Amruthadhaare ; ಅತ್ತೆಯ ಕೋಪ, ಸೊಸೆಯ ಮನೆಯವರ ಮೇಲೆ ಆರೋಪ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಜೀವನ್ ನನ್ನು ಮಿಸ್ ಮಾಡಿಕೊಳ್ಳುತ್ತಿರುತ್ತಾಳೆ. ಫೋನ್ ಕಾಲ್ ಗೂ ರೆಸ್ಪಾನ್ಸ್ ಮಾಡದೇ ಇದ್ದಿದ್ದಕ್ಕೆ ಜೀವನ್ ಗೆ ಮಹಿಮಾ ಬೈಯುತ್ತಾಳೆ. ಎಲ್ಲಾ ಕೆಲಸವನ್ನು ನೀನೊಬ್ಬನೇ ಮಾಡಿದರೆ ಹೇಗೆ, ಕೆಲಸದವರನ್ನು ಸೇರಿಸಿಕೋ ಎಂದು ಬುದ್ದಿ ಹೇಳುತ್ತಾಳೆ. ನನಗೂ ಸ್ವಲ್ಪ ಸಮಯ ಕೊಡು ಎಂದೆಲ್ಲಾ ಮಾತನಾಡುತ್ತಾಳೆ. ಈ ಮಾತುಗಳೆಲ್ಲವೂ ಗೌತಮ್ ಸಾಲ ಕೊಟ್ಟಿರುವವರೆಗೂ ಹೋಗಿ ಇಬ್ಬರೂ ಕಿತ್ತಾಡಿಕೊಳ್ಳುತ್ತಾರೆ. ಸ್ವಲ್ಪ ಸಮಯದ ಬಳಿಕ ಇಬ್ಬರು ಸರಿ ಹೋಗುತ್ತಾರೆ.


ಭೂಮಿಕಾಳ ಮೇಲೆ ಜೀವ ಇಟ್ಟಿರುವ ಗೌತಮ್

ಇನ್ನು ಭೂಮಿಕಾ ಗೌತಮ್ ಗಾಗಿ ಪಾಯಸವನ್ನು ಮಾಡಿರುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ಅಪರ್ಣಾ ಮತ್ತು ಆನಂದ್ ಬರುತ್ತಾರೆ. ಗೌತಮ್ ಮತ್ತು ಭೂಮಿಕಾ ಬಾಂಧವ್ಯವನ್ನು ನೋಡಿ ರೇಗಿಸುತ್ತಾರೆ. ಅಪರ್ಣಾ ಮತ್ತು ಆನಂದ್ ತಮ್ಮಿಬ್ಬರ ನಡುವಿನ ಸಂಬಂಧಕ್ಕೆ ಅಪರ್ಣಾಳ ಅನುಮಾನವೇ ಅಡ್ಡಿ ಎಂದು ಆನಂದ್ ಹೇಳುತ್ತಾನೆ. ಆಗ ಅಪರ್ಣಾ ಕೋಪ ಮಾಡಿಕೊಳ್ಳುತ್ತಾಳೆ. ಗೌತಮ್ ಮತ್ತು ಭೂಮಿಕಾ ಇಬ್ಬರನ್ನೂ ಸಮಾಧಾನಪಡಿಸುತ್ತಾರೆ. ಇವರಿಬ್ಬರು ಹೊರಟ ಬಳಿಕ ತಮ್ಮಿಬ್ಬರ ಬಾಂಧವ್ಯದ ಬಗ್ಗೆ ಗೌತಮ್ ಮತ್ತು ಭೂಮಿಕಾ ಮಾತನಾಡುತ್ತಾರೆ. ಆಗ ಗೌತಮ್ ನಿಮ್ಮ ಮೇಲೆ ನಾನು ಪ್ರಾಣವನ್ನೇ ಇಟ್ಟುಕೊಂಡಿದ್ದೇನೆ ಎಂದು ಭಾವನಾತ್ಮಕವಾಗಿ ಭೂಮಿಕಾಳಿಗೆ ಹೇಳುತ್ತಾನೆ.

amruthadhaare-serial-17-july-episode-written-update

ಪಾರ್ಥನನ್ನು ಹೊಗಳಿದ ಮಂದಾಕಿನಿ

ಇತ್ತ ಪಾರ್ಥ ಶಾಲೆಯಲ್ಲಿ ಹುಡುಗರ ಜೊತೆಯೇ ಕುಳಿತು ಅವರು ಕೊಟ್ಟ ಅನ್ನ ಹಾಗೂ ಚಪಾತಿಯನ್ನೇ ತಿನ್ನುತ್ತಾನೆ. ಇದನ್ನೆಲ್ಲಾ ಗಮನಿಸುವ ಲಕ್ಷ್ಮೀಕಾಂತ ಮಾಹಿತಿ ಪಡೆದಿದ್ದಲ್ಲದೇ ಊಟವನ್ನು ಶಕುಂತಲಾ ಬಳಿ ತೆಗೆದುಕೊಂಡು ಹೋಗುತ್ತಾನೆ. ಇನ್ನು ಮಂದಾಕಿನಿ ಮನೆಯಲ್ಲಿ ಎಲ್ಲರೂ ಕೂತು ಮಾತನಾಡುತ್ತಿರುತ್ತಾರೆ. ಆಗ ಪಾರ್ಥನ ವಿಚಾರ ಬರುತ್ತದೆ. ಮಂದಾಕಿನಿ, ಪಾರ್ಥ ತುಂಬಾ ಒಳ್ಳೆಯ ಹುಡುಗ. ಅವನನ್ನು ಮದುವೆಯಾಗುವ ಹುಡುಗಿ ಬಹಳ ಪುಣ್ಯ ಮಾಡಿದ್ದಾಳೆ ಎಂದು ಮಾತನಾಡಿಕೊಳ್ಳುತ್ತಾರೆ. ಈ ಮಾತುಗಳನ್ನು ಕೇಳುವ ಸದಾಶಿವನಿಗೆ ಕೋಪ ಬರುತ್ತಿರುತ್ತದೆ. ಮನದೊಳಗೆ ಬೈಯುತ್ತಿರುತ್ತಾನೆ.

