Amruthadhaare: ಜೈದೇವನ ಬಗ್ಗೆ ಸತ್ಯ ತಿಳಿದ ಭೂಮಿಕಾ ಮಾಡಿಕೊಂಡಳು ಎಡವಟ್ಟು
ಅಮೃತಧಾರೆ ಧಾರಾವಾಹಿಯಲ್ಲಿ ಸಾಲು ಸಾಲಾಗಿ ಮದುವೆಗಳು ನಡೆಯುತ್ತಿವೆ. ಧಾರಾವಾಹಿ ಆರಂಭವಾಗಿದ್ದೇ ಗೌತಮ್ ಸಹೋದರಿ ಅಶ್ವಿನಿ ಮದುವೆ ಮೂಲಕ. ನಂತರ ಜೀವನ್-ಮಹಿಮಾ ಮದುವೆ ಹಾಗೂ ಭೂಮಿಕಾ-ಗೌತಮ್ ವಿವಾಹ ನೆರವೇರಿತು. ಇದರ ನೆನಪು ಮಾಸುವ ಮುನ್ನವೇ ಈಗ ಮತ್ತೊಂದು ಮದುವೆ ನಡೆಯುತ್ತಿದೆ.ಅಪೇಕ್ಷಾ ಹಾಗೂ ಪಾರ್ಥ ಪ್ರೀತಿಸುತ್ತಿದ್ದಾರೆ. ಆದರೆ, ಮನೆಯಲ್ಲಿ ಅಪೇಕ್ಷಾ ಮತ್ತು ಜೈದೇವನ ಮದುವೆ ಫಿಕ್ಸ್ ಆಗಿದೆ. ಎಲ್ಲರೂ ಮದುವೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಮತ್ತೆ ಮತ್ತಿನಲ್ಲಿ ತೇಲಾಡಿದ ಭೂಮಿ-ಗೌತಮ್
ಇದೇ ಸಂದರ್ಭದಲ್ಲಿ ಪ್ರೇಮಿಗಳ ದಿನದ ಹಿನ್ನೆಲೆ ಪಾರ್ಟಿಯನ್ನು ಮಾಡಲಾಗಿದೆ. ಈ ಹಿಂದೆ ಭೂಮಿಕಾ ಕುಡಿದ ಜ್ಯೂಸ್ ಗೆ ಮದ್ಯ ಮಿಕ್ಸ್ ಮಾಡಿದಂತೆ ಈಗಲೂ ಆನಂದ್ ಮತ್ತು ಅಪರ್ಣಾ ಸೇರಿಕೊಂಡು ಜ್ಯೂಸ್ ನಲ್ಲಿ ಮದ್ಯ ಸೇರಿಸಿದ್ದಾರೆ. ಟ್ರುತ್ ಆರ್ ಡೇರ್ ಆಡಿದಾಗ ಭೂಮಿಕಾ, ಗೌತಮ್ ಗೆ ಎಲ್ಲರ ಎದುರು ಪ್ರಪೋಸ್ ಮಾಡಿದ್ದಾಳೆ. ಮದ್ಯ ಬೆರೆಸಿದ ಜ್ಯೂಸ್ ಕುಡಿದ ಭೂಮಿಕಾ, ಗೌತಮ್ ಗೆ ಕ್ವಾಟ್ಲೆ ಕೊಟ್ಟಿದ್ದಾಳೆ. ಸೆಲ್ಫಿ ಬೇಕು ಎಂದು ಹೇಳಿ ಹಠ ಹಿಡಿದವಳು ಗೌತಮ್ ಕೆನ್ನೆಗೆ ಚುಂಬಿಸಿದ್ದಾಳೆ. ಕುಡಿದ ಮತ್ತಿನಲ್ಲಿ ಭೂಮಿಕಾ ಅವರ ತಾಯಿ ಮಂದಾಕಿನಿ ಜೊತೆಗೆ ಮಾತನಾಡಿ, ನಡೆದ ಘಟನೆಗಳನ್ನೆಲ್ಲಾ ಸ್ವಲ್ಪವೂ ಅಂಜಿಕೆ ಇಲ್ಲದೇ ಹೇಳಿಕೊಂಡಿದ್ದಾಳೆ. ಗೌತಮ್ ಹಾಗೂ ಭೂಮಿಕಾ ಇಬ್ಬರೂ ಒಟ್ಟಿಗೆ ಮಲಗಿದ್ದು, ಭೂಮಿಕಾಳಿಗೆ ಪ್ರಜ್ಞೆಯೇ ಇಲ್ಲ.

