Amruthadhaare ; ಜೈದೇವ್ ಬಗ್ಗೆ ಸತ್ಯ ಹೇಳಿದ ಕೆಂಚನ ಮಾತನ್ನು ನಂಬಲು ಕಷ್ಟಪಟ್ಟ ಭೂಮಿಕಾ ..!
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಹೊಸ ಹುಡುಗಿ ಜೊತೆಗೆ ಎಂಗೇಜ್ ಆಗಿದ್ದಾನೆ.ಸದಾ ಫೋನ್‌ನಲ್ಲಿ ಬ್ಯುಸಿಯಾಗಿರುತ್ತಾನೆ.ಆದರೆ, ಈ ಬಗ್ಗೆ ಮಲ್ಲಿಗೆ ಅನುಮಾನ ಬಾರದಂತೆ ನೋಡಿಕೊಂಡಿದ್ದಾನೆ.ಶಕುಂತಲಾ ಅಜ್ಜಿಯನ್ನು ಇಂಪ್ರೆಸ್ ಮಾಡಲು ಮುಂದಾಗಿದ್ದು, ಅಧಿಕಾರವನ್ನು ತನ್ನ ಕೈ ವಶ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಅಜ್ಜಿ ಕೂಡ ಶಕುಂತಲಾಳನ್ನು ಹೊಗಳಿದ್ದಾಳೆ. ಅಜ್ಜಿ ಹೊಗಳಿದ್ದನ್ನು ಕೇಳಿದ ಲಕ್ಷ್ಮೀಕಾಂತ ಅಜ್ಜಿ ತನ್ನ ನಂತರ ಶಕುಂತಲಾಳಿಗೆ ಅಧಿಕಾರವನ್ನು ಕೊಡುತ್ತಾರೆ ಎಂದು ಭಾವಿಸಿದ್ದಾನೆ. ಆದರೆ, ಇವರಿಬ್ಬರ ಗೆಸ್ ಸುಳ್ಳಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಗೌತಮ್ ಗೆ ಸತ್ಯ ಹೇಳಿದ ಭೂಮಿಕಾ
ಇನ್ನು ಕೆಂಚನನ್ನು ಯಾರಿಗೂ ತಿಳಿಯದಂತೆ ಬಿಡಿಸಿರುವ ಭೂಮಿಕಾ, ಗೌತಮ್ ಬಳಿ ಸತ್ಯ ಹೇಳಲು ಮುಂದಾಗಿದ್ದಾಳೆ. ತನ್ನನ್ನು ಕಿಡ್ನ್ಯಾಪ್ ಮಾಡಿದ ದಿನವೇ ಜೈದೇವ್ ನನ್ನು ಕಿಡ್ನ್ಯಾಪ್ ಮಾಡಿ, ಮಲ್ಲಿಯನ್ನು ಅಪಾಯಕ್ಕೆ ದೂಡಿದ್ದ ಘಟನೆಯನ್ನು ವಿವರಿಸಿದ್ದಾಳೆ. ಇಷ್ಟು ದಿನ ಮುಚ್ಚಿಡಲು ಕಾರಣವನ್ನೂ ಹೇಳಿದ್ದಾಳೆ. ಈ ಕೆಲಸಗಳನ್ನು ಮಾಡಿಸಿರುವ ವ್ಯಕ್ತಿಯೇ ಈಗ ಆಫಿಸಿನಲ್ಲೂ ಟೆಂಡರ್ ವಿಚಾರದಲ್ಲಿ ಮಸಲತ್ತು ಮಾಡಿದ್ದಾರೆ ಎಂದು ಹೇಳಿದ್ದಾಳೆ. ಗೌತಮ್ ಗೆ ಈಗ ಸುಮ್ಮನಿದ್ದು, ಸೈಲೆಂಟ್ ಆಗಿ ಕಳ್ಳನನ್ನು ಹಿಡಿಯುವಂತೆ ಭೂಮಿಕಾ ಸಲಹೆಯನ್ನೂ ಕೊಟ್ಟಿದ್ದಾಳೆ. ಗೌತಮ್ ಕೂಡ ಭೂಮಿಕಾ ಮಾತನ್ನು ಕೇಳಿ ಅದೇ ಸರಿ ಎಂದು ಭಾವಿಸಿದ್ದಾನೆ.

