ಮಲ್ಲಿಗೆ ಆಪತ್ತು ತಂದ ಪತಿರಾಯ : ಸಹೋದರಿಯ ಜೀವ ಉಳಿಸಿದ ಮಹಿಮಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಮತ್ತು ಜೈದೇವ ಮಲ್ಲಿಗೆ ಮುಕ್ತಿ ಕಾಣಿಸಲು ಬಲು ದೊಡ್ಡ ಪ್ಲಾನ್ ಮಾಡಿಕೊಂಡಿದ್ದಾರೆ. ಭೂಮಿಕಾ ಬೇರೆ ಈಗ ಮನೆಯಲ್ಲಿ ಇಲ್ಲ. ಇದು ಜೈದೇವ ಮತ್ತು ಶಕುಂತಲಾಳಿಗೆ ಒಳ್ಳೆಯ ಸಮಯವಾಗಿದ್ದು, ಜೈದೇವ ರೌಡಿಗಳಿಗೆ ಹಣ ಕೊಟ್ಟು ತನ್ನ ಪ್ಲಾನ್ ಅನ್ನು ಎಲ್ಲೂ ಸಮಸ್ಯೆ ಆಗದಂತೆ ಜಾರಿಗೆ ತಂದಿದ್ದಾನೆ. ಮಲ್ಲಿಯೂ ಕೂಡ ಜೈದೇವನ ಸ್ಥಿತಿಯನ್ನು ಕಂಡು ನಿಜವಾಗಲೂ ಪತಿಗೆ ತೊಂದರೆ ಆಗಿದೆ ಎಂದುಕೊಂಡು ಹೊರಟಿದ್ದಾಳೆ. ಫೈಲ್ ತೆಗೆದುಕೊಂಡು ಮನೆ ಬಿಡುವ ಮುನ್ನ ಭೂಮಿಕಾಳಿಗೆ ಫೋನ್ ಮಾಡಿದ್ದಾಳೆ.

ರೌಡಿಗಳ ಕೈಯಲ್ಲಿ ಸಿಕ್ಕಿ ಬಿದ್ದ ಮಲ್ಲಿ

ಭೂಮಿಕಾ ಫೋನ್ ಕನೆಕ್ಟ್ ಆಗದ ಕಾರಣ ಜೈದೇವ ತಿಳಿಸಿದ ಲೊಕೇಶನ್ ಗೆ ಹೊರಟಿದ್ದಾಳೆ. ಅಲ್ಲಿಗೆ ಹೋದ ಮಲ್ಲಿಗೆ ಆ ಸ್ಥಳವನ್ನು ನೋಡಿ ಫುಲ್ ಗಾಬರಿಯಾಗಿದೆ. ಎಲ್ಲಿಗೆ ಹೋಗಬೇಕು. ಏನು ಮಾಡಬೇಕು ಎಂದು ಗೊಂದಲದಲ್ಲಿರುವಾಗಲೇ ಭೂಮಿಕಾ ಫೋನ್ ಮಾಡಿದ್ದಾಳೆ. ಆದರೆ, ಮಲ್ಲಿ ಮಾತನಾಡಿದ ಮಾತುಗಳು ಭೂಮಿಕಾಳಿಗೆ ಕೇಳಿಸಿಲ್ಲ. ಆದರೆ, ಮಲ್ಲಿ ಗಾಬರಿಯಲ್ಲಿದ್ದಾಳೆ ಎಂಬ ಸತ್ಯವನ್ನು ಮಾತ್ರವೇ ಅರ್ಥ ಮಾಡಿಕೊಂಡಿದ್ದಾಳೆ. ಶಕುಂತಲಾಳಿಗೆ ಫೋನ್ ಮಾಡಿ ಭೂಮಿಕಾ ವಿಚಾರಿಸುತ್ತಾಳೆ. ಆದರೆ, ಶಕುಂತಲಾ ತಾನೂ ಕೂಡ ಮನೆಯಲ್ಲಿ ಇಲ್ಲ ಎಂದು ನೆಪ ಹೇಳಿ ಯಾಮಾರಿಸುತ್ತಾಳೆ.

