Amruthadhaare ; ಪಾರ್ಥ ಮತ್ತು ಅಪೇಕ್ಷಾ ಪ್ರೀತಿ, ಕೆಂಡಾಮಂಡಲಗೊಂಡ ಶಕುಂತಲಾ..!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್ ನಡುವೆ ಮತ್ತೆ ಪ್ರೇಮ ಚಿಗುರಿದೆ. ಭೂಮಿಕಾಳಿಗೋಸ್ಕರ ಗೌತಮ್ ಕಾಲು ಗೆಜ್ಜೆ ತಂದುಕೊಟ್ಟಿದ್ದು, ಇಬ್ಬರೂ ಹ್ಯಾಪಿ ಆಗಿದ್ದಾರೆ. ಗೌತಮ್ ಪ್ರಪೋಸ್ ಮಾಡಲಿ ಎಂದು ಭೂಮಿಕಾ ಕಾಯುತ್ತಿದ್ದಾಳೆ. ಆದರೆ, ಗೌತಮ್ ಧೈರ್ಯ ತಂದುಕೊಂಡು ಯಾವಾಗ ಪ್ರಪೋಸ್ ಮಾಡುತ್ತಾನೋ ಕಾದು ನೋಡಬೇಕಿದೆ. ಇತ್ತ ಅಪೇಕ್ಷಾ ಮತ್ತು ಪಾರ್ಥನ ಪ್ರೀತಿ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಇಬ್ಬರೂ ಒಟ್ಟಿಗೆ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿದ್ದಾರೆ. ಅಪೇಕ್ಷಾ ಇದಕ್ಕೋಸ್ಕರ ಮನೆಯಲ್ಲಿ ಸುಳ್ಳು ಹೇಳಿದ್ದಾಳೆ.
ಟ್ರಿಪ್ ಹೊರಟ ಅಪೇಕ್ಷಾ-ಪಾರ್ಥ
ಫ್ಯಾಶನ್ ಶೂಟ್ ಇದೆ. ಊಟಿಗೆ ಹೋಗಬೇಕು ಎಂದು ಅಪೇಕ್ಷಾ ಮನೆಯಲ್ಲಿ ಸುಳ್ಳು ಹೇಳಿದ್ದಾಳೆ. ಅವಳ ಸುಳ್ಳನ್ನು ನಂಬಿ ಮನೆಯವರು ಅಪೇಕ್ಷಾ ಹೊರಗೆ ಹೋಗಲು ಪರ್ಮಿಷನ್ ಕೊಟ್ಟಿದ್ದಾರೆ. ಇತ್ತ ಪಾರ್ಥ ಸ್ನೇಹಿತನ ಮದುವೆ ಇದೆ. ಹೈದರಾಬಾದ್ ಗೆ ಹೋಗಿ ಬರುತ್ತೇನೆ ಎಂದು ಸುಳ್ಳು ಹೇಳಿದ್ದಾನೆ. ಇಬ್ಬರೂ ಜಾಲಿಯಾಗಿ ಎರಡು ದಿನದ ಟ್ರಿಪ್ ಪ್ಲಾನ್ ಮಾಡಿಕೊಂಡು ಹೊರಟಿದ್ದಾರೆ. ಭೂಮಿಕಾ ಬಳಿಯೂ ಇಬ್ಬರೂ ಕೂಡ ಇದೇ ಸುಳ್ಳನ್ನು ಹೇಳಿದ್ದಾರೆ. ದಾರಿ ಮಧ್ಯೆ ಸ್ನ್ಯಾಕ್ಸ್ ಗಾಗಿ ಗಾಡಿ ನಿಲ್ಲಿಸಿರುವ ಪಾರ್ಥ ಬೇಕರಿಯಲ್ಲಿ ತಿಂಡಿಯನ್ನು ಖರೀದಿಸಿದ್ದಾನೆ. ಇದನ್ನು ಪಾರ್ಥ ತಾಯಿ ಶಕುಂತಲಾ ಗಮನಿಸಿದ್ದು, ಜೊತೆಗೆ ಅಪೇಕ್ಷಾ ಇರುವುದನ್ನು ನೋಡಿದ್ದಾಳೆ.

