Amruthadhaare ; ಜೀವನ್-ಮಹಿಮಾ ಮನೆಯ ಗೃಹಪ್ರವೇಶಕ್ಕೆ ಬಂದ ದಿವಾನ್ ಕುಟುಂಬ..!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಿಗೆ ಬೇಸರವಾಗಿದೆ. ಪತಿ ಗೌತಮ್ ಮನೆಗೆ ಬಂದ ತಂಗಿ ಮಗಳಾದ ಲಕ್ಷ್ಮೀಯನ್ನು ತುಂಬಾ ಹಚ್ಚಿಕೊಂಡಿದ್ದಾನೆ. ಹೀಗಾಗಿ ಹಗಲಿನಲ್ಲಿ ಕೂಡ ಲಚ್ಚಿ ಜೊತೆಗೆ ಆಟವಾಡುವ ಗೌತಮ್, ರಾತ್ರಿ ವೇಳೆಯೂ ಸೊಸೆಯ ಜೊತೆಗೆ ಮಲಗುತ್ತಿದ್ದಾನೆ. ಇದರಿಂದ ಭೂಮಿಕಾ ಬೇಸರ ಮಾಡಿಕೊಂಡಿದ್ದಾಳೆ. ಇನ್ನು ಭೂಮಿಕಾಳ ಬೇಸರಕ್ಕೆ ಕಾರಣ ತಿಳಿಯಲು ಗೌತಮ್ ಸಾಹಸವನ್ನೇ ಮಾಡಿದ್ದು, ಹೆಂಡತಿ ಮನಸ್ಸನ್ನು ಅರಿತು ತನ್ನ ತಪ್ಪಿಗೆ ಕ್ಷಮೆಯನ್ನೂ ಕೇಳಿದ್ದಾನೆ.
ದ್ವೇಷದಿಂದ ಹಟ ಮಾಡಿದ ಅಪೇಕ್ಷಾ
ಜೀವನ್ ಮನೆ ಕಟ್ಟಿಸಿದ್ದು, ಗೃಹಪ್ರವೇಶಕ್ಕೆ ಹೊರಡಲು ಮನೆಯವರೆಲ್ಲಾ ರೆಡಿಯಾಗಿದ್ದಾರೆ. ಶಕುಂತಲಾ ತನಗೆ ಬೇರೆ ಕೆಲಸವಿದ್ದು, ಮುಗಿಸಿಕೊಂಡು ಬರುವುದಾಗಿ ಹೇಳಿದ್ದಾಳೆ. ಇನ್ನು ಅಪೇಕ್ಷಾಳಿಗೆ ತನ್ನ ತವರು ಮನೆಯ ಬಗ್ಗೆ ಬೇಸರ ಹೊಂದಿದ್ದಾರೆ. ತನ್ನ ಮದುವೆಯ ಸಂದರ್ಭದಲ್ಲಿ ಯಾರೂ ಸಪೋರ್ಟ್ ಮಾಡಲಿಲ್ಲ ಎಂದು ಬೇಸರಗೊಂಡಿದ್ದಾಳೆ. ಹೀಗಾಗಿ ಅಪೇಕ್ಷಾ ಗೃಹಪ್ರವೇಶಕ್ಕೆ ಬರೊಲ್ಲ ಎಂದು ಹೇಳಿ ಇನ್ವಿಟೇಷನ್ ಸುಟ್ಟು ಹಾಕಿದ್ದಾಳೆ. ಇದರಿಂದ ಪಾರ್ಥನಿಗೆ ಬೇಸರವಾಗಿದೆ. ಮನೆಯವರ ಬಳಿ ಅಪ್ಪಿಗೆ ಹುಷಾರಿಲ್ಲ ಎಂದು ಸುಳ್ಳು ಹೇಳಿ ಕಷ್ಟಪಡುತ್ತಾನೆ.

ಶಕುಂತಲಾ ಮಾತಿಗೆ ಅಪ್ಪಿ ಫುಲ್ ಚೇಂಜ್
ಪಾರ್ಥ ತಲೆ ಕೆಡಿಸಿಕೊಂಡು ಕುಳಿತಿರುತ್ತಾನೆ. ಅಪೇಕ್ಷಾ ಮನೆಯಲ್ಲೇ ಇರುವುದನ್ನು ಗಮನಿಸಿದ ಶಕುಂತಲಾ ವಿಚಾರಿಸುತ್ತಾಳೆ. ನನಗೆ ಇಷ್ಟವಿಲ್ಲ ನಾನು ಗೃಹಪ್ರವೇಶಕ್ಕೆ ಹೋಗುವುದಿಲ್ಲ ಎಂದು ಅಪ್ಪಿ ಹಠ ಮಾಡುತ್ತಾಳೆ. ಆಗ ಶಕುಂತಲಾ ನೈಸ್ ಆಗಿ ಮಾತನಾಡುತ್ತಾಳೆ. ನೀನು ಹೋಗು. ಅಲ್ಲಿ ಭೂಮಿಕಾ ಮತ್ತು ನಿನ್ನ ತವರು ಮನೆಯವರಿಗೆ ಅವಮಾನವಾಗುವಂತೆ ಮಾಡು ಆಗಲೇ ಸರಿ ಹೋಗುವುದು. ಇಲ್ಲದೇ ಹೋದರೆ ನಿನ್ನನ್ನು ಅವರು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ ಎಂದು ಬುದ್ಧಿ ಹೇಳುತ್ತಾಳೆ. ದಡ್ಡಿಯಂತೆ ಶಕುಂತಲಾ ಮಾತನ್ನು ಖೇಳಿದ ಅಪೇಕ್ಷಾ ರೆಡಿಯಾಗುತ್ತಾಳೆ. ಪಾರ್ಥನ ಬಳಿ ಬಂದು ಇದು ನನ್ನ ತವರು ಮನೆಯ ಕಾರ್ಯಕ್ರಮ ನಾನು ಹೋಗಲೇಬೇಕು ಬನ್ನಿ ಹೋಗೋಣ ಎಂದಾಗ., ಪಾರ್ಥನಿಗೆ ತಲೆ ಕಟ್ಟು ಹೋಗುತ್ತದೆ. ಬಳಿಕ ಅಪೇಕ್ಷಾ ಪಾರ್ಥನನ್ನು ಕ್ಷಮೆ ಕೇಳಿ ಗೃಹಪ್ರವೇಶಕ್ಕೆ ಹೊರಡುತ್ತಾಳೆ.
