Amruthadhaare ; ಜೈದೇವ್ ಸುಪಾರಿ ಕೊಟ್ಟ ಸತ್ಯ ತಿಳಿದ ಆನಂದ್ : ತಮ್ಮನ ಆಟಕ್ಕೆ ಬ್ರೇಕ್ ಹಾಕುತ್ತಾನಾ ಗೌತಮ್
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಬಳಿ ಅಪೇಕ್ಷಾ ನಿಷ್ಠುರವಾಗಿ ಮಾತನಾಡಿದ್ದಕ್ಕೆ, ಪಾರ್ಥ ಬುದ್ಧಿ ಹೇಳಿದ್ದಾನೆ. ಅತ್ತಿಗೆ ಜೊತೆಗೆ ನೀವು ಹಾಗೆಲ್ಲಾ ನಡೆದುಕೊಳ್ಳಬಾರದಿತ್ತು ಎಂದು ಹೇಳುತ್ತಾನೆ. ಆದರೆ, ಅಪೇಕ್ಷಾಳಿಗೆ ಪಾರ್ಥ ಹೇಳುವುದು ಅರ್ಥವೇ ಆಗುವುದಿಲ್ಲ. ಅಪೇಕ್ಷಾ ಸದ್ಯ ಲಕ್ಷ್ಮೀಕಾಂತ ಹಾಗೂ ಶಕುಂತಲಾ ಹೇಳಿದ್ದನ್ನೆಲ್ಲಾ ತಲೆಯಲ್ಲಿ ಇಟ್ಟುಕೊಂಡು ಅಕ್ಕನ ಮೇಲೆ ದ್ವೇಷ ಸಾಧಿಸಲು ಮುಂದಾಗಿದ್ದಾಳೆ. ಭೂಮಿಕಾ ಕೂಡ ಅಪೇಕ್ಷಾ ಆಡಿದ ಮಾತುಗಳಿಂದ ಬೇಸರವಾಗಿದ್ದು, ಯಾರ ಬಳಿಯೂ ಈ ವಿಚಾರವನ್ನು ಹೇಳಿಕೊಳ್ಳದೇ ಮನಸ್ಸಿನಲ್ಲಿಯೇ ನೋವು ಅನುಭವಿಸುತ್ತಿದ್ದಾಳೆ.
ಅಪೇಕ್ಷಾಳ ಬ್ರೈನ್ ವಾಶ್ ಮಾಡಿದ ಶಕುಂತಲಾ
ಗೌತಮ್ ಗೆ ಭೂಮಿಕಾ ಸಮಾಧಾನ ಮಾಡಿದ್ದು, ಸದ್ಯ ಭೂಮಿಕಾ ಹಾಗೂ ಸದಾಶಿವನ ಮನಸ್ಸು ತಿಳಿಯಾಗಬೇಕಿದೆ. ಓಡಿ ಹೋಗಿ ಮದುವೆಯಾಗಿ ಬಂದು ಅಪೇಕ್ಷಾ ಪಾರ್ಥನಿಗೆ ಮದುವೆ ದಿನವೇ ಫಸ್ಟ್ ನೈಟ್ ಮಾಡಿದ್ದು ಕೂಡ ಭೂಮಿಕಾಳಿಗೆ ಇಷ್ಟವಾಗಿಲ್ಲ. ಅಲ್ಲದೇ, ಟಿವಿಯಲ್ಲಿ ಇವರಿಬ್ಬರ ಮದುವೆಯ ಸುದ್ದಿ ಬಂದಿದ್ದು, ಇನ್ನಷ್ಟು ಬೇಸರಕ್ಕೆ ಕಾರಣವಾಗಿದೆ. ಅಪೇಕ್ಷಾ ಬೆಳಗ್ಗೆ ಎದ್ದು ಬಂದ ಕೂಡಲೇ ಶಕುಂತಲಾ ತನ್ನ ಮುದ್ದಿನ ಸೊಸೆ ತಲೆಗೆ ಬೇಡದ ವಿಚಾರಗಳನ್ನು ತುಂಬಿದ್ದಾಳೆ. ಇಷ್ಟು ದಿನ ನೀನು ನಿಮ್ಮ ಮನೆಯಲ್ಲಿ ಹೇಗೆ ಇದ್ದೆಯೋ ಬೇಡ. ಇನ್ಮುಂದೆ ಇಲ್ಲಿ ನಿನಗೆ ಹೇಗೆ ಬೇಕೋ ಹಾಗೆ ಇರು. ಏನಾದರೂ ಬೇಕು ಎಂದರೆ ಡಿಮ್ಯಾಂಡ್ ಮಾಡು. ಯಾವುದಕ್ಕೂ ಹೆದರಬೇಡ. ನಿನ್ನಿಷ್ಟದಂತೆ ನೀನಿರು ಎಂದೆಲ್ಲಾ ಭೂಮಿಕಾ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದ್ದಾಳೆ.

