Amruthadhaare ; ಬಾಂಬ್ ತಂದಿಟ್ಟ ಅವಾಂತರ : ಸುಧಾಗೆ ದಾರಿ ಮಾಡಿಕೊಟ್ಟ ಆ ವ್ಯಕ್ತಿ ಯಾರು..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಸುಧಾಳ ಕೆಲಸವನ್ನು ಆನಂದ್ ಬಹಳ ಇಷ್ಟ ಪಟ್ಟಿದ್ದಾನೆ. ಸುಧಾ ಮನೆಗೆ ಬಂದು ಕೆಲಸಕ್ಕೆ ಸೇರಿರುವ ಉದ್ದೇಶವೇ ಬೇರೆ ಎಂಬುದು ಯಾರಿಗೂ ಅಮೃತಧಾರೆ ಧಾರಾವಾಹಿಯಲ್ಲಿ ಗೊತ್ತಾಗಿಲ್ಲ.ಅಮ್ಮನ ಖಾಯಿಲೆಯನ್ನು ವಾಸಿ ಮಾಡಬೇಕು. ಆಫರೇಷನ್ ಮಾಡಿಸಲು ಹಣ ಬೇಕು ಎಂಬ ಒಂದೇ ಕಾರಣಕ್ಕೆ ಸುಧಾ ತಪ್ಪು ದಾರಿ ಹಿಡಿದಿದ್ದಾಳೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೇ, ತನಗೇ ಗೊತ್ತಿಲ್ಲದೇ ಸುಧಾ ತನ್ನ ಅಣ್ಣನ ಮನೆಯ ವಿರುದ್ಧವೇ ಕೆಲಸ ಮಾಡಬೇಕಿದೆ. ಆದರೆ, ಗೌತಮ್ ಮೇಲೆ ದ್ವೇಷ ಇಟ್ಟುಕೊಂಡಿರುವ ಆ ಅಪರಿಚಿತ ವ್ಯಕ್ತಿ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.

ಅಪಾಯವನ್ನು ನಿರ್ಲಕ್ಷಿಸಿದ ಗೌತಮ್

ಗೌತಮ್ ತನ್ನ ತಾಯಿ ಮತ್ತು ಸಹೋದರಿಯನ್ನು ಹುಡುಕಿಸಲು ಪ್ರೈವೇಟ್ ಡಿಟೆಕ್ಟರ್ ಅನ್ನು ನೇಮಿಸಿದ್ದಾನೆ. ಅವರಿಗೆ ತನ್ನ ತಾಯಿಯ ಮಾಹಿತಿಯನ್ನು ನೀಡಿದ್ದಾನೆ. ಇದೇ ವೇಳೆಗೆ ಗೌತಮ್ ಗೆ ಅಪರಿಚಿತ ವ್ಯಕ್ತಿ ಫೋನ್ ಮಾಡಿದ್ದು, ನಿಮ್ಮ ಮನೆಯವರಿಗೆ ಎಚ್ಚರ ದಿಂದ ಇರುವಂತೆ ಹೇಲಿ ಅವರಿಗೆ ಅಪಾಯವಿದೆ ಎಂದು ಹೇಳಿದ್ದಾನೆ. ಅಪರಿಚಿತಕರೆ ಎಂದು ಗೌತಮ್ ನಿರ್ಲಕ್ಷ್ಯ ಮಾಡಿದ್ದಾನೆ. ಆ ವ್ಯಕ್ತಿ ಪದೇ ಪದೇ ಫೋನ್ ಮಾಡಿದರೂ ಗೌತಮ್ ನೆಗಲೆಕ್ಟ್ ಮಾಡಿದ್ದಾನೆ. ಈ ವಿಚಾರ ತಿಳಿದ ಆನಂದ್ ಗೆ ಅನುಮಾನ ಮೂಡಿದೆ. ಫೇಕ್ ಕಾಲ್ ಆಗಿರಬಹುದು. ಆದರೂ ಮನೆಯವರು ಎಚ್ಚರದಿಂದ ಇರುವುದು ಒಳ್ಳೆಯದು ಎಂದು ಹೇಳಿದ್ದಾನೆ.

