Amruthadhaare ; ಶಕುಂತಲಾ ಕೈ ಸೇರಿದ ತಿಜೋರಿ ಕೀ: ಅತ್ತೆ-ಸೊಸೆ ನಡುವೆ ಸೈಲೆಂಟ್ ಫೈಟ್..!
ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಗೆ ಅನುಮಾನದ ಭೂತ ಕಾಡುತ್ತಿದೆ. ರಾತ್ರಿಯೆಲ್ಲಾ ಜೂಲಿ ಹೆಸರಲ್ಲಿ ಮನೆಯಿಂದ ಹೊರಗೆ ಕಳೆದ ಆನಂದ್ ಗೆ ಈಗ ಮತ್ತೊಂದು ಹುಡುಗಿಯ ಭೇಟಿಯಾಗಿದೆ. ಆನಂದ್ ಮಾಮ ಬೇಕು ಎಂದು ತಪ್ಪಾದ ಅಡ್ರೆಸ್ ಗೆ ಬಂದ ಹುಡುಗಿಗೆ ಆನಂದ್ ವಿಳಾಸ ತೋರಿಸಲು ಮುಂದಾಗಿದ್ದಾನೆ. ಇದನ್ನು ನೋಡಿದ ಅಪರ್ಣಾಳಿಗೆ ತನ್ನ ಅನುಮಾನ ಮತ್ತಷ್ಟು ಹೆಚ್ಚಿದೆ. ಮೊದಲೇ ಕೋಪ ಮಾಡಿಕೊಂಡಿರುವ ಅಪರ್ಣ ಈಗ ಕೆಂಡಾಮಂಡಲವಾಗಿದ್ದಾಳೆ. ಇದೇ ಮೂಡ್ ನಲ್ಲಿ ಆನಂದ್ ಆಫೀಸ್‌ಗೆ ಹೋಗಿದ್ದು, ಗೌತಮ್ ಮಜಾ ತೆಗೆದುಕೊಳ್ಳುತ್ತಿದ್ದಾನೆ.
ಶಕುಂತಲಾ ಕೈ ಸೇರಿದ ತಿಜೋರಿ ಕೀ
ಇತ್ತ ಭೂಮಿಕಾ ಮನೆಯ ಜವಾಬ್ದಾರಿಯನ್ನು ತಾನು ಈಗಲೇ ವಹಿಸಿಕೊಳ್ಳಲು ತನಗೆ ಯಾವುದೇ ಅರ್ಹತೆ ಇಲ್ಲ. ಹಾಗೂ ಅನುಭವವೂ ಕಡಿಮೆ ಎಂದು ತನ್ನ ಅಭಿಪ್ರಾಯವನ್ನು ಹೇಳುತ್ತಾಳೆ. ಭೂಮಿಕಾ ಮಾತು ಕೇಳಿದ ಅಜ್ಜಿ ಮನಸ್ಸಿಗೆ ನೋವಾಗುತ್ತದೆ. ಯಾರಾದರೂ ಏನಾದರೂ ಹೇಳಿದ್ದಾರಾ ಎಂದು ಅಜ್ಜಿ ಪ್ರಶ್ನಿಸುತ್ತಾರೆ. ಜೈದೇವ್ ನನ್ನು ನೀನೇನಾದರೂ ಮಾತನಾಡಿದ್ಯಾ ಎಂದು ಕೇಳಿದ್ದಕ್ಕೆ ಭೂಮಿಕಾ ಅತ್ತಿಗೆ ಈ ಮನೆಯನ್ನು ನಡೆಸುಕೊಂಡು ಹೋಗುವುದೇ ಸರಿ ಎಂದು ಜೈದೇವ್ ಹೇಳುತ್ತಾನೆ.ಜೈದೇವ್ ಮಾತಿಗೆ ಲಕ್ಷ್ಮೀಕಾಂತ ಕೂಡ ಕೈ ಜೋಡಿಸುತ್ತಾನೆ. ಆಗ ಭೂಮಿಕಾ ಯಾರೂ ಏನೂ ಹೇಳಿಲ್ಲ ಅಂತ ಹೇಳಿ ತಿಜೋರಿ ಕೀಲಿಯನ್ನು ಶಕುಂತಲಾಳಿಗೆ ಕೊಡುತ್ತಾಳೆ. ಆಗ ಶಕುಂತಲಾ, ಅಶ್ವಿನಿ, ಲಕ್ಷ್ಮೀಕಾಂತ ಹಾಗೂ ಜೈದೇವ್ ಮನದೊಳಗೆ ಖುಷಿ ಪಡುತ್ತಾರೆ.

