Amruthadhaare ; ಜೈದೇವನ ಬಗ್ಗೆ ಗೊಂದಲ ಸೃಷ್ಟಿಸಿಕೊಂಡ ಭೂಮಿಕಾ : ಅಣ್ಣನಿಗೆ ಮೋಸ ಮಾಡಿರುವ ತಮ್ಮ..!
ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಮತ್ತು ಮಹಿಮಾ ಚಿಕ್ಕ-ಪುಟ್ಟ ವಿಚಾರಕ್ಕೂ ಇತ್ತೀಚೆಗೆ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಒಬ್ಬರಿಗೊಬ್ಬರು ವೈಮನಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದು ಮಂದಾಕಿನಿಗೂ ಆತಂಕವನ್ನು ಉಂಟು ಮಾಡಿದೆ. ಇವರಿಬ್ಬರೂ ಹೀಗೆ ಸಣ್ಣ-ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರೆ ಮುಂದೆ ಜೀವನ ಬಲು ಕಷ್ಟ ಎಂದು ಗಾಬರಿಗೊಂಡಿದ್ದಾಳೆ. ಮಂದಾಕಿನಿ ಮಹಿಮಾಳಿಗೆ ಬುದ್ಧಿ ಹೇಳಿದರೂ ಕೇಳದೇ ಇದ್ದಾಗ ಭೂಮಿಕಾ ಮಾತನ್ನು ಕೇಳಬಹುದು ಎಂದು ಭಾವಿಸಿ, ಮಗಳಿಗೆ ಫೋನ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾಳೆ.
ಮಹಿಮಾ ಜೀವನ್ ಜೊತೆ ಭೂಮಿಕಾ ಮಾತು
ಅಮ್ಮನ ಮನೆಗೆ ಬರುವ ಭೂಮಿಕಾ ಅಲ್ಲಿ ಪಾರ್ಥನನ್ನು ನೋಡಿ ಶಾಕ್ ಆಗುತ್ತಾಳೆ. ಪಾರ್ಥ ತನ್ನ ಹಾಗೂ ಅಪೇಕ್ಷಾಳ ಪ್ರೀತಿ ಬಗ್ಗೆ ಮಾತನಾಡಲು ಬಂದಿರುತ್ತಾನೆ. ಭೂಮಿಕಾಳಿಗೆ ಮಹಿಮಾ ಜೊತೆಗೆ ಮಾತನಾಡಬೇಕಿರುವುದರಿಂದ ಪಾರ್ಥನನ್ನು ಬೇಗ ಹೊರಡಲು ಹೇಳುತ್ತಾಳೆ. ಬಳಿಕ ರೂಮಿಗೆ ಹೋಗುತ್ತಾಳೆ. ಅಲ್ಲಿ ಮಹಿಮಾ ಮತ್ತು ಜೀವನ್ ನಾನೊಂದು ತೀರಾ, ನೀನೊಂದು ತೀರಾ ಎಂದು ಕುಳಿತಿರುತ್ತಾರೆ. ಭೂಮಿಕಾ ಏನಾಯ್ತು ಎಂದು ಕೇಳಿ ವಿಚಾರಿಸುತ್ತಾಳೆ. ಆಗ ಮಹಿಮಾ ತನ್ನ ಬೇಸರವನ್ನು ಹಂಚಿಕೊಳ್ಳುತ್ತಾಳೆ. ಜೀವನ್ ತನನ್ನನ್ನು ನೆಗಲೆಕ್ಟ್ ಮಾಡುತ್ತಿರುವುದಾಗಿ ಹೇಳುತ್ತಾಳೆ. ಆಗ ಭೂಮಿಕಾ ಗಂಡ ಹೆಂಡತಿ ನಡುವೆ ಈ ರೀತಿಯ ಚಿಕ್ಕ ವಿಚಾರಗಳು ಸಮಸ್ಯೆ ಅನ್ನು ತರಬಾರದು ಎಂದು ಬುದ್ಧಿ ಹೇಳುತ್ತಾಳೆ. ಇಬ್ಬರೂ ಆಗ ತಮ್ಮ ತಪ್ಪನ್ನು ಒಪ್ಪಿಕೊಂಡು ಸರಿ ಹೋಗುತ್ತಾರೆ.

ಜೈದೇವನ ಬಗ್ಗೆ ಭೂಮಿಕಾಳಿಗೆ ಗೊಂದಲ
ಇನ್ನು ಭೂಮಿಕಾಳಿಗೆ ಜೈದೇವನ ಬಗ್ಗೆ ಕೊಂಚವೂ ನಂಬಿಕೆ ಇಲ್ಲ. ಈಗಲೂ ಜೈದೇವನ ಪ್ರತಿಯೊಂದು ನಡೆಯನ್ನು ಅನುಮಾನಿಸುತ್ತಲೇ ಇರುತ್ತಾಳೆ. ಮಲ್ಲಿ ಮೇಲೆ ಜೈದೇವ ಅಪಾರವಾದ ಪ್ರೀತಿಯನ್ನು ತೋರಿಸುತ್ತಿದ್ದು, ಅದನ್ನೆಲ್ಲಾ ಭೂಮಿಕಾಳ ಕೈಯಲ್ಲಿ ನಂಬಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆಗಾಗ ಮಲ್ಲಿ ಬಳಿ ಜೈದೇವನ ನಡವಳಿಕೆ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಲೇ ಇರುತ್ತಾಳೆ. ಈಗ ಅಜ್ಜಿ ಬಳಿಯೂ ಜೈದೇವನ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಿದ್ದು, ತನಗೇ ಜೈದೇವನ ಬಗ್ಗೆ ಅನುಮಾನವಿದೆ. ತಾನೇ ಆತನ ಬಗ್ಗೆ ತಪ್ಪಾಗಿ ಭಾವಿಸಿದ್ದೀನಿ ಎಂಬಂತೆ ಗೊಂದಲಕ್ಕೆ ಒಳಗಾಗಿದ್ದಾಳೆ.
ಅಣ್ಣನಿಗೆ ಮೋಸ ಮಾಡಿದ ಜೈದೇವ್
ಜೈದೇವ್ ಸ್ವಂತ ಅಣ್ಣ ಗೌತಮ್ ಗೆ ಮೋಸ ಮಾಡಿದ್ದಾನೆ. ಗೌತಮ್ ಕಂಪನಿ ಪಾಲಾಗಬೇಕಿದ್ದ ಟೆಂಡರ್ ಅನ್ನು ಬೇರೆ ಕಂಪನಿಗೆ ಕೊಡಿಸಿದ್ದಾನೆ. ಇದರಿಂದ ಎರಡು ಕೋಟಿ ರೂಪಾಯಿ ಲಂಚವನ್ನು ಕೂಡ ಪಡೆದಿದ್ದಾನೆ. ಆದರೆ, ಈ ವಿಚಾರ ಗೌತಮ್ ಗೆ ಗೊತ್ತಿಲ್ಲ. ತನ್ನ ಮಾವ ಲಕ್ಷ್ಮೀಕಾಂತನ ಬಳಿ ಜೈದೇವ ಈ ವಿಚಾರವನ್ನು ಹೇಳಿಕೊಂಡು ಖುಷಿ ಪಡುತ್ತಿರುತ್ತಾನೆ. ಗೌತಮ್ ಕಂಪನಿಗೆ ಲಾಸ್ ಆಗಿದ್ದೇ ನನಗೆ ಖುಷಿ ಎಂದು ಜಂಬದಿಂದ ಹೇಳಿಕೊಳ್ಳುತ್ತಿರುತ್ತಾನೆ. ಅಲ್ಲದೇ, ಹಣ ಸಿಕ್ಕಿದ್ದಕ್ಕೆ ಪಾರ್ಟಿ ಮಾಡಬೇಕು ಎಂದು ಹೇಳುತ್ತಾನೆ.

ಗೌತಮ್ ಆಫೀಸ್‌ಗೆ ಬಂದ ಜೀವನ್
ಗೌತಮ್ ಕಂಪನಿಯ ಟೆಂಡರ್ ಕೈತಪ್ಪಿ ಹೋಗಿದ್ದರ ಬಗ್ಗೆ ಮಾತನಾಡಲು ಜೀವನ್ ಭಾವನ ಆಫೀಸ್‌ಗೆ ಬರುತ್ತಾನೆ. ಟೆಂಡರ್ ಪಡೆದಿರುವ ಕಂಪನಿಯಲ್ಲಿ ತನ್ನ ಸ್ನೇಹಿತ ಕೆಲಸ ಮಾಡುತ್ತಿದ್ದಾನೆ. ನಿಮಗೆ ಸಹಾಯವಾಗುವುದಾದರೆ ಕರೆಸುತ್ತೇನೆ ಎಂದು ಹೇಳುತ್ತಾನೆ. ತನ್ನ ಕಂಪನಿಯಲ್ಲಿರುವ ವ್ಯಕ್ತಿಯೇ ಮೋಸ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಮಾಡುತ್ತಿರುವ ಗೌತಮ್ ಸತ್ಯ ತಿಳಿಯಲು ಈಗ ಜೀವನ್ ಸಹಾಯ ಪಡೆದಿದ್ದಾನೆ. ಇದರಿಂದ ಜೈದೇವನ ಬಣ್ಣ ಬಯಲಾಗುತ್ತಾ..? ಹಾಗೇನಾದರೂ ಆದರೆ, ಜೈದೇವ್ ಗೆ ಗೌತಮ್ ಏನು ಮಾಡಬಹುದು ಎಂಬ ಕುತೂಹಲ ಮೂಡಿದೆ.


Click it and Unblock the Notifications











