Amruthadhaare: ಆಸ್ಪತ್ರೆಗೆ ಹೋಗಿ ಗೌತಮ್ ಬಿಪಿ ಕಡಿಮೆ ಮಾಡಿದ ಭೂಮಿಕಾ
ಅಮೃತಧಾರೆ ಧಾರಾವಾಹಿಯಲ್ಲಿ ಈಗ ಭೂಮಿಕಾ ಹಾಗೂ ಮಹಿಮಾ ಮೆಹಂದಿ ಶಾಸ್ತ್ರ ನಡೆಯುತ್ತಿದೆ. ಭೂಮಿಕಾ ತುಂಬಾ ಮುದ್ದಾಗಿ ರೆಡಿಯಾಗಿದ್ದಾಳೆ. ಅವಳನ್ನು ನೋಡಿ ಎಲ್ಲರೂ ಖುಷಿ ಪಟ್ಟಿದ್ದಾರೆ.
ಮಹಿಮಾ ಹಾಗೂ ಭೂಮಿಕಾ ಇಬ್ಬರೂ ಕೂಡ ಮೆಹಂದಿ ಹಾಕಿಸಿಕೊಂಡಿದ್ದಾರೆ. ಮೆಹಂದಿ ಶಾಸ್ತ್ರದಲ್ಲಿ ಎರಡೂ ಮನೆಯವರು ಸಕತ್ ಆಗಿಯೇ ಮಿಂಚಿದ್ದಾರೆ.

ಇನ್ನು ಮೆಹಂದಿ ಶಾಸ್ತ್ರಕ್ಕೆ ಗೌತಮ್ ಬಂದಿರುವುದಿಲ್ಲ. ಇದರಿಂದ ಎಲ್ಲರೂ ಭೂಮಿಕಾಳನ್ನು ಗೌತಮ್ ಎಲ್ಲಿ ಎಂದು ಕೇಳುತ್ತಿರುತ್ತಾರೆ. ಭೂಮಿಕಾ, ಗೌತಮ್‌ಗೆ ಫೋನ್ ಮಾಡಿ ಕೇಳಿದಾಗ, ಮೀಟಿಂಗ್ ಇದೆ ಬರೋದಕ್ಕೆ ಆಗಲ್ಲ ಎನ್ನುತ್ತಾನೆ.
ಆಸ್ಪತ್ರೆಗೆ ಬಂದ ಭೂಮಿಕಾ
ಈ ಮಾತಿನಿಂದ ಬೇಸರ ಮಾಡಿಕೊಂಡ ಭೂಮಿಕಾ, ಫ್ಯಾಮಿಲಿಗೆ ಟೈಮ್ ಕೊಡದ ಮೇಲೆ ಕೆಲಸ ಯಾಕೆ ಬೇಕು, ಸಂಸಾರ ಯಾಕೆ ಬೇಕು ಎಂದು ಬೈಯುತ್ತಿರುತ್ತಾಳೆ. ಅಷ್ಟೊತ್ತಿಗೆ ಆನಂದ್, ಭೂಮಿಕಾಳಿಗೆ ಫೋನ್ ಮಾಡಿ ಸತ್ಯವನ್ನು ಹೇಳುತ್ತಾನೆ. ಗೌತಮ್‌ಗೆ ಬಿಪಿ ಜಾಸ್ತಿ ಆಗಿ ಆಸ್ಪತ್ರೆಯಲ್ಲಿದ್ದಾನೆ ಎಂದು ಹೇಳಿದಾಗ ಭೂಮಿಕಾಳಿಗೆ ಬೇಸರವಾಗುತ್ತದೆ. ಯಾರಿಗೂ ಹೇಳದೇ ಭೂಮಿಕಾ ಆಸ್ಪತ್ರೆಗೆ ಹೋಗುತ್ತಾಳೆ. ಭುಮಿಕಾ ಬಂದಿದ್ದು ನೋಡಿ ಗೌತಮ್‌ಗೆ ಶಾಕ್ ಜೊತೆಗೆ ಮುಜುಗರವೂ ಆಗುತ್ತದೆ.

