Amruthadhare ; ಮಲ್ಲಿಗೆ ಸೀಮಂತದ ಸಂಭ್ರಮ : ಭೂಮಿಕಾಳಿಗೆ ತಂಗಿ ಬದುಕಿನ ಆತಂಕ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಜೈದೇವ್ ನನ್ನು ದಾರಿಗೆ ತರಬೇಕು. ಮನೆ ಒಡೆಯಬಾರದು. ತನ್ನ ಸಹೋದರರು ಖುಷಿಯಾಗಿರಬೇಕು ಎಂದು ಸಾಕಷ್ಟು ಪ್ರಯತ್ನ ಪಡುತ್ತಿದ್ದಾನೆ. ಆದರೆ, ಜೈದೇವ್ ಮಾತ್ರ ತಾನು ನಡೆದಿದ್ದೇ ದಾರಿ. ತಾನು ಮಾಡಿದ್ದೇ ಸರಿ ಎಂಬಂತೆ ನಡೆದುಕೊಳ್ಳುತ್ತಿದ್ದಾನೆ. ಗೌತಮ್ ಎಷ್ಟೇ ವಾರ್ನಿಂಗ್ ಕೊಟ್ಟರೂ ತಲೆ ಕೆಡಿಸಿಕೊಳ್ಳದೇ ತನ್ನ ದಾರಿಯಲ್ಲೇ ಸಾಗಿದ್ದಾನೆ.ದಿಯಾ ಮತ್ತು ಜೈದೇವ್ ಪದೇ ಪದೇ ಭೇಟಿಯಾಗುತ್ತಿದ್ದರೆ, ಮಲ್ಲಿಗೆ ಸಮಸ್ಯೆ ಆಗುತ್ತದೆ ಎಂದು ಗೌತಮ್ ಗಾಬರಿಯಾಗಿದ್ದಾನೆ. ಹೀಗಾಗಿ ದಿಯಾಳನ್ನು ಬೆಂಗಳೂರಿನಿಂದ ದೆಹಲಿಗೆ ಕಳಿಸುವ ಪ್ಲಾನ್ ಮಾಡಿದ್ದಾನೆ.

ಜೈದೇವ್ ನನ್ನು ಊರಿಗೆ ಕಳಿಸಲು ಪ್ಲಾನ್

ಜೈದೇವ್ ಗೆ ಮತ್ತೆ ವಾರ್ನಿಂಗ್ ಕೊಟ್ಟಿದ್ದಾನೆ. ಇದೇ ಸಂದರ್ಭದಲ್ಲಿ ಮಲ್ಲಿ ತಾತ ಬಂದು ಮೊಮ್ಮಗಳನ್ನು ತನ್ನ ಊರಿಗೆ ಕರೆದುಕೊಂಡು ಹೋಗಲು ಬಯಸಿದ್ದಾರೆ. ಇದನ್ನು ತಿಳಿದ ಗೌತಮ್ ಆದಷ್ಟು ಬೇಗನೇ ಮಲ್ಲಿಗೆ ಸೀಮಂತ ಕಾರ್ಯ ಮುಗಿಸಿ ಊರಿಗೆ ಕಲಿಸಬೇಕು ಎಂದುಕೊಂಡಿದ್ದಾರೆ. ಜೊತೆಗೆ ಜೈದೇವ್ ನನ್ನು ಕಳಿಸಿದರೆ, ದಿಯಾ ಮತ್ತು ಇವನ ಸಂಪರ್ಕ ಕಟ್ ಆಗುತ್ತದೆ ಎಂದು ಭಾವಿಸಿದ್ದು. ಈ ಪ್ಲಾನ್ ಮಾಡಿದ್ದಾನೆ. ಗೆಳೆಯ ಗೌತಮ್ ಪ್ಲಾನ್ ತಿಳಿದ ಆನಂದ್ ಸರಿಯಾಗಿಯೇ ಇದೆ ಎಂದು ಭಾವಿಸಿದ್ದಾನೆ. ಆದರೆ, ಜೈದೇವ್ ಅಲ್ಲೂ ಕೂಡ ಕಿತಾಪತಿ ಮಾಡಲು ಆಲೋಚಿಸಿದ್ದಾನೆ.

