Amruthadhaare: ಅಪ್ಪನ ಕನಸಿಗೆ ಧ್ವನಿಯಾದ ಮಗಳು: ಭೂಮಿಕಾ ಮಾತಿಗೆ ಸ್ಪಂದಿಸುತ್ತಾನಾ ಗೌತಮ್?
ಗೌತಮ್ ದಿವಾನ್ ಸ್ವಲ್ಪ ತಲೆ ಉಪಯೋಗಿಸಿ ಮದುವೆಯ ದಿನಾಂಕವನ್ನು ಫಿಕ್ಸ್ ಮಾಡಿದ್ದಾನೆ. ಮದುವೆಯ ದಿನಾಂಕ ತಿಳಿದು ಎಲ್ಲರೂ ಖುಷಿ ಪಟ್ಟಿದ್ದಾರೆ. ಇತ್ತ ಶಕುಂತಲಾ, ಮಂದಾಕಿನಿ ಬಳಿ ಮದುವೆ ಬಹಳ ಗ್ರ್ಯಾಂಡ್ ಆಗಿ ನಡೆಯುತ್ತದೆ ನೋಡಿ ಎಂದು ಎಂದು ಹೇಳುತ್ತಾಳೆ. ಪ್ರೆಸ್ಟೀಜ್‌ಗಾಗಿ ಮದುವೆಯನ್ನು ಅದ್ಧೂರಿಯಾಗಿ ಮಾಡುವುದಾಗಿ ಹೇಳುತ್ತಾಳೆ.
ಮದುವೆಗೆ ಅಂದಾಜು ಎಷ್ಟು ಜನ ಬರಬಹುದು ಎಂದು ಕೇಳಿದಾಗ 5-6 ಸಾವಿರ ಎಂದು ಶಕುಂತಲಾ ಹೇಳಿದ ಮಾತು ಕೇಳಿ ಶಾಕ್ ಆಗುತ್ತಾಳೆ. ಈ ಮದುವೆ ಮುಗಿಯುವುದರೊಳಗೆ ನಮಗೆಲ್ಲಾ ಸುಸ್ತಾಗಿ ಬಿಡುತ್ತದೆ ಎಂದು ಹೇಳುತ್ತಾಳೆ. ಮಾತು ಮುಂದುವರೆಸಿ ತಮ್ಮ ಮನೆಯ ಕಡೆಯೂ ಹೆಚ್ಚು ಜನ ಬರುತ್ತಾರೆ ಎಂದು ಬಡಾಯಿ ಕೊಚ್ಚಿಕೊಳ್ಳಲು ಪ್ರಾರಂಭಿಸುತ್ತಾಳೆ. ಇತ್ತ ಭೂಮಿಕಾ ಬಳಿ ಅಪರ್ಣಾ ಬಂದು ಮಾತನಾಡುತ್ತಾಳೆ. ಗೌತಮ್ ಇವತ್ತು ಸ್ಮಾರ್ಟ್ ಆಗಿ ಚೆನ್ನಾಗಿ ಕಾಣಿಸುತ್ತಿದ್ದಾನೆ ಎಂದು ಹೇಳುತ್ತಾಳೆ. ಗೌತಮ್, ಆನಂದ್, ಭೂಮಿಕಾ, ಅಪರ್ಣಾ ನಾಲ್ವರೂ ಸೇರಿ ಮಾತನಾಡುತ್ತಿರುತ್ತಾರೆ.

ಮಾತಿನ ನಡುವೆ ಅಪರ್ಣಾ, ಗೌತಮ್ ಇವತ್ತು ತುಂಬಾ ಚೆನ್ನಾಗಿ ಕಾಣುತ್ತಿದ್ದಾನೆ ಅಂತ ಭೂಮಿಕಾ ಹೇಳುತ್ತಿದ್ದಳು ಎಂದು ಹೇಳಿ ಹೊರಟು ಬಿಡುತ್ತಾಳೆ. ಗೌತಮ್, ಭೂಮಿಕಾಳನ್ನು ಸುಮ್ಮನೆ ನನ್ನನ್ನು ಹೊಗಳಬೇಡಿ ನನಗೆ ಇಷ್ಟವಾಗುವುದಿಲ್ಲ ಎಂದು ಹೇಳುತ್ತಾನೆ. ಆಗ ಭೂಮಿಕಾ ದಿನಾ ಕಂಡಂತೆಯೇ ಕಾಣುತ್ತಿದ್ದೀರಾ, ಅಪರ್ಣಾ ಸುಳ್ಳು ಹೇಳಿದ್ದು ಎಂದು ಹೇಳಿ ಹೊರಟು ಬಿಡುತ್ತಾರೆ. ಇಬ್ಬರೂ ಕೂಡ ಒಬ್ಬರಿಗೊಬ್ಬರು ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಮದುವೆಯ ಬಗ್ಗೆ ಚರ್ಚೆ
ಇನ್ನು ಮನೆಯವರೆಲ್ಲಾ ಕುಳಿತು ಮದುವೆಯ ಬಗ್ಗೆ ಚರ್ಚೆ ಮಾಡುತ್ತಾರೆ. ಆಗ ಶಕುಂತಲಾ ಅಡುಗೆ ಅವರಿಗೆ ಯಾರಿಗೆ ಹೇಳೋಣ ಎಂದು ಯೋಚಿಸುವಾಗ ಮಹಿಮಾ, ತಾಜ್ ಅವರಿಗೆ ಹೇಳೋಣ ಎಂದು ಹೇಳುತ್ತಾಳೆ. ಸೆಲಬ್ರಿಟಿಸ್‌ಗೆಲ್ಲಾ ಹೋಟೆಲ್ ಬುಕ್ ಮಾಡಬೇಕು ಎಂದಾಗ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡುವುದಾಗಿ ಹೇಳುತ್ತಾರೆ. ಕಾಸ್ಟ್ಯೂಮ್ ಡಿಸೈನಿಂಗ್ ಬಗ್ಗೆ ಸೆಕ್ಯುರಿಟಿ ಬಗ್ಗೆ, ಎಲ್ಲದರ ಬಗ್ಗೆಯೂ ಮಾತನಾಡುತ್ತಾರೆ. ಇದು ಭೂಮಿಕಾ ಮನೆಯವರಿಗೆ ಇರಿಸು ಮುರಿಸಾಗುತ್ತದೆ. ಸದಾಶಿವ ಅಲ್ಲಿಂದ ಎದ್ದು ಆಚೆ ಹೋಗುತ್ತಾನೆ.