ಸೊಸೆ ಮನೆಯವರ ಮೇಲೆ ಅತ್ತೆಯ ಆರೋಪ

ಲಕ್ಷ್ಮೀಕಾಂತ ಪಾರ್ಥ ತಿನ್ನುತ್ತಿರುವ ಊಟ, ಹಾಗೂ ಅವನಿರುವ ಸ್ಥಿತಿಯ ಬಗ್ಗೆ ಶಕುಂತಲಾಳಿಗೆ ಹೇಳುತ್ತಾನೆ. ಇದನ್ನೆಲ್ಲಾ ಕೇಳಿದ ಶಕುಂತಲಾಳಿಗೆ ಕೋಪ ಬರುತ್ತದೆ. ಭೂಮಿಕಾಳಿಂದಲೇ ಇದೆಲ್ಲವೂ ಆಗುತ್ತಿದೆ. ನನ್ನ ಮಗ ತಂಗಳು ಅನ್ನವನ್ನು ತಿನ್ನುವಂತಾಗಿದೆ ಎಂದು ಸಿಟ್ಟು ತೋರಿಸುತ್ತಾಳೆ. ಸೀದಾ ಭೂಮಿಕಾ ಬಳಿ ಹೋಗಿ ಬೈಯ್ಯಲು ಶುರು ಮಾಡುತ್ತಾಳೆ. ನಿನಗೆ ಅಧಿಕಾರ ಸಿಕ್ಕಿರುವುದಕ್ಕೆ ಅಹಂಕಾರ ಬಂದಿದೆ. ಸಿರಿವಂತಿಕೆಯ ರುಚಿ ನಿನಗೆ ಕೊಬ್ಬು ಬರುವಂತೆ ಮಾಡಿದೆ. ನಿಮ್ಮ ಕುಟುಂಬದವರನ್ನೆಲ್ಲಾ ಈ ಮನೆಗೆ ಕರೆದುಕೊಂಡು ಬರುವ ಯೋಚನೆ ಮಾಡಿದ್ದೀಯಾ. ಅಪೇಕ್ಷಾಳನ್ನು ನನ್ನ ಮಗ ಪಾರ್ಥನ ಹಿಂದೆ ಬಿಟ್ಟಿದ್ದೀಯಾ ಎಂದು ಬೈಯುತ್ತಾ ಆರೋಪಿಸುತ್ತಾಳೆ.

amruthadhaare-serial-17-july-episode-written-update

ಭೂಮಿಕಾಳಿಗೆ ಸಾಕ್ಷಿ ತೋರಿಸಿದ ಶಕುಂತಲಾ

ಶಕುಂತಲಾ ಮಾತಿಗೆ ಭೂಮಿಕಾ ಸುಮ್ಮನಿರದೇ ನನ್ನ ಕುಟುಂಬದ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಾಳೆ. ಆಗ ಶಕುಂತಲಾ, ಪಾರ್ಥ ಮತ್ತು ಅಪೇಕ್ಷಾ ಒಟ್ಟಿಗೆ ಇರುವ ವೀಡಿಯೋವನ್ನು ತೋರಿಸುತ್ತಾಳೆ. ನಾನು ಎಲ್ಲಾ ಸಾಕ್ಷಿ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಈಗ ನಿನ್ನ ಮಾತು ನಿಂತು ಹೋಯ್ತಾ. ನಿನ್ನಂತಹ ಚೀಪ್ ಮನಸ್ಥಿತಿ ಇರುವವರರನ್ನು ನಾನು ನೋಡೇ ಇಲ್ಲ ಎಂದು ಹೇಳುತ್ತಾಳೆ. ಭೂಮಿಕಾಳಿಗೆ ಶಕುಂತಲಾಳ ಆರೋಪಗಳನ್ನು ಹೊತ್ತುಕೊಳ್ಳಲು ಇಷ್ಟವಿರುವುದಿಲ್ಲ. ಹೀಗಾಗಿ ಭೂಮಿಕಾ ಅತ್ತೆಗೆ ಮೇಲೆ ಕೂಗಾಡಲು ಮುಂದಾಗುತ್ತಾಳೆ. ಆದರೆ, ಇವರಿಬ್ಬರ ಈ ಜಗಳ ಎರಡೂ ಕುಟುಂಬದ ಸ್ವಾರಸ್ಯವನ್ನು ಹಾಳು ಮಾಡುತ್ತದೆಯಾ ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X