Amruthadhaare ; ಆಸ್ಪತ್ರೆ ಸೇರಿದ ಮಾನ್ಯ ; ಗೌತಮ್ ಎದೆಯಲ್ಲಿ ಡವ ಡವ...!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಭೂಮಿಕಾಳಿಗೆ ಪ್ರಪೋಸ್ ಮಾಡಲೆಂದು ತಯಾರಿ ನಡೆಸಿದ್ದಾನೆ. ಸರ್ಪ್ರೈಸ್ ಕೊಡುವುದಾಗಿ ಹೇಳಿ ಕೊನೆಗೆ ಪಾರ್ಕ್ ಒಂದಕ್ಕೆ ಕರೆದುಕೊಂಡು ಬಂದಿದ್ದಾನೆ. ಪಾರ್ಕ್ ಗೆ ಬಂದ ಬಳಿಕ ಏನು ಮಾತನಾಡಬೇಕು ಎಂಬುದು ತಿಳಿಯದೇ ಗೌತಮ್ ಒದ್ದಾಡಿದ್ದಾನೆ. ಗಾಬರಿಯಲ್ಲಿ ಭೂಮಿಕಾ ಬಳಿ ಏನೇನೋ ಮಾತನಾಡಿದ್ದಾನೆ. ಭೂಮಿಕಾಳಿಗೆ ಗೌತಮ್ ಯಾಕೆ ಪಾರ್ಕ್ ಗೆ ಕರೆದುಕೊಂಡು ಬಂದಿದ್ದಾರೆ ಎಂಬುದೂ ಗೊತ್ತಿಲ್ಲ. ಅಲ್ಲದೇ, ಗೌತಮ್ ಏನನ್ನು ಹೇಳಲು ಹೊರಟಿದ್ದಾರೆ ಎಂಬುದೂ ಅರ್ಥವಾಗುತ್ತಿಲ್ಲ.
ಪ್ರಪೋಸ್ ಮಾಡಲು ಗೌತಮ್ ಒದ್ದಾಟ
ಗೌತಮ್ ಫೋನ್ ನ ಕಾರಿನಲ್ಲಿ ಬಿಟ್ಟಿರುವುದಾಗಿ ಹೇಳಿ ಬಂದು ಆನಂದ್ ಗೆ ಕರೆ ಮಾಡುತ್ತಾನೆ. ಹೇಗೆ ಹೇಳುವುದು ಮಾತೇ ಬರುತ್ತಿಲ್ಲ ಎಂದು ತನ್ನ ಸಂಕಟವನ್ನು ಹೇಳಿಕೊಳ್ಳುತ್ತಾನೆ. ಆನಂದ್ ಸ್ನೇಹಿತನ ಪೀಕಲಾಟವನ್ನು ಕಂಡು ಒಳಗೊಳಗೆ ಖುಷಿ ಪಡುತ್ತಿದ್ದಾನೆ. ಇಲಿಗೆ ಪ್ರಾಣ ಸಂಕಟ ಬೆಕ್ಕಿಗೆ ಚೆಲ್ಲಾಟ ಎಂಬಂತೆ ನಡೆದುಕೊಳ್ಳುತ್ತಾನೆ. ಪ್ರಪೋಸ್ ಮಾಡಬೇಕು, ಭೂಮಿಕಾ ಅತ್ತಿಗೆಗೆ ಮುತ್ತು ಕೊಡಲೇಬೇಕು ಎಂದು ಪದೇ ಪದೇ ನೆನಪಿಸುತ್ತಾನೆ. ಇದು ಗೌತಮ್ ಗೆ ಇನ್ನಷ್ಟು ಟೆನ್ಷನ್ ಆಗುವಂತೆ ಮಾಡುತ್ತದೆ.

