Amruthadhaare ; ಮಲ್ಲಿಗೆ ದೊಡ್ಡ ಬಲೆ ಬೀಸಿರುವ ಜೈದೇವ : ಪ್ರಕೃತಿ ಮಡಿಲಲ್ಲಿ ಗೌತಮ್-ಭೂಮಿಕಾ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಕಷ್ಟವನ್ನು ಗೌತಮ್ ಮತ್ತು ಭೂಮಿಕಾ ಸೇರಿ ಕೊನೆ ಮಾಡಿದ್ದಾರೆ. ಜೀವನ್ ಈಗ ತನ್ನ ಸ್ವಂತ ಕಂಪನಿಯನ್ನು ನೋಡಿಕೊಳ್ಳುವಂತೆ ಆಗಿದ್ದಾನೆ. ಇದರಿಂದ ಜೀವನ್ ಮನೆಯವರು ಖುಷಿಯಾಗಿದ್ದಾರೆ. ಮಗ ಸ್ವಂತ ಕಂಪನಿಯನ್ನು ತೆರೆದಿರುವುದಕ್ಕೆ ಸಂಭ್ರಮಿಸಿದ್ದಾರೆ. ಮಹಿಮಾಳಿಗೆ ತನ್ನ ಪತಿಯೂ ಬಿಸಿನೆಸ್ ಮ್ಯಾನ್ ಆದ ಎಂಬ ಖುಷಿ ಇದೆ. ಭೂಮಿಕಾ ಮತ್ತು ಗೌತಮ್ ಬೆಂಗಳೂರಿಗೆ ಬಾಯ್ ಹೇಳಿ, ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇಬ್ಬರೂ ಏಕಾಂತದಲ್ಲಿ ಸಮಯ ಕಳೆಯುವ ಸಂದರ್ಭ ಒದಗಿ ಬಂದಿದೆ.


ಚಿಕ್ಕಮಗಳೂರಿಗೆ ಬಂದ ಗೌತಮ್-ಭೂಮಿಕಾ

ಚಿಕ್ಕಮಗಳೂರಿಗೆ ಬರುತ್ತಿದ್ದಂತೆಯೇ ಗೌತಮ್ ಜೀಪ್ ವ್ಯವಸ್ಥೆ ಮಾಡಿದ್ದಾನೆ. ಜೀಪ್ ನಲ್ಲಿ ಹೋದರೆ ಚೆನ್ನಾಗಿರುತ್ತೆ ಎಂದು ಭೂಮಿಕಾ ಜೊತೆಗೆ ಚೀಪ್ ನಲ್ಲಿ ಪ್ರಯಾಣಿಸಿದ್ದಾನೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಭೂಮಿಕಾ ಸಂತಸಗೊಂಡಿದ್ದಾಳೆ. ಆದರೆ, ಅವರು ಎಸ್ಟೇಟ್ ತಲುಪುತ್ತಿದ್ದಂತೆ ಇಡೀ ಮನೆ ಖಾಲಿ ಖಾಲಿಯಾಗಿರುವುದನ್ನು ಕಂಡು ಗೌತಮ್ ಗೆ ಶಾಕ್ ಆಗಿದೆ. ಇದೇನು ಎಷ್ಟೋಂದು ಜನ ಕೆಲಸದವರು ಇರಬೇಕಿತ್ತು. ಒಬ್ಬರೂ ಕಾಣುತ್ತಿಲ್ಲವಲ್ಲ ಎಂದು ಆಶ್ಚರ್ಯ ಪಟ್ಟಿದ್ದಾನೆ. ಸ್ವಲ್ಪ ಸಮಯದ ಬಳಿಕ ಇಬ್ಬರು ಆಳುಗಳು ಮುಖ ಮುಚ್ಚಿಕೊಂಡು ಬಂದಿದ್ದಾರೆ. ಯಾರಿದು ಎಂದು ಕೇಳಿದರೂ ಹೇಳದ ಅವರು ಆನಂದ್ ಮತ್ತು ಅಪರ್ಣಾ ಎಂಬುದು ನಂತರ ಗೊತ್ತಾಗಿದೆ. ಅಜ್ಜಿ ಚಿಕ್ಕಮಗಳೂರಿನಲ್ಲಿರುವ ಸಮಸ್ಯೆ ಅನ್ನು ಬಗೆಹರಿಸಲು ಇವರಿಬ್ಬರನ್ನೂ ಕಳಿಸಿದ್ದು, ಗೌತಮ್ ಮತ್ತು ಭೂಮಿಕಾ ಏಕಾಂತವನ್ನು ಎಂಜಾಯ್ ಮಾಡಲಿ ಎಂಬುದು ಅವರ ಉದ್ದೇಶ. ಆನಂದ್ ಕೂಡ ಗೌತಮ್ ಮತ್ತು ಅತ್ತಿಗೆ ಒಂದಾಗಲಿ ಎಂದು ಬಯಸಿರುವ ಕಾರಣ ಅವನೂ ಈ ಕೆಲಸಕ್ಕೆ ಒಪ್ಪಿಕೊಂಡು ಬಂದಿದ್ದಾನೆ.

