Amruthadhaare ; ಸುವರ್ಣ ಅವಕಾಶ ಕೈ ತಪ್ಪಿದ್ದಕ್ಕೆ ಜೈದೇವ್ ಕಂಗಾಲು, ಗರ್ಭಿಣಿ ಆದ ಭೂಮಿಕಾ ?
ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಂದ್ರ ಭೂಪತಿ ಹೂಡಿದ ದಾಳಕ್ಕೆ ಗೌತಮ್ ದಿವಾನ್ ಸೋತು ಹೋಗಿದ್ದಾನೆ. ಅಲ್ಲದೇ, ಜೈದೇವ್ ಕೂಡ ಕಂಗಾಲಾಗುವಂತೆ ಮಾಡಿದ್ದಾನೆ. ಜೈದೇವ್ ಗೆ ಕೊಟ್ಟ ಮಾತನ್ನು ತಪ್ಪಿದ ರಾಜೇಂದ್ರ ಭೂಪತಿ, ತಾನೇ ಚೇರ್ ಮ್ಯಾನ್ ಪಟ್ಟವನ್ನು ಅಲಂಕರಿಸಲು ಮುಂದಾಗಿದ್ದಾನೆ. ಇದನ್ನು ಕಂಡು ಜೈದೇವ್ ಪೆಚ್ಚಾಗಿದ್ದಾನೆ. ಇನ್ನು ಭೂಮಿಕಾ ಭಾಗ್ಯ ಅತ್ತೆ ಬಳಿ ಕುಳಿತುಕೊಂಡು ತನ್ನ ಸಂಕಟವನ್ನು ಹೇಳಿಕೊಳ್ಳುತ್ತಿರುತ್ತಾಳೆ. ನಿಮ್ಮ ಮಗನ ಲೈಫ್ ರಿಸ್ಕ್ ನಲ್ಲಿ ಇದೆ. ಈಗ ಅವರನ್ನು ಬಚಾವ್ ಮಾಡಲು ಯಾರೂ ಇಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾಳೆ.
ಫೈಲ್ ತಂದುಕೊಟ್ಟ ಭೂಮಿಕಾ
ಈ ಮಾತನ್ನು ಕೇಳಿದ ಭಾಗ್ಯ ತನ್ನ ಹಾಸಿಗೆಯ ಕೆಳಗೆ ಇರುವ ಫೈಲ್ ತೋರಿಸಲು ಯತ್ನಿಸುತ್ತಾಳೆ. ಇದನ್ನು ನೋಡಿದ ಭೂಮಿಕಾ ಖುಷಿ ಪಟ್ಟಿದ್ದಾಳೆ. ಫೈಲ್ ತೆಗೆದುಕೊಂಡು ಆಫೀಸಿಗೆ ಹೋಗಿದ್ದಾಳೆ. ಗೌತಮ್ ದಿವಾನ್ ಅವರ ತಂದೆ ತಮ್ಮ ಕಂಪನಿಯ ಕುರಿತು ಬರೆದಿರುವ ವಿಲ್ ಅನ್ನು ನೀಡುತ್ತಾಳೆ. ಎಲ್ಲರ ಎದುರು ಈ ವಿಲ್ ಪ್ರಕಾರ 51% ಶೇರ್ ಗಳು ಗೌತಮ್ ದಿವಾನ್ ಬಳಿ ಇದೆ. 25% ಶೇರ್ ಗಳು ಮಗಳು ಸುಧಾ ಹೆಸರಿಗೆ ಬರೆಯಲಾಗಿದೆ. ಉಳಿದ 24% ಶೇರ್ ಗಳನ್ನು ಮಾತ್ರವೇ ಮಾರಾಟ ಮಾಡಲಾಗಿದೆ ಎಂದು ಹೇಳುತ್ತಾಳೆ. ಇದರಿಂದ ಜೈದೇವ್ ಮತ್ತು ರಾಜೇಂದ್ರ ಶಾಕ್ ಆಗಿ, ಏನೂ ಮಾಡಲಾಗದೇ ಸುಮ್ಮನಾಗಿದ್ದಾರೆ.

