Amrutha Dhaare ; ಗೌತಮ್ ಎಕ್ಸ್ ಲವರ್ ಮಾನ್ಯ, ಶಕುಂತಲಾ ಬಲೆಯಿಂದ ಎಸ್ಕೇಪ್..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಸದಾ ಗೌತಮ್ ಒಳ್ಳೆಯದನ್ನೇ ಬಯಸುವ ಆನಂದ್ ಸದ್ಯ ಗೆಳೆಯ ಮತ್ತು ಭೂಮಿಕಾ ಒಂದಾಗಿ ಬಾಳಲಿ ಎಂದು ಬಯಸುತ್ತಿದ್ದಾನೆ. ಹೀಗಾಗಿ ಗೌತಮ್ ಗೆ ದಿನಕ್ಕೊಂದು ಟಾಸ್ಕ್ ನೀಡುತ್ತಿದ್ದಾನೆ. ಒಂದು ದಿನ ಮುತ್ತು ಕೊಡಬೇಕು ಎಂದು ಹೇಳಿ ಕಳಿಸಿದರೆ, ಮತ್ತೊಂದು ದಿನ ಔಟಿಂಗ್ ಹೋಗಬೇಕು ಎಂದು ಒತ್ತಾಯ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೇ, ತಾನು ಕೊಟ್ಟ ಟಾಸ್ಕ್ ನ ಗೌತಮ್ ಮಾಡುತ್ತಿದ್ದಾನಾ ಇಲ್ಲವಾ ಎಂದು ತಿಳಿಯಲು ಪದೇ ಪದೇ ಫೋನ್ ಮಾಡುವ ಆನಂದ್ ತಲೆ ತಿನ್ನುತ್ತಿರುತ್ತಾನೆ.

ಗೌತಮ್ ಗೆ ಬೇತಾಳವಾದ ಆನಂದ್

ಬೆನ್ನಿಗೆ ಬಿದ್ದ ಬೇತಾಳದಂತಾಗಿರುವ ಆನಂದ್ ಕಾಟವನ್ನು ಗೌತಮ್ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆನಂದ್ ಬಲವಂತಕ್ಕಾಗಿಯಾದರೂ ತಾನು ಭೂಮಿಕಾ ಜೊತೆಗೆ ಕಾಲ ಕಳೆಯಬೇಕು. ಭೂಮಿಕಾಳಿಗೆ ಸರ್ಪ್ರೈಸ್ ಕೊಟ್ಟು ಖುಷಿ ಕೊಡಬೇಕು ಎಂದು ಗೌತಮ್ ಮಾಡುತ್ತಿದ್ದಾನೆ. ಭೂಮಿಕಾ ಮಲಗಿದ ಬಳಿಕ ಅವಳಿಗೆ ಮುತ್ತು ಕೊಡಲು ಹೋಗಿ ಸಿಕ್ಕಿ ಬೀಳುತ್ತಾನೆ. ನಂತರ ಭೂಮಿಕಾ ಗೌತಮ್ ಮಲಗಿರುವಾಗ ಪಿಸು ಮಾತಿನಲ್ಲಿ ಐ ಲವ್ ಯೂ ಎಂದು ಹೇಳುತ್ತಾಳೆ. ಈಗ ಆನಂದ್ ಪಟ್ಟು ಹಿಡಿದಿದ್ದು, ಭೂಮಿಕಾಳನ್ನು ಗೌತಮ್ ಆಚೆ ಕರೆದುಕೊಂಡು ಹೋಗುವಂತೆ ಮಾಡಿದ್ದಾನೆ. ಗೌತಮ್ ಕೂಡ ಆನಂದ್ ಮಾತಿಗೆ ಒಪ್ಪಿಗೆ ಕೊಟ್ಟಿದ್ದಾನೆ.

