Amruthadhaare ; ನಿಧಾನವಾಗಿ ತನ್ನ ಆಟ ಶುರು ಮಾಡಿದ ಶಕುಂತಲಾ : ಒಡೆದು ಹೋಗುತ್ತಾ ಮನೆ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥ ಮನೆ ಬಾಗಿಲಿಗೆ ಬಂದಿದ್ದಾರೆ. ಅಜ್ಜಿಗೆ ಇದು ಸ್ವಲ್ಪವೂ ಇಷ್ಟವಾಗಿಲ್ಲ. ಪಾರ್ಥನಿಗೆ ಬೈಯುತ್ತಾರೆ.ಮನೆಯವರಿಗೆ ಹೇಳದೇ, ನಿಮಗೆ ಇಷ್ಟ ಬಂದ ಹಾಗೆ ಮದುವೆ ಮಾಡಿಕೊಂಡು ಬಂದಿದ್ದೀರಾ. ಇದೆಲ್ಲಾ ಎಷ್ಟು ಸರಿ. ಜೈದೇವ್ ಮದುವೆ ಕೂಡ ಹೇಗೆಲ್ಲಾ ಆಯ್ತು. ಈಗ ನೀನು ಹೀಗೆ ಮಾಡಿಕೊಂಡು ಬಂದಿದ್ದೀಯಾ. ನಿನಗೆ ಒಳ್ಳೆಯ ಬುದ್ಧಿ ಇದೆ ಅಂತ ನಂಬಿದ್ದೆ. ನನ್ನ ನಂಬಿಕೆಯನ್ನೆಲ್ಲಾ ಸುಳ್ಳು ಮಾಡಿಬಿಟ್ಟೆ ಎಂದು ಅಜ್ಜಿ ಪಾರ್ಥನಿಗೂ ಅಪೇಕ್ಷಾಳಿಗೂ ಬೈಯುತ್ತಾರೆ.

ಮನೆಯೊಳಗೆ ಬಂದ ಅಪೇಕ್ಷಾ

ಗೌತಮ್ ಅಜ್ಜಿಗೆ ಸಮಾಧಾನ ಮಾಡಿ. ಇದಕ್ಕೆಲ್ಲಾ ತಾನೇ ಕಾರಣ ಎಂದು ಹೇಳುತ್ತಾನೆ. ಅಜ್ಜಿಯನ್ನು ಸಮಾಧಾನಗೊಳಿಸುತ್ತಾನೆ. ಜೊತೆಗೆ ಶಕುಂತಲಾ ಕೂಡ ಇಬ್ಬರನ್ನೂ ಮನೆಯೊಳಗೆ ಕರೆದುಕೊಳ್ಳಲು ಮುಂದಾಗುತ್ತಾಳೆ. ಮಲ್ಲಿ ಮತ್ತು ಭೂಮಿಕಾ ಇಬ್ಬರೂ ಆರತಿಯನ್ನು ತೆಗೆಯುತ್ತಾರೆ. ಅಪೇಕ್ಷಾ ಸೇರನ್ನು ಒದ್ದು ಒಳಗೆ ಬರುತ್ತಾಳೆ. ದೇವರಿಗೆ ದೀಪ ಹಚ್ಚಿ ಮನೆಯವರಿಂದ ಆಶೀರ್ವಾದವನ್ನು ಪಡೆದುಕೊಳ್ಳುತ್ತಾಳೆ. ಭೂಮಿಕಾ ಬೇಸರ ಮಾಡಿಕೊಂಡು ರೂಮಿಗೆ ಹೋಗುತ್ತಾಳೆ. ಅಪೇಕ್ಷಾ ಮನೆಯಲ್ಲಿ ಹಾಲು ಉಕ್ಕಿಸಲು ಮುಂದಾಗುತ್ತಾಳೆ. ಅಪೇಕ್ಷಾ ಗ್ರಹಚಾರವೋ ಅಥವಾ ಅಪಾಯದ ಮುನ್ಸೂಚನೆಯೂ ಹಾಲು ಒಡೆದು ಹೋಗುತ್ತದೆ. ಶಕುಂತಲಾ ಮತ್ತೆ ಬೇರೆ ಹಾಲನ್ನು ತರಿಸುತ್ತಾಳೆ. ಆ ಹಾಲು ಕೂಡ ಒಡೆದು ಹೋಗುತ್ತದೆ. ಇದರಿಂದ ಅಜ್ಜಿಗೆ ಬಹಳ ಬೇಸರವಾಗುತ್ತದೆ.

Amruthadhaare Serial 17 August episode written update

ಅಪೇಕ್ಷಾಳನ್ನು ಕಂಡು ಸಿಟ್ಟು ಮಾಡಿಕೊಂಡ ಜೈದೇವ್..!

