Amruthadhaare: ಮಗುವನ್ನು ಕಳೆದುಕೊಂಡು ಈಗ ಚಿಂತಿಸುತ್ತಿರುವ ಮಹಿಮಾ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ಒಬ್ಬರನ್ನೊಬ್ಬರು ಮನಸಾರೆ ಇಷ್ಟಪಡುತ್ತಿದ್ದಾರೆ. ದಿನ ಕಳೆದಂತೆ ಇಬ್ಬರೂ ಕ್ಲೋಸ್ ಆಗುತ್ತಿದ್ದಾರೆ.

ಪ್ರತಿ ದಿನವೂ ಪಾರ್ಥ ಮತ್ತು ಅಪೇಕ್ಷಾ ಭೇಟಿಯಾಗುತ್ತಿದ್ದಾರೆ. ಇಬ್ಬರ ಟೇಸ್ಟ್ ಕೂಡ ಒಂದೇ ಆಗಿದೆ. ಆದರೆ ಇಬ್ಬರೂ ತಮ್ಮ ಪ್ರೀತಿ ನಿವೇದನೆ ಯಾವತ್ತು ಹೊರಗೆ ಹಾಕುತ್ತಾರೋ ಕಾದು ನೋಡಬೇಕಿದೆ.

ಇನ್ನು ಜೀವನ್ ಮತ್ತು ಗೌತಮ್ ಮನೆಯಲ್ಲಿ ಮಹಿಮಾ ಗರ್ಭಿಣಿ ಆಗಿರುವುದಕ್ಕೆ ಸಂಭ್ರಮ ಮನೆ ಮಾಡಿದೆ. ಗೌತಮ್‌ಗಂತೂ ಕೈ-ಕಾಲುಗಳೇ ಕೆಳಗೆ ನಿಲ್ಲುತ್ತಿಲ್ಲ.

Amruthadhaare Serial 17th January episode written update

ವರ್ಕ್ ಆಯ್ತು ಅಶ್ವಿನಿ ಐಡಿಯಾ

ಮಹಿಮಾ ತಾನು ಗರ್ಭಿಣಿ ಎಂಬ ಕಾರಣಕ್ಕೆ ಅವರ ಮನೆಯಲ್ಲಿ ಎಲ್ಲರೂ ರೆಸ್ಟ್ರಿಕ್ಟ್ ಮಾಡುತ್ತಿದ್ದಾರೆ. ಮಹಿಮಾಳಿಗೆ ಇದು ಇಷ್ಟವಾಗುತ್ತಿಲ್ಲ. ಹೀಗಾಗಿ ಅಣ್ಣನ ಜೊತೆಗೆ ಫೋನ್‌ನಲ್ಲಿ ಮಾತನಾಡಿದ್ದು, ತನ್ನ ಮನೆಗೆ ಕರೆಸಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಗೌತಮ್ ಈಗ ಮಹಿಮಾಳಿಗೆ ಸೀಮಂತ ಮಾಡಿಸಿ ತನ್ನ ಮನೆಗೆ ಕರೆಸಿಕೊಳ್ಳಲು ಯೋಚಿಸುತ್ತಿದ್ದಾನೆ. ಆದರೆ ಶಕುಂತಲಾ ಮತ್ತು ಅಶ್ವಿನಿಗೆ ಮಹಿಮಾ ಮನೆಗೆ ಬರುವುದು ಕೊಂಚವೂ ಇಷ್ಟವಿಲ್ಲ. ಏನು ಮಾಡುವುದು ಎಂದು ಯೋಚಿಸಿದ ಅಶ್ವಿನಿ, ಮಹಿಮಾಳನ್ನು ಭೇಟಿ ಮಾಡುತ್ತಾಳೆ. ನೀನು ದಪ್ಪಗಾಗಿದ್ದೀಯಾ? ಒಂದು ಸಲ ಮಗುವಾದರೆ ಮುಗಿದು ಹೋಯ್ತು. ಬ್ಯೂಟಿ ಹಾಳಾಗುತ್ತದೆ. ಅದಕ್ಕೆ ನಅನು ಇನ್ನೂ ಮಗು ಮಾಡಿಕೊಂಡಿಲ್ಲ ಎಂದೆಲ್ಲಾ ಹೇಳಿ ಬರುತ್ತಾಳೆ. ಇದನ್ನು ಕೇಳಿಸಿಕೊಂಡ ಮಹಿಮಾ ಮನಸ್ಸು ಗೊಂದಲಕ್ಕೆ ಈಡಾಗುತ್ತದೆ.

