Amruthadhaare ; ಬಂದ ಅವಕಾಶವನ್ನ ನಿರಾಕರಿಸಿದ ಅಪೇಕ್ಷಾ : ಮನೆ ಜವಾಬ್ದಾರಿಯನ್ನು ಬಿಟ್ಟುಕೊಟ್ಟ ಭೂಮಿಕಾ
ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ಶಾಲೆಯಲ್ಲಿ ಚಾಲೆಂಜ್ ಗೆಲ್ಲಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾನೆ. ಸೊಳ್ಳೆಗಳ ಕಾಟದಿಂದ ನಿದ್ದೆ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ.ಇತ್ತ ಜೈದೇವ್ ಅಶ್ವಿನಿ ಗೆಳತಿ ಜೊತೆಗೆ ಊರೂರು ಸುತ್ತುತ್ತಿದ್ದಾನೆ. ಮಲ್ಲಿಯನ್ನು ಕಂಪ್ಲೀಟ್ ಆಗಿ ಮರೆತು, ಬೆಳಗ್ಗೆಯೀಮದ ರಾತ್ರಿವರೆಗೂ ಹುಡುಗಿ ಜೊತೆಗೆ ಸುತ್ತಾಡುತ್ತಿದ್ದಾನೆ.ಮನೆಗೆ ಬಂದಾಗ ಮಾತ್ರ ಆಫೀಸಿನಲ್ಲಿ ತುಂಬಾ ಕೆಲಸ ಎಂದು ಸುಳ್ಳು ಹೇಳಿಕೊಂಡು, ಮಲ್ಲಿಯ ಬಳಿ ನಾಟಕ ಮಾಡುತ್ತಿದ್ದಾನೆ. ಜೈದೇವ್ ಆಟ ಎಷ್ಟು ದಿನ ನಡೆಯುತ್ತದೋ ಗೊತ್ತಿಲ್ಲ.
ಆನಂದ್ ಗೆ ಸಮಸ್ಯೆ ತಂದಿಟ್ಟ ಗೌತಮ್
ಆಫೀಸಿನಲ್ಲಿ ಸಾಕಷ್ಟು ಕೆಲಸಗಳು ಬಾಕಿ ಉಳಿದಿರುವಾಗಲೇ ಆನಂದ್ ಅಪರ್ಣಾ ಜೊತೆಗೆ ಸೆಕೆಂಡ್ ಹನಿಮೂನ್ ಗೆ ಹೋಗಲು ಪ್ಲಾನ್ ಮಾಡಿದ್ದಾನೆ. ಈ ಬಗ್ಗೆ ಗೌತಮ್ ಬಳಿ ಹೇಳಿದ್ದು, ರಜೆ ಕೊಡುವುದಾಗಿ ಕೇಳುತ್ತಾಣೆ. ಆದರೆ, ಗೌತಮ್ ಅಪರ್ಣಾ ಜೊತೆಗೆ ಹುಡುಗಿ ಧ್ವನಿಯಲ್ಲಿ ಮಾತನಾಡಿ, ತಾನು ಆನಂದ್ ಅಸಿಸ್ಟೆಂಟ್ ಎಂದು ಬೊಗಳೆ ಬಿಟ್ಟಿದ್ದಾನೆ. ಅಪರ್ಣಾ ಈಗ ಆನಂದ್ ಜೊತೆಗೆ ಜಗಳ ಮಾಡಿಕೊಂಡಿದ್ದಾಳೆ. ಜೂಲಿ ಎಂಬುದು ನಾಯಿ ಅಲ್ಲ, ಅವಳು ಹುಡುಗಿ ಎಂದು ನಂಬಿದ್ದು, ಆನಂದ್ ಮೇಲೆ ಅನುಮಾನ ಪಟ್ಟಿದ್ದಾಳೆ. ಆನಂದ್ ಮನೆಗೆ ಬಂದರೂ ಒಳಗೆ ಸೇರಿಸದೇ ಇಡೀ ರಾತ್ರಿ ಹೊರಗೆ ದೂಡಿದ್ದಾಳೆ. ಆನಂದ್ ಕಷ್ಟವನ್ನು ಕೇಳಿ ಗೌತಮ್ ಮಜಾ ತೆಗೆದುಕೊಂಡಿದ್ದಾನೆ.

