Amruthadhaare: ಮಗಳ ಮದುವೆಯ ಅಪ್ಪನ ಬದುಕಲ್ಲಿ ಬರುವ ಒಂದು ಹಬ್ಬ ಎಂದು ಭೂಮಿಕಾ ಹೇಳಿದ್ಯಾಕೆ..?

By ಪ್ರಿಯಾ ದೊರೆ

ಸದಾಶಿವನ ಮದುವೆಯ ಕನಸಿನ ಬಗ್ಗೆ ಭೂಮಿಕಾ ಬೇಸರ ಮಾಡಿಕೊಂಡು ಗೌತಮ್ ದಿವಾನ್ ಬಳಿ ಕಣ್ಣೀರಿಟ್ಟು ಮಾತನಾಡಿದ್ದಾಳೆ. ನಿಮ್ಮ ಮನೆಯವರ ಮದುವೆ ಪ್ಲ್ಯಾನ್‌ನಲ್ಲಿ ನನ್ನಪ್ಪನ ಮದುವೆಯ ಕನಸು ಮುದುಡಿ ಹೋಗಿದೆ. ತಂದೆಗೆ ತನ್ನ ಮಗಳ ಮದುವೆ ಜೀವನದಲ್ಲಿ ಒಂದೇ ಬಾರಿಗೆ ಬರುವಂತಹ ಹಬ್ಬ ಎಂದು ಭೂಮಿಕಾ ಹೇಳುತ್ತಾಳೆ. ದುಃಖ ತಾಳಲಾರದೇ ಅಲ್ಲಿಂದ ಹೊರಟು ಬಿಡುತ್ತಾಳೆ.

ಗೌತಮ್ ಆಗ ಭೂಮಿಕಾ ತಂದೆ ಸದಾಶಿವನ ಬಗ್ಗೆ ಯೋಚಿಸುತ್ತಾನೆ. ಸೀದಾ ಅವರ ಬಳಿ ಹೋಗಿ ಮಾತನಾಡುತ್ತಾನೆ. ಯಾಕೆ ಹೀಗಿದ್ದೀರಾ ಏನಾಯ್ತು ಎಂದು ಕೇಳುತ್ತಾನೆ. ಸದಾಶಿವ ತನ್ನ ದುಃಖ ಹಾಗೂ ನೋವನ್ನು ತೋರಿಸಿಕೊಳ್ಳುವುದಿಲ್ಲ. ಆದರೆ, ಗೌತಮ್ ಅಷ್ಟಕ್ಕೆ ಸುಮ್ಮನಾಗದೇ ಕೆದಕಿ ಕೇಳುತ್ತಾನೆ. ಮಗಳ ಮದುವೆಯ ಬಗ್ಗೆ ಯೋಚಿಸುತ್ತೀದ್ದೀರಾ ಅಲ್ವಾ..? ನಾನೂ ಕೂಡ ನನ್ನ ತಂಗಿಯ ಮದುವೆಯನ್ನು ಮಾಡುತ್ತಿದ್ದೇನೆ. ಅವಳನ್ನು ನಾನು ತಂಗಿ ಎನ್ನುವುದಕ್ಕಿಂತ ಮಗಳಂತೆ ನೋಡಿಕೊಂಡಿದ್ದೇನೆ. ನಾನೂ ಅಪ್ಪನಂತೆ ಅವಳ ಮದುವೆ ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ.