ಅಬಾರ್ಟ್ ಮಾಡಿಸಿದ ಮಹಿಮಾ

ಕೊನೆಗೆ ಸ್ನೇಹಿತನ ಜೊತೆಗೆ ಮಾತನಾಡಿ ತಾನು ಮಗುವನ್ನು ಅಬಾರ್ಟ್ ಮಾಡಿಸಿಕೊಳ್ಳಬೇಕು ಎಂದು ಕೇಳುತ್ತಾಳೆ. ಇದಕ್ಕಾಗಿ ಎರಡು ದಿನ ಚೆನ್ನೈಗೆ ಹೋಗಲು ಪ್ಲಾನ್ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ಬಂದು ಕೇಳಿದಾಗ, ಮಂದಾಕಿನಿ ಸುತಾರಾಂ ಒಪ್ಪುವುದಿಲ್ಲ. ಆಗ ಮಹಿಮಾ ಅಣ್ಣನಿಗೆ ಕರೆ ಮಾಡಿ ತನ್ನ ಕೆರಿಯರ್ ಪ್ರಶ್ನೆ. ತಾನೇ ಹೋಗಬೇಕು. ಸಿಕ್ಕ ಅವಕಾಶವನ್ನು ಬಿಡಬಾರದು ಎಂದು ಕೇಳಿಕೊಳ್ಳುತ್ತಾಳೆ. ಆಗ ಗೌತಮ್, ಮಂದಾಕಿನಿಗೆ ಕರೆ ಮಾಡಿ ಮಹಿಮಾಳನ್ನು ಚೆನ್ನೈಗೆ ಕಳಿಸಿಕೊಡಿ ಎಂದು ಒಪ್ಪಿಸುತ್ತಾನೆ. ಮಹಿಮಾ ಮನೆಯಿಂದ ಹೊರಟವಳೇ ಆಸ್ಪತ್ರೆ ಸೇರಿಕೊಳ್ಳುತ್ತಾಳೆ. ಡಾಕ್ಟರ್ ಕೂಡ ಅಬಾರ್ಷನ್ ಮಾಡಿಸಬೇಡಿ ಎಂದು ಹೇಳಿದರೂ ಕೇಳುವುದಿಲ್ಲ. ಹಿಂದೆ ಮುಂದೆ ಯೋಚಿಸದೇ ಆತುರಕ್ಕೆ ಬಿದ್ದು ಮಗು ತೆಗೆಸಿ ಬಿಡುತ್ತಾಳೆ.

Amruthadhaare Serial 17th January episode written update

ಹಗಲು ರಾತ್ರಿ ಮಗು ಬಗ್ಗೆಯೇ ಆಲೋಚನೆ

ಇತ್ತ ಗೌತಮ್‌ಗೆ ಹಗಲು ರಾತ್ರಿ ಮಗುವಿನದ್ದೇ ಯೋಚನೆಯಾಗಿದೆ. ಕನಸಿನಲ್ಲಿ ಮಹಿಮಾ ಮಗುವಿನ ಬಗ್ಗೆ ಕೆಟ್ಟ ಕನಸನ್ನು ಕಾಣುತ್ತಾನೆ. ಕೆಟ್ಟ ಕನಸ್ಸು ಬಿದ್ದಾಗಿನಿಂದಲೂ ಗೌತಮ್‌ಗೆ ಭಯ ಶುರುವಾಗುತ್ತದೆ. ಮಹಿಮಾ ಅಷ್ಟು ದೂರ ಟ್ರಾವೆಲ್ ಮಾಡಿದ್ದಾಳೆ. ಮುಂದೆ ಏನು ಗತಿಯೋ, ಮಹಿಮಾ ಮತ್ತು ಮಗು ಇಬ್ಬರು ಸೇಫ್ ಆಗಿ ಮನೆಗೆ ವಾಪಸ್ ಬಂದರೆ ಸಾಕು ಎಂದು ಯೋಚಿಸುತ್ತಿರುತ್ತಾನೆ. ಎರಡು ದಿನ ಎಂದು ಹೇಳಿ ಹೋದ ಮಹಿಮಾ ಒಂದೇ ದಿನಕ್ಕೆ ವಾಪಸ್ ಬರುತ್ತಾಳೆ.

ಮಗು ತೆಗೆಸಿ ಚಿಂತೆಗೊಳಗಾದ ಮಹಿಮಾ

ಮಹಿಮಾ ಬೇಗನೇ ಬಂದಿದ್ದಕ್ಕೆ ಎಲ್ಲರೂ ಖುಷಿಪಡುತ್ತಾರೆ. ಇನ್ನು ಮಹಿಮಾ ಫೋನ್ ನಾಟ್ ರೀಚೆಬಲ್ ಆಗಿತ್ತು ಎಂದು ಗೌತಮ್ ಗಾಬರಿಯಾಗಿರುತ್ತಾನೆ. ಹೀಗಾಗಿ ಮಹಿಮಾ ಮನೆಗೆ ಬಂದ ಕೂಡಲೇ ಫೋನ್ ಮಾಡಿ ತನ್ನ ಆತಂಕವನ್ನು ಹೇಳಿಕೊಳ್ಳುತ್ತಾನೆ. ನಿನ್ನ ಹೊಟ್ಟೆಯಲ್ಲಿರುವುದು ನನ್ನ ಅಪ್ಪನೇ ಅಂತ ನಂಬಿದ್ದೀನಿ. ನೀನು ಮತ್ತು ನಿನ್ನ ಮಗು ಇಬ್ಬರೂ ನನಗೆ ಮುಖ್ಯ ಎಂದು ಹೇಳುತ್ತಾನೆ. ಅಣ್ಣನ ಕಾಳಜಿ ಮತ್ತು ಆತಂಕ ನೋಡಿದ ಮಹಿಮಾಳಿಗೆ ಈಗ ಚಿಂತೆ ಶುರುವಾಗಿದೆ. ಆತುರಕ್ಕೆ ಬಿದ್ದು ಅಬಾರ್ಟ್ ಮಾಡಿಸಿಕೊಂಡೆನಾ? ಎಂದು ಯೋಚಿಸುತ್ತಿದ್ದಾಳೆ.

More from Filmibeat

English summary
Amruthadhaare serial today episode; mahima worries about her beauty so she aborted her baby.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X