ಅಪ್ಪ ಕನಸು ಕೇಳಿ ಬೇಸರಗೊಂಡ ಭೂಮಿಕಾ
ಭೂಮಿಕಾ ಕೂಡ ಅಪ್ಪನ ಹಿಂದೆ ಹೋಗುತ್ತಾಳೆ. ಏನಾಯ್ತು ಎಂದು ಕೇಳುತ್ತಾಳೆ. ಆಗ ಸದಾಶಿವ ನಾನೊಬ್ಬ ಬಡ ಮೆಷ್ಟ್ರು. ತಿಂಗಳಿಗೆ ಬರುವ ಪೆನ್ಷನ್ ಹಣದಲ್ಲಿ ಬದುಕುವವನು. ಇವರದ್ದು ದೊಡ್ಡ ಮನೆತನ. ಈಗ ಕಂಡ ಆಸೆಯನ್ನು ನೆರವೇರಿಸಿಕೊಳ್ಳುವುದು ಸುಲಭ. ಆದರೆ, ನನ್ನ ಮಗಳ ಮದುವೆ ಬಗ್ಗೆ ನಾನು ಕಂಡ ಕನಸು ಬಹಳ ಚಿಕ್ಕದು. ಇವರ ಮುಂದೆ ನನ್ನ ಕನಸು ಕನಸಾಗೇ ಇರುತ್ತದೆ ಎಂದು ಹೇಳಿಕೊಂಡು ಬೇಸರ ಮಾಡಿಕೊಳ್ಳುತ್ತಾನೆ. ಮಗಳಿಗೂ ಇದರಿಂದ ಬಹಳ ಬೇಸರವಾಗುತ್ತದೆ.
ಮಾವನ ಕನಸು ತಿಳಿದ ಗೌತಮ್
ಭೂಮಿಕಾ ಬೇಸರ ಮಾಡಿಕೊಂಡು ಒಬ್ಬಳೇ ಕಣ್ಣೀರು ಹಾಕುತ್ತಿರುತ್ತಾಳೆ. ಇದೇ ವೇಳೆಗೆ ಅಲ್ಲಿಗೆ ಗೌತಮ್ ಬರುತ್ತಾನೆ. ಏನಾಯ್ತು ಎಂದು ಕೇಳುತ್ತಾನೆ. ಆಗ ಭೂಮಿಕಾ ನೀವೆಲ್ಲಾ ದೊಡ್ಡವರು. ನನ್ನ ಅಪ್ಪ ನನ್ನ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದಾರೆ. ಆದರೆ, ನಿಮ್ಮ ಅದ್ಧೂರಿ ನಡುವೆ ಅವರ ಪುಟ್ಟ ಕನಸು ಕನಸಾಗೇ ಉಳಿಯುತ್ತಿದೆ. ನನ್ನಪ್ಪನಿಗೆ ಬೇಸರವಾಗಿದೆ ಎಂದು ಕಣ್ಣೀರು ಹಾಕುತ್ತಾ ತನ್ನಪ್ಪನ ಕನಸಿನ ಬಗ್ಗೆ ಹೇಳುತ್ತಾಳೆ. ಈ ಮಾತನ್ನು ಕೇಳಿದ ಗೌತಮ್ ತನ್ನ ಮಾವನನ್ನು ನೋಡಿ ಬೇಸರ ಮಾಡಿಕೊಳ್ಳುತ್ತಾನೆ. ಈಗ ಗೌತಮ್ ಹಾಗೂ ಭೂಮಿಕಾ ಮದುವೆ ಸರಳವಾಗಿ ನಡೆಯುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











