Amruthadhaare: ಗೌತಮ್ ಇಲ್ಲದೇ ನಡೆದ ಮೆಹಂದಿ ಕಾರ್ಯಕ್ರಮ: ಭೂಮಿಕಾಳಿಗೆ ಕೋಪ

By ಪ್ರಿಯಾ ದೊರೆ

'ಅಮೃತಧಾರೆ' ಧಾರಾವಾಹಿಯಲ್ಲಿ ಮಹಿಮಾ ತನಗೆ ಮೇಕಪ್ ಮಾಡಲು ಮುಂಬೈನಿಂದ ಆರ್ಟಿಸ್ಟ್‌ಗಳನ್ನು ಕರೆಸಿದ್ದಾಳೆ. ಆದರೆ, ಅವರು ಇನ್ನು ಬಂದಿಲ್ಲ. ಇದರಿಂದ ಮಹಿಮಾ ತನಗೆ ಮೆಹಂದಿ ಶಾಸ್ತ್ರವೇ ಬೇಡ ಎಂದು ಹಠ ಮಾಡಿದ್ದಾಳೆ. ಇದು ಶಕುಂತಲಾಳಿಗೆ ಟೆನ್ಷನ್ ತಂದಿದೆ. ಈ ಮಹಿಮಾ ಯಾವಾಗ ಏನು ಮಾಡುತ್ತಾಳೆ ಎಂಬುದೇ ಗೊತ್ತಿಲ್ಲ ಎಂದು ಯೋಚಿಸುತ್ತಾಳೆ.

ಇತ್ತ ಮಾನ್ಯ, ಗೌತಮ್‌ನನ್ನು ಭೇಟಿ ಮಾಡಲು ಶತಪ್ರಯತ್ನ ಮಾಡಿದ್ದಾಳೆ. ಆದರೆ, ಮಾನ್ಯಳಿಂದ ಮದುವೆಗೆ ಯಾವುದೇ ತೊಂದರೆಯಾಗಬಾರದು ಎಂದು ಶಕುಂತಲಾ ಮಾನ್ಯಳನ್ನು ಅರೆಸ್ಟ್ ಮಾಡಿಸಿದ್ದಾಳೆ.

Amruthadhaare Serial 16th August episode written update

ಮಾನ್ಯ ಈಗ ಬೇಲ್ ಪಡೆದುಕೊಂಡಿದ್ದಾಳೆ. ಆದರೆ, ಮಾನ್ಯ ಗೌತಮ್‌ಗೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದು ಅವಳ ವಿರುದ್ಧ ದೂರು ದಾಖಲಾಗಿದೆ. ಇದೆಲ್ಲಾ ಕೆಲಸವನ್ನು ಶಕುಂತಲಾಳೇ ಮಾಡಿಸಿದ್ದಾಳೆ.

ಮೆಹಂದಿ ಶಾಸ್ತ್ರಕ್ಕೆ ಸಿದ್ಧತೆ

ಮೇಕಪ್ ಆರ್ಟಿಸ್ಟ್‌ಗಳು ಕೊನೆಗೂ ಬಂದಿದ್ದು, ಮಹಿಮಾ ಖುಷಿಯಾಗಿ ಮೆಹಂದಿ ಶಾಸ್ತ್ರಕ್ಕೆ ರೆಡಿಯಾಗಿದ್ದಾಳೆ. ಇನ್ನು ಭೂಮಿಕಾ ಕೂಡ ಗೌತಮ್ ಮನೆಯಿಂದ ಬಂದ ಉಡುಗೆಯನ್ನು ತೊಟ್ಟುಕೊಂಡು ಸಿದ್ಧವಾಗಿದ್ದಾಳೆ. ಭೂಮಿಕಾಳನ್ನು ನೋಡಿ ಮನೆಯವರೆಲ್ಲರೂ ಖುಷಿ ಪಟ್ಟಿದ್ದಾರೆ. ಮೇಕಪ್ ಮಾಡಿಸಿಕೊಂಡು ರೆಡಿಯಾಗಿರುವ ಭೂಮಿಕಾ ಗೊಂಬೆಯಂತೆ ಕಾಣುತ್ತಿದ್ದಾಳೆ.