ಹಣ ಪಡೆಯಲು ಹೊರಟ ಜೈದೇವ್
ಟೆಂಡರ್ ಪಡೆದ ಕಂಪನಿ ಎರಡು ಕೋಟಿ ಕ್ಯಾಶ್ ಅನ್ನು ಜೈದೇವ್ ಗೆ ಫೋನ್ ಮಾಡಿ ತಿಳಿಸಿದ್ದಾರೆ. ಎಲ್ಲಿಗೆ ಬರಬೇಕು ಎಂದು ಹೇಳಿದರೆ, ನಿಮ್ಮ ಹಣವನ್ನು ನಿಮಗೆ ತಲುಪಿಸುತ್ತೇವೆ ಎಂದು ಹೇಳಿದ್ದಾರೆ. ಜೈದೇವ್ ಕೂಡ ಸ್ಥಳ ತಿಳಿಸುವುದಾಗಿ ಹೇಳಿದ್ದು ಖುಷಿಯಾಗಿದ್ದಾನೆ. ಈ ವಿಚಾರವನ್ನು ಜೀವನ್ ಸ್ನೇಹಿತ ಗೌತಮ್ ಗೆ ಫೋನ್ ಮಾಡಿ ತಿಳಿಸಿದ್ದಾನೆ. ಗೌತಮ್ ಜಿಪಿಎಸ್ ಕಳಿಸಿಕೊಡಲಿದ್ದು, ಅದನ್ನು ಕ್ಯಾಶ್ ಕೊಂಡೊಯ್ಯುವ ವಾಹನದಲ್ಲಿ ಅಳವಡಿಸಲು ಹೇಳಿದ್ದಾನೆ. ಇಷ್ಟು ಸುಲಭವಾಗಿ ಜೈದೇವ್ ಸಿಕ್ಕಿ ಬೀಳುತ್ತಾನಾ ಎಂಬ ಅನುಮಾನ ಮೂಡಿದೆ.
ಹಣಕ್ಕಾಗಿ ಹೆಂಡತಿ ಅಶ್ವಿನಿಗೆ ಮೋಸ
ಇತ್ತ ಅಶ್ವಿನಿ ಪತಿ ಅರುಣ್ ಫಾರಿನ್ ನಿಂದ ಆಗಮಿಸಿದ್ದಾನೆ. ಅಳಿಯ ಮನೆಗೆ ಬಂದಿರುವುದಕ್ಕೆ ಶಕುಂತಲಾ ಖುಷಿಯಾಗಿದ್ದಾಳೆ. ಅಶ್ವಿನಿ ಬಳಿ ಅರುಣ್ ತನ್ನ ಕಂಪನಿ ಲಾಸ್ ನಲ್ಲಿದ್ದು, ತಕ್ಷಣವೇ 40 ಕೋಟಿ ರೂಪಾಯಿ ಹಣ ಬೇಕಾಗಿದೆ ಎಂದು ಬೇಡಿಕೆ ಇಟ್ಟಿದ್ದಾನೆ. ಈ ಮಾತನ್ನು ಕೇಳಿದ ಅಶ್ವಿನಿ ಶಾಕ್ ಆಗಿದ್ದಾಳೆ. ಅಷ್ಟೋಂದು ಹಣವನ್ನು ಹೇಗೆ ಅರೇಂಜ್ ಮಾಡುವುದು ಎಂದು ಗಾಬರಿಯಾಗಿದ್ದಾಳೆ. ಅಲ್ಲದೇ ಅರುಣ್ ಶಕುಂತಲಾ ಬಳಿ ಕಂಪನಿ ಲಾಭದಲ್ಲಿದೆ ಎಂದು ಸುಳ್ಳು ಹೇಳಿದ್ದಾನೆ. ಈಗ ಅಶ್ವಿನಿಗೆ ಸುಳ್ಳು ಹೇಳಿರುವ ಅರುಣ್, ಯಾವ ರೀತಿಯಲ್ಲಿ ಮೋಸ ಮಾಡುತ್ತಾನೆ ಎಂಬ ಕುತೂಹಲ ಮೂಡಿದೆ.

ಕೆಂಚನನ್ನು ಭೇಟಿ ಮಾಡಿ ಸತ್ಯ ತಿಳಿದ ಭೂಮಿಕಾ
ಕೆಂಚ ಭೂಮಿಕಾಳಿಗೆ ಪದೇ ಪದೇ ಫೋನ್ ಮಾಡುತ್ತಿದ್ದಾನೆ. ತನನ್ನು ಜೈಲಿನಿಂದ ಬಿಡುಗಡೆ ಗೊಳಿಸಿದ್ದಕ್ಕೆ ಧನ್ಯವಾದವನ್ನು ಹೇಳಿದ್ದು, ಭೇಟಿ ಮಾಡಿದರೆ, ನೀಚ ಕೆಲಸದ ಹಿಂದೆ ಇರುವ ವ್ಯಕ್ತಿ ಯಾರು ಎಂದು ಹೇಳುತ್ತೇನೆ. ತನ್ನ ಕೈಯಲ್ಲಿ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ ಎಂದಿದ್ದಾನೆ. ಭೂಮಿಕಾ ಯಾರಿಗೂ ತಿಳಿಯದಂತೆ ಕೆಂಚನನ್ನು ಭೇಟಿ ಮಾಡಿದಾಗ ಇದೆಲ್ಲಾ ಕೆಲಸದ ಹಿಂದೆಯೂ ಜೈದೇವ್ ಇದ್ದಾನೆ. ನಿಮಗೆ ನಂಬಿಕೆ ಬಾರದಿದ್ದರೆ, ನನ್ನ ಬಳಿ ಸಾಕ್ಷಿ ಇದೆ ಎನ್ನುತ್ತಾನೆ. ಈ ಮಾತನ್ನು ಕೇಳಿದ ಭೂಮಿಕಾ ಗೌತಮ್ ನನ್ನು ಭೇಟಿ ಮಾಡಿಸುತ್ತೇನೆ ಆಗಲೇ ಎಲ್ಲಾ ಸತ್ಯವನ್ನು ಸಾಖ್ಷಿ ತೋರಿಸಿ ಹೇಳಿ ಎಂದು ಕೇಳಿದ್ದಾಳೆ. ಇದಕ್ಕೆ ಕೆಂಚ ಒಪ್ಪಿಕೊಂಡಿದ್ದಾನೆ.


Click it and Unblock the Notifications











