Amruthadhaare ; ಬೂದಿ ಮುಚ್ಚಿದ ಕೆಂಡದಂತಾದ ದಿವಾನ್ ಕುಟುಂಬ : ದ್ವೇಷದ ಜ್ವಾಲೆಯಲ್ಲಿ ಅಪೇಕ್ಷಾ..!
ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಮದುವೆ ನಡೆದಿರುವುದಕ್ಕೆ ಎರಡೂ ಮನೆಯಲ್ಲಿ ಬೇಸರವಿದೆ. ಸದಾಶಿವ ಅಂತೂ ಮಗಳ ಮದುವೆಯನ್ನು ಹೇಗೆಲ್ಲಾ ಮಾಡಬೇಕು ಎಂದು ಕನಸು ಕಂಡಿದ್ದರು.ಇಷ್ಟವಿಲ್ಲದ ಹುಡುಗನ ಜೊತೆಗೆ ಇಷ್ಟವಿಲ್ಲದ ರೀತಿಯಲ್ಲಿ ಮಗಳು ಮದುವೆಯಾಗಿರುವುದು ಬಹಳ ನೋವನ್ನು ಉಂಟು ಮಾಡಿದೆ. ಮನೆಯಲ್ಲಿ ಎಲ್ಲರನ್ನು ಹೇಗೆ ಸಮಾಧಾನ ಮಾಡುವುದು ಎಂಬುದು ಗೊತ್ತಿಲ್ಲದೇ ಮಹಿಮಾ ಮತ್ತು ಜೀವ ಇರುವಾಗ ಗೌತಮ್ ಫೋನ್ ಮಾಡುತ್ತಾನೆ.ಭೂಮಿಕಾ ಜೀವನ್ ಗೆ ನೀವೇನು ಮಾತನಾಡಬೇಡಿ. ನಾಳೆ ನಾನೇ ಮನೆಗೆ ಬಂದು ಅಪ್ಪನ ಬಳಿ ಮಾತನಾಡುತ್ತೇನೆ ಎಂದು ಹೇಳುತ್ತಾಳೆ. ಈ ಮಾತನ್ನು ಖೇಳಿಸ ಜೀವನ್ ಮತ್ತು ಮಹಿಮಾ ಸ್ವಲ್ಪ ಸಮಾಧಾನಗೊಳ್ಳುತ್ತಾರೆ.
ವೀಡಿಯೋ ನೋಡಿದ ಅಪೇಕ್ಷಾ
ಇತ್ತ ಶಕುಂತಲಾ ಪ್ಲಾನ್ ಮಾಡಿದಂತೆಯೇ ಲಕ್ಷ್ಮೀಕಾಂತ ಅಪೇಕ್ಷಾ ಬಳಿ ಬಂದು ನಿಮ್ಮ ಮದುವೆಗೆ ಭೂಮಿಕಾ ವಿರೋಧಿಯಾಗಿದ್ದಳು. ಅವಳ ಶಕುಂತಲಾ ಎಷ್ಟು ಕೇಳಿಕೊಂಡರೂ ಈ ಮದುವೆಗೆ ಒಪ್ಪಲಿಲ್ಲ. ಬೇಕಿದ್ದರೆ ಈ ವೀಡಿಯೋ ನೋಡು ಎಂದು ತೋರಿಸುತ್ತಾನೆ. ಅದರಲ್ಲಿ ಭೂಮಿಕಾ ಈ ಎರಡೂ ಮನೆಗೆ ಒಳ್ಳೆಯದಾಗಬೇಕು ಎಂದರೆ ಈ ಮದುವೆ ನಡೆಯುವುದು ಸರಿಯಲ್ಲ. ನಾನಂತೂ ಇದಕ್ಕೆ ಒಪ್ಪಲ್ಲ ಎಂದು ಭೂಮಿಕಾ ಆಡಿದ್ದ ಮಾತುಗಳು ರೆಕಾರ್ಡ್ ಆಗಿರುತ್ತದೆ. ಇದನ್ನು ನೋಡಿದ ಅಪೇಕ್ಷಾಳ ಮನದಲ್ಲಿ ಅಕ್ಕನ ಬಗ್ಗೆ ಇನ್ನಷ್ಟು ಬೇಸರವಾಗುತ್ತದೆ.