Amruthadhaare Serial 18 March episode written update

ಪ್ಲಾನ್ ಹಾಳಾಗಿದ್ದಕ್ಕೆ ಜೈದೇವ ಸಿಡಿಮಿಡಿ

ಇನ್ನು ಜೈದೇವ ಪ್ಲಾನ್ ಮಾಡಿ ಮಲ್ಲಿಯನ್ನು ಕೊಲೆ ಮಾಡಲು ಯತ್ನಿಸಿದ್ದ. ಆದರೆ, ಭೂಮಿಕಾ ದೆಸೆಯಿಂದ ಮಲ್ಲಿ ಬದುಕುಳಿದಿದ್ದಾಳೆ. ಇದರಿಂದ ಜೈದೇವ ತುಂಬಾ ಅಪ್ಸೆಟ್ ಆಗಿದ್ದಾನೆ. ಮಲ್ಲಿ ತನ್ನ ಮಗುವಿನ ಸ್ಕ್ಯಾನಿಂಗ್ ರಿಪೋರ್ಟ್ ನೋಡುತ್ತಿರುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ಜೈದೇವ ಬರುತ್ತಾನೆ. ಖುಷಿಯಿಂದ ಮಲ್ಲಿ ತನ್ನ ಮಗುವಿನ ಸ್ಕ್ಯಾನಿಂಗ್ ರಿಪೋರ್ಟ್ ಅನ್ನು ತೋರಿಸುತ್ತಾಳೆ. ಜೈದೇವ ಕೋಪ ಮಾಡಿಕೊಂಡು ಅದನ್ನು ಎಸೆಯುತ್ತಾನೆ. ನೀನೇ ನನಗೆ ಬೇಕಿಲ್ಲ. ಇನ್ನು ಆ ಮಗು ಬೇರೆ. ನನಗೆ ಬೇಡವಾಗಿರುವ ನೀನು ಹಾಗೂ ಆ ನಿನ್ನ ಹೊಟ್ಟೆಯಲ್ಲಿರುವ ಮಗು ನನ್ನಿಂದ ದೂರವಾದರೆ ಅಷ್ಟೇ ಸಾಕು ಎಂದು ಕೂಗಾಡುತ್ತಾನೆ. ಇದರಿಂದ ಮಲ್ಲಿ ಮನಸ್ಸಿಗೆ ನೋವಾಗುತ್ತದೆ.

ಶಕುಂತಲಾ ಬಲೆಯಿಂದ ಮಾನ್ಯ ಎಸ್ಕೇಪ್

ಇತ್ತ ಶಕುಂತಲಾ ಭೂಮಿಕಾ ಕಾಟದಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡುತ್ತಿದ್ದಾಳೆ. ಆದರೆ, ಅಷ್ಟರಲ್ಲಿ ಮಾನ್ಯ ಶಕುಂತಲಾ ಬಲೆಯಿಂದ ಎಸ್ಕೇಪ್ ಆಗಿದ್ದಾಳೆ. ಗೌತಮ್ ಮದುವೆಯ ದಿನದಿಂದಲೂ ಮಾನ್ಯಳನ್ನು ಶಕುಂತಲಾ ಕೂಡ ಹಾಕಿದ್ದಳು. ಅವಳು ತಪ್ಪಿಸಿಕೊಳ್ಳದಂತೆ ಶಕುಂತಲಾ ನೋಡಿಕೊಂಡಿದ್ದಳು. ಆದರೆ, ಈಗ ಮಾನ್ಯ ತಪ್ಪಿಸಿಕೊಂಡಿದ್ದಾಳೆ. ಇದರಿಂದ ಶಕುಂತಲಾಳಿಗೆ ಹೊಸ ತಲೆನೋವು ಸೃಷ್ಟಿಯಾಗಿದೆ. ಮಾನ್ಯಳಿಂದ ಮನೆಯಲ್ಲಿ ಇನ್ನು ಏನೇನು ಸಮಸ್ಯೆಗಳು ಎದುರಾಗಬಹುದೋ ಎಂದು ಗಾಬರಿಯಾಗಿದ್ದಾಳೆ.

Amruthadhaare Serial 18 March episode written update

ಡೇಟಿಂಗ್ ಹೊರಟ ಭೂಮಿಕಾ-ಗೌತಮ್

ಇನ್ನು ಗೌತಮ್ ಸರ್ಪ್ರೈಸ್ ಆಗಿ ಭೂಮಿಕಾಳನ್ನು ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಎಲ್ಲಿಗೆ ಹೋಗಬೇಕು ಎನ್ನುವುದು ಗೊತ್ತಿಲ್ಲವಾದರೂ ಕೂಡ, ಪ್ಲಾನ್ ಮಾಡಿರುವಂತೆ ಭೂಮಿಕಾಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾನೆ. ಮಧ್ಯದಲ್ಲಿ ಆನಂದ್ ಬೇಕಂತಲೇ ಗೌತಮ್ ಗೆ ಫೋನ್ ಮಾಡಿ ತಲೆ ತಿನ್ನುತ್ತಿದ್ದಾನೆ. ಮುತ್ತು ಕೊಟ್ಟಿದ್ದಾಯ್ತಾ..? ಯಾವ ಜಾಗಕ್ಕೆ ಕರೆದುಕೊಂಡು ಹೋದೆ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾನೆ. ಆದರೆ, ಇಂದು ಗೌತಮ್ ಮತ್ತು ಭೂಮಿಕಾ ಒಬ್ಬರಿಗೊಬ್ಬರು ಪ್ರಪೋಸ್ ಮಾಡುತ್ತಾರಾ..? ಇಬ್ಬರ ಮನದಲ್ಲಿರುವ ಪ್ರೀತಿ ಮಾತುಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
shakunthala hides manya but still she escapes and runs out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X