ಸತ್ಯ ತಿಳಿದು ಒದ್ದಾಡಿದ ಭೂಮಿಕಾ
ಮಧ್ಯ ರಾತ್ರಿ ಎಚ್ಚರಗೊಂಡ ಭೂಮಿಕಾ ಟೈಮ್ ನೋಡಲು ಗೌತಮ್ ವಾಚ್ ತೆಗೆದುಕೊಂಡಿದ್ದಾಳೆ. ಅಗ ಜೈದೇವನ ವಾಚ್ ಮಲ್ಲಿ ಮನೆಯಲ್ಲಿ ಸಿಕ್ಕಿದ್ದು ನೆನಪಾಗಿ, ಈಗ ಮಲ್ಲಿ ಗರ್ಭಿಣಿ ಆಗಲು ಜೈದೇವನ ಕಾರಣ ಇರಬಹುದೇ ಎಂದು ಗೆಸ್ ಮಾಡಿದ್ದಾಳೆ. ಗಾಬರಿಯಲ್ಲಿ ಬೆಳಗಿನ ಜಾವವೇ ಮಲ್ಲಿ ಮನೆಗೆ ಹೋಗಿ ಸತ್ಯ ತಿಳಿದುಕೊಂಡಿದ್ದಾಳೆ. ಜೈದೇವನಿಂದಲೇ ಮಲ್ಲಿ ಗರ್ಭಿಣಿಯಾಗಿರುವ ವಿಚಾರ ತಿಳಿದು ಶಾಕ್ ಆಗಿದ್ದಾಳೆ. ಈಗ ಅಪೇಕ್ಷಾ ಮದುವೆ ಜೈದೇವನ ಜೊತೆಗೆ ನಡೆಯುತ್ತಿರುವುದಕ್ಕೆ ಗೊಂದಲಗೊಂಡಿದ್ದಾಳೆ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂದು ಗಾಬರಿಯಲ್ಲಿ ಒದ್ದಾಡಿದ್ದಾಳೆ. ಇತ್ತ ಅಪೇಕ್ಷಾ ಮನೆಯಲ್ಲಿ ಎಲ್ಲರೂ ಮದುವೆ ಸಂಭ್ರಮದಲ್ಲಿದ್ದು, ತಯಾರಿ ನಡೆಸುತ್ತಿದ್ದಾರೆ.
ಅತ್ತೆ ಬಳಿ ಸತ್ಯ ಹೇಳಿದ ಭೂಮಿಕಾ
ಅಷ್ಟರಲ್ಲಿ ಭೂಮಿಕಾಳಿಗೆ ಈ ಸತ್ಯ ತಿಳಿದ ವಿಚಾರವು ಶಕುಂತಲಾ ಕಿವಿಗೆ ಬಿದ್ದಿದೆ. ಹೀಗಾಗಿ ಶಕುಂತಲಾ ಜೈದೇವನ ಬಳಿ ಹೋಗಿ ನಡೆದಿರುವ ಘಟನೆ ಬಗ್ಗೆ ಖಾತರಿ ಪಡಿಸಿಕೊಂಡಿದ್ದಾಳೆ. ಪ್ಲಾನ್ ಮಾಡಿ ಭೂಮಿಕಾಳಿಂದ ಸತ್ಯವನ್ನು ಬಾಯಿ ಬಿಡಿಸಿಕೊಂಡಿದ್ದಾಳೆ. ಈ ವಿಚಾರವನ್ನು ಯಾವುದೇ ಕಾರಣಕ್ಕೂ ಗೌತಮ್ ಗೆ ತಿಳಿಸಬೇಡ. ಅಪೇಕ್ಷಾ ಹಾಗೂ ಮಲ್ಲಿ ಇಬ್ಬರಿಗೂ ಅನ್ಯಾಯವಾಗಲು ನಾನು ಬಿಡುವುದಿಲ್ಲ ಎಂದು ಭೂಮಿಕಾಳನ್ನು ನಂಬಿಸುವ ಪ್ರಯತ್ನ ಮಾಡಿದ್ದಾಳೆ.

ಮಲ್ಲಿ ಮನೆ ಖಾಲಿ ಖಾಲಿ
ಶಕುಂತಲಾ ಆ ಹುಡುಗಿ ಜೊತೆಗೆ ಮಾತನಾಡಿ ಸತ್ಯ ತಿಳಿಯಬೇಕು ಎಂದು ಭೂಮಿಕಾಳನ್ನು ಕರೆದುಕೊಂಡು ಹೋಗುತ್ತಾಳೆ. ನೋಡಿದರೆ, ಮಲ್ಲಿ ಮನೆ ಬೀಗ ಹಾಕಿರುತ್ತದೆ. ಬಾಗಿಲು ತೆಗೆಸಿ ನೋಡಿದರೆ, ಅಲ್ಲಿ ಮಲ್ಲಿ ಇದ್ದ ಕುರುಹು ಇರುವುದಿಲ್ಲ. ಇದನ್ನು ಕಂಡ ಭೂಮಿಕಾಳಿಗೆ ಶಾಕ್ ಆಗುತ್ತದೆ. ಬೆಳಗಿನ ಜಾವ ಇದ್ದವರು ಈಗ ಎಲ್ಲಿಗೆ ಹೋದರು ಎಂದು ಚಿಂತೆಗೀಡಾಗಿದ್ದಾಳೆ. ಮಲ್ಲಿ ಮನೆಯನ್ನು ಶಕುಂತಲಾಳೇ ಖಾಲಿ ಮಾಡಿಸಿದ್ದಾಳೆ ಎಂಬ ವಿಚಾರ ಭೂಮಿಕಾಳಿಗೆ ಗೊತ್ತಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











