ ಯಾವ ರೀತಿಯ ಆಕ್ಷನ್ ತೆಗೆದುಕೊಳ್ಳಬಹುದು ಎಂದು ಕುತೂಹಲ ಮೂಡಿದೆ.

More from Filmibeat

English summary
gautham office project missed this made gautham to investigate
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X