Amruthadhaare: ಜಯದೇವನ ಆಟ ನಿಲ್ಲಿಸೋಕೆ ಸೂಪರ್ ಪ್ಲ್ಯಾನ್ ಮಾಡಿರುವ ಆನಂದ್-ಗೌತಮ್
ಅಮೃತಧಾರೆ ಧಾರಾವಾಹಿಯಲ್ಲಿ ಬೆಳಗ್ಗೆಯೆಲ್ಲಾ ಹೊರಗಡೆ ಸುತ್ತಾಡಿಕೊಂಡು ಬಂದ ಭೂಮಿಕಾ ಹಾಗೂ ಗೌತಮ್ ಮಲಗುವಾಗ ಸುಮ್ಮನೆ ಜಗಳ ಮಾಡುತ್ತಾರೆ. ಗೌತಮ್ ತಮ್ಮಿಬ್ಬರ ಇಡೀ ದಿನ ಚೆನ್ನಾಗಿತ್ತು. ಎಲ್ಲೂ ನಾವಿಬ್ಬರೂ ಜಗಳ ಮಾಡಿಕೊಳ್ಳಲಿಲ್ಲ ಎಂದು ಒಳ್ಳೆಯ ರೀತಿಯಲ್ಲಿ ಹೇಳುತ್ತಾನೆ. ಆದರೆ ಇದನ್ನು ಭೂಮಿಕಾ ಅಪಾರ್ಥ ಮಾಡಿಕೊಂಡು ಜಗಳ ಮಾಡುತ್ತಾಳೆ.
ಬೆಳಗ್ಗೆ ಭೂಮಿಕಾ ಏಳುವುದರ ಒಳಗೆ ಗೌತಮ್ ಎದ್ದು ಆಫಿಸಿಗೆ ಹೊರಟು ಬಿಟ್ಟಿರುತ್ತಾನೆ. ಭೂಮಿಕಾ ಎದ್ದಾಗ ಅಲ್ಲಿ ಗೌತಮ್ ಇರುವುದಿಲ್ಲ. ಹೇಳದೇ ಕೇಳದೇ ಹೋಗಿರುವುದಕ್ಕೆ ಬೇಸರ ಮಾಡಿಕೊಳ್ಳುತ್ತಾಳೆ.

ಬೆಳಗ್ಗೆ ಮುನ್ನವೇ ಕಾಣೆಯಾದ ಗೌತಮ್
ಗೌತಮ್ ಬೆಳಗ್ಗೆ ತಿಂಡಿ ತಿನ್ನದೇ ಹೋಗಿದ್ದಾನೆ ಎಂಬ ಕಾರಣಕ್ಕೆ ಭೂಮಿಕಾ ಆತಂಕದಲ್ಲಿದ್ದಾಳೆ ಎಂದು ಅಜ್ಜಿ ಭಾವಿಸುತ್ತಾರೆ. ಹೀಗಾಗಿ ಅಜ್ಜಿ, ಭೂಮಿಕಾಳಿಗೆ ಗೌತಮ್ ಅನ್ನು ಹೇಗೆ ಒಲಿಸಿಕೊಳ್ಳಬೇಕು ಎಂದು ಆಗಾಗ ಟಿಪ್ಸ್ ಕೊಡುತ್ತಿರುತ್ತಾರೆ. ಈಗಲೂ ಕೂಡ ಅಜ್ಜಿ ಗುಂಡುಗೆ ನೀನು ಅಡುಗೆ ಮಾಡಿ ತೆಗೆದುಕೊಂಡು ಹೋಗಿ ಕೊಡು. ನಿನ್ನ ಅಡುಗೆಯ ರುಚಿ ನೋಡಿ ಗೌತಮ್ ಖುಷಿ ಪಡುತ್ತಾನೆ. ಗಂಡಂದಿರನ್ನು ಅಡುಗೆ ರುಚಿಯ ಮೂಲಕವೇ ಹಿಡಿದಿಟ್ಟುಕೊಳ್ಳಬೇಕು ಎಂದು ಹೇಳಿಕೊಡುತ್ತಾಳೆ.
ನಾನ್ ವೆಜ್ ಮಾಡಲು ಒತ್ತಾಯ
ಭೂಮಿಕಾಳನ್ನು ಅಜ್ಜಿ ನೇರವಾಗಿ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಈಗ ನಾನ್ ವೆಜ್ ಅನ್ನು ಮಾಡು. ಗೌತಮ್‌ಗೆ ನಾನ್ ವೆಜ್ ಎಂದರೆ ಬಹಳ ಇಷ್ಟ ಎಂದು ಹೇಳುತ್ತಾಳೆ. ಭೂಮಿಕಾಳಿಗೆ ನಾನ್ ವೆಜ್ ಮಾಡಬೇಕಾ? ಎಂದು ಶಾಕ್ ಆಗುತ್ತದೆ. ನನಗೆ ನಾನ್ ವೆಜ್ ಮಾಡೋದಕ್ಕೆ ಬರೊಲ್ಲ. ನಾನು ಮಾಡೊಲ್ಲ ಎಂದು ಹಠ ಮಾಡುತ್ತಾಳೆ. ಆದರೆ, ಅಜ್ಜಿ ಬಿಡುವುದಿಲ್ಲ. ಗೊತ್ತಿಲ್ಲ ಎಂದರೆ, ಕಲಿತುಕೊಂಡು ಮಾಡು ಎಂದು ಹೇಳಿಕೊಡುತ್ತಾಳೆ.
