Amruthadhaare: ಭೂಮಿಕಾಳಿಗಾಗಿ ಒದ್ದಾಡುತ್ತಿರುವ ಗೌತಮ್ ದಿವಾನ್

By ಪ್ರಿಯಾ ದೊರೆ

ಮಹಿಮಾ ಮದುವೆ ಮಾಡಲು ಮುಂದಾದ ಗೌತಮ್ ದಿವಾನ್‌ಗೆ ಈಗ ದೊಡ್ಡ ಟಾಸ್ಕ್ ಬಂದಿದೆ. ಮಹಿಮಾ ಮದುವೆಗೂ ಮುನ್ನ ಜೀವನ್ ಅಕ್ಕನಿಗೆ ಹುಡುಗನನ್ನು ಹುಡುಕಬೇಕಿದೆ. ಮಹಿಮಾ ಈ ಮದುವೆ ತಡ ಮಾಡಿದರೆ, ತಾನು ಲಂಡನ್‌ಗೆ ಹೋಗುವುದಾಗಿ ಹಠ ಮಾಡುತ್ತಾಳೆ. ತಂಗಿಗಾಗಿ ಏನನ್ನು ಬೇಕಾದರೂ ರೆಡಿ ಇರುವ ಗೌತಮ್‌ಗೆ ಈಗ ಹೊಸ ತಲೆ ನೋವು ಶುರುವಾಗಿದೆ.

ಶಕುಂತಲಾ ಕೂಡ ಗೌತಮ್‌ಗೆ ನೀನು ಮಾಡುತ್ತಿರುವ ಮುದ್ದಿನಿಂದಲೇ ಹೀಗೆಲ್ಲಾ ಆಗುತ್ತಿದೆ ಎಂದು ಬೈದಿದ್ದಾಳೆ. ಹಾಗಾಗಿ ಈಗ ಗೌತಮ್ ಏನಾದರೂ ಮಾಡಿ ಭೂಮಿಕಾ ಮದುವೆ ಮಾಡಬೇಕು ಎಂದುಕೊಂಡಿದ್ದಾನೆ. ಭೂಮಿಕಾಳಿಗೆ ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡಬೇಕು ಎಂದು ಗೌತಮ್ ಆಲೋಚಿಸಿದ್ದಾನೆ. ಹೀಗಾಗಿ ಹಲವು ಕಡೆ ಪ್ರಫೈಲ್‌ಗಳನ್ನು ನೋಡುತ್ತಿದ್ದಾನೆ.

Amruthadhaare Serial 16th June episode written update

ಆನಂದ್ ಇದೆಲ್ಲಾ ಆಗುವಂತಹ ಮಾತಲ್ಲ ಎಂದು ಎಷ್ಟು ಬುದ್ಧಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಗೌತಮ್ ಇಲ್ಲ. ಹಾಗಾಗಿ ಭೂಮಿಕಾ ವಯಸ್ಸಿಗೆ ಸೆಟ್ ಆಗುವಂತಹ ಹುಡುಗನನ್ನು ತಾನೇ ಮುತುವರ್ಜಿ ವಹಿಸಿ ಹುಡುಕಲು ಶುರು ಮಾಡಿದ್ದಾನೆ. ಆದರೆ ಇತ್ತ ಭೂಮಿಕಾಳಿಗೆ ಇದು ಇಷ್ಟವಿಲ್ಲ. ಜೀವನ್ ಬಳಿ ನನ್ನ ಬದುಕಿಗಾಗಿ ನಿನ್ನ ಜೀವನ ನಿಲ್ಲುವುದು ಬೇಡ ಎಂದು ಹೇಳಿದ್ದಾಳೆ.

ಸುಳ್ಳು ಹೇಳಿದ ಶಕುಂತಲಾ

ಇನ್ನು ಶಕುಂತಲಾ, ಗೌತಮ್ ಮದುವೆ ಮಾಡುವುದು ಇಷ್ಟವಿಲ್ಲ. ಇದಕ್ಕೆ ಕಾರಣ ಅವನ ಹೆಸರಿನಲ್ಲಿರುವ ಆಸ್ತಿ. ಗೌತಮ್‌ಗೆ ಮದುವೆಯಾದರೆ, ಅದೆಲ್ಲಾ ತನ್ನ ಮಕ್ಕಳಿಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಗೌತಮ್ ಮದುವೆಯನ್ನು ಮುಂದೂಡುತ್ತಲೇ ಇದ್ದಾಳೆ. ಆದರೆ, ಗೌತಮ್ ದಿವಾನ್ ಆಗರ್ಭ ಶ್ರೀಮಂತ ಎಂಬ ಕಾರಣಕ್ಕೆ ಹಲವು ಪ್ರಪೋಸಲ್ ಬರುತ್ತಿವೆ. ಅವೆಲ್ಲಕ್ಕೂ ಶಕುಂತಲಾ ಬ್ರೇಕ್ ಹಾಕುತ್ತಿದ್ದಾಳೆ. ಇದೀಗ ಗೌತಮ್‌ಗೆ ನಮ್ಮ ಸಂಬಂಧಿಕರ ಮಗಳಿದ್ದಾಳೆ ಎಂಬ ಪ್ರಪೋಸಲ್ ತಂದಿದ್ದು, ಇಲ್ಲ ಎನ್ನಲಾಗದ ಶಕುಂತಲಾ ಈಗಾಗಲೇ ಮದುವೆ ಫಿಕ್ಸ್ ಆಗಿದೆ. ಯಾರಿಗೂ ಹೇಳಿಲ್ಲ ಅಷ್ಟೇ ಎಂದು ದೊಡ್ಡ ಸುಳ್ಳನ್ನು ಹೇಳಿದ್ದಾರೆ.

