Amruthadhare : ಪಂಕಜಾ ರಹಸ್ಯ ತಿಳಿಯಲು ಗೌತಮ್ ಜೊತೆ ಹೊರಟ ಭೂಮಿಕಾ !
ಅಮೃತಧಾರೆ ಧಾರಾವಾಹಿಯನ್ನು ಈಗ ಪಂಕಜಾ ಆವರಿಸಿಕೊಂಡಿದ್ದಾಳೆ. ಪಂಕಜಾ ಯಾರು ಎನ್ನುವ ಪ್ರಶ್ನೆ ಈಗ ಭೂಮಿಕಾಗೆ ಮಾತ್ರವಲ್ಲ ಬದಲಿಗೆ ಪ್ರೇಕ್ಷಕರಿಗೆ ಕೂಡ ಕಾಡುತ್ತಿದೆ. ದಿನದಿಂದ ದಿನಕ್ಕೆ ಕುತೂಹಲ ಕೂಡ ಹೆಚ್ಚಾಗುತ್ತಿದೆ. ಇನ್ನೂ ಪಂಕಜಾ ರಹಸ್ಯ ಎಲ್ಲಿ ಬಯಲಾಗುತ್ತೋ ಎಂಬ ಆತಂಕ ಶಕುಂತಲಾಳನ್ನು ಕಾಡುತ್ತಿದ್ದು ಪಂಕಜಾ ರಹಸ್ಯ ತಿಳಿಯಲು ಮುಂದಾಗಿರುವ ಭೂಮಿಕಾಗೆ ಆನಂದ್ ಕೂಡಾ ಸದ್ಯ ಸಾಥ್ ನೀಡಿದ್ದಾನೆ.
ಶಕುಂತಲಾಳನ್ನು ಬ್ಲಾಕ್ ಮೇಲ್ ಮಾಡುತ್ತಿರುವ ಹಳ್ಳಿ ಹೆಂಗಸು
ಪಂಕಜಾ ರಹಸ್ಯ ಭೂಮಿಕಾ ಬೆನ್ನತ್ತಿರುವ ಸಮಯದಲ್ಲಿ ಹಳ್ಳಿ ಹೆಂಗಸು ಗೌತಮ್ ದಿವಾನ್ ಮನೆಗೆ ಕರೆ ಮಾಡಿದ್ದಾಳೆ. ವಿಚಾರ ಯಾರಿಗೂ ಹೇಳಬಾರದು ಅಂದರೆ ನನಗೆ ದುಡ್ಡು ಕೊಡು ಎಂದು ಶಕುಂತಲಾ ಗೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಕನಕಪುರ ಬಳಿ ಇರುವ ಕಾಪಿ ಶಾಪ್ ಗೆ ಬರುವಂತೆ ಆ ಹಳ್ಳಿ ಹೆಂಗಸಿಗೆ ಶಕುಂತಲಾ ಹೇಳಿದ್ದಾಳೆ.

ಇಬ್ಬರ ಮಾತುಕಥೆ ಕೇಳಿಸಿಕೊಂಡ ಭೂಮಿಕಾ
ಶಕುಂತಲಾ ಮತ್ತು ಹಳ್ಳಿ ಹೆಂಗಸಿನ ಮಾತುಗಳನ್ನು ಭೂಮಿಕಾ ಸದ್ಯ ಕೇಳಿಸಿಕೊಂಡಿದ್ದಾಳೆ. ಪಂಕಜಾ ಮತ್ತು ಶಕುಂತಲಾ ದೇವಿ ಇಬ್ಬರು ಒಂದೇ ಎನ್ನುವ ತೀರ್ಮಾನಕ್ಕೆ ಬಂದಿರುವ ಭೂಮಿಕಾ ಸತ್ಯದ ಹುಡುಕಾಟದಲ್ಲಿ ಗೌತಮ್ ಕೂಡ ತನ್ನ ಜೊತೆ ಇರಬೇಕೆಂದುಕೊಳ್ಳುತ್ತಾಳೆ.
ಆನಂದ್ ಸಹಾಯ ಪಡೆದ ಭೂಮಿಕಾ
ಆನಂದ್ ಬಳಿ ಹೇಗಾದರೂ ಮಾಡಿ ಗೌತಮ್ ಅವರನ್ನು ಹಳ್ಳಿ ಹೆಂಗಸು ಇರುವ ಕನಕದುರ್ಗಾಗೆ ಕರೆದುಕೊಂಡು ಹೋಗಬೇಕೆಂದು ಭೂಮಿಕಾ ಹೇಳುತ್ತಾಳೆ. ಇದಕ್ಕೆ ಒಪ್ಪಿಕೊಳ್ಳುವ ಆನಂದ್ ಒಮ್ಮೆ ಕನಕದುರ್ಗಾ ಬಳಿ ಇರುವ ಫ್ಯಾಕ್ಟರಿಗೆ ಹೋಗಿ ಬರೋಣ ಎಂದು ಗೌತಮ್ ಗೆ ಹೇಳುತ್ತಾನೆ. ಆನಂದ್ ಹೇಳಿದ ಮಾತನ್ನು ಗೌತಮ್ ಕೂಡ ಒಪ್ಪಿಕೊಂಡು ಸರಿ ಎಂದು ಹೇಳುತ್ತಾನೆ.