Amruthadhaare Serial 16th August episode written update

ಮೆಹಂದಿಯಲ್ಲಿ ಗಂಡನ ಹೆಸರು

ಮೆಹಂದಿ ಶಾಸ್ತ್ರದ ಜಾಗಕ್ಕೆ ಬಂದ ಭೂಮಿಕಾ ಮನೆಯವರನ್ನು ಶಕುಂತಲಾ ಮನೆಯವರು ಸ್ವಾಗತ ಮಾಡುತ್ತಾರೆ. ಎಲ್ಲರೂ ಗೌತಮ್ ನನ್ನು ಕೇಳಲು ಶುರು ಮಾಡಿದ ಕೂಡಲೇ ಭೂಮಿಕಾ ಡ್ರೆಸ್ ಅನ್ನು ಹೊಗಳುತ್ತಾ ಮಾತು ಮರೆಸುತ್ತಾಳೆ. ಬಳಿಕ ಎಲ್ಲರನ್ನೂ ಮೆಹಂದಿ ಹಾಕಿಸಲು ಕರೆದುಕೊಂಡು ಹೋಗುತ್ತಾರೆ. ಮಹಿಮಾ ಹಾಗೂ ಭೂಮಿಕಾಳಿಗೆ ಮೆಹಂದಿಯನ್ನು ಹಾಕಲಾಗುತ್ತದೆ. ಈ ವೇಳೆ ಸುಮ್ಮನಿರದ ಗೌತಮ್ ಅಜ್ಜಿ ಸ್ಟೇಜ್ ಮೇಲೆ ಬಂದು ಹುಡುಗಿಯರು ತಮ್ಮ ಕೈನಲ್ಲಿ ಗಂಡನ ಹೆಸರನ್ನು ಬರೆಸಿಕೊಳ್ಳಬೇಕು. ಆಗ ಗಂಡನ ಆಯಸ್ಸು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಮಹಿಮಾ ಇದಕ್ಕೆ ಒಪ್ಪುವುದಿಲ್ಲ. ಆದರೆ, ಅಜ್ಜಿ ಬಿಡುವುದೂ ಇಲ್ಲ. ಕೊನೆಗೂ ಭೂಮಿಕಾ, ಗೌತಮ್ ಹೆಸರನ್ನು ಹಾಗೂ ಮಹಿಮಾ, ಜೀವನ್ ಹೆಸರನ್ನು ಬರೆಸಿಕೊಳ್ಳುತ್ತಾರೆ.

ಗೌತಮ್ ಇಲ್ಲದೇ ನಡೀತು ಮೆಹಂದಿ ಶಾಸ್ತ್ರ

ಇನ್ನು ಗೌತಮ್‌ಗೆ ಬಿಪಿ ಜಾಸ್ತಿಯಾಗಿ ಪ್ರಜ್ಞೆ ತಪ್ಪಿರುವ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಮೆಹಂದಿ ಶಾಸ್ತ್ರಕ್ಕೆ ಹೋಗುವ ಆಸೆ ಇದ್ದರೂ ಕೂಡ ಡಾಕ್ಟರ್ ಬಿಡುವುದಿಲ್ಲ. ರೆಸ್ಟ್ ಮಾಡಲೇಬೇಕು ಎಂದು ಹೇಳಿದ್ದಾರೆ. ಹೀಗಾಗಿ ಗೌತಮ್ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದಾನೆ. ಗೌತಮ್ ಇಲ್ಲದೆಯೇ ಮಹಿಮಾ ಹಾಗೂ ಭೂಮಿಕಾ ಮೆಹಂದಿ ಶಾಸ್ತ್ರ ನಡೆದು ಹೋಗಿದೆ. ಮೆಹಂದಿ ಶಾಸ್ತ್ರದಲ್ಲಿ ಡ್ಯಾನ್ಸ್, ಹಾಡು ಎಲ್ಲವೂ ಜೋರಾಗಿ ನಡೆದಿದೆ.

ಕೋಪ ಮಾಡಿಕೊಂಡ ಭೂಮಿಕಾ

ಎಲ್ಲರೂ ಭೂಮಿಕಾಳನ್ನು ಗೌತಮ್ ಎಲ್ಲಿ ಎಂದು ಕೇಳಿದ್ದಾರೆ. ಆದರೆ, ಶಕುಂತಲಾ ಎಲ್ಲರಿಗೂ ಬಹಳ ಮುಖ್ಯವಾದ ಮೀಟಿಂಗ್ ಇರುವುದರಿಂದ ಬಂದಿಲ್ಲ ಎಂದು ಹೇಳಿ ನಿಭಾಯಿಸುತ್ತಿದ್ದಾಳೆ. ಆದರೆ, ಭೂಮಿಕಾ ನೇರವಾಗಿ ಗೌತಮ್ಗೆ ಫೋನ್ ಮಾಡಿದ್ದಾಳೆ. ಗೌತಮ್ ತಾನೊಂದು ಬಹಳ ಮುಖ್ಯವಾದ ಮೀಟಿಂಗ್‌ನಲ್ಲಿದ್ದು, ಮೆಹಂದಿ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳುತ್ತಾನೆ. ಆದರೆ, ಭೂಮಿಕಾ ನೀವಿಲ್ಲದೇ ಹೇಗೆ ಸಾಧ್ಯ ನೀವು ಬರಲೇಬೇಕು ಎಂದು ಹೇಳುತ್ತಾಳೆ. ಆದರೆ, ಗೌತಮ್ ಸಾಧ್ಯವಿಲ್ಲ ಎಂದು ಹೇಳಿ ಕಾಲ್ ಕಟ್ ಮಾಡುತ್ತಾನೆ. ಇದರಿಂದ ಭೂಮಿಕಾ ಕೋಪ ಮಾಡಿಕೊಳ್ಳುತ್ತಾಳೆ. ಮನೆಯವರಿಗೆ ಸಮಯ ಕೊಡದಿದ್ದ ಮೇಲೆ ಈ ಮದುವೆಯಲ್ಲ ಯಾಕೆ ಬೇಕೋ ಎಂದು ಕೋಪ ಮಾಡಿಕೊಳ್ಳುತ್ತಾಳೆ.

More from Filmibeat

English summary
Amruthadhaare Serial 16th August episode written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X