ಜುಮ್ಕಿ ಕಣ್ಣಲ್ಲಿ ನೀರು ಬರಲು ಕಾರಣವೇನು..?
ಇನ್ನು ಪಾರ್ಥ ಮಕ್ಕಳನ್ನು ಓದಲು ಕರೆದರೆ ಅವರು ಓಡಿ ಹೋಗುತ್ತಾರೆ. ನಮ್ಮಲ್ಲಿ ಒಬ್ಬರನ್ನು ಹಿಡಿದರೂ ನಾವು ಓದಲು ಬರುತ್ತೇವೆ ಎಂದು ಚಾಲೇಂಜ್ ಹಾಕುತ್ತಾರೆ. ಪಾರ್ಥ ಹಿಡಿಯಲು ಹೋಗುವಾಗಲೇ ಭೂಮಿಕಾ ಫೋನ್ ಮಾಡಿ ಮಾತನಾಡುತ್ತಾಳೆ. ಆಗ ಶಕುಂತಲಾ ಬಂದು ನೀನು ಪಾರ್ಥನ ಪ್ರೀತಿಗೆ ಸಪೋರ್ಟ್ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳುತ್ತಾಳೆ. ಭೂಮಿಕಾ ಏನೂ ಹೇಳದೇ ಸುಮ್ಮನಾಗುತ್ತಾಳೆ. ನಿಮ್ಮ ಕೈಯಲ್ಲಿ ಏನಾಗುತ್ತೋ ಅದನ್ನು ಮಾಡಿ ಸುಮ್ಮನೆ ಪ್ರತಿಯೊಂದಕ್ಕೂ ನನ್ನನ್ನು ದೂರ ಬೇಡಿ ಎಂದು ಹೇಳುತ್ತಾಳೆ. ಇದೇ ಸಮಯದಲ್ಲಿ ಜುಮ್ಕಿ ಓಡುವುದನ್ನು ಬಿಟ್ಟು ಅಳುತ್ತಿರುತ್ತಾನೆ. ಏನಾಯ್ತು ಎಂದು ಕೇಳಿದ್ದಕ್ಕೆ ತನ್ನ ತಾಯಿಗೆ ಆರೋಗ್ಯ ಸಮಸ್ಯೆ ಇದೆ. ಆಪರೇಷನ್ ಮಾಡಿಸಲು ಹಣವಿಲ್ಲ ಎಂದು ಅಳುತ್ತಿರುತ್ತಾನೆ. ಪಾರ್ಥ ಸಮಾಧಾನ ಮಾಡುತ್ತಾನೆ.
ಪ್ರೀತಿಯ ಸುಳಿಯಲ್ಲಿ ಆಫರ್ ಕೈ ಬಿಟ್ಟ ಅಪ್ಪಿ
ಮಂದಾಕಿನಿ ಮತ್ತು ಮಹಿಮಾ ಅಪೇಕ್ಷಾಳಿಗೆ ಲೈಫ್ ನಲ್ಲಿ ಒಮ್ಮೆ ಬರುವ ಇಂತಹ ಅವಕಾಶಗಳನ್ನು ಮಿಸ್ ಮಾಡಿಕೊಳ್ಳಬೇಡ ಎಂದು ಹೇಳುತ್ತಾರೆ. ಆದರೆ, ಅಪೇಕ್ಷಾ ತನ್ನ ಮನಸ್ಸು ನಿಜವಾಗಿಯೂ ಸರಿಯಿಲ್ಲ. ಈಗ ಈ ಅವಕಾಶ ತನಗೆ ಬೇಡ ಎನ್ನುತ್ತಾಳೆ. ಮಂದಾಕಿನಿಗೆ ಕೋಪ ಬರುತ್ತದೆ. ಅಪೇಕ್ಷಾಳನ್ನು ಬೈಯ್ಯಲು ಮುಂದಾಗುತ್ತಾಳೆ. ಆದರೆ, ಮಹಿಮಾ ಮಂದಾಕಿನಿಗೆ ಸಮಾಧಾನ ಮಾಡುತ್ತಾಳೆ.

ಪದೇ ಪದೇ ಭೂಮಿಕಾಳನ್ನು ಕೆಣಕುತ್ತಿರುವ ಶಕುಂತಲಾ
ತಿಜೋರಿ ಕೀ ಅನ್ನು ವಾಪಸ್ ಕೊಟ್ಟಿದ್ದಕ್ಕೆ ಮಲ್ಲಿ ಭೂಮಿಕಾಳಿಗೆ ಬೈಯುತ್ತಾಳೆ. ಗೌತಮ್ ಕೂಡ ಫೋನ್ ಮಾಡಿ, ನೀವು ಮಾಡಿದ್ದು ಸರಿ ಅಂತ ನನಗೆ ಅನಿಸಲಿಲ್ಲ ಎನ್ನುತ್ತಾನೆ. ಆದರೆ ಭೂಮಿಕಾ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾಳೆ. ಮತ್ತೆ ಶಕುಂತಲಾ ಬರುತ್ತಾಳೆ. ಬಂದು ಭೂಮಿಕಾಳಿಗೆ ಪಾರ್ಥ ಇರುವ ಸ್ಥಿತಿಯ ಬಗ್ಗೆ ವಿವರಿಸುತ್ತಾಳೆ. ಪಾರ್ಥ ಚಾಲೆಂಜ್ ಗಾಗಿ ಮನೆಯಿಂದ ಹೊರಗೆ ಹೋಗಿರುವ ಸುದ್ದಿಯನ್ನು ಕೇಳಿ ಗಾಬರಿಯಾಗುತ್ತಾಳೆ. ಈಗ ಭೂಮಿಕಾ ಪಾರ್ಥನ ಬಳಿ ಮಾತನಾಡುತ್ತಾಳಾ ಇಲ್ಲ ಸದಾಶಿವನ ಬಳಿ ಮಾತನಾಡುತ್ತಾಳಾ ಎಂದು ಕಾದು ನೋಡಬೇಕಿದೆ.


Click it and Unblock the Notifications