amruthadhaare-serial-16-may-episode-written-update

ಮಗನ ಪ್ಲಾನ್ ಕೇಳಿ ಶಕುಂತಲಾ ಫುಲ್ ಹ್ಯಾಪಿ

ಶಕುಂತಲಾ ಮನದಲ್ಲಿದ್ದ ಪ್ಲಾನ್ ನ ಜೈದೇವ ಜಾರಿಗೆ ತಂದಿದ್ದಾನೆ. ಕೆಂಚನನ್ನು ಗೌತಮ್ ವಿರುದ್ಧ ಜೈದೇವನೇ ಎತ್ತಿಕಟ್ಟಿದ್ದಾನೆ. ಹಣ ಕೊಟ್ಟು ಗಲಾಟೆ ಮಾಡಿಸಿದ್ದಲ್ಲದೇ, ಈಗ ಚಿಕ್ಕಮಗಳೂರಿನಲ್ಲೂ ಗೌತಮ್ ಮತ್ತು ಭೂಮಿಕಾ ಮೇಲೆ ಅಟ್ಯಾಕ್ ಮಾಡಿ, ಅವರನ್ನು ಕಾಪಾಡಲು ಜೈದೇವ ಹೋಗಿ. ಅಲ್ಲಿನ ಸಮಸ್ಯೆ ಅನ್ನು ಜೈದೇವ ಬಗೆಹರಿಸಬೇಕು. ಆಗ ಗೌತಮ್ ಜೈದೇವನಿಗೇ ಆ ಚಿಕ್ಕಮಗಳೂರಿನ ಎಸ್ಟೇಟ್ ಮತ್ತು ಕಾಫಿ ತೋಟವನ್ನು ಬರೆಯಬೇಕು ಎಂಬುದು ಆತನ ಪ್ಲಾನ್ ಆಗಿದೆ. ಇದನ್ನು ಕೇಳಿದ ಶಕುಂತಲಾ ಫುಲ್ ಹ್ಯಾಪಿ ಆಗುತ್ತಾಳೆ.

ಮಲ್ಲಿಯನ್ನು ಬಲೆಗೆ ಹಾಕಿಕೊಂಡ ಜೈದೇವ

ಮಲ್ಲಿಯನ್ನು ನಿಧಾನವಾಗಿ ತನ್ನ ಬಲೆಗೆ ಹಾಕಿಕೊಂಡಿರುವ ಜೈದೇವ, ಅವಳೀಗೆ ಮೋಸ ಮಾಡುವ ಸಮಯ ಹತ್ತಿರ ಬಂದಾಗಿದೆ. ಜೈದೇವ ತೋರಿಸಿರುವ ನಾಟಕದ ಪ್ರೀತಿಯನ್ನು ಮಲ್ಲಿ ಸಂಪೂರ್ಣವಾಗಿ ನಂಬಿದ್ದಾಳೆ. ಭೂಮಿಕಾ ಮಾತನ್ನು ಮೀರಿ ಜೈದೇವನನ್ನು ನಂಬಿದ್ದು, ಇದು ಮಲ್ಲಿ ಜೀವಕ್ಕೆ ಅಪಾಯ ತರುವುದಂತೂ ಪಕ್ಕಾಗಿದೆ.

ಮಲ್ಲಿ ಕಥೆ ಮುಗಿಸುತ್ತಾನಾ ಜೈದೇವ

ಇಂದು ಆಫೀಸಿಗೆ ಹೋಗುವ ನೆಪದಲ್ಲಿ ಜೈದೇವ ರೌಡಿಗಳೊಂದಿಗೆ ಸೇರಿಕೊಂಡು ದೊಡ್ಡ ಪ್ಲಾನ್ ಮಾಡಿದ್ದಾನೆ. ಅದರ ಪ್ರಕಾರ ಜೈದೇವ ನನ್ನು ರೌಡಿಗಳೂ ಫೈಲ್ ಒಂದಕ್ಕೆ ಕಿಡ್ನ್ಯಾಪ್ ಮಾಡುತ್ತಾರೆ. ಗಂಡನನ್ನು ಉಳಿಸಲು ಹೋಗುವ ಮಲ್ಲಿಯನ್ನು ಲಾಕ್ ಮಾಡಿ, ಅವಳನ್ನು ಹೊಡೆದು ಕೊಲೆ ಮಾಡಲಾಗುತ್ತದೆ. ಆಗ ಜೈದೇವನ ಬಗ್ಗೆ ಯಾರಿಗೂ ಕೊಂಚವೂ ಅನುಮಾನ ಬರುದಿಲ್ಲ ಎಂದು ಜೈದೇವ ಪ್ಲಾನ್ ಮಾಡಿದ್ದಾನೆ. ಈ ಪ್ಲಾನ್ ಜೈದೇವನ ಪ್ರಕಾರವೇ ಸಕ್ಸಸ್ ಆಗುತ್ತಾ..? ಇಲ್ಲ ಭೂಮಿಕಾ ಮತ್ತೆ ಬಂದು ಮಲ್ಲಿಯನ್ನು ಕಾಪಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
jaidev planned big deal to kill his wife malliಜೈದೇವ ಮಲ್ಲಿಗಾಗಿ ದೊಡ್ಡ ಬಲೆಯನ್ನು ಬೀಸಿದ್ದು, ಹೆಂಡತಿ ಪ್ರಾಣ ತೆಗೆಯುತ್ತಾನಾ..?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X