ಜೈದೇವ್ ಆಟಕ್ಕೆ ಬ್ರೇಕ್ ಬೀಳುತ್ತಾ..?
ಇತ್ತ ಜೈದೇವ್ ಅಪೇಕ್ಷಾಳನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂಬ ಆಲೋಚನೆಯಲ್ಲೇ ಇದ್ದು, ಸದ್ಯ ಲೋಕೇಶ್ ಗೌತಮ್ ಬಳಿ ಸಿಕ್ಕಿ ಬಿದ್ದಿರುವುದಕ್ಕೆ ಗಾಬರಿಯಾಗಿದ್ದಾನೆ. ತನ್ನ ಹೆಸರನ್ನು ಲೋಕಿ ಹೇಳಿಬಿಟ್ಟರೆ ಏನು ಮಾಡುವುದು ಎಂದು ತಲೆ ಕೆಡಿಸಿಕೊಂಡಿದ್ದಾನೆ. ರಿಲ್ಯಾಕ್ಸ್ ಗೆಂದು ದಿಯಾ ಮನೆಗೆ ಹೋಇರುವ ಜೈದೇವ್ ಅಪೇಕ್ಷಾ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ದಿಯಾಳನ್ನು ಹೊಗಳಿದ್ದಾನೆ. ಆದರೆ, ಜೈದೇವ್ ಇನ್ನು ಎಷ್ಟು ದಿನ ನಡೆಯುತ್ತೆ. ಗೌತಮ್ ತಮ್ಮನ ಅವತಾರಗಳಿಗೆ ಬ್ರೇಕ್ ಹಾಕುತ್ತಾನಾ ಎಂದು ಕಾದು ನೋಡಬೇಕಿದೆ.
ಅಪ್ಪನಿಗೆ ಸಮಾಧಾನ ಮಾಡಿದ ಭೂಮಿಕಾ
ಭೂಮಿಕಾ ಅಪ್ಪನ ಮನೆಗೆ ಬಂದಿದ್ದಾಳೆ. ಸದಾಶಿವನಿಗೆ ನಡೆದ ಘಟನೆಗಳನ್ನೆಲ್ಲಾ ಮರೆಯಲು ತಿಳಿ ಹೇಳಿದ್ದಾಳೆ. ಈಗ ಆಗಿರುವುದನ್ನು ಮರೆತು ಮುಂದೆ ಸಾಗೋಣ. ಅಪೇಕ್ಷಾ ಚಿಕ್ಕವಳು, ತಿಳಿಯದೇ ತಪ್ಪು ಮಾಡಿದ್ದಾಳೆ. ಅವಳನ್ನು ಕ್ಷಮಿಸೋಣ ಎಂದು ಸಮಾಧಾನ ಮಾಡಿದ್ದಾಳೆ. ಅಲ್ಲದೇ, ನೀವು ಹೀಗಿದ್ದರೆ ನಮಗೂ ಕಷ್ಟವಾಗುತ್ತದೆ. ಅಪ್ಪಿ ಊಟ ಮಾಡದೇ ಅಳುತ್ತಿದ್ದಾಳೆ. ಗೌತಮ್ ಗೆ ನಿಮ್ಮದೇ ಚಿಂತೆ ಎಂದು ಹೇಳಿ ಸಮಾಧಾನ ಪಡಿಸುತ್ತಾಳೆ. ಸದಾಶಿವ ಕೂಡ ಬೇರೆ ದಾರಿ ಇಲ್ಲದೇ, ಸುಮ್ಮನಾಗಿದ್ದಾನೆ.

ಜೈದೇವ್ ಬಗ್ಗೆ ಸತ್ಯ ತಿಳಿದ ಆನಂದ್ ಶಾಕ್
ಇತ್ತ ಗೌತಮ್ ಮತ್ತು ಆನಂದ್ ಇಬ್ಬರು ಸೇರಿ ಲೋಕೇಶ್ ನನ್ನು ವಿಚಾರಿಸುತ್ತಿದ್ದಾರೆ. ಎಷ್ಟು ಕೇಳಿದರೂ ಆತ ಬಾಯಿ ಬಿಡಲು ತಯಾರಿಲ್ಲ. ಗೌತಮ್ ಸತ್ಯ ಬಾಯಿ ಬಿಡದಿದ್ದರೆ, ನಿನ್ನ ಹಿಂದೆ ಯಾರಿದ್ದಾರೆ ಎಂಬ ಸತ್ಯ ಹೇಳದೇ ಹೋದರೆ, ಜೀವನದಲ್ಲಿ ಕಷ್ಟ ಪಡಬೇಕಾಗುತ್ತೆ. ನಿನ್ನನ್ನು ಪೊಲೀಸರಿಗೆ ಒಪ್ಪಿಸುತ್ತೇನೆ ಎಂದು ಬೆದರಿಸಿ ಹೋಗಿದ್ದಾನೆ. ಈ ಮಾತನ್ನು ಕೇಳಿ ಹೆದರಿಕೊಂಡಿರುವ ಲೋಕಿ ಆನಂದ್ ಗೆ ಸತ್ಯ ಹೇಳಿದ್ದಾನೆ. ಜೈದೇವ್ ಸುಪಾರಿ ಕೊಟ್ಟು ಅಪೇಕ್ಷಾಳನ್ನು ಕೊಲ್ಲಲು ಹೇಳಿದ್ದ ಎಂದು ಹೇಳಿದ್ದು, ಈ ಮಾತನ್ನು ಕೇಳಿ ಆನಂದ್ ದಂಗಾಗಿದ್ದಾನೆ.


Click it and Unblock the Notifications