ತಮಾಷೆ ಮಾಡಿ ನಕ್ಕ ಜೋಡಿಗಳು
ಭೂಮಿಕಾ, ಗೌತಮ್‌ಗೆ ಮುಜುಗರವಾಗಬಾರದು ಎಂದು ಏನಾಯ್ತು ಎಂದು ಕೇಳುವುದಿಲ್ಲ. ಬದಲಿಗೆ ಬೇರೆ ವಿಚಾರಗಳನ್ನು ಮಾತನಾಡುತ್ತಾಳೆ. ಆಗ ಗೌತಮ್ ತಾನು ಡಯಟ್ ಮಾಡುತ್ತಿರುವ ವಿಚಾರವನ್ನು ಹೇಳುತ್ತಾನೆ. ಬಳಿಕ ಆನಂದ್ ಮತ್ತು ಅಪರ್ಣಾ ಇರುವಾಗ ಡಯಟ್ ಮಾಡಿ ಮನೆಗೆ ಹೋದ ಮೇಲೆ ಊಟ ಮಾಡುವ ಸತ್ಯವನ್ನೂ ಹೇಳುತ್ತಾನೆ. ಇದರಿಂದ ಭೂಮಿಕಾಳಿಗೆ ನಗು ಬರುತ್ತದೆ. ಇನ್ನು ಭುಮಿಕಾ, ಭಾರವಾದ ಬಟ್ಟೆಯನ್ನು ಧರಿಸಿದ್ದು, ಪದೇ ಪದೇ ಸ್ಲಿಪ್ ಆಗುತ್ತಿರುವ ಬಗ್ಗೆ ಮಾತನಾಡುತ್ತಾರೆ. ಇಬ್ಬರೂ ಮಾತನಾಡುತ್ತಾ ನಗುತ್ತಿರುತ್ತಾರೆ. ಇದನ್ನು ನೋಡುವ ಆನಂದ್‌ಗೆ ಬಹಳ ಖುಷಿಯಾಗುತ್ತದೆ.
ನಾರ್ಮಲ್ ಆಯ್ತು ಗೌತಮ್ ಬಿಪಿ
ಆಫೀಸ್, ಮನೆ, ಮದುವೆ ಟೆನ್ಷನ್ ಇದ್ದಿದ್ದರಿಂದ ಗೌತಮ್‌ಗೆ ಬಿಪಿ ಹೆಚ್ಚಾಗಿ ಆಸ್ಪತ್ರೆ ಸೇರುವಂತಾಗಿತ್ತು. ವೈದ್ಯರು ಕೂಡ ಬಿಪಿ ನಾರ್ಮಲ್ ಆಗುವವರೆಗೂ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ಹೇಳಿರುತ್ತಾರೆ. ಆನಂದ್, ಭೂಮಿಕಾಳನ್ನು ಆಸ್ಪತ್ರೆಗೆ ಕರೆಸಿದ ಬಳಿಕ ಗೌತಮ್ ಮತ್ತು ಭೂಮಿ ಮಾತನಾಡುತ್ತಾರೆ. ಆಗ ಗೌತಮ್‌ಗೆ ಟೆನ್ಷನ್ ಎಲ್ಲಾ ಕಡಿಮೆ ಆಗಿ ಬಿಪಿ ನಾರ್ಮಲ್ ಆಗುತ್ತದೆ. ಇಬ್ಬರೂ ಕೂಡ ಮೆಹಂದಿ ಕಾರ್ಯಕ್ರಮಕ್ಕೆ ಬರುತ್ತಾರೆ.
ಖುಷಿಯಾದ ಅಜ್ಜಿ
ಇತ್ತ ಅಜ್ಜಿ, ಭೂಮಿಕಾ ಮೇಲೆ ಕೋಪ ಮಾಡಿಕೊಂಡಿರುತ್ತಾರೆ. ಕಾರ್ಯಕ್ರಮ ಬಿಟ್ಟು ಹೊರಗಡೆ ಹೋಗಿದ್ದಕ್ಕೆ ಬೈಯುತ್ತಾರೆ. ಆಗ ಆನಂದ್ ನಡೆದ ಘಟನೆಯನ್ನು ಹೇಳಿ, ಭೂಮಿಕಾಳಿಂದಲೇ ಗೌತಮ್ ಹುಷಾರಾಗುವ ಹಾಗಾಯ್ತು ಎಂದಿದ್ದಕ್ಕೆ ಅಜ್ಜಿ ಖುಷಿಪಡುತ್ತಾರೆ. ಭೂಮಿಕಾ ಮೇಲಿದ್ದ ಕೋಪ ಹೋಗಿ ಪ್ರೀತಿಯನ್ನು ತೋರಿಸುತ್ತಾರೆ.
ಶುರುವಿನಲ್ಲೇ ಕಥೆಯ ಎಳೆದಾಟ
ಇನ್ನು ಅಮೃತಧಾರೆ ಶುರುವಿನಲ್ಲಿ ಅದ್ಭುತವಾಗಿ ಮೂಡಿ ಬರುತ್ತಿತ್ತು. ಭೂಮಿಕಾ ಹಾಗೂ ಗೌತಮ್ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಆದರೆ, ಮದುವೆ ಮಾತು ಶುರುವಾದ ಮೇಲೆ ಕಥೆ ರಬ್ಬರ್ ಎಳೆದಂತೆ ಆಗುತ್ತಿದೆ. ಹಳೆಯ ಧಾರಾವಾಹಿಗಳಲ್ಲಿ ಆಗುತ್ತಿದ್ದಂತೆ ಒಂದು ದಿನದ ಸೀನ್ ಗಳನ್ನು ಮೂರು-ನಾಲ್ಕು ಎಪಿಸೋಡ್‌ಗಳಲ್ಲಿ ತೋರಿಸಲಾಗುತ್ತಿದೆ. ಇದು ವೀಕ್ಷಕರಿಗೆ ಬೇಸರ ತರುತ್ತಿದೆ. ಧಾರಾವಾಹಿ ಶುರುವಾಗಿ ಎರಡು ತಿಂಗಳಷ್ಟೇ ಆಗಿದೆ. ಅಷ್ಟು ಬೇಗ ಕಥೆಯನ್ನು ಎಳೆಯುತ್ತಿರುವುದು ವೀಕ್ಷಕರ ಆಸಕ್ತಿ ಕಡಿಮೆ ಮಾಡಿದೆ.


Click it and Unblock the Notifications