Amruthadhaare-Serial

ಮಾವ- ಅಳಿಯನ ಮಾತು

ಬಳಿಕ ನಿಮ್ಮ ಶಕ್ತಿ ಹೇಗಿದೆಯೋ ಹಾಗೆ ನನ್ನ ಹಾಗೂ ಭೂಮಿಕಾ ಮದುವೆಯನ್ನು ಮಾಡಿಕೊಡಿ. ನನ್ನದೇನೂ ಅಭ್ಯಂತರವಿಲ್ಲ. ನನ್ನ ತಂಗಿಯ ಮದುವೆಯನ್ನು ನಾನು ಅದ್ಧೂರಿಯಾಗಿಯೇ ಮಾಡಬಹುದು. ಆದರೆ, ನಿಮ್ಮ ಮಗಳ ಮದುವೆಯನ್ನು ನಿಮ್ಮಿಷ್ಟದಂತೆ ಮಾಡಿಕೊಡಿ ನನಗೇನು ಸಮಸ್ಯೆ ಇಲ್ಲ ಎನ್ನುತ್ತಾನೆ. ಇದರಿಂದ ಸದಾಶಿವನಿಗೆ ಖುಷಿಯಾಗುತ್ತದೆ.

ಗೌತಮ್ ಹೊಸ ನಿರ್ಧಾರ

ಗೌತಮ್, ಸದಾಶಿವನ ಕೈ ಹಿಡಿದು ಮನೆಯೊಳಗೆ ಕರೆದುಕೊಂಡು ಬರುತ್ತಾನೆ. ಇದನ್ನು ನೋಡಿದ ಶಕುಂತಲಾಳಿಗೆ ಶಾಕ್ ಆಗುತ್ತದೆ. ಗೌತಮ್ ಮದುವೆಯ ವಿಚಾರದಲ್ಲಿ ಒಂದು ಸಣ್ಣ ಬದಲಾವಣೆ. ಮಹಿಮಾ ಮದುವೆಯನ್ನು ನಾವು ಅಂದುಕೊಂಡಂತೆ ಮಾಡುತ್ತೇವೆ. ಆದರೆ, ನನ್ನ ಹಾಗೂ ಭೂಮಿಕಾ ಮದುವೆಯನ್ನು ಸದಾಶಿವ ಅವರು ಚೌಟ್ರಿ ಅಲ್ಲೋ ಇಲ್ಲ ದೇವಸ್ಥಾನದಲ್ಲೋ ಮಾಡಿಕೊಡುತ್ತಾರೆ. ಮಹಿಮಾ- ಜೀವನ್ ಮದುವೆ ಬೆಳಗ್ಗೆ ನಡೆಯುತ್ತದೆ. ನಮ್ಮ ಮದುವೆ ಮಧ್ಯಾಹ್ನ ನಡೆಯುತ್ತದೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಕೂಡಲೇ ಎಲ್ಲರೂ ಶಾಕ್ ಆಗುತ್ತಾರೆ.

Amruthadhaare-Serial

ಭೂಮಿಕಾ, ಸದಾಶಿವಗೆ ಖುಷಿ

ಜಯದೇವ ಮದುವೆಗೆ ಆಗ ಬರುವವರೆಲ್ಲಾ ವಾಪಸ್ ಹೊರಡುತ್ತಾರೆ ಎಂದು ಹೇಳುತ್ತಾನೆ. ಅದಕ್ಕೆ ಗೌತಮ್ ನಮ್ಮನ್ನು ನೋಡಿ ಬರುವವರು ಮದುವೆಗೆ ಬಂದರೆ ಸಾಕು ಎಂದು ಮಾತು ಮುಗಿಸುತ್ತಾನೆ. ಇದರಿಂದ ಭೂಮಿಕಾ ಹಾಗೂ ಸದಾಶಿವ ಖುಷಿ ಪಡುತ್ತಾರೆ. ಇನ್ನು ಶಕುಂತಲಾಳಿಗೆ ಈಗ ಭೂಮಿಕಾ ಹಾಗೂ ಸದಾಶಿವನ ಬಗ್ಗೆ ಯೋಚನೆ ಶುರುವಾಗಿದೆ. ಈ ಬಗ್ಗೆ ತನ್ನ ಸಹೋದರ ಹಾಗೂ ಮಗ ಜಯದೇವನ ಬಳಿ ಮಾತನಾಡುತ್ತಾಳೆ.