amruthadhaare-serial-17-september-episode-written-update

ಬೇಸರ ಹೇಳಿಕೊಂಡ ಪಾರ್ಥ

ಇನ್ನು ಸೀಮಂತ ಕಾರ್ಯವನ್ನು ನಿಲ್ಲಿಸಬೇಕು ಎಂದು ಶಕುಂತಲಾ ಪ್ಲಾನ್ ಮಾಡಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಮನೆಯಲ್ಲಿ ಲಕ್ಷ್ಮೀಕಾಂತ ನಾರದ ಮುನಿಯಂತೆ ಇದ್ದು, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸುದ್ದಿ ಮುಟ್ಟಿಸುತ್ತಾ, ಅಳಿಯ ಜೈದೇವ್ ಕೆಟ್ಟ ಕೆಲಸಗಳು ತಿಳಿದಿದ್ದರೂ ಗಪ್ ಚುಪ್ ಎಂದು ಸುಮ್ಮನಿದ್ದಾನೆ. ಇನ್ನು ಅಪೇಕ್ಷಾ ಮದುವೆಯಾದ ಬಳಿಕ ತುಂಬಾ ಬದಲಾಗಿದ್ದಾಳೆ. ಅತ್ತೆಯ ಮಾತನ್ನು ಕೇಳಿಕೊಂಡು ಅಕ್ಕ ಭೂಮಿಕಾ ಮೇಲೆ ಧ್ವೇಷ ಸಾಧಿಸಲು ಮುಂದಾಗಿದ್ದಾಳೆ. ಪಾರ್ಥ ಅತ್ತಿಗೆ ವಿಷಯ ತೆಗೆದ ಕೂಡಲೇ ಜಗಳ ಮಅಡುವುದು, ಇರಿಟೇಟ್ ಆಗುವುದು ಮಾಡಿಕೊಂಡು ಇಬ್ಬರ ನಡುವೆ ಕಿರಿಕಿರಿ ಸೃಷ್ಟಿಸಿಕೊಂಡಿದ್ದಾರೆ. ಈ ವಿಚಾರವನ್ನು ಪಾರ್ಥ ಅತ್ತಿಗೆ ಬಳಿ ಮನ ಬಿಚ್ಚಿ ಹೇಳಿಕೊಂಡಿದ್ದಾನೆ.

ಪಾರ್ಥನಿಗೆ ಪರಿಹಾರ ನೀಡಿದ ಭೂಮಿಕಾ

ಅಪೇಕ್ಷಾಳಿಗೆ ತನ್ನ ಬಗ್ಗೆ ಧ್ವೇಷ ಬಂದಿರಲು ಕಾರಣವೇನು ಎಂಬುದು ಅರಿಯದ ಭೂಮಿಕಾ, ಮೈದುನನಿಗೆ ಬುದ್ಧಿ ಹೇಳಿದ್ದಾಳೆ. ಅಪೇಕ್ಷಾಳಿಗೆ ನನ್ನ ಹೆಸರು ಕೇಳಿದರೆ ಆಗುವುದಿಲ್ಲ ಎಂದ ಮೇಲೆ ಅವಳ ಬಳಿ ನನ್ನ ಬಗ್ಗೆ ಮಾತನಾಡಲೇಬೇಡ. ನಿನ್ನ ಹಾಗೂ ಅಪೇಕ್ಷಾ ನಡುವೆ ಏನೇ ಆದರೂ ಅದು ಮೂರನೇಯವರಿಗೆ ತಿಳಿಯದಂತೆ ನೋಡಿಕೋ. ನಿನ್ನ ಸಮಸ್ಯೆಯನ್ನು ನೀನೇ ಪರಿಹರಿಸಿಕೊ ಎಂದು ಬುದ್ಧಿ ಮಾತುಗಳನ್ನು ಹೇಳಿದ್ದಾಳೆ. ಈ ಸಲ್ಯೂಷನ್ ಪಾರ್ಥನ ಲೈಫ್ ನಲ್ಲಿ ಹೇಗೆ ವರ್ಕೌಟ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

amruthadhaare-serial-17-september-episode-written-update

ಮಲ್ಲಿಗೆ ಸೀಮಂತದ ಸಂಭ್ರಮ

ಇನ್ನು ಮಲ್ಲಿ ತನ್ನ ಸೀಮಂತ ಎಂದು ಬಹಳ ಖುಷಿಯಾಗಿದ್ದಾಳೆ. ಅಲ್ಲದೇ, ಸೀಮಂತ ಮುಗಿದ ಬಳಿಕ ಪತಿ ಜೊತೆಗೆ ತವರಿಗೆ ಹೋಗುವ ಸಂಭ್ರಮದಲ್ಲಿ ಮಲ್ಲಿ ಇದ್ದಾಳೆ. ಆದರೆ ಭೂಮಿಕಾ ಮಲ್ಲಿಗೆ ಜೈದೇವ್ ಬಗ್ಗೆ ಗಮನ ಕೊಡು, ನಿನ್ನ ಜೊತೆಗೆ ಇರುವಂತೆ ನೋಡಿಕೋ ಎಂದು ಎಚ್ಚರಿಕೆ ಕೊಟ್ಟಿದ್ದು, ಮಲ್ಲಿ ಕೆಂಡಾಮಂಡಲಗೊಂಡಿದ್ದಾಳೆ. ನನ್ನ ಪತಿಗೆ ಯಾರ ಸಂಗವೂ ಇಲ್ಲ. ದಿಯಾ ಸ್ನೇಹಿತೆ ಅಷ್ಟೇ ಎಂದು ಭೂಮಿಕಾ ಮೇಲೆಯೇ ಹಾರಾಡಿದ್ದಾಳೆ. ಮಲ್ಲಿ ಜೈದೇವ್ ನನ್ನು ಅತಿಯಾಗಿ ನಂಬಿದ್ದು, ಇದರಿಂದ ಮುಂದೆ ಸಮಸ್ಯೆ ಅನುಭವಿಸುವುದಂತೂ ಪಕ್ಕಾ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X