Amruthadhaare: ಭೂಮಿಕಾ ಹುಟ್ಟುಹಬ್ಬಕ್ಕೆ ಗೌತಮ್ ಸರ್ಪ್ರೈಸ್ ಆಗಿ ಪಾರ್ಟಿ
ಅಮೃತಧಾರೆ ಧಾರಾವಾಹಿಯಲ್ಲಿ ಕಿರಣ್, ಗೌತಮ್ ಆಫಿಸಿಗೆ ಬಂದು ಸೇರಿಕೊಂಡಿರುವುದೇ ಭೂಮಿಕಾ ಬಾಳಲ್ಲಿ ಬಿರುಗಾಳಿಯನ್ನು ಎಬ್ಬಿಸಲು ಎಂಬುದು ಸ್ಪಷ್ಟವಾಗಿದೆ.
ಈಗಾಗಲೇ ಗೌತಮ್‌ಗೆ ಕಿರಣ್ ಯಾರು ಎಂಬ ಸತ್ಯ ಗೊತ್ತಾಗಿದೆ. ಇದರಿಂದ ಗೌತಮ್‌ಗೆ ಭೂಮಿಕಾಳ ಮೇಲೆ ಇಲ್ಲದ ಅನುಮಾನಗಳು ಮೂಡುತ್ತಿವೆ.
ಜೈದೇವ ತನಗೆ ಭೂಮಿಕಾಳಿಂದ ಅವಮಾನವಾಯಿತು ಎಂಬ ಕಾರಣಕ್ಕೆ, ಈಗ ಆತ ಭೂಮಿಕಾ ವಿರುದ್ಧ ದೊಡ್ಡ ಬಾಣ ಬಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾನೆ.

ಹಣಕ್ಕಾಗಿ ಕಿರಣ್ ಹೀಗೆಲ್ಲಾ ಮಾಡಬಹುದೇ..?
ಜೈದೇವ, ಕಿರಣ್ ಮತ್ತು ಭುಮಿಕಾ ಹಳೆಯ ಪ್ರೇಮಿಗಳು ಎಂಬ ಸತ್ಯವನ್ನು ತಿಳಿದು, ಕಿರಣ್‌ಗೆ ಕೆಲಸ ಕೊಟ್ಟಿದ್ದಲ್ಲದೇ, ಭೂಮಿಕಾ ನಿನ್ನನ್ನು ಈಗಲೂ ಪ್ರೀತಿಸುತ್ತಿದ್ದಾನೆ. ಆಫಿಸಿನಲ್ಲಿ ನಿಮ್ಮಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಹಾಗೆ ನಡೆದುಕೊಂಡರೆ ಹಣ ಕೊಡುತ್ತೀನಿ ಎಂದು ನಂಬಿಸಿದ್ದಾನೆ. ಕಿರಣ್, ಭೂಮಿಕಾಳಿಗೆ ತೊಂದರೆಯಾದರೂ ಪರವಾಗಿಲ್ಲ. ತನಗೆ ಹಣ ಸಿಕ್ಕರೆ ಸಾಕು ಎಂಬಂತೆ ಜೈದೇವನ ಮಾತನ್ನು ಕೇಳಿ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾನೆ. ಈಗಾಗಲೇ ಗೌತಮ್‌ಗೆ ತನ್ನ ಹಾಗೂ ಭೂಮಿಕಾಳ ಹಳೆಯ ಫೋಟೋಗಳನ್ನು ಕಳುಹಿಸಿದ್ದಾನೆ. ಸಸ್ಪೆನ್ಸ್ ಕ್ರಿಯೇಟ್ ಮಾಡಿದ್ದಾನೆ.
ಕಿರಣ್ ಮಾತು ನಂಬಿದ ಶೃತಿ
ಇತ್ತ ಶೃತಿಗೆ ತಾನು ಗೌತಮ್ ಆಫಿಸಿಗೆ ಕೆಲಸಕ್ಕೆ ಹೋಗುತ್ತಿರುವ ವಿಚಾರವನ್ನು ಮುಚ್ಚಿಟ್ಟಿದ್ದಾನೆ. ಈ ಬಗ್ಗೆ ಸತ್ಯ ತಿಳಿದ ಶೃತಿ ನೀನು ಭೂಮಿಕಾಳಿಗೆ ತೊಂದರೆ ಕೊಡಬೇಡ. ಆದಷ್ಟು ಅವಳಿಂದ ದೂರ ಇರು ಎಂದು ಬುದ್ಧಿ ಹೇಳಿದರೆ, ಕಿರಣ್ ಇಲ್ಲ ನಾನು ಭೂಮಿಕಾ ಚೆನ್ನಾಗಿಯೇ ಇದ್ದೀವಿ. ನಿನ್ನ ನಂತರ ನಾನು ಮತ್ತು ಭೂಮಿಕಾ ಮದುವೆಯಾಗುತ್ತೇವೆ. ಭೂಮಿಕಾಳಿಗೂ ನಾನು ಬೇಕು ಎಂದೆಲ್ಲಾ ಸುಳ್ಳು ಹೇಳುತ್ತಾನೆ. ಶೃತಿಗೆ ಇದನ್ನು ನಂಬಬೇಕಾ ಬೇಡವಾ? ಎಂಬ ಗೊಂದಲವಿದ್ದರೂ ಕೂಡ, ಕಿರಣ್ ಮಾತನ್ನು ನಿಜ ಎಂದುಕೊಳ್ಳುತ್ತಾಳೆ. ತನಗೆ ಭೂಮಿಕಾ ಕೂಡ ಮೋಸ ಮಾಡುತ್ತಿದ್ದಾಳೆ ಎಂಬುದನ್ನು ಅರಗಿಸಿಕೊಳ್ಳಲಾಗದೇ, ಕಿರಣ್ ಜೊತೆಗೆ ಸಂಬಂಧ ಕಡಿದುಕೊಂಡು ಹೊರಟು ಹೋಗುತ್ತಾಳೆ.