ಶಕುಂತಲಾ ಮಾತಿಗೆ ನೊಂದುಕೊಂಡ ಭೂಮಿಕಾ
ಇನ್ನು ಶಕುಂತಲಾ ತನ್ನ ಮಗ ಪಾರ್ಥ ಕಷ್ಟ ಪಡುತ್ತಿರುವುದನ್ನು ಕೇಳಿ ಸುಮ್ಮನಿರಲಾಗದೇ ಭೂಮಿಕಾ ಬಳಿ ಜಗಳ ಆಡಿದ್ದಾಳೆ. ನಿಮ್ಮ ಮನೆಯವರನ್ನೆಲ್ಲಾ ಈ ಮನೆಗೆ ಕರೆದುಕೊಂಡು ಬರಲು ನೀನು ಈ ಪ್ಲಾನ್ ಮಾಡಿದ್ದೀಯಾ ಆರೋಪಿಸಿದ್ದಾಳೆ. ಪಾರ್ಥ ಮತ್ತು ಅಪೇಕ್ಷಾ ಪ್ರೀತಿ ಮಾಡಲು ನೀನೇ ಕಾರಣ ಎಂದು ದೂರಿದ್ದು, ಇದರಿಂದ ಭೂಮಿಕಾ ಮನಸ್ಸಿಗೆ ಬಹಳ ಬೇಸರವಾಗಿದೆ. ಆದರೆ, ತನ್ನ ನೋವನ್ನು ಗೌತಮ್ ಬಳಿ ಹೇಳಿಕೊಳ್ಳದ ಭೂಮಿಕಾ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾಳೆ.
ಅಪೇಕ್ಷಾಳಿಗೆ ಮಹಿಮಾ ನೀಡಿದ ಅವಕಾಶ
ಮಹಿಮಾಳಿಗೆ ಮಿಸ್ ಇಂಡಿಯಾಗೆ ಮಾಡೆಲ್ ಅನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ. ಇದನ್ನು ಮಿಸ್ ಮಾಡಿಕೊಳ್ಳಲು ಬಯಸದ ಮಹಿಮಾ, ತನ್ನ ನಾದಿನಿ ಅಪೇಕ್ಷಾಳ ಹೆಸರನ್ನೇ ರೆಫರ್ ಮಾಡಿದ್ದಾಳೆ. ಈ ವಿಚಾರವನ್ನು ಮನೆಯಲ್ಲಿ ಎಲ್ಲರ ಬಳಿ ಹೇಳಿದ್ದು, ಅಪೇಕ್ಷಾ ಈ ಅವಕಾಶವನ್ನು ಕೈ ಬಿಡಲು ಮುಂದಾಗಿದ್ದಾಳೆ. ತನಗೆ ಇತ್ತೀಚೆಗೆ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ಸದ್ಯಕ್ಕೆ ಈ ಸರ್ಧೆಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಅಪೇಕ್ಷಾ ಮಾತನ್ನು ಕೇಳಿದ ಮಂದಾಕಿನಿ ಕೋಪ ಮಾಡಿಕೊಂಡು ಬೈಯುತ್ತಾಳೆ. ಈ ದಿನಕ್ಕೋಸ್ಕರ ಎಷ್ಟು ಕಾದಿದ್ದೀವಿ, ಈಗ ಬೇಡ, ಆಗೋದಿಲ್ಲ ಎಂದು ಹೇಳುತ್ತಿದ್ದೀಯಾ ಎಂದು ಬೈಯುತ್ತಾಳೆ.

ಅಧಿಕಾರ ಬೇಡ ಎಂದ ಭೂಮಿಕಾ
ಇನ್ನು ಭೂಮಿಕಾ ಬೆಳಗ್ಗೆ ಎದ್ದು, ನನ್ನ ಮೇಲೆ ನಿಮಗೆ ನಂಬಿಕೆ ಇದೆಯಾ. ನಾನೇನಾದರೂ ನಿರ್ಧಾರ ತೆಗೆದುಕೊಂಡರೆ ಅದನ್ನು ಒಪ್ಪಿಕೊಳ್ಳುತ್ತೀರಾ ಎಂದು ಗೌತಮ್ ಬಳಿ ಕೇಳುತ್ತಾಳೆ. ಗೌತಮ್ ಕೂಡ ನಿನ್ನ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ ಎಂದು ಹೇಳುತ್ತಾನೆ. ಭೂಮಿಕಾ ಮನೆಯವರನ್ನೆಲ್ಲಾ ಸೇರಿಸಿ, ನನಗೆ ಮನೆಯನ್ನು ನಿಭಾಯಿಸುವ ಶಕ್ತಿ ಇಲ್ಲ. ಈ ಮನೆಯಲ್ಲಿ ನನಗಿಂತ ದೊಡ್ಡವರಿದ್ದಾರೆ. ನಾನು ಈ ಜಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾಳೆ. ಹೀಗಾಗಿ ತಿಜೋರಿ ಕೀ ತನಗೆ ಬೇಡ ಎಂದಿದ್ದಾಳೆ. ಭೂಮಿಕಾಳ ಈ ನಿರ್ಧಾರ ಎಲ್ಲರಿಗೂ ಶಾಕ್ ಆಗುವಂತೆ ಮಾಡಿದೆ.


Click it and Unblock the Notifications