ಬಣ್ಣದ ಮಾತುಗಳನ್ನಾಡಿದ ಶಕುಂತಲಾ
ಇದೇ ಸಮಯಲಕ್ಕೆ ಬರುವ ಶಕುಂತಲಾ ಬೇಕಂತಲೇ ನಟಿಸುತ್ತಾಳೆ. ಲಕ್ಷ್ಮೀಕಾಂತನಿಗೆ ಮನೆಯನ್ನು ಒಡೆಯುವಂತ ಕೆಲಸ ಮಾಡಬೇಡ. ಒಂದು ಮನೆ ಅಂದಮೇಲೆ ಇದೆಲ್ಲವೂ ಇದ್ದದ್ದೆ. ಅಕ್ಕ-ತಂಗಿಯ ನಡುವೆ ತಂದಿಡಬೇಡ ಎಂದು ಹೇಳುತ್ತಾಳೆ. ಅಪೇಕ್ಷಾಳಿಗೆ ಅಕ್ಕನ ಬಗ್ಗೆ ಅಪಾರ್ಥ ಮಾಡಿಕೊಳ್ಳಬೇಡ. ಅವಳು ಈ ಮನೆಯ ಒಳಿತಿಗಾಗಿ ಹೀಗೆಲ್ಲಾ ಹೇಳಿರುತ್ತಾಳೆ. ನೀನು ಮನಸ್ಸಿನಲ್ಲಿ ಇದನ್ನೆಲ್ಲಾ ಇಟ್ಟುಕೊಳ್ಳಬೇಡ. ಕೂಡು ಕುಟುಂಬ ಇದು ಎಂದು ನೈಸ್ ಮಾಡಿ ತನ್ನ ಆಟವನ್ನು ಸೈಲೆಂಟ್ ಆಗಿಯೇ ಶುರು ಮಾಡಿದ್ದಾಳೆ ಶಕುಂತಲಾ.
ಭೂಮಿಕಾಳ ಬಳಿ ನಿಷ್ಠುರವಾದ ಮಾತು
ಅಪೇಕ್ಷಾಳಿಗೆ ತನ್ನ ಅಕ್ಕನೇ ತನಗೆ ವಿರೋಧ ಮಾಡಿದ್ದಾಳೆ. ಈ ಮನೆಗೆ ಸೊಸೆಯಾಗಿ ಬರುವುದನ್ನು ಅಕ್ಕ ಸಹಿಸುತ್ತಿಲ್ಲ ಏಕೆ ಎಂದು ಯೋಚಿಸುತ್ತಿದ್ದಾಳೆ. ಭೂಮಿಕಾ ಅಪೇಕ್ಷಾಳನ್ನು ಊಟಕ್ಕೆ ಕರೆಯಲು ಬಂದಾಗ ನಿಷ್ಠೂರವಾಗಿ ಮಾತನಾಡುತ್ತಾಳೆ. ನಿನಗೆ ನಾನು ಈ ಮನೆಗೆ ಬರುವುದು ಇಷ್ಟವಿರಲಿಲ್ಲ. ಆದರೂ ನಾನು ಸೇರಬೇಕಾದ ಜಾಗಕ್ಕೆ ಸೇರಿದ್ದೇನೆ. ಕಳೆದ ಕೆಲ ದಿನಗಳಿಂದ ನನ್ನವರು ಯಾರು ಎಂಬುದು ನನಗೆ ಸ್ಪಷ್ಟವಾಗಿದೆ. ಇಷ್ಟು ದಿನ ಇದ್ದ ಅಪೇಕ್ಷಾ ಇನ್ಮುಂದೆ ಬದಲಾಗುತ್ತಾಳೆ ಎಂದೆಲ್ಲಾ ಭೂಮಿಕಾಳಿಗೆ ನೋವಾಗುವಂತೆ ಮಾತನಾಡುತ್ತಾಳೆ. ಇದನ್ನು ಪಾರ್ಥ ದೂರದಿಂದಲೇ ಗಮನಿಸುತ್ತಾನೆ.

ದಿವಾನ್ ಕುಟುಂಬದಲ್ಲಿ ಬೂದಿ ಮುಚ್ಚಿದ ಕೆಂಡ
ಇನ್ನು ಜೈದೇವ್ ಗೆ ಈ ಮದುವೆ ಕೊಂಚವೂ ಇಷ್ಟವಿರುವುದಿಲ್ಲ. ಅಪೇಕ್ಷಾಳನ್ನು ನೋಡಿದ ದಿನದಿಂದಲೂ ಜೈದೇವ್ ಅವಳ ಮೇಲೆ ಕಣ್ಣಿಟ್ಟಿದ್ದ. ಅಪ್ಪಿಯನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದ. ಮದುವೆಯಾಗಲೂ ಮುಂದಾಗಿದ್ದ. ಕೊನೆಗೆ ಕೊಲೆಗೆ ಯತ್ನಿಸಿದ. ಆದರೆ, ಜೈದೇವ್ ಯಾವ ಆಟವೂ ನಡಯಲಿಲ್ಲ. ಈಗಲೂ ಅಪೇಕ್ಷಾ ಮನೆಗೆ ಬಂದಿರುವುದಕ್ಕೆ ಧ್ವೇಶಿಸುತ್ತಿದ್ದಾನೆ. ಇತ್ತ ಅಪೇಕ್ಷಾ ಅಕ್ಕ ಭೂಮಿಕಾ ಮೇಲೆ ಸಿಟ್ಟಾಗಿದ್ದಾಳೆ. ಇನ್ನು ಶಕುಂತಲಾ ಮನೆಯನ್ನು ತನ್ನ ಅಡಿಯಲ್ಲಿ ಇಟ್ಟುಕೊಳ್ಳಲು ಈಗಾಗಲೇ ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದಾಳೆ. ಸದ್ಯ ದಿವಾನ್ ಕುಟುಂಬದ ಮನೆಯೂ ಕಂಪ್ಲೀಟ್ ಆಗಿ ಬೂದಿ ಮುಚ್ಚಿದ ಕೆಂಡದಂತೆ ಇದೆ.


Click it and Unblock the Notifications