Amruthadhaare Serial 18 May episode written update

ಮಲ್ಲಿಯನ್ನು ಉಳಿಸಿದ ಮಹಿಮಾ

ಭೂಮಿಕಾ ಮಹಿಮಾಳಿಗೆ ಕರೆ ಮಾಡಿ ಮಲ್ಲಿ ಪರೀಸ್ಥಿತಿ ಬಗ್ಗೆ ವಿವರಿಸುತ್ತಾಳೆ. ಮಲ್ಲಿಯನ್ನು ರೌಡಿಗಳು ಕೊಲೆ ಮಾಡಲು ಮುಂದಾದಾಗ ಮಲ್ಲಿ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬರುತ್ತಾಳೆ. ಅಷ್ಟರಲ್ಲಿ ಮಹಿಮಾ ಕೂಡ ಪೊಲೀಸರನ್ನು ಕರೆದುಕೊಂಡು ಬರುತ್ತಾಳೆ. ಪೊಲೀಸರನ್ನು ನೋಡುತ್ತಿದ್ದಂತೆ ರೌಡಿಗಳು ತಪ್ಪಿಸಿಕೊಂಡು ಓಡುತ್ತಾರೆ. ಪೊಲೀಸರು ಮಲ್ಲಿ ಹಾಗೂ ಜೈದೇವನನ್ನು ಅಲ್ಲಿಂದ ಕರೆದುಕೊಂಡು ಬರುತ್ತಾರೆ. ಮನೆಯಲ್ಲಿ ಮಲ್ಲಿ ಕಥೆ ಮುಗಿದು ಹೋಯ್ತು. ದೊಡ್ಡ ತಲೆನೋವು ಕಡಿಮೆ ಆಗುತ್ತೆ. ಇನ್ನೇನಿದ್ದರೂ ತಮ್ಮ ಆಟವೇ ಎಂದು ಖುಷಿಯಾಗಿದ್ದ ಶಕುಂತಲಾಳಿಗೆ ಮಲ್ಲಿ ಬಂದು ಶಾಕ್ ಕೊಡುತ್ತಾಳೆ.

ಅಮ್ಮ-ಮಗನಿಗೆ ನಿರಾಸೆ

ಮಲ್ಲಿಯನ್ನು ಜೀವಂತವಾಗಿ ನೋಡಿದ ಶಕುಂತಲಾ ಫುಲ್ ಶಾಕ್ ಆಗಿದ್ದಾಳೆ. ಮಲ್ಲಿ ಜೊತೆಗೆ ಜೈದೇವ ಹ್ಯಾಪ್ ಮೊರೆ ಹಾಕಿಕೊಂಡು ಬರುತ್ತಾನೆ. ಹಿಂದೆಯೇ ಬರುವ ಮಹಿಮಾ ತಾನೇ ಇಬ್ಬರನ್ನು ರಕ್ಷಿಸಿದ್ದು ಎಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿದ ಮೇಲೆ ಶಕುಂತಲಾಳಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಕಾಟಾಚಾರಕ್ಕೆ ಶಕುಂತಲಾ ಮಹಿಮಾಳ ಬಳಿ ಕ್ಷಮೆ ಕೇಳುತ್ತಾಳೆ. ಜೈದೇವನಿಗೆ ತಾನು ಮಾಡಿದ ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾನೆ. ಇನ್ನು ಭೂಮಿಕಾ ಮತ್ತೆ ಶಕುಂತಲಾಳಿಗೆ ಫೋನ್ ಮಾಡಿ ಮಲ್ಲಿಗೆ ತೊಂದರೆ ಮಾಡಿದರೆ, ನಿಮ್ಮ ಬಂಡವಾಳ ಬಯಲಾಗುವಂತೆ ಮಾಡಬೇಕಾಗುತ್ತದೆ ಎಂದು ಹೆದರಿಸುತ್ತಾಳೆ.

Amruthadhaare Serial 18 May episode written update

ರೊಮ್ಯಾಂಟಿಕ್ ಆದ ಗೌತಮ್-ಭೂಮಿಕಾ

ಇತ ಚಿಕ್ಕಮಗಳೂರಿನಲ್ಲಿ ಆನಂದ್ ಬೇಕಂತಲೇ ಗೌತಮ್ ಗೆ ರಾಮರಸವನ್ನು ಕುಡಿಸಿದ್ದಾನೆ. ಗೌತಮ್ ಈಗ ಫುಲ್ ರೊಮ್ಯಾಂಟಿಕ್ ಮೂಡ್ ನಲ್ಲಿದ್ದು, ಪ್ರಜ್ಞೆಯೇ ಇಲ್ಲ. ಏನೋ ಹೇಳಬೇಕು ಎಂದು ಒದ್ದಾಡುತ್ತಿದ್ದಾನೆ. ಭೂಮಿಕಾ ಗೌತಮ್ ಪರಿಸ್ಥಿತಿಯನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿದ್ದಾಳೆ. ಬೆಳಗೆದ್ದ ಮೇಲೆ ಗೌತಮ್ ಬಳಿ ಸುಳ್ಳು ಹೇಳಿದ್ದಾಳೆ. ನೀವು ನನ್ನ ಬಳಿ ಮುತ್ತು ಕೇಳಿದಿರಿ ಎಂದು ಹೇಳುತ್ತಾಳೆ. ಇದೆಲ್ಲವೂ ಗೌತಮ್ ಗೆ ಮುಜುಗರವನ್ನುಂಟು ಮಾಡುತ್ತದೆ. ಆನಂದ್ ಅಂತೂ ಅದಷ್ಟು ಬೇಗ ಗೌತಮ್ ಭೂಮಿಕಾ ಅತ್ತಿಗೆಗೆ ಪ್ರಪೋಸ್ ಮಾಡಲಿ ಎಂದು ಆಸೆ ಪಟ್ಟಿದ್ದಾನೆ. ಟ್ರಿಪ್ ಮುಗಿದ ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
jaidev plan ruined by bhoomika. Mahima saves malli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X