ದಿವಾನ್ ಕಂಪನಿಗೆ ಸುಧಾ ವೈಸ್ ಚೇರ್ ಮ್ಯಾನ್
ಇನ್ನು ಸುಧಾ ಬಳಿ ಹೆಚ್ಚು ಶೇರ್ ಇರುವ ಕಾರಣ ಅವಳನ್ನೇ ದಿವಾನ್ ಕಂಪನಿಯ ವೈಸ್ ಚೇರ್ ಮ್ಯಾನ್ ಆಗಿ ನೇಮಿಸಲಾಗಿದೆ. ಸುಧಾ ಗೌತಮ್ ದಿವಾನ್ ಚೇರ್ ಮ್ಯಾನ್ ಆಗಿಯೇ ಮುಂದುವರೆಯಲಿ ಎಂದಿದ್ದಾಳೆ. ಗೌತಮ್ ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದು, ರಾಜೇಂದ್ರ ಭೂಪತಿಗೆ ಬುದ್ಧಿ ಹೇಳುವಂತೆ ಚುಚ್ಚಿ ಮಾತನಾಡುತ್ತಾನೆ. ರಾಜೇಂದ್ರ ಜೈದೇವ್ ಗೆ ಬೈಯುತ್ತಾನೆ. ನನಗೆ ವಿಲ್ ಕೊಡು ಎಂದರೆ ಕೊಡಲಿಲ್ಲ. ಈಗ ನನ್ನ ಪ್ಲಾನ್ ಹಾಳು ಮಾಡಿದೆ ಎಂದು ಬೈಯುತ್ತಾನೆ. ಜೈದೇವ್ ಕೂಡ ರಾಜೇಂದ್ರನ ಬಳಿ ನಿಷ್ಠೂರವಾಗಿ ಮಾತನಾಡುತ್ತಾನೆ. ನನ್ನನ್ನು ಚೇರ್ ಮ್ಯಾನ್ ಮಾಡುವ ಆಸೆ ತೋರಿಸಿ, ನೀವೇ ಆ ಕುರ್ಚಿ ಏರಲು ಮುಂದಾಗಿದ್ದು ಸರಿಯಲ್ಲ ಎಂದು ಹೇಳುತ್ತಾನೆ.
ತಲೆ ಚಚ್ಚಿಕೊಂಡ ಜೈದೇವ್
ಇದೇ ಟೆಂನ್ಷನ್ ನಲ್ಲಿ ಜೈದೇವ್ ದಿಯಾ ಮನೆಗೆ ಹೋಗಿ ಮಧ್ಯ ಸೇವಿಸುತ್ತಾನೆ. ತಂದೆ ಬರೆದ ವಿಲ್ ನಿಂದಾಗಿ ತನ್ನ ಬದುಕೇ ಹಾಳಾಗಿದೆ ಎಂದು ಗೋಳಾಡುತ್ತಾನೆ. ಜೈದೇವ್ ನಡವಳಿಕೆಯನ್ನು ಕಂಡು ದಿಯಾಳಿಗೆ ಗಾಬರಿಯಾಗುತ್ತದೆ. ಮನೆಗೆ ಬಂದ ಜೈದೇವ್ ತನ್ನ ಮಾವ ಲಕ್ಷ್ಮೀಕಾಂತ ಹಾಗೂ ತಾಯಿ ಶಕುಂತಲಾ ಎದುರಿಗೂ ಕೂಗಾಡುತ್ತಾನೆ. ಅವನ ತಂದೆಯನ್ನು ಬೈಯುತ್ತಾನೆ. ಅವನಿಂದಲೇ ಹೀಗೆಲ್ಲಾ ಆಯ್ತು ಎಂದು ಕೂಗಾಡುತ್ತಾನೆ. ಕೇಳುವಷ್ಟು ಕೇಳಿದ ಶಕುಂತಲಾ ಕೊನೆಗೆ ವಾಪಸ್ ಬೈಯುತ್ತಾಳೆ. ನಿನ್ನ ಅಪ್ಪನ ಬಗ್ಗೆ ಮಾತನಾಡೋದಕ್ಕೆ ನಿನಗೆ ಯೋಗ್ಯತೆ ಇಲ್ಲ. ಎಲ್ಲಾ ಅವಕಾಶವಿದ್ದರೂ ಸೋತಿರುವವನು ನೀನು ಎಂದು ಬೈದು ಜೈದೇವ್ ನನ್ನು ಸುಮ್ಮನಾಗಿಸುತ್ತಾಳೆ.
ಗರ್ಭಿಣಿ ಆಗಿದ್ದಾಳಾ ಭೂಮಿಕಾ..?
ಇನ್ನು ಭೂಮಿಕಾ ವಿಲ್ ತಂದು ಕೊಟ್ಟಿದ್ದಕ್ಕೆ ಗೌತಮ್ ಬಹಳ ಖುಷಿ ಪಟ್ಟಿದ್ದಾನೆ. ತನ್ನ ತಾಯಿ ಮನೆಗೆ ಬಂದಾಗಿನಿಂದಲೂ ನಮಗೆ ಒಳ್ಳೆಯದಾಗುತ್ತಿದೆ ಎಂದು ತನ್ನ ಖುಷಿಯನ್ನು ಹಂಚಿಕೊಂಡಿದ್ದಾನೆ. ಇದೇ ವೇಳಗೆ ಭೂಮಿಕಾ ವಾಂತಿ ಮಾಡಿದ್ದಾಳೆ. ಯಾಕೆ ಏನಾಯ್ತು ಎಂದು ಕೇಳಿದ್ದಕ್ಕೆ ಏನೂ ಹೇಳದ ಭೂಮಿಕಾ ನಾಚಿಕೊಂಡಿದ್ದಾಳೆ. ಭೂಮಿಕಾ ತನ್ನ ಮನದಲ್ಲಿ ತಾನು ತಾಯಿಯಾಗಿರಬಹುದು ಎಂದು ಖುಷಿಪಟ್ಟಿದ್ದಾಳೆ. ಈ ವಿಚಾರ ತಿಳಿದ ಗೌತಮ್ ಅಜ್ಜಿ ಕೂಡ ಸಂತಸಗೊಂಡಿದ್ದಾರೆ.


Click it and Unblock the Notifications











