Amruthadhaare ; ಅತ್ತೆ ಉಲ್ಟಾ ಸೀರೆ ಉಡುತ್ತಿರುವುದು ಸೊಸೆಗೆ ಗೊತ್ತಾಗುತ್ತಿಲ್ವಾ..? ವೀಕ್ಷಕರಲ್ಲಿ ಹೆಚ್ಚಿದ ಗೊಂದಲ
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ ಹಳ್ಳಿಯಲ್ಲಿ ಒಂದು ದಿನ ಇದ್ದು, ಲೀಟರ್ ಗಟ್ಟಲೆ ರಕ್ತವನ್ನು ಸೊಳ್ಳೆಗಳಿಗೆ ದಾನ ಮಾಡಿ ಕಷ್ಟಪಟ್ಟುಕೊಂಡು ವಾಪಸ್ ಬಂದಿದ್ದಾನೆ. ಅಮ್ಮನ ಬಳಿ ಹೋಗಿ ನಿಮ್ಮೆಲ್ಲರ ಆಲೋಚನೆಯೇ ಬೇರೆ, ನಿಮ್ಮಿಂದ ನಾನು ಕಷ್ಟ ಅನುಭವಿಸುವಂತಾಗಿದೆ. ಆ ಮಲ್ಲಿಯನ್ನು ಮದುವೆಯಾಗಿದ್ದೇ ನನ್ನ ಗ್ರಹಚಾರ ಕೆಟ್ಟಿದೆ ಎಂದು ಗೋಳಾಡಿದ್ದಾನೆ. ಮಗನ ಮಾತುಗಳಿಂದ ಬೇಸರ ಮಾಡಿಕೊಂಡು ಶಕುಂತಲಾ ತನ್ನ ಕಷ್ಟದ ಬಗ್ಗೆ ಹೇಳಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ತಾನೂ ಕೂಡ ಹಳ್ಳಿಯಲ್ಲಿ ಕಷ್ಟ ಬಿದ್ದವಳೇ.
ಶಕುಂತಲಾಳಿಗೆ ತನ್ನ ಸ್ಥಾನದ ಬಗ್ಗೆಯೇ ಭಯ
ಎಲ್ಲರೂ ಹಳ್ಳಿಯಲ್ಲಿ ಇರಲು ಇಷ್ಟ ಪಟ್ಟರೆ, ನೀನು ಯಾಕೆ ವಿಚಿತ್ರವಾಗಿದೀಯಾ. ನಾನು ಪಟ್ಟ ಕಷ್ಟ ನನ್ನ ಮಕ್ಕಳು ಪಡಬಾರದು ಎಂದು ನಾನು ಏನೆಲ್ಲಾ ಮಾಡಿದ್ದೀನಿ ಅಂತ ನನಗೆ ಗೊತ್ತು. ನೀವೆಲ್ಲಾ ಇಷ್ಟು ಸುಖವಾಗಿರಲು ನಾನು ಪಟ್ಟ ಪಾಡು ನಿನಗೇನು ಗೊತ್ತು. ಈಗಾಗಲೇ ಭೂಮಿಕಾಳಿಗೆ ತನ್ನ ಮೇಲೆ ಅನುಮಾನ ಬಂದಿದೆ. ಈ ಮನೆಯಲ್ಲಿ ತನ್ನ ಸ್ಥಾನಕ್ಕೇ ಕುತ್ತು ಬಂದಿದೆ. ಭೂಮಿಕಾಳನ್ನು ಕಂಟ್ರೋಲ್ ಮಾಡುವುದೇ ಕಷ್ಟವಾಗಿದೆ ಎಂದು ತನ್ನ ಪರಿಸ್ಥಿತಿಯನ್ನು ಮಗನ ಬಳಿ ಹೇಳಿಕೊಂಡಿದ್ದಾಳೆ.