ಅಜ್ಜಿ ಭೂಮಿಕಾಳನ್ನು ಕರೆದು ಅಪಾಯದ ಬಗ್ಗೆ ಹೇಳುತ್ತಾರೆ. ಈ ಮನೆಯನ್ನು ನೀನೇ ನಿಭಾಯಿಸಿಕೊಂಡು ಹೋಗಬೇಕು. ನನಗೆ ಪಾರ್ಥ ಮತ್ತು ಅಪೇಕ್ಷಾ ಮೇಲೆ ಬೇಸರವಿಲ್ಲ ಎಂದು ಹೇಳುತ್ತಾರೆ. ಇನ್ನು ಜೈದೇವ್ ಮನೆಗೆ ಬಂದ ಕೂಡಲೇ ಮಲ್ಲಿ ಮದುವೆ ನಡೆದ ಬಗ್ಗೆ ಹೇಳುತ್ತಾಳೆ. ಪಾರ್ಥ ಮತ್ತು ಅಪೇಕ್ಷಾಳನ್ನು ಮಾತನಾಡಿಸುವುದಕ್ಕೆ ಕರೆದುಕೊಂಡು ಹೋಗುತ್ತಾಳೆ. ಜೈದೇವ್ ಗೆ ಸ್ವಲ್ಪವೂ ಇಷ್ಟ ಇರುವುದಿಲ್ಲ. ಆದರೂ ನಾಮಕಾವಾಸ್ತೆಗೆ ಬಂದು ಮಾತನಾಡಿಸುತ್ತಾನೆ. ಹಳೆಯದನ್ನೆಲ್ಲಾ ಮರೆತು ಬಿಟ್ಟು ಹೊಸ ಜೀವನ ಶುರು ಮಾಡಿ ಎಂದು ವಿಶ್ ಮಾಡುತ್ತಾನೆ. ಪಾರ್ಥ ಕೂಡ ತಾನು ಹೇಳದೇ ಮದುವೆಯಾಗಿದ್ದಕ್ಕೆ ಕ್ಷಮೆ ಕೇಳುತ್ತಾನೆ. ಜೈದೇವ್ ಮನದೊಳಗೆ ನಿಮಗೆ ಮುಂದೆ ಇದೆ ಗ್ರಹಚಾರ ಎಂದುಕೊಂಡು ಸೀದಾ ಶಕುಂತಲಾ ಬಳಿ ಹೋಗಿ ತನ್ನ ಕೋಪವನ್ನು ತೋರಿಸುತ್ತಾನೆ.

ಮದುವೆಯ ಹಿಂದಿನ ಸತ್ಯ ತಿಳಿದ ಭೂಮಿಕಾ

ಶಕುಂತಲಾ ಜೈದೇವ್ ಗೆ ಬೈಯುತ್ತಾಳೆ. ನೀನು ಮಾಡಿಕೊಂಡ ತಪ್ಪಿನಿಂದ ಅಪೇಕ್ಷಾ ಕೈ ತಪ್ಪಿದ್ದು. ಈಗ ಅವರಿಬ್ಬರ ಮದುವೆ ಆಗಿದೆ. ಬಾಯಿ ಮುಚ್ಚಿಕೊಂಡು ಇರೋದನ್ನ ಕಲಿ. ಎಡವಟ್ಟು ಮಾಡಿದರೆ ನಾನೇ ನಿನ್ನನ್ನು ಮನೆಯಿಂದ ಆಚೆ ಹಾಕಬೇಕಾಗುತ್ತದೆ ಎಂದು ವಾರ್ನಿಂಗ್ ಕೊಡುತ್ತಾಳೆ. ಇತ್ತ ಭೂಮಿಕಾ ಗೌತಮ್ ಬಳಿ ಏನಾಯ್ತು ಎಂದು ಕೇಳಿದ್ದಕ್ಕೆ, ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾನೆ. ಅಮ್ಮ ನನ್ನನ್ನು ಕೇಳಿಕೊಂಡಾಗ ನನಗೂ ಬೇರೆ ದಾರಿ ಇರಲಿಲ್ಲ. ಹಾಗಾಗಿ ಎಲ್ಲಾ ಜವಾಬ್ದಾರಿಯನ್ನು ತನ್ನ ಮೇಲೆ ಹಾಕಿಕೊಳ್ಳಬೇಕಾಯ್ತು ಎಂದು ಹೇಳುತ್ತಾನೆ.

amruthadhaare-serial-17-august-episode-written-update

ಒಂದೊಂದಾಗಿಯೇ ಶಕುಂತಲಾ ಆಟಗಳು ಶುರು

ಭೂಮಿಕಾ ಸೀದಾ ಶುಕುಂತಲಾ ಬಳಿ ಹೋಗಿ ಮೊದಲು ಮದುವೆ ಬೇಡ ಎಂದವರೂ ನೀವೆ. ಈಗ ಸಪೋರ್ಟ್ ಮಾಡಿ ಮದುವೆ ಮಾಡಿದ್ದೂ ನೀವೆ. ಯಾಕೆ ಹೀಗೆ ಮಾಡಿದ್ದು ಎಂದು ವಿಚಾರಿಸುತ್ತಾಳೆ. ಶಕುಂತಲಾ ಮಕ್ಕಳ ಭವಿಷ್ಯಕ್ಕಾಗಿ ಹೀಗೆ ಮಾಡಬೇಕಾಯ್ತು ಎಂದು ನಾಟಕ ಮಾಡುತ್ತಾಳೆ. ಬಳಿಕ ಅಪೇಕ್ಷಾಳಿಗೆ ಭೂಮಿಕಾ ನಿನ್ನನ್ನು ಈ ಮನೆಗೆ ತಂದುಕೊಳ್ಳಲು ಒಪ್ಪಲಿಲ್ಲ ಎಂಬಂತೆ ತಿಳಿಯುವ ಹಾಗೆ ಮಾಡಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X