ಗಿಲ್ಟ್‌ನಲ್ಲಿರುವ ಭೂಮಿಕಾಳಿಗೆ ಪಾರ್ಟಿ
ಭೂಮಿಕಾ, ಗೌತಮ್ ಬಳಿ ಕಿರಣ್ ವಿಚಾರವಾಗಿ ಸತ್ಯ ಹೇಳಬಹುದಿತ್ತು. ಆದರೆ ಭಯದಲ್ಲಿ ಸತ್ಯವನ್ನು ಮುಚ್ಚಿಡುತ್ತಾಳೆ. ಅದೂ ಅಲ್ಲದೇ, ಗೌತಮ್ ಬಳಿ ಸುಳ್ಳು ಹೇಳಿ ಕಿರಣ್‌ಗೋಸ್ಕರ ಬ್ಯಾಂಕ್‌ಗೆ ಹೋಗಿರುತ್ತಾಳೆ. ಕಿರಣ್ ಮತ್ತು ಭೂಮಿಕಾ ಒಟ್ಟಿಗೆ ಇರುವುದನ್ನು ಗೌತಮ್ ನೋಡಿದ್ದಾನೆ. ಭೂಮಿಕಾ ತನ್ನ ಬಳಿ ಸುಳ್ಳು ಹೇಳಿದಳು ಎಂಬ ಕಅರಣಕ್ಕೆ ಗೌತಮ್ ಕೋಪ ಮಾಡಿಕೊಂಡಿದ್ದಾನೆ. ಗೌತಮ್ ವಿಚಿತ್ರವಾಗಿ ಭೂಮಿಕಾ ಜೊತೆಗೆ ಮಾತನಾಡುತ್ತಿದ್ದಾನೆ. ಭೂಮಿಕಾ ಕೂಡ ಗೌತಮ್‌ಗೆ ಸುಳ್ಳು ಹೇಳಿದ್ದಕ್ಕೆ ಗಿಲ್ಟ್‌ನಲ್ಲಿ ಜೀವಿಸುತ್ತಿದ್ದಾಳೆ.
ಭೂಮಿಕಾಳಿಗೆ ಗೌತಮ್ ಸರ್ಪ್ರೈಸ್ ?
ಕಿರಣ್ ಪದೇ ಪದೇ ಆಫಿಸಿನಲ್ಲಿ ಭೂಮಿಕಾಳನ್ನು ಭೂಮಿ ಎಂದು ಮಾತನಾಡಿಸುತ್ತಿದ್ದಾನೆ. ಇದರಿಂದ ಆಫಿಸಿನಲ್ಲಿ ಎಲ್ಲರೂ ಕೂಡ ಭೂಮಿ ಮತ್ತು ಕಿರಣ್ ನಡುವೆ ಸಂಬಂಧ ಇದೆ ಎಂದು ಗಾಸಿಪ್ ಆಗಿದೆ. ಈ ಮಾತುಗಳನ್ನು ಕೇಳಿದ ಆನಂದ್‌ಗೆ ಬೇಸರವಾಗಿದೆ. ಇನ್ನು ಗೌತಮ್‌ಗೆ ಭೂಮಿಕಾ ಮೇಲೆ ಅನುಮಾನ ಮೂಡಿದೆ. ಹೀಗಾಗಿ ಭೂಮಿಕಾ ಹುಟ್ಟುಹಬ್ಬದ ದಿನವೇ ಅವಳಿಗೊಂದು ಸರ್ಪ್ರೈಸ್ ಕೊಡಲು ಮುಂದಾಗಿದ್ದಾನೆ. ಇದಕ್ಕೋಸ್ಕರ ಆಫಿಸಿನಲ್ಲಿರುವವರನ್ನೆಲ್ಲಾ ಪಾರ್ಟಿಗೆ ಆಹ್ವಾನ ನೀಡಿದ್ದಾನೆ. ಭೂಮಿಕಾಳಿಗೂ ಸಂಜೆ ಪಾರ್ಟಿ ಇದೆ. ಅಲ್ಲೇ ಎಲ್ಲಾ ಸರ್ಪ್ರೈಸ್ ರಿವೀಲ್ ಆಗುತ್ತೆ ಎಂದು ಹೇಳಿದ್ದಾನೆ.


Click it and Unblock the Notifications











