Amruthadhaare ; ಭೂಮಿಕಾಳಿಗೆ ಕೆಂಚ ಫೋನ್ ಮಾಡಿ ಹೇಳಿದ್ದೇನು..?
ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಮತ್ತು ಜೀವನ್ ಭೂಮಿಕಾ ಮಾತನ್ನು ಕೇಳಿ ವೈಮನಸ್ಸನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇಬ್ಬರು ಇರುವುದರಲ್ಲೇ ಖುಷಿ ಪಡಲು ಮುಂದಾಗಿದ್ದಾರೆ. ಇನ್ನು ಗೌತಮ್ ಆಫೀಸ್ ವಿಚಾರಕ್ಕೆ ಬಹಳ ಚಿಂತೆ ಮಾಡಿಕೊಂಡಿದ್ದಾನೆ. ಇದರಿಂದ ಅಸಿಡಿಟಿ ಪ್ರಾರಂಭವಾಗಿದ್ದು, ಪ್ರತಿಯೊಂದಕ್ಕೂ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಗೌತಮ್ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಭೂಮಿಕಾ, ತನ್ನ ಒಪ್ಪಿಗೆ ಇಲ್ಲದೇ, ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದು ಮಾತು ತೆಗೆದುಕೊಂಡಿದ್ದಾಳೆ.
ಜೈದೇವ್ ರೂಮ್ ನಲ್ಲಿ ಭೂಮಿಕಾ
ಇನ್ನು ಭೂಮಿಕಾಳಿಗೆ ಗೌತಮ್ ಆಫೀಸ್ ಸಮಸ್ಯೆ ಬಗ್ಗೆ ತಿಳಿದಿದ್ದು, ಇದರ ಹಿಂದೆ ಜೈದೇವ್ ಇರಬಹುದು ಎಂಬ ಅನುಮಾನವಿದೆ. ಆದರೆ, ಇದರ ಬಗ್ಗೆ ಮಾಹಿತಿ ತಿಳಿಯಲು ಮಲ್ಲಿಗೆ ವಾಕಿಂಗ್ ಹೋಗುವಂತೆ ಹೇಳಿದ್ದಾಳೆ. ಅದೂ ಕೂಡ ಜೈದೇವ್ ಜೊತೆಗೆ ವಾಕಿಂಗ್ ಮಾಡಲು ಹೇಳಿದ್ದು, ಅವರ ರೂಮಿಗೆ ಭೂಮಿಕಾ ಹೋಗಿದ್ದಾಳೆ. ಜೈದೇವ್ ರೂಮ್ ನಲ್ಲಿ ಫೈಲ್ ಸೇರಿದಂತೆ ಎಲ್ಲಾ ಚೆಕ್ ಮಾಡುತ್ತಾಳೆ. ಆದರೆ, ಭೂಮಿಕಾಳಿಗೆ ಯಾವುದೇ ಕ್ಲೂ ಸಿಗುವುದಿಲ್ಲ. ಇದು ಭೂಮಿಕಾಳಿಗೆ ವಿಚಿತ್ರ ಎನಿಸುತ್ತದೆ. ಆದರೆ, ಜೈದೇವ್ ಫೋನ್ ಗೆ ಕೆಂಚ ಫೊನ್ ಮಾಡುತ್ತಿರುತ್ತಾನೆ. ಯಾರು ಎಂದು ರಿಸಿವ್ ಮಾಡುವ ಮುನ್ನವೇ ಕಟ್ ಆಗಿ ಬಿಡುತ್ತದೆ.