ಶಕುಂತಲಾಳ ಆತಂಕ

ಈಗಲೇ ಸದಾಶಿವ ಅವರು ಗೌತಮ್‌ನನ್ನು ತಮಗೆ ಬೇಕಾದಂತೆ ಬದಲಿಸಿದ್ದಾರೆ. ಮುಂದೆ ಇದರಿಂದ ನಮಗೆ ಸಮಸ್ಯೆ ಆಗುತ್ತದೆ ಎಂದು ಹೇಳಿಕೊಳ್ಳುತ್ತಾಳೆ. ಆಗ ಜಯದೇವ ಅದೆಲ್ಲಾ ಸಾಧ್ಯವಿಲ್ಲ ಮಾಮ್, ನೀವು ಹೆದರಿಕೊಳ್ಳಬೇಡಿ ಎಂದು ಹೇಳುತ್ತನೆ. ಶಕುಂತಲಾ ಅವರ ಸಹೋದರ ಕೂಡ ಡೋಂಟ್ ವರಿ ಭೂಮಿಕಾ ಡಬಲ್ ಗ್ರ್ಯಾಜ್ಯುವೇಟ್ ಮಾಡಿಕೊಂಡಿರುವ ಪರ್ಮನೆಂಟ್ ಮನೆ ಕೆಲಸದವಳು. ನೀನೇನೂ ಯೋಚಿಸಬೇಡ ಎಂದು ಹೇಳುತ್ತಾರೆ.

ಮನಸ್ಸು ಕೆಡಿಸಿದ ಮಹಿಮಾ ಅಕ್ಕ

ಇನ್ನು ಎಲ್ಲರೂ ಊಟ ಮಾಡಿಕೊಂಡು ಮನೆಯಿಂದ ಹೊರಡುತ್ತಾರೆ. ಆಗ ಶಕುಂತಲಾ ಕಾರಿನ ವ್ಯವಸ್ಥೆ ಮಾಡಲು ಹೇಳುತ್ತಾಳೆ. ಆದರೆ, ಮಂದಾಕಿನಿ ಇಲ್ಲ ಬೇಡ ಬೇಡ. ನಮ್ಮದೇ ಕಾರಿನಲ್ಲಿ ಬಂದಿದ್ದೇವೆ ಎಂದು ಹೇಳುತ್ತಾಳೆ. ಆಗ ಹಳೆಯ ಕಾರು ಎಂದು ಮನದೊಳಗೇ ಲೆಕ್ಕಾಚಾರ ಹಾಕಿಕೊಳ್ಳುತ್ತಾರೆ. ಇನ್ನು ಅವರೆಲ್ಲಾ ಒಂದೇ ಕಾರಿನಲ್ಲಿ ಹೋಗುವುದಾಗಿ ಹೇಳಿ ಹೊರಡುತ್ತಾರೆ. ಆಗ ಮಹಿಮಾಳಿಗೆ ಅವರ ಅಕ್ಕ ಅಂಜಲಿ ರೇಗಿಸುತ್ತಾಳೆ. ಇಷ್ಟು ವರ್ಷ ದೊಡ್ಡ ದೊಡ್ಡ ಕಾರಿನಲ್ಲಿ ಓಡಾಡಿದ ನೀನು ಇನ್ಮೇಲೆ ಅವರ ಮನೆಯ ಕಾರನ್ನು ಹೇಗೆ ಬಳಸುತ್ತೀಯೋ ಎಂದು ವ್ಯಂಗ್ಯವಾಗಿ ಮಾತನಾಡುತ್ತಾಳೆ. ಇದು ಮಹಿಮಾಳ ಮನಸ್ಸನ್ನು ಕೆಡಿಸುತ್ತದೆ.

More from Filmibeat

English summary
Amruthadhaare Serial 18th July episode written update. here is details about Gautham Diwan agrees to marry as his father in law wish. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X