ಹಠ ಮಾಡುವ ಭೂಮಿಕಾ
ಗೌತಮ್ ಕನಕದುರ್ಗಾಗೆ ಹೋಗಲು ಮುಂದಾದಾಗ ಇವತ್ತು ಮನೆಯಲ್ಲಿ ಇರುವುದಾಗಿ ನೀವು ಹೇಳಿದ್ರೀ ಆದರೆ ಈಗ ಕನಕದುರ್ಗಾಗೆ ಹೋಗ್ತಿದ್ದೀರಾ, ನಿಮ್ಮ ಜೊತೆ ನಾನು ಬರುತ್ತೇನೆ ಎಂದು ಹಠ ಮಾಡುತ್ತಾಳೆ. ಆರಂಭದಲ್ಲಿ ಒಪ್ಪದ ಗೌತಮ್ ಕೊನೆಯಲ್ಲಿ ಸರಿ ಎಂದು ಹೇಳುತ್ತಾನೆ.
ಭೂಮಿಕಾ-ಗೌತಮ್ ಎದುರು ಸತ್ಯ ಬಯಲಾಗುತ್ತಾ ?
ಗೌತಮ್ ಜೊತೆ ಹೊರಟಿರುವ ಭೂಮಿಕಾ ಆ ಹಳ್ಳಿ ಹೆಂಗಸನ್ನು ಪತ್ತೆ ಮಾಡುತ್ತಾಳಾ ? ಪಂಕಜಾ ರಹಸ್ಯವನ್ನು ಗೌತಮ್ ಮತ್ತು ಭೂಮಿಕಾ ಎದುರು ಆಕೆ ಹೇಳುತ್ತಾಳಾ ? ಈ ಮೂಲಕ ಶಕುಂತಲಾ ಮುಚ್ಚಿಟ್ಟಿದ್ದ ಸತ್ಯ ಹೊರ ಬರುತ್ತಾ ಎನ್ನುವ ಪ್ರಶ್ನೆ ಸದ್ಯ ಅನೇಕರನ್ನು ಕಾಡುತ್ತಿದೆ. ಇದೇ ಸಮಯದಲ್ಲಿ ಒಂದು ವೇಳೆ ಶಕುಂತಲಾ ಸತ್ಯ ಇಷ್ಟು ಬೇಗ ಹೊರ ಬಂದಿದ್ದೇ ಆದರೆ ಅದು ಧಾರಾವಾಹಿ ಮುಕ್ತಾಯವಾಗುವ ಸೂಚನೆ ಎನ್ನುವ ಅಭಿಪ್ರಾಯ ಕೂಡ ಸದ್ಯ ಕಿರುತೆರೆ ಪ್ರೇಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು ಟಿಆರ್‌ಪಿ ರೇಸ್‌ನಲ್ಲಿ ಅಮೃತಧಾರೆ ಕೊಂಚ ಹಿಂದೆ ಬಿದ್ದಿದೆ. ಹೀಗಾಗಿ ಧಾರಾವಾಹಿಯನ್ನು ಮತ್ತೆ ಮುಂಚೂಣಿಗೆ ತರಲು ನಿರ್ದೇಶಕರು ಪಂಕಜಾ ಎನ್ನುವ ಮತ್ತೊಂದು ಪಾತ್ರವನ್ನು ಸೃಷ್ಟಿಸುತ್ತಿದ್ದಾರೆ, ಪಂಕಜಾ ವಿಚಾರದಲ್ಲಿ ಕುತೂಹಲ ಕೆರಳಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕೂಡ ಹಲವಾರು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಒಟ್ನಲ್ಲಿ ಸದ್ಯ ಅಮೃತಧಾರೆ ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮುಂದೇನಾಗುತ್ತೆ ಎನ್ನುವ ಪ್ರಶ್ನೆ ಹಲವರಲ್ಲಿದೆ. ಪಂಕಜಾ ಯಾರು ಎನ್ನುವ ಜಿಜ್ಞಾಸೆ ಕೂಡ ಇದೆ. ಪಂಕಜಾ ಎಪಿಸೋಡ್‌ಗೆ ಶೀಘ್ರದಲ್ಲಿಯೇ ತೆರೆ ಬೀಳುತ್ತಾ ? ಪಂಕಜಾ ಯಾರೆನ್ನುವ ವಿಚಾರ ಗೊತ್ತಾಗುತ್ತಾ ? ಶಕುಂತಲಾ ದೇವಿ ಮುಂದೇನು ಮಾಡುತ್ತಾಳೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











