Amruthadhaare ; ಭೂಮಿಕಾ ಬಾಳಲ್ಲಿ ಎದುರಾಯ್ತಾ ಹೊಸ ಸಂಕಷ್ಟ..?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹೆಂಡತಿಗೆ ತೊಂದರೆಯಾಗಬಾರದು ಎಂದು ಮನೆಯಲ್ಲಿ ಹೊಸ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದಾನೆ. ದಿವಾನ್ ವಂಶದ ಕುಡಿ ಆರೋಗ್ಯವಾಗಿರಬೇಕು ಎಂದು ಬಯಸಿದ್ದಾನೆ. ಭೂಮಿಕಾಳಿಗೂ ಒಂದಷ್ಟು ರೆಸ್ಟ್ರಿಕ್ಷನ್ಸ್ ಗಳನ್ನು ಹಾಕಿರುವ ಗೌತಮ್ ಎಲ್ಲವನ್ನೂ ಫಾಲೋ ಮಾಡುವಂತೆ ಹೇಳಿದ್ದಾನೆ. ಮಹಿಮಾ ಮತ್ತು ಮಲ್ಲಿಗೆ ಹುಟ್ಟುವ ಮಕ್ಕಳ ಬಗ್ಗೆ ಗೌತಮ್ ಬಹಳಷ್ಟು ಆಸೆ, ಕನಸುಗಳನ್ನು ಹೊತ್ತುಕೊಂಡಿದ್ದ. ಆದರೆ, ಅದ್ಯಾವುದೂ ನೆರವೇರಲೇ ಇಲ್ಲ.
ತಂದೆಯಾಗುತ್ತಿರುವ ಸಂಭ್ರಮದಲ್ಲಿ ಗೌತಮ್
ಈಗ ಭೂಮಿಕಾ ಹೊಟ್ಟೆಯಲ್ಲಿರುವ ಮಗು ಕೈ ಸೇರಬೇಕು. ಮಗು ಆರೋಗ್ಯವಾಗಿರಬೇಕು ಎಂದು ಬಯಸಿದ್ದಾನೆ. ಅಲ್ಲದೇ, ದಿವಾನ್ ಕುಟುಂಬಕ್ಕೆ ಹಲವು ವರ್ಷಗಳ ಬಳಿಕ ಬರುತ್ತಿರುವ ಈ ಮಗುವನ್ನು ಅದ್ಧೂರಿಯಾಗಿ ಸ್ವಾಗತಿಬೇಕು ಎಂದುಕೊಂಡಿದ್ದಾನೆ. ತಾನು ತಂದೆಯಾಗುತ್ತಿರುವ ಖುಷಿಯಲ್ಲಿ ಗೌತಮ್ ತೇಲಾಡುತ್ತಿದ್ದಾನೆ. ಭೂಮಿಕಾಳಿಗೂ ತಾನು ತಾಯಿ ಆಗುತ್ತಿರುವುದು, ಮಕ್ಕಳನ್ನು ಇಷ್ಟ ಪಡುವ ಗೌತಮ್ ಗೆ ತಮ್ಮದೇ ಮಗು ಆಗುತ್ತಿರುವ ಕಾರಣ ಸಂತಸದಲ್ಲಿದ್ದಾಳೆ. ಸದ್ಯ ಭೂಮಿಕಾ ಮತ್ತು ಗೌತಮ್ ಇಬ್ಬರ ಆಲೋಚನೆಗಳೂ ಒಂದೇ ಆಗಿದ್ದು, ತಮ್ಮ ಮಗುವಿನ ಭವಿಷ್ಯದ ಬಗ್ಗೆಯೇ ಚಿಂತಿಸುತ್ತಿದ್ದಾರೆ.

'
ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿರುವ ಶಕುಂತಲಾ
ಗೌತಮ್ ಮತ್ತು ಭೂಮಿಕಾ ಇನ್ನೂ ಗರ್ಭದಲ್ಲಿರುವ ಮಗುವಿನ ಬಗ್ಗೆ ಆಲೋಚಿಸುತ್ತಿದ್ದರೆ, ಇತ್ತ ಶಕುಂತಲಾಳಿಗೆ ಈಗಾಗಲೇ ಜಗತ್ತಿಗೆ ಪರಿಚಯವಾಗಿ ತಮ್ಮ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಮಕ್ಕಳ ಬಗ್ಗೆ ಯೋಚನೆಯಾಗಿದೆ. ಜೈದೇವ್, ಅಶ್ವಿನಿಗೆ ಗೌತಮ್ ಬಳಿ ಇರುವ ಆಸ್ತಿ ಎಲ್ಲವೂ ಸಿಗಬೇಕು. ತನ್ನ ಮಕ್ಕಳಿಗೆ ಯಾವುದೇ ಕೊರತೆಯಾಗಬಾರದು ಎಂದು ಭಾವಿಸಿದ್ದಾಳೆ. ಆದರೆ, ಈಗ ಗೌತಮ್ ಗೆ ಮಗು ಆಗುತ್ತಿದ್ದು, ಇದರಿಂದ ತನ್ನ ಮಕ್ಕಳ ಪಾಲು ಎಲ್ಲಿ ಕಣ್ಮರೆಯಾಗುತ್ತೋ ಎಂಬ ಚಿಂತೆ ಕಾಡುತ್ತಿದೆ. ಅಲ್ಲದೇ, ಲಕ್ಷ್ಮೀಕಾಂತ ಬೇರೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಿದ್ದಾನೆ. ಗೌತಮ್ ಗೆ ಮಗುವಾದರೆ, ನೀನು ನಿನ್ನ ಮಕ್ಕಳು ಬೀದಿ ಪಾಲಾಗುವುದು ಪಕ್ಕಾ ಎಂದು ಎಚ್ಚರಿಕೆ ಕೊಡುತ್ತಿದ್ದಾನೆ.