ಸಾಲವಿಲ್ಲದೇ ಮನೆ ಕಟ್ಟಿರುವ ಜೀವ
ಇತ್ತ ಜೀವ ಮನೆ ಕಟ್ಟಿರುವುದನ್ನು ನೋಡಿ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಸದಾಶಿವ ಒಬ್ಬ ಮಿಡಲ್ ಕ್ಲಾಸ್ ಕುಟುಂಬದವರು ಇವರ ಮಗ ಇಷ್ಟು ದೊಡ್ಡ ಮನೆಯನ್ನು ಹೇಗೆ ಕಟ್ಟಿದರು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದಾಶಿವ ಇದಕ್ಕೆ ನನ್ನ ಮಗ ಒಂದು ರೂಪಾಯಿಯೂ ಸಾಲವಿಲ್ಲದೇ ಕಟ್ಟಿದ್ದಾನೆ. ಮನೆ ಕಟ್ಟಿದ ವಿಚಾರವೇ ನಮಗೆ ಗೊತ್ತಿಲ್ಲ. ನಿರ್ಮಾಣ ಮುಗಿದ ಬಳಿಕವೇ ತಿಳಿಸಿದ್ದು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಕೆಲವೇ ದಿನಗಳಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಮನೆಗೆ ಜೀವನ್ ಒಡೆಯನಾಗಿದ್ದಾನೆ. ಇದು ಒಂದು ಕಡೆ ಹೆಮ್ಮೆಯ ವಿಚಾರವಾಗಿದ್ದು, ಮತ್ತೊಂದು ಕಡೆ ಜೀವನ್ ಈ ಗೆಲುವಿನ ಹಿಂದೆ ಇರುವ ರಹಸ್ಯದ ಬಗ್ಗೆ ಎಲ್ಲರಿಗೂ ಅನುಮಾನ ಮೂಡಿರುವುದಂತೂ ಸತ್ಯ.
ಜೀವನ್ ಗುಣದಲ್ಲಿ ಸಾಕಷ್ಟು ಬದಲಾವಣೆಗಳು
ಇನ್ನು ಜೀವನ್ ಮೊದಲಿನಂತಿಲ್ಲ. ಸಾಕಷ್ಟು ಬದಲಾಗಿದ್ದಾನೆ. ಇದಕ್ಕೆ ಜಯರಾಂ ಕಾರಣ ಎಂಬುದು ಸ್ಪಷ್ಟವಾಗಿದೆ. ಬ್ಯುಸಿನೆಸ್ ಆರಂಭಿಸಿದ ಕೆಲವೇ ತಿಂಗಳಲ್ಲಿ ಜೀವನ್ ಕೋಟಿ ಬೆಲೆ ಬಾಳುವ ಮನೆಗೆ ಒಡೆಯನಾಗಿದ್ದಾನೆ. ಜಯರಾಂ ಬೇಕಂತಲೇ ಜೀವನ್ ದಾರಿಯನ್ನು ತಪ್ಪಿಸಿದ್ದಾನೆ. ಈ ವಿಚಾರ ಈಗ ಗೌತಮ್ ಗೆ ಗೊತ್ತಾಗಿದ್ದು, ಪ್ರತಿಯೊಬ್ಬರೂ ಶಾಕ್ ಆಗಿದ್ದಾರೆ. ಇದರಿಂದ ಗೌತಮ್, ಭೂಮಿಕಾ, ಮಹಿಮಾ, ಸದಾಶಿವ ಮತ್ತು ಮಂದಾಕಿನಿ ಹೇಗೆ ರೆಸ್ಪಾಂಡ್ ಮಾಡುತ್ತಾರೆ. ಮತ್ತು ಈ ಸಂದರ್ಭವನ್ನು ಶಕುಂತಲಾ, ಅಪೇಕ್ಷಾ ಹೇಗೆ ತಮಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











