Amruthadhaare: ಹತ್ತಿರವಾಗುತ್ತಿರುವ ಭೂಮಿಕಾ-ಗೌತಮ್: ಎಡವಟ್ಟು ಮಾಡ್ತಾಳಾ ಮಹಿಮಾ?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಇತ್ತೀಚೆಗೆ ಭೂಮಿಕಾ ಮತ್ತು ಗೌತಮ್ ಇಬ್ಬರೂ ಕೂಡ ಹೆಚ್ಚೆಚ್ಚು ಜೊತೆಯಾಗಿ ಇರುತ್ತಾರೆ. ಮಹಿಮಾ ಗರ್ಭಿಣಿ ಎಂಬ ಸತ್ಯ ತಿಳಿದ ಮೇಲಂತೂ ಗೌತಮ್ ಸಂಭ್ರಮ ತಡೆಯಲು ಆಗುತ್ತಿಲ್ಲ.

ಪದೇ ಪದೇ ಮಹಿಮಾಳನ್ನು ನೋಡಲು ಅತ್ತೆ ಮನೆಗೆ ಹೋಗುತ್ತಿದ್ದಾನೆ. ಅದರಲ್ಲೂ ಭೂಮಿಕಾಳನ್ನು ಕೂಡ ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾನೆ.

Amruthadhaare Serial 16th January episode written update

ಹೀಗೆ ಇಬ್ಬರೂ ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಗಂಡ-ಹೆಂಡತಿ ರೀತಿಯಲ್ಲಿ ಇಲ್ಲವಾದರೂ ಸ್ನೇಹಿತರಂತೆ ಜೊತೆಯಾಗಿದ್ದಾರೆ.

ಭೂಮಿಕಾಳಲ್ಲಿ ಬದಲಾವಣೆಗಳು

ಗೌತಮ್ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಭೂಮಿಕಾ ನಿಧಾನವಾಗಿ ಗೌತಮ್ ರೀತಿ-ನೀತಿಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾಳೆ. ಗೌತಮ್ ಒಳ್ಳೆಯ ಗುಣಗಳನ್ನು ತಿಳಿಯುತ್ತಿರುವ ಭೂಮಿಕಾಳಲ್ಲಿ ಒಂದಷ್ಟು ಬದಲಾವಣೆಗಳು ಕೂಡ ಆಗಿವೆ. ಮೊದಲೆಲ್ಲಾ ಭೂಮಿಕಾಳಿಗೆ ತನ್ನ ತಂದೆಯ ಹೆಸರೆಂದರೆ ಬಹಳ ಇಷ್ಟವಾಗುತ್ತಿತ್ತು. ಈಗ ತಂದೆಗಿಂತಲೂ ಪತಿಯ ಹೆಸರೆಂದರೆ ಬಹಳ ಇಷ್ಟವಾಗಿದೆ. ಭೂಮಿಕಾಳಿಗೆ ಗೌತಮ್ ಮೇಲೆ ಪ್ರೀತಿ ಹುಟ್ಟುತ್ತಿದೆ.

ಪಾರ್ಥ-ಅಪ್ಪಿ ನಡುವೆ ಅರಳುತ್ತಿದೆ ಪ್ರೇಮ

ಇತ್ತ ಪಾರ್ಥ ಮತ್ತು ಅಪೇಕ್ಷಾ ನಡುವೆ ಪದೇ ಪದೇ ಕ್ಲ್ಯಾಶ್ ಆಗುತ್ತಿದ್ದು, ಇಬ್ಬರೂ ಒಬ್ಬರನ್ನು ಒಬ್ಬರು ಇಷ್ಟಪಡುತ್ತಿದ್ದಾರೆ. ಇನ್ನು ಪಾರ್ಥ, ಅಪ್ಪಿ ಬಳಿ ಫೋನ್ ನಂಬರ್ ಕೇಳಿದ್ದಾನೆ. ಆದರೆ, ಆಕೆ ಕೊಡದೇ ಆಟವಾಡಿಸುತ್ತಾಳೆ. ಅಪ್ಪಿ, ಪಾರ್ಥನಿಗೆ ಚಾಲೆಂಜ್ ಕೂಡ ಮಾಡುತ್ತಾಳೆ. ಮೂರು ದಿನದಲ್ಲಿ ನನ್ನ ಫೋನ್ ನಂಬರ್ ಅನ್ನು ಯಾರ ಸಹಾಯವೂ ಇಲ್ಲದಂತೆ ಪಡೆಯಬೇಕು. ಆಗ ನಾನು ನಿಮ್ಮನ್ನು ಗ್ರೇಟ್ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಪಾರ್ಥ, ಅಪ್ಪಿ ನಂಬರ್ ಪಡೆಯಲು ಐಡಿಯಾ ಮಾಡಿ ಕೊನೆಗೂ ಸಕ್ಸಸ್ ಆಗುತ್ತಾನೆ. ಈಗ ಇಬ್ಬರೂ ಚ್ಯಾಟ್ ಮಾಡಲು ಶುರು ಮಾಡಿದ್ದಾರೆ. ಇನ್ನೇನು ಪ್ರೀತಿ ಹಂಚಿಕೊಳ್ಳುವುದೊಂದು ಬಾಕಿ ಇದೆ.