ಆಸ್ತಿಗಾಗಿ ಹೋರಾಡಲು ಮುಂದಾದ ಜೈದೇವ್
ಜೈದೇವ್ ಗೂ ಕೂಡ ಈಗ ಸಂಕಟ ಶುರುವಾಗಿದೆ ಗೌತಮ್ ಎರಡನೇ ಮದುವೆಯಾದರೆ, ತಾನೂ ಕೂಡ ಮಲ್ಲಿಯನ್ನು ಬಿಟ್ಟು ಬೇರೆ ಮದುವೆಯಾಗಬಹುದು ಎಂದು ಭಾವಿಸಿದ್ದ. ಆದರೆ, ಈಗ ಗೌತಮ್ ಭೂಮಿಕಾಳನ್ನು ಬಿಟ್ಟು ಕೊಡಲಿಲ್ಲ. ಹೀಗಿರುವಾಗ ತಾನು ಅದು ಹೇಗೆ ದಿಯಾಳನ್ನು ಮದುವೆಯಾಗುವುದು ಎಂದು ತಲೆಕೆಡಿಸಿಕೊಂಡಿದ್ದಾನೆ. ಅಲ್ಲದೇ, ಈಗ ಗೌತಮ್ ಮತ್ತು ಭೂಮಿಕಾ ಪೋಷಕರಾಗಿ ಬಡ್ತಿ ಪಡೆಯುತ್ತಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಆಸ್ತಿ ಬೇಕು ಎಂದರೆ, ಭೂಮಿಕಾ ಹೊಟ್ಟೆಯಲ್ಲಿರುವ ಮಗು ಭೂಮಿಗೆ ಬರಬಾರದು ಎಂದು ಜೈದೇವ್ ಲೆಕ್ಕಾಚಾರ ಹಾಕುತ್ತಿದ್ದಾನೆ.
ಭೂಮಿಕಾಳಿಗೆ ಮತ್ತೆ ಕಂಟಕ ಎದುರಾಗುತ್ತಾ..?
ಕಷ್ಟಗಳಲ್ಲೇ ಬೆಳೆದು ಬಂದ ಭೂಮಿಕಾಳಿಗೆ ಮದುವೆಯಾದ ಬಳಿಕ ಆಗಿದ್ದೆಲ್ಲವೂ ಒಳ್ಳೆಯದೇ. ಆದರೆ, ಆಗಾಗ ಶಕುಂತಲಾ ಮತ್ತು ಜೈದೇವ್ ಆಟಗಳಿಗೆ ಬಲಿಯಾಗಬೇಕಾಯ್ತು. ಈಗಲೂ ಭೂಮಿಕಾಳಿಗೆ ಶಕುಂತಲಾ ಮತ್ತು ಜೈದೇವ್ ನಿಂದ ಕಂಟಕವೊಂದು ಎದುರಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಜೈದೇವ್ ಗೂ ಆಸ್ತಿ ಮೇಲೆ ಕಣ್ಣಿದ್ದು, ಅಧಿಕಾರಕ್ಕೆ ಕೆಟ್ಟವರ ಸಹವಾಸವನ್ನು ಮಾಡಿದ್ದಾನೆ. ಇನ್ನು ಶಕುಂತಲಾ ತನ್ನ ಮಕ್ಕಳಿಗಾಗಿ ಮೊದಲಿನಿಂದಲೂ ಮೋಸದಿಂದಲೇ ಬಾಳ್ವೆ ಮಾಡಿಕೊಂಡು ಬಂದಿದ್ದು, ಈಗಲೂ ಗೌತಮ್ ಗೆ ಟೋಪಿ ಹಾಕಿ ದಿವಾನ್ ಕುಟುಂಬದ ಆಸ್ತಿಗೆ ಒಡತಿಯಾಗಿರಬೇಕು. ತನ್ನ ಮಕ್ಕಳಿಗೆ ಯಾವುದೇ ಕುಂದು-ಕೊರತೆಗಳು ಆಗಬಾರದು ಎಂದೇ ಲೆಕ್ಕಾಚಾರವನ್ನು ಹಾಕುತ್ತಿದ್ದಾಳೆ.


Click it and Unblock the Notifications