ಭೂಮಿಕಾ ಅಡುಗೆ ಒಪ್ಪುತ್ತಾರಾ ಅಜ್ಜಿ?
ಈಗ ಭೂಮಿಕಾ ಅಡುಗೆಯನ್ನು ಮಾಡಲು ಪೇಚಾಡುತ್ತಿರುತ್ತಾಳೆ. ಆಗ ಪಾರ್ಥ ಬಂದು ಅತ್ತಿಗೆಗೆ ಸಹಾಯ ಮಾಡುತ್ತಾನೆ. ನಾನ್ ವೆಜ್ ಮಾಡಲು ಬರುವುದಿಲ್ಲ ಎಂದರೆ, ಹೆದರಬೇಡಿ. ವೆಜ್ ಅನ್ನೇ ನಾನ್ ವೆಜ್ ರೀತಿ ರುಚಿ ರುಚಿಯಾಗಿ ಮಾಡಿ ಎಂದು ಹೇಳಿಕೊಡುತ್ತಾನೆ. ಆಗ ಭೂಮಿಕಾ ತಲೆ ಉಪಯೋಗಿಸಿ, ಬಾಳೆಕಾಯಿ ಫ್ರೈ, ವೆಜ್ ಕಬಾಬ್ ಅನ್ನು ಮಾಡುತ್ತಾಳೆ. ಅಜ್ಜಿಯನ್ನು ಕರೆದು ರುಚಿ ನೋಡಲು ಹೇಳುತ್ತಾಳೆ. ವೆಜ್ ಎಂದು ಬೇಸರ ಮಾಡಿಕೊಂಡ ಅಜ್ಜಿ, ಟೇಸ್ಟ್ ಮಾಡಿದ ಮೇಲೆ ಬಹಳ ರುಚಿಯಾಗಿದೆ ಎಂದು ಖುಷಿ ಪಡುತ್ತಾಳೆ. ಆದರೆ ಗೌತಮ್, ಭೂಮಿಕಾ ಅಡುಗೆಯನ್ನು ಟೇಸ್ಟ್ ಮಾಡಿ ಏನು ಹೇಳುತ್ತಾನೋ ಕಾದು ನೋಡಬೇಕಿದೆ.

ಪೀಕಲಾಟಕ್ಕೆ ಸಿಲುಕಿದ ಜಯದೇವ
ಇತ್ತ ಜಯದೇವ ಅಣ್ಣನ ಕಂಪನಿಯಲ್ಲಿ ಇದ್ದುಕೊಂಡೇ 25 ಕೋಟಿ ರೂ. ಹಣವನ್ನು ನುಂಗಿದ್ದಾನೆ. ಈಗ ಅಣ್ಣನಿಗೆ ಸತ್ಯ ಗೊತ್ತಾಗುತ್ತೆ, ಆದರೆ ಯಾರು ಮೋಸ ಮಾಡಿದ್ದಾರೆ ಎಂಬುದು ತಿಳಿಯುವುದಿಲ್ಲ. ಈ ಸಮಸ್ಯೆಯನ್ನು ಬಗೆ ಹರಿಸಲು ಜಯದೇವ ಹೊಸ ಪ್ಲಾನ್ ಮಾಡಿದ್ದಾನೆ. ಹಾಗಾಗಿ ಅಣ್ಣನ ಬಳಿ ಬಂದು ಚೆಕ್ ಒಂದಕ್ಕೆ ಸಹಿ ಕೇಳಿದ್ದಾನೆ.
ಜಯದೇವ್ ಮುಂದೇನು ಮಾಡ್ತಾನೆ?
ಆನಂದ್ ಹಾಗೂ ಗೌತಮ್ ಸೇರಿಕೊಂಡು ಫೈನಾನ್ಸ್ ಅನ್ನು ಆನಂದ್‌ಗೆ ಒಪ್ಪಿಸಲಾಗಿದೆ. ಹೀಗಾಗಿ ಜಯದೇವ ಪೀಕಲಾಟಕ್ಕೆ ಸಿಲುಕಿದ್ದಾನೆ. ಜಯದೇವ್ ಹುಟ್ಟಡಗಿಸೋಕೆಂದೇ ಆನಂದ್ ಜೊತೆ ಸೇರಿದ ಗೌತಮ್ ಹೊಸ ರಣತಂತ್ರ ರೂಪಿಸಿದ್ದಾನೆ. ಆನಂದ್ ಬಳಿಯೇ ಚೆಕ್‌ಗೆ ಸಹಿ ಪಡೆಯಬೇಕಿದೆ. ಈಗ ಜಯದೇವ ಏನು ಮಾಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