ಗೌತಮ್ ಬಾಳಲ್ಲಿ ಮತ್ತೆ ಮಾನ್ಯ ಎಂಟ್ರಿ
ಇದೇ ಸಮಯಕ್ಕೆ ಸರಿಯಾಗಿ ಕಾರನ್ನು ಮುಂದೆ ಪಾರ್ಕ್ ಮಾಡುವಂತೆ ವ್ಯಕ್ತಿಯೊಬ್ಬ ಬಂದು ಕೇಳುತ್ತಾನೆ. ಆನಂದ್ ಜೊತೆಗೆ ಫೋನ್ ನಲ್ಲಿ ಮಾತನಾಡುತ್ತಲೇ, ಕಾರನ್ನು ಸ್ಟಾರ್ಟ್ ಮಾಡುತ್ತಾನೆ. ಆಗ ತಪ್ಪಿಸಿಕೊಂಡು ಓಡಿ ಬರುತ್ತಿದ್ದ ಮಾನ್ಯ ಗೌತಮ್ ಕಾರಿಗೆ ಸಿಕ್ಕಿ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಯಾರು ಎಂದು ತಕ್ಷಣವೇ ಬಂದು ನೋಡುವ ಗೌತಮ್ ಗೆ ಗಾಬರಿಯಾಗುತ್ತದೆ. ಮಾನ್ಯಳನ್ನು ನೋಡಿದ ಕೂಡಲೇ ಗೌತಮ್ ಬ್ಲಾಂಕ್ ಆಗಿ ಬಿಡುತ್ತಾನೆ. ಭೂಮಿಕಾ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಹೋಗೋಣ ಎಂದು ಹೇಳುತ್ತಾಳೆ. ಗೌತಮ್ ಮಾನ್ಯಾಳನ್ನು ಆಸ್ಪತ್ರೆಗೆ ಸೇರಿಸಿದ ಬಳಿಕ ಅಲ್ಲಿರಲಾಗದೇ ಮನೆಗೆ ಹೋಗೋಣ ಎಂದು ಬಲವಂತ ಮಾಡುತ್ತಾನೆ. ಆದರೆ ಭೂಮಿಕಾ ಆಕೆಗೆ ಪ್ರಜ್ಞೆ ಬರುವವರೆಗೂ ಇರೋಣ ಎಂದು ಹೇಳುತ್ತಾಳೆ.
ಗೌತಮ್ ಗಾಗಿ ಆಸ್ಪತ್ರೆಗೆ ಬಂದ ಶಕುಂತಲಾ
ಅಲ್ಲದೇ ವೈದ್ಯರು ಕೂಡ ಆಕೆಗೆ ತೊಂದರೆ ಏನೂ ಆಗಿಲ್ಲ. ಆದರೆ, ತಲೆಗೆ ಪೆಟ್ಟು ಬಿದ್ದಿರುವುದರಿಂದ ಹಳೆಯದನ್ನು ಮರೆಯುವ ಸಾಧ್ಯತೆ ಇದೆ. ಇನ್ನಷ್ಟು ಟೆಸ್ಟ್ ಮಾಡಬೇಕು ಎಂದು ಹೇಳುತ್ತಾರೆ. ಗೌತಮ್ ಶಕುಂತಲಾಳಿಗೆ ಫೋನ್ ಮಾಡಿ ನಡೆದ ಘಟನೆಯನ್ನು ಹೇಳುತ್ತಾನೆ. ಶಕುಂತಲಾ ಆಸ್ಪತ್ರೆಗೆ ಬಂದು ಗೌತಮ್ ನನ್ನು ಸಮಾಧಾನ ಮಾಡುತ್ತಾಳೆ. ಆಕೆಗೆ ಏನೂ ಆಗುವುದಿಲ್ಲ ಎಂದು ಹೇಳುತ್ತಾಳೆ. ಆದರೆ, ಶಕುಂತಲಾ ಯಾಕೆ ಬಂದಳು ಎಂಬುದು ಭೂಮಿಕಾಳಿಗೆ ಗೊತ್ತಾಗಿಲ್ಲ. ಈಗ ಶಕುಂತಲಾ ಇದನ್ನೇ ಬಳಸಿಕೊಂಡು ಗೌತಮ್ ನನ್ನು ಆಟವಾಡಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

ಸತ್ಯ ಹೇಳಿ ಬಿಟ್ಟ ಮಹಿಮಾ
ಇತ್ತ ಮಹಿಮಾ ಮನೆಯಲ್ಲಿ ಮಂದಾಕಿನಿ ಹಾಗೂ ಸದಾಶಿವ ಸೊಸೆಗೆ ಮಗುವಾಗಲಿ ಎಂದು ಉಪವಾಸ, ಪೂಜೆಗಳನ್ನು ಮಾಡುತ್ತಿರುತ್ತಾರೆ. ಇದನ್ನು ನೋಡಿಕೊಂಡು ಸುಮ್ಮನಿರಲಾಗದ ಮಹಿಮಾ ನಿತ್ಯ ಕೊರಗುತ್ತಿರುತ್ತಾಳೆ. ತನ್ನ ತಪ್ಪು ನಿರ್ಧಾರದಿಂದ ಮನೆಯವರೆಲ್ಲಾ ಒದ್ದಾಡುತ್ತಿದ್ದಾರೆ ಎಂದು ಕೊರಗುತ್ತಾಳೆ. ಇನ್ನು ಮಹಿಮಾ ಜೀವ ಮನೆಗೆ ಬಂದ ಬಳಿಕ ತಾನು ಅಬಾರ್ಷನ್ ಮಾಡಿಸಿಕೊಂಡ ವಿಚಾರವನ್ನು ಹೇಳಿ ಬಿಡುತ್ತಾಳೆ. ಜೀವ ಕೋಪದಲ್ಲಿ ಮಹಿಮಾಳ ಕೆನ್ನೆಗೆ ಹೊಡೆದು ಬೈಯುತ್ತಾನೆ. ಒಂದು ಮಗುವಿನ ಜೀವ ತೆಗೆದಿದ್ದಲ್ಲದೇ ಎರಡು ಕುಟುಂಬದ ಕನಸನ್ನು ನಾಶ ಮಾಡಿದ್ದೀಯಾ ಎಂದು ಬೈಯುತ್ತಾನೆ. ಮಹಿಮಾ ಸತ್ಯ ಹೇಲಿ ಈಗ ಜೀವನ್ ಬಳಿ ಸಿಕ್ಕಿ ಬಿದ್ದಿದ್ದಾಳೆ.


Click it and Unblock the Notifications