ಪಾರ್ಥನನ್ನು ಕಂಡು ಶಕುಂತಲಾ ಗರಂ
ಇದೆಲ್ಲವೂ ಭೂಮಿಕಾಳದ್ದೇ ಕೈವಾಡ. ಅವಳ ಕುಮ್ಮಕ್ಕಿನಿಂದಲೇ ಅಪೇಕ್ಷಾ ಮತ್ತು ಪಾರ್ಥ ಪ್ರೀತಿ ಮಾಡುತ್ತಿದ್ದಾರೆ ಎಂದು ಶಕುಂತಲಾ ಗರಂ ಆಗಿದ್ದಾಳೆ. ಮನೆಗೆ ಬಂದವಳೇ ಭೂಮಿಕಾಳನ್ನು ತರಾಟೆಗೆ ತೆಗೆದುಕೊಳ್ಳಬೇಕು ಎಂದು ಮುಂದಾಗುತ್ತಾಳೆ. ಅಷ್ಟರಲ್ಲಿ ಜೈದೇವ ತಾಯಿಯನ್ನು ತಡೆದು ಏನಾಯ್ತು ಎಂದು ಕೇಳಿದ್ದಾನೆ. ಪಾರ್ಥ ಮತ್ತು ಅಪೇಕ್ಷಾ ಬಗ್ಗೆ ಹೇಳಿದಾಗ ಈ ವಿಚಾರ ನನಗೆ ಮೊದಲೇ ಗೊತ್ತು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಶಕುಂತಲಾಳೀಗೆ ಇನ್ನಷ್ಟು ಬೇಸರವಾಗುತ್ತದೆ. ನಿನಗೆ ಸತ್ಯ ಗೊತ್ತಿದ್ದರೂ ಕೂಡ ಸುಮ್ಮನಿದ್ದೆಯಾ ಎಂದು ನೊಂದುಕೊಳ್ಳುತ್ತಾಳೆ.

ಭೂಮಿಕಾಳನ್ನು ಮಟ್ಟ ಹಾಕಲು ಜೈ ಪ್ಲಾನ್
ಆಗ ಜೈದೇವ ಒಂದು ಒಳ್ಳೆಯ ಐಡಿಯಾವನ್ನು ಕೊಡುತ್ತಾನೆ. ಭೂಮಿಕಾಳನ್ನು ಈಗಲೇ ಪ್ರಶ್ನೆ ಮಾಡಿದರೆ ಸಮಸ್ಯೆ ಆಗುತ್ತದೆ. ಇಬ್ಬರೂ ಇನ್ನಷ್ಟು ಮುಂದುವರೆಯಲಿ. ನಂತರ ಈ ಆಟದಲ್ಲೇ ಇಲ್ಲದ ಭೂಮಿಕಾಳನ್ನು ಸೇರಿಸಿಕೊಂಡು ಅವಳ ಮೇಲೆ ಗೂಬೆ ಕೂರಿಸೋಣ. ಆಗ ಗೌತಮ್ ಕಣ್ಣಿಗೆ ಭೂಮಿಕಾ ಕೆಟ್ಟವಳಾಗುತ್ತಾಳೆ. ಪರ್ಮನೆಂಟ್ ಆಗಿ ಭೂಮಿಕಾಳನ್ನು ಮನೆಯಿಂದ ಹೊರಗೆ ಹಾಕಬಹುದು. ಮಲ್ಲಿಗೂ ಒಂದು ದಾರಿ ಕಾಣಿಸಿದರೆ, ನಮ್ಮ ಸಮಸ್ಯೆ ಎಲ್ಲಾ ಬಗೆ ಹರಿಯುತ್ತದೆ ಎಂದು ಹೇಳುತ್ತಾನೆ. ಮಗನ ಮಾತನ್ನು ಕೇಳಿದ ಶಕುಂತಲಾ ಹಾಗೆಯೇ ಮಾಡೋಣ ಎಂದು ಹೇಳಿದ್ದಾಳೆ.

ಫುಡ್ ಡೆಲಿವರಿ ಬಾಯ್ ಆದ ಜೀವನ್
ಇತ್ತ ಜೀವನ್ ಪರಿಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಕೆಲಸವಿಲ್ಲದೇ, ಮನೆಯಲ್ಲಿ ಸತ್ಯ ಹೇಳಲೂ ಆಗುತ್ತಿಲ್ಲ. ತಿಂಗಳು ಕಳೆಯುವುದರೊಳಗೆ ಸಂಬಳ ಹೊಂಚಿಕೊಳ್ಳಬೇಕು. ಹೀಗಾಗಿಯೇ ಜೀವನ್ ಬೇರೆ ದಾರಿ ಕಾಣದೇ, ಫುಡ್ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಆದರೆ, ಮನೆಯಲ್ಲಿ ಈ ಸತ್ಯವನ್ನು ಮುಚ್ಚಿಟ್ಟಿದ್ದಾನೆ. ಕೆಲಸ ಮುಗಿಸಿ ಲೇಟ್ ಆಗಿ ಬಂದ ಜೀವನ್ ನನ್ನು ಕಂಡು ಮಹಿಮಾ ಅನುಮಾನಗೊಂಡಿದ್ದಾಳೆ. ಆದರೆ, ಜೀವನ್ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾನೋ ಕಾದು ನೋಡಬೇಕಿದೆ.


Click it and Unblock the Notifications