Amruthadhaare Serial 16th January episode written update

ಮಹಿಮಾಳಲ್ಲಿ ಗಾಬರಿ ಹುಟ್ಟಿಸಿದ ಅಶ್ವಿನಿ

ಮಹಿಮಾಳ ಬದುಕು ಈಗ ಮತ್ತೊಬ್ಬರ ಕೈಯಲ್ಲಿ ಕೊಟ್ಟಂತಾಗಿದೆ. ಮಹಿಮಾ ಗರ್ಭಿಣಿ ಆಗಿರುವುದಕ್ಕೆ ಎಲ್ಲರಲ್ಲೂ ಸಂಭ್ರಮ ಸಡಗರ ಮನೆ ಮಾಡಿದ್ದರೆ, ಅಶ್ವಿನಿ ಬಂದು ಮಹಿಮಾ ಆಲೋಚನೆ ಉಲ್ಟಾ ಆಗಿದೆ. ಜೀವನ್ ಮನೆಯಲ್ಲಿ ರೆಸ್ಟ್ರಿಕ್ಷನ್ಸ್ ಜಾಸ್ತಿ ಎಂದು ಅಣ್ಣನ ಮನೆಗೆ ಹೋಗಲು ಮಹಿಮಾ ಪ್ಲಾನ್ ಮಾಡಿದ್ದಾಳೆ. ಮಹಿಮಾ ವಾಪಸ್ ಗೌತಮ್ ಮನೆಗೆ ಹೋದರೆ, ಅಶ್ವಿನಿ ಮತ್ತು ಶಕುಂತಲಾಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಅಶ್ವಿನಿ ಮಹಿಮಾಳನ್ನು ಭೇಟಿಯಾಗಿ ಬೇಕಂತಲೇ ನೀನು ದಪ್ಪ ಆಗಿದ್ಯಾ? ಒಂದು ಸಲ ತಾಯಿ ಆದರೆ, ಮತ್ತೆ ಲೈಫ್‌ನಲ್ಲಿ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದಾಳೆ. ಅಶ್ವಿನಿ ಮಾತುಗಳಿಂದ ಗಾಬರಿಗೊಂಡಿರುವ ಮಹಿಮಾ ಈಗ ತನಗೆ ಈ ಮಗು ಬೇಕಾ ಎಂಬುದನ್ನು ಯೋಚಿಸುತ್ತಿದ್ದಾಳೆ.

ಮಗು ತೆಗೆಸಲು ಮುಂದಾದ ಮಹಿಮಾ

ಮಹಿಮಾ ಬಹಳ ಗೊಂದಲಕ್ಕೊಳಗಾಗಿದ್ದಾಳೆ. ಎಲ್ಲರ ಬಳಿಯೂ ತಾನು ದಪ್ಪಗಾಗಿರುವ ವಿಚಾರದ ಬಗ್ಗೆ ಸ್ಪಷ್ಟನೆ ಪಡೆಯುತ್ತಿದ್ದು, ದಪ್ಪ ಆಗಿರುವುದನ್ನು ಕನ್ಫರ್ಮ್ ಮಾಡಿಕೊಂಡಿದ್ದಾಳೆ. ಇನ್ನು ತಾನು ಈ ಮಗುವಿಗೆ ತಾಯಿ ಆದರೆ, ತನ್ನ ಎಲ್ಲಾ ಆಸೆ, ಕನಸು, ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೆದರಿದ್ದಾಳೆ. ಹೀಗಾಗಿ ಈ ಮಗು ತನಗೆ ಬೇಡವೇ ಬೇಡ ಎಂದು ಡಿಸೈಡ್ ಮಾಡಿದ್ದಾಳೆ. ಸ್ನೇಹಿತನನ್ನು ಭೇಟಿ ಮಾಡಿ ಅಬಾರ್ಷನ್ ಮಾಡಿಸಲು ಸಹಾಯ ಕೇಳಿದ್ದಾಳೆ. ಈಗ ಮನೆಯವರಿಂದ ಎರಡು ದಿನ ಹೊರಗೆ ಹೋಗಿ ಮಗುವನ್ನು ತೆಗೆಸಿಕೊಳ್ಳಲು ಮುಂದಾಗಿದ್ದಾಳೆ.

More from Filmibeat

English summary
Amruthadhaare kannada serial today update, mahima worries about her beauty and going in a wrong way;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X