ಗೆಳೆಯನ ಬದುಕಿನ ಬಗ್ಗೆಯೇ ಯೋಚನೆ
ಇತ್ತ ಆನಂದ್ ಪದೇ ಪದೇ ಗೌತಮ್ ಗೆ ಕರೆ ಮಾಡಿ ರೊಮ್ಯಾನ್ಸ್ ಬಗ್ಗೆಯೇ ಮಾತನಾಡುತ್ತಿರುತ್ತಾನೆ. ಆನಂದ್ ಬಾಲ್ಕ್‌ನಿಯಲ್ಲಿ ಮಾತನಾಡುತ್ತಿರುವುದಕ್ಕೆ ಅಪರ್ಣಾ ಅಪಾರ್ಥ ಮಾಡಿಕೊಂಡಿದ್ದಾಳೆ. ಯಾವುದೋ ಹುಡುಗಿ ಜೊತೆಗೆ ಮಾತನಾಡುತ್ತಿದ್ದೀಯಾ ಎಂದು ಅನುಮಾನಿಸಿದ್ದಾಳೆ. ಅಪರ್ಣಾ ಅನುಮಾನದಿಂದ ಪಾರಾಗಲು ಗೌತಮ್ ಮತ್ತು ಭೂಮಿಕಾ ಬಗ್ಗೆ ಹೇಳುತ್ತಾನೆ. ಅವರಿಬ್ಬರು ಇನ್ನೂ ಸ್ನೇಹಿತರಂತಿದ್ದಾರೆ. ಇಬ್ಬರನ್ನು ಒಂದು ಮಾಡಲು ನಾನು ಪ್ರಯತ್ನ ಪಡುತ್ತಿದ್ದೀನಿ ಎಂದು ಹೇಳುತ್ತಾನೆ. ಆನಂದ್ ಮಾತು ಕೇಳಿದ ಅಪರ್ಣಾ, ಗೌತಮ್ ಮತ್ತು ಭೂಮಿಕಾ ಆದಷ್ಟು ಬೇಗ ಒಂದಾಗಬೇಕು. ಇಬ್ಬರೂ ತಮ್ಮ ಸಂಸಾರವನ್ನು ಶುರು ಮಾಡಬೇಕು ಎಂದು ಹೇಳುತ್ತಾಳೆ.
ಹೆಂಡತಿಗೆ ಗೆಜ್ಜೆ ತಂದು ಕೊಟ್ಟ ಗೌತಮ್
ಇನ್ನು ಗೌತಮ್ ಮನಸ್ಸು ನಿರಾಳವಾಗಿದೆ. ತನ್ನ ಹಾಗೂ ಭೂಮಿಕಾ ಜಾತಕದಲ್ಲಿ ಯಾವುದೇ ದೋಷವಿಲ್ಲದ ಕಾರಣ ಮತ್ತೆ ಒಂದಾಗುವ ಪ್ರಯತ್ನ ಮಾಡಿದ್ದಾನೆ. ಭೂಮಿಕಾಳಿಗೋಸ್ಕರ ಗೌತಮ್ ಕಾಲು ಗೆಜ್ಜೆಯನ್ನು ತಂದು ಕೊಟ್ಟಿದ್ದಾನೆ. ಭೂಮಿಕಾ ಬೇಕಂತಲೇ ಅದನ್ನು ಹಾಕಿಕೊಳ್ಳಲು ಕಷ್ಟಪಟ್ಟಿದ್ದು, ಕೊನೆಗೆ ಗೌತಮ್ ತೋಡಿಸಿದ್ದಾನೆ. ಇಬ್ಬರಲ್ಲೂ ಖುಷಿ ಇದ್ದು, ಯಾವಾಗ ಒಬ್ಬರಿಗೊಬ್ಬರು ಪ್ರಪೋಸ್ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ.

ಉಲ್ಟಾ ಸೀರೆ ಉಡುತ್ತಿರುವ ಅತ್ತೆ
ಇದೆಲ್ಲವೂ ಸೀರಿಯಲ್ ಕತೆಯಾದರೆ, ಶಕುಂತಲಾದೇವಿಗೆ ನಿಜವಾಗಲೂ ಹುಷಾರಿಲ್ವಾ ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ಯಾಕೆಂದರೆ, ಶಕುಂತಲಾ ದೇವಿ ಉಡುತ್ತಿರುವ ಸೀರೆ ಉಲ್ಟಾ ಆಗಿದೆ. ಉಲ್ಟಾ ಸೀರೆಯನ್ನು ಒಂದು ಸೀನ್ ಅಥವಾ ಒಂದು ಎಪಿಸೋಡ್ ನಲ್ಲಿ ಉಟ್ಟಿದ್ದರೆ, ಮಿಸ್ಟೇಕ್ ಎನ್ನಬಹುದಿತ್ತು. ಆದರೆ, ಶಕುಂತಲಾ ಕಳೆದ ವಾರ ಬಂದ ಅಷ್ಟು ಎಪಿಸೋಡ್ ನಲ್ಲೂ ಸೀರೆಯನ್ನು ಉಲ್ಟಾ ಧರಿಸಿದ್ದಾರೆ. ಅಲ್ಲದೇ, ಇಂದು ಪ್ರಸಾರವಾದ ಎಪಿಸೋಡ್ ನಲ್ಲಿ ಪಿಂಕ್ ಸೀರೆ ನ ಧರಿಸಿದ್ದು.ಇದೂ ಕೂಡ ಉಲ್ಟಾಗಿದೆ. ಯಾಕೆ ಹೀಗೆ ಸೀರೆ ಉಲ್ಟಾ ಉಡುತ್ತಿದ್ದಾರೆ ಎಂಬುದು ಅರ್ಥವಾಗದೇ ವೀಕ್ಷಕರು ಫುಲ್ ಕನ್‌ಫ್ಯೂಸ್ ಆಗಿದ್ದಾರೆ. ಭೂಮಿಕಾ ನಿಮ್ಮ ಅತ್ತೆಗೆ ಸೀರೆ ಸರಿಯಾಗಿ ಉಡುವುದಕ್ಕೆ ಹೇಳಿ ಎಂದು ಕಮೆಂಟ್ ಗಳ ಸುರಿಮಳೆಗೈದಿದ್ದಾರೆ. ಉಲ್ಟಾ ಸೀರೆ ಉಡುತ್ತಿರುವುದು ಶೂಟಿಂಗ್ ಸೆಟ್ ನಲ್ಲಿ ಯಾರಿಗೂ ಗೊತ್ತಾಗುತ್ತಿಲ್ವಾ..? ಅಥವಾ ಎಲ್ಲರೂ ಗೊತ್ತಿದ್ದು ಬೇಕಂತಲೇ ಸುಮ್ಮನಿದ್ದಾರಾ ಎಂಬುದು ಗೊತ್ತಿಲ್ಲ.


Click it and Unblock the Notifications