ಭೂಮಿಕಾಳಿಗೆ ಫೋನ್ ಮಾಡಿದ ಕೆಂಚ
ಕೊನೆಗೆ ಕೆಂಚ ಸಹಾಯ ಭೇಡಿ ಗೌತಮ್ ಗೆ ಫೋನ್ ಮಾಡುತ್ತಾನೆ. ಗೊತ್ತಿರದ ನಂಬರ್ ಎಂಬ ಕಾರಣಕ್ಕೆ ಗೌತಮ್ ಕೂಡ ನೆಗಲೆಕ್ಟ್ ಮಾಡುತ್ತಾನೆ. ಕೆಂಚ ಬೇರೆ ದಾರಿ ಇಲ್ಲದೇ, ಭೂಮಿಕಾಳಿಗೆ ನೇರವಾಗಿ ಫೋನ್ ಮಾಡುತ್ತಾನೆ. ತಾನು ಜೈಲಿನಲ್ಲಿದ್ದು, ತನ್ನನ್ನು ಬಿಡಿಸುವಂತೆ ಕೇಳುತ್ತಾನೆ. ಅಷ್ಟೇ ಅಲ್ಲದೇ ನಿಮ್ಮನ್ನ
ಕಿಡ್ನ್ಯಾಪ್ ಮಾಡಲು ಹೇಳಿದ್ದೇ ನಿಮ್ಮ ಮನೆಯಲ್ಲಿರುವವರೇ. ನಿಮಗೆ ಆಪ್ತರಾಗಿರುವವರೇ ಎಂದು ಹೇಳುತ್ತಾನೆ. ಈ ಬಾರಿ ಬಿಡಿಸಿದರೆ, ಮತ್ಯಾವತ್ತೂ ಈ ತಪ್ಪು ಮಾಡುವುದಿಲ್ಲ. ಹೆಂಡತಿ ಮಕ್ಕಳ ಜೊತೆಗೆ ನಿಯತ್ತಾಗಿ ಇರುವುದಾಗಿ ಕೇಳಿಕೊಳ್ಳುತ್ತಾನೆ. ಆಗ ಭೂಮಿಕಾ ಕೂಡ ಏನಾದರೂ ಮಾಡುವುದಾಗಿ ಹೇಳುತ್ತಾಳೆ.
ಹಣದ ಬಗ್ಗೆ ಹೇಳಿದ ಜೀವನ್ ಸ್ನೇಹಿತ
ಇನ್ನು ಗೌತಮ್ ಆಫೀಸಿಗೆ ಬರುವಾಗ ಜೀವನ್ ಸ್ನೇಹಿತ ಟೆಂಡರ್ ಬಗ್ಗೆ ಮಾಹಿತಿ ನೀಡುತ್ತಾನೆ. ನಿಮ್ಮ ಕಂಪನಿಯಲ್ಲಿರುವ ಯಾರೋ ದೊಡ್ಡ ವ್ಯಕ್ತಿಯೇ ಈ ಕೆಲಸ ಮಾಡಿದ್ದಾರೆ. ನೇರವಾಗಿ ಎಂಡಿ ಜೊತೆಗೆ ಡೀಲ್ ಮಾಡಿದ್ದಾರೆ. ಈ ಬಗ್ಗೆ ಆಫೀಸ್ ನಲ್ಲಿ ಯಾವುದೇ ಮಾಹಿತಿ ಇಲ್ಲ. ಆದರೆ, ಹಣದ ಬಗ್ಗೆ ಆಫೀಸ್ ನಲ್ಲಿ ಕಷ್ಟ ಇದೆ. ಕ್ಯಾಶ್ ಗಾಗಿ ಓಡಾಡುತ್ತಿದ್ದಾರೆ. ಇದು ಬಹುಷ ಡೀಲ್ ಮಾಡಿಕೊಂಡವರಿಗೆ ನೀಡುವುದಕ್ಕೆ ಇರಬೇಕು. ಇದರ ಬಗ್ಗೆ ಏನೇ ಮಾಹಿತಿ ಸಿಕ್ಕರೂ ಹೇಳುವುದಾಗಿ ಹೇಳುತ್ತಾನೆ. ಜೀವನ್ ಕೂಡ ಲಕ್ಷ್ಮೀಕಾಂತ ಮತ್ತು ಜೈದೇವ್ ಮೇಲೆ ಅನುಮಾನ ವ್ಯಕ್ತಪಡಿಸುತ್ತಾನೆ.

ಜೈದೇವನಿಗೆ ಕೆಂಚನ ಅವಾಜ್
ಇನ್ನು ಜೈದೇವ್ ಮತ್ತು ಲಕ್ಷ್ಮೀಕಾಂತ ಓಡಾಡುವಾಗ ಕೆಂಚ ಫೋನ್ ಮಾಡಿ ಬೇಕಂತಲೇ ಕಿಚಾಯಿಸುತ್ತಾನೆ. ನೀವು ಬಿಡಿಸಲಿಲ್ಲ ಎಂದರೆ ನಮಗೆ ಸಹಾಯ ಮಾಡುವವರು ಯಾರೂ ಇಲ್ಲ ಅಂದುಕೊಳ್ಳಬೇಡಿ. ನಾನು ಆಚೆ ಬರುತ್ತೀನಿ. ಬಂದ ಮೇಲೆ ಸುಮ್ಮನೆ ಇರುವುದಿಲ್ಲ. ನೀವು ಮಾಡಿದ್ದನ್ನೆಲ್ಲಾ ಎಲ್ಲಿ ಬತ್ತಿ ಇಡಬೇಕೋ ಅಲ್ಲೇ ಬತ್ತಿ ಇಡುತ್ತೀನಿ. ನಾನು ನಿಯತ್ತಿನ ಮನುಷ್ಯ ಅನ್ನೋದನ್ನ ಮರೆಯಬೇಡಿ ಸ್ವಾಮಿ ಎಂದು ಕಿಚಾಯಿಸುತ್ತಾನೆ. ಜೈದೇವ್ ಗೆ ಕೆಂಚನ ಮಾತುಗಳು ಕೇಳಿ ಗಾಬರಿಯಾಗುತ್ತದೆ. ತನಗೆ ಕೆಂಚನಿಂದ ಸಮಸ್ಯೆ ಆಗುತ್ತದೆ ಎಂಬುದು ಪಕ್ಕಾ ಆಗುತ್ತದೆ.


Click it and Unblock the Notifications