Amruthadhaare Serial 16 November episode written update

ಆತಂಕದಲ್ಲಿರುವ ಮನೆಯವರು

ಹಾಗಾಗಿ ಆನಂದ್ ಭೂಮಿಕಾಳಿಗೆ ಫೋನ್ ಮಾಡಿ ವಿಚಾರಿಸಿದ್ದಾನೆ. ಭೂಮಿಕಾ ಮನೆಯಲ್ಲಿ ಅಂತಹ ಸಮಸ್ಯೆ ಏನೂ ಆಗಿಲ್ಲ ಎಂದು ಹೇಳುತ್ತಾಳೆ. ಆಗ ಆನಂದ್ ಗೌತಮ್ ಗೆ ಬಂದ ಕರೆಯ ಬಗ್ಗೆ ಹೇಳಿ ಎಚ್ಚರಿಸುತ್ತಾನೆ. ಅಷ್ಟರಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜು ಎಂಬಾತ ಮನೆಯಲ್ಲಿರುವ ಲ್ಯಾಂಡ್ ಲೈನ್ ಫೋನ್ ಅನ್ನು ಬದಲಾಯಿಸಿದ್ದಾನೆ. ಬಾಂಬ್ ಇರುವ ಫೊನ್ ಅನ್ನು ಇಟ್ಟಿರುವ ಸಂಗತಿ ಯಾರಿಗೂ ಗೊತ್ತಾಗುವುದಿಲ್ಲ. ಭೂಮಿಕಾ ಯಾವುದಕ್ಕೂ ಇರಲಿ ಎಂದು ಮನೆಯವರಿಗೆಲ್ಲಾ ಆತಂಕದ ವಿಚಾರವನ್ನು ತಿಳಿಸಿದ್ದು, ಎಲ್ಲರೂ ಮನೆಯಲ್ಲೇ ಇರಿ ಎಂದಿದ್ದಾಳೆ. ಇದರಿಂದ ಮನೆಯವರೆಲ್ಲರೂ ಗಾಬರಿಯಾಗಿದ್ದಾರೆ.


ಬಾಂಬ್ ಬ್ಲಾಸ್ಟ್‌ನಿಂದ ಭೂಮಿಕಾ ಎಸ್ಕೇಪ್

ಈ ವಿಚಾರವನ್ನು ಜೈದೇವ್ ಗೂ ತಿಳಿಸಿದ್ದು, ಹೊರಗಿದ್ದ ಜೈದೇವ್ ಮನೆಯವರು ಹೇಗಿದ್ದಾರೆ ಎಂದು ತಿಳಿಯಲು ಮನೆಗೆ ವಾಪಸ್ ಬರುತ್ತಾನೆ. ಆಗ ಮಂಜು ಹೆದರಿಕೊಂಡು ಓಡಿ ಹೋಗಲು ಯತ್ನಿಸಿದ್ದನ್ನು ಗಮನಿಸಿ ಜೈದೇವ್ ವಿಚಾರಿಸುತ್ತಾನೆ. ಆಗ ಲ್ಯಾಂಡ್ ಲೈನ್ ನಲ್ಲಿ ಬಾಂಬ್ ಇದೆ ಎಂದು ಹೇಳಿ ಓಡಿ ಹೋಗುತ್ತಾನೆ. ಅಷ್ಟರಲ್ಲಿ ಲ್ಯಾಂಡ್ ಲೈನ್ ಗೆ ಬಂದ ಫೋನ್ ಕರೆಯನ್ನು ಭೂಮಿಕಾ ರಿಸೀವ್ ಮಾಡಿರುತ್ತಾಳೆ. ಸರಿಯಾಗಿ ಕೇಳುತ್ತಿಲ್ಲ ಎಂದು ರಿಸೀವರ್ ಹಿಡಿದ ವೇಳೆಗೆ ಸರಿಯಾಗಿ ಜೈದೇವ್ ಬಂದು ಕೈ ತೆಗೆಯಬೇಡಿ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಹೇಳುತ್ತಾನೆ. ಬಳಿಕ ಭೂಮಿಕಾ ಮತ್ತು ಜೈದೇವ್ ಸೇರಿ ಲ್ಯಾಂಡ್ ಲೈನ್ ಫೊನ್ ಅನ್ನು ಮನೆಯಿಂದ ಹೊರಗೆ ತಂದು ಬಿಸಾಡುತ್ತಾರೆ.


ಗೌತಮ್ ಮನೆಗೆ ಸುಧಾ ಹೋಗಲು ತಯಾರಿ

ಬಾಂಬ್ ದೂರದಲ್ಲಿ ಬ್ಲಾಸ್ಟ್ ಆಗಿದ್ದು, ಭೂಮಿಕಾ ಮತ್ತು ಜೈದೇವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೂಮಿಕಾ ಮತ್ತು ಜೈದೇವ್ ಗೆ ಸಣ್ಣ ಪುಟ್ಟ ಗಾಯವಾಗಿದ್ದು, ಕೆಲವಾರ ರೆಸ್ಟ್ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಈಗ ಭೂಮಿಕಾಳನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಹೇಳಿ ಆನಂದ್ ಸುಧಾಳನ್ನು ಗೌತಮ್ ಮನೆಗೆ ಕಳುಹಿಸಲು ನಿರ್ಧರಿಸುತ್ತಾನೆ. ಸುಧಾ ಈಗ ಗೌತಮ್ ಮನೆಗೆ ತೆರಳಲಿದ್ದು, ಅಲ್ಲಿ ಏನೆಲ್ಲಾ ಅನಾಹುತಗಳಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X