Amruthadhaare Serial 16th June episode written update

ಭೂಮಿಕಾಗಾಗಿ ಬಂದ ಗೌತಮ್

ಭೂಮಿಕಾಳಿಗೆ ಹುಡುಗನನ್ನು ಹುಡುಕುತ್ತಿರುವ ಗೌತಮ್ ಒಂದಷ್ಟು ಪ್ರಪೋಸಲ್‌ಗಳನ್ನು ವಾಟ್ಸಪ್ ಮಾಡಿದ್ದಾನೆ. ಆದರೆ, ಇದರ ಬಗ್ಗೆ ಭೂಮಿಕಾ ಇಂಟರೆಸ್ಟ್ ತೋರಿಸುವುದಿಲ್ಲ. ಆಗ ಸ್ವತಃ ಗೌತಮ್, ಭೂಮಿಕಾಳನ್ನು ಹುಡುಕಿಕೊಂಡು ಬರುತ್ತಾನೆ. ಕೆಲ ಸಂಬಂಧಗಳನ್ನು ತೋರಿಸುತ್ತಾನೆ. ಆಗಲೂ ಭೂಮಿಕಾ ಒಪ್ಪದೇ, ಕೋಟಿಗಟ್ಟಲೆ ಸಂಪಾದಿಸಬೇಕು, ತೆಳ್ಳಗೆ, ಬೆಳ್ಳಗೆ ಉದ್ದಗೆ ಇರಬೇಕು ಎಂದು ರೇಗಿಸುತ್ತಾಳೆ. ನಂತರ ನನಗೆ ಹುಡುಗನನ್ನು ನೋಡಲು ನಮ್ಮ ಮನೆಯವರು ಇದ್ದಾರೆ. ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಬೈದು ಹೋಗುತ್ತಾಳೆ.

ಮಗಳ ವಿಚಾರಕ್ಕೆ ತಲೆ ಕೆಡಿಸಿಕೊಂಡ ಮಂದಾಕಿನಿ

ಸುಮ್ಮನಾಗದ ಗೌತಮ್ ಆಫೀಸಿನಲ್ಲಿ ಮದುವೆಯಾಗದ ಹುಡುಗರ ಬಗ್ಗೆ ಯೋಚಿಸುತ್ತಾನೆ. ಮೀಟಿಂಗ್‌ನಲ್ಲೂ ಮದುವೆ ಬಗ್ಗೆ ಮಾತನಾಡುವಷ್ಟು ಭೂಮಿಕಾ ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾನೆ. ಇತ್ತ ಮಂದಾಕಿನಿ ಹಲವು ಕಡೆ ಭೂಮಿಕಾಳಿಗೆ ಹುಡುಗನನ್ನು ಹುಡುಕುತ್ತಿದ್ದು, ಎಲ್ಲದಕ್ಕೂ ಭೂಮಿಕಾ ನೋ ಎನ್ನುತ್ತಿದ್ದಾಳೆ. ಇನ್ನು ಕೆಲ ಸಂಬಂಧಗಳು ಭೂಮಿಕಾಳ ಹಳೆಯ ಪ್ರೀತಿಯಿಂದ ಮದುವೆ ಮುರಿದು ಬೀಳುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತಾಳೆ.

ಭೂಮಿಕಾ ಹಳೇ ಲವ್‌

ಭೂಮಿಕಾ, ಕಿರಣ್ ಎಂಬಾತನನ್ನು ಇಷ್ಟಪಟ್ಟಿದ್ದು, ಕಾರಣಾಂತರಗಳಿಂದ ಅವನು ಭೂಮಿಕಾ ಸ್ನೇಹಿತೆಯನ್ನೇ ಮದುವೆಯಾಗಿರುತ್ತಾನೆ. ಹೀಗಾಗಿ ಮಂದಾಕಿನಿ, ಕಿರಣ್ ಬಳಿ ಜಗಳ ಮಾಡುತ್ತಿದ್ದಾಳೆ. ನೀನು ಮಾಡಿದ ಕೆಲಸದಿಂದ ನನ್ನ ಮಗಳ ಬಾಳು ಹಾಳಾಗುತ್ತಿದೆ ಎಂದು ನೊಂದುಕೊಳ್ಳುತ್ತಾಳೆ.

More from Filmibeat

English summary
Amruthadhaare Serial 16th June episode written update. here is Details about Jeevan says that he marries Mahima after his sister Bhoomika marriage, So Gautham searching boy for